28th March 2024
Share

TUMAKURU:SHATHIPEETA FOUNDATION

ಇಂಡಿಯಾ @ 100 ಅಂಗವಾಗಿ, ಕರ್ನಾಟಕ ರಾಜ್ಯ ಕೇಂದ್ರ ಸರ್ಕಾರದಿಂದ ಹೆಚ್ಚಿಗೆ ಅನುದಾನ ಪಡೆಯುವ ಕಾರ್ಯತಂತ್ರ ರೂಪಿಸುವ ಮೊದಲ ಕಾರ್ಯಕ್ರಮವಾದ ಊರಿಗೊಂದು ಪುಸ್ತಕ’ ಬಗ್ಗೆ ಶ್ರಮಿಸಲು ಬೆಂಗಳೂರಿನ ಪ್ರಿಸ್ಟೇಜ್ ಜಿಂದಾಲ್ ಸಿಟಿಯಲ್ಲಿ ಅಥವಾ ಅಕ್ಕ-ಪಕ್ಕ ವಾರ್ ರೂಮ್’ ಆರಂಭಿಸಲು ಸಿದ್ಧತೆ ನಡೆಸಲು ಪೂರ್ವಭಾವಿ ಸಭೆ ನಡೆಯಿತು.

ವಾರ್ ರೂಮ್ ಆರಂಭದಿಂದ 5 ಎಸ್  ಸೂತ್ರಗಳ ಅಡಿಯಲ್ಲಿ ಆರಂಭಿಸಲು ಸೂಕ್ತ ಸಿದ್ಧತೆ ನಡೆಸಲು ಸಮಾಲೋಚನೆ ನಡೆಸಲಾಯಿತು.

ಸಭೆಯಲ್ಲಿ ಚಿತ್ರದಲ್ಲಿ ಇರುವವರು ಭಾಗವಹಿಸಿದ್ದರು.

ಸಭೆಯಲ್ಲಿ ಕೈಗೊಂಡ ನಿರ್ಣಯಗಳು.

  1. ಬೆಂಗಳೂರಿನ ಪ್ರಿಸ್ಟೇಜ್ ಜಿಂದಾಲ್ ಸಿಟಿಯಲ್ಲಿ ವಾಸವಿರುವ, ಶ್ರೀ ಸಿದ್ಧಗಂಗಪ್ಪನವರು, ಶ್ರೀಮತಿ ಸುಪ್ರೀತರವರು, ಶ್ರೀಮತಿ ಆಪೇಕ್ಷಾರವರವರನ್ನು ಬೆಂಗಳೂರಿನ ಪ್ರಿಸ್ಟೇಜ್ ಜಿಂದಾಲ್ ಸಿಟಿಯಲ್ಲಿ ಅಥವಾ ಅಕ್ಕ-ಪಕ್ಕ ‘ಊರಿಗೊಂದು ಪುಸ್ತಕ’ದ ವಾರ್ ರೂಮ್ ಆರಂಭಿಸಲು ಸೂಕ್ತ ಕಟ್ಟಡದ ಅಧ್ಯಯನ ಮಾಡಿ ವರದಿ ನೀಡಲು ಹೊಣೆಗಾರಿಕೆ ನೀಡಲಾಯಿತು. 
  2. ಊರಿಗೊಂದು ಪುಸ್ತಕದ ಆಂದೋಲನವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯವ ಆಲೋಚನೆಯಿದೆ. ಆದ್ದರಿಂದ ವ್ಯಾಪಕ ಜಾಗೃತಿ ಮೂಡಿಸಲು ಬೆಂಗಳೂರಿನ ಪ್ರಿಸ್ಟೇಜ್ ಜಿಂದಾಲ್ ಸಿಟಿಯಲ್ಲಿ ವಾಸವಿರುವ ವಿವಿಧ ದೇಶದ, ವಿವಿಧ ರಾಜ್ಯದ, ವಿವಿಧ ಜಿಲ್ಲೆಯ ನಿವಾಸಿಗಳ ಮನವೋಲಿಸಲು ನಿರ್ಣಯ ಕೈಗೊಳ್ಳಲಾಯಿತು.
  3. ಬೆಂಗಳೂರಿನ ಪ್ರಿಸ್ಟೇಜ್ ಜಿಂದಾಲ್ ಸಿಟಿಯಲ್ಲಿ ಅಥವಾ ತುಮಕೂರಿನ ಜಯನಗರ ಪೂರ್ವದಲ್ಲಿ ನವರಾತ್ರಿ ಸಮಯದಲ್ಲಿ ವಿಶ್ವದ 108 ಶಕ್ತಿಪೀಠಗಳ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಸೂಕ್ತ ಸಿದ್ಧತೆ ಮಾಡಿಕೊಳ್ಳುವ ಮೂಲಕ ಊರಿಗೊಂದು ಪುಸ್ತಕದ ಬಗ್ಗೆ ಜಾಗೃತಿ ಮೂಡಿಸಲು ನಿರ್ಣಯ ಕೈಗೊಳ್ಳಲಾಯಿತು.
  4. ಬೆಂಗಳೂರಿನ ಪ್ರಿಸ್ಟೇಜ್ ಜಿಂದಾಲ್ ಸಿಟಿಯಲ್ಲಿ ವಾಸವಿರುವ, ಕರ್ನಾಟಕ ರಾಜ್ಯದ 31 ಜಿಲ್ಲೆಗಳವಾರು, 224 ವಿಧಾನಸಭಾ ಕ್ಷೇತ್ರಗಳ ನಿವಾಸಿಗಳ ಪಟ್ಟಿ ಮಾಡಿ,  ಅವರು ವಾಸವಿದ್ದ ಗ್ರಾಮz/ ಬಡಾವಣೆಯ ಪುಸ್ತಕ ಸಿದ್ಧಪಡಿಸಲು ಮನವೊಲಿಸುವ ನಿರ್ಣಯ ಕೈಗೊಳ್ಳಲಾಯಿತು.
  5. ಬೆಂಗಳೂರಿನ ಪ್ರಿಸ್ಟೇಜ್ ಜಿಂದಾಲ್ ಸಿಟಿಯಲ್ಲಿ ವಾಸವಿರುವ ಭಾರತ ದೇಶದ ವಿವಿಧ ರಾಜ್ಯಗಳ ನಿವಾಸಿಗಳ ಪಟ್ಟಿ ಮಾಡಿ, ಅವರ ಹುಟ್ಟೂರಿನ/ಬಡಾವಣೆಯ ಪುಸ್ತಕ ಸಿದ್ಧಪಡಿಸಲು ಮನವೊಲಿಸುವ ನಿರ್ಣಯ ಕೈಗೊಳ್ಳಲಾಯಿತು.
  6. ಬೆಂಗಳೂರಿನ ಪ್ರಿಸ್ಟೇಜ್ ಜಿಂದಾಲ್ ಸಿಟಿಯಲ್ಲಿ ವಾಸವಿರುವ ವಿವಿಧ ದೇಶದ ನಿವಾಸಿಗಳ ಪಟ್ಟಿ ಮಾಡಿ, ಅವರ ಹುಟ್ಟೂರಿನ/ಬಡಾವಣೆಯ ಪುಸ್ತಕ ಸಿದ್ಧಪಡಿಸಲು ಮನವೊಲಿಸುವ ನಿರ್ಣಯ ಕೈಗೊಳ್ಳಲಾಯಿತು.
  7. ಇದೊಂದು ಬಹಳ ಉಪಯೋಗಿ ಡಿಜಿಟಲ್ ದಾಖಲೆ ಯಾಗುವುದರಿಂದ, ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಮುನ್ನ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ, ವಿಧಾನಸಭಾ ಸದಸ್ಯರು ವಾಸವಿರುವ ಗ್ರಾಮದ ಅಥವಾ ಬಡಾವಣೆಯ ಮಾದರಿ ಪುಸ್ತಕವನ್ನು ಸಿದ್ಧಪಡಿಸಲು, ರಾಜ್ಯಾಧ್ಯಾಂತ ಜನ ಜಾಗೃತಿ ಮೂಡಿಸಲು ಸೂಕ್ತ ಸಿದ್ಧತೆ ಮಾಡಿಕೊಳ್ಳಲು ನಿರ್ಣಯ ಕೈಗೊಳ್ಳಲಾಯಿತು.
  8. ರಾಜ್ಯದ ಎಲ್ಲಾ ಮಾಜಿ ಮುಖ್ಯಮಂತ್ರಿಗಳ ಹುಟ್ಟೂರಿನ/ಬಡಾವಣೆಯ ಪುಸ್ತಕ ಸಿದ್ಧಪಡಿಸಲು ಮನವೊಲಿಸುವ ನಿರ್ಣಯ ಕೈಗೊಳ್ಳಲಾಯಿತು.
  9. ರಾಜ್ಯದ ಎಲ್ಲಾ ಪಕ್ಷಗಳ ಹುಟ್ಟೂರಿನ/ಬಡಾವಣೆಯ ಪುಸ್ತಕ ಸಿದ್ಧಪಡಿಸಲು ಮನವೊಲಿಸುವ ನಿರ್ಣಯ ಕೈಗೊಳ್ಳಲಾಯಿತು.
  10. ರಾಜ್ಯದ ಎಲ್ಲಾ ಧರ್ಮಗಳ ಮಠಾಧಿಪತಿಗಳ, ಧಾರ್ಮಿಕ ಮುಖಂಡರ   ಹುಟ್ಟೂರಿನ/ಬಡಾವಣೆಯ ಪುಸ್ತಕ ಸಿದ್ಧಪಡಿಸಲು ಮನವೊಲಿಸುವ ನಿರ್ಣಯ ಕೈಗೊಳ್ಳಲಾಯಿತು.
  11. ರಾಜ್ಯದ ಎಲ್ಲಾ ವಿಶ್ವ ವಿದ್ಯಾನಿಲಯಗಳ ವಿಸಿಯವರ ಹುಟ್ಟೂರಿನ/ಬಡಾವಣೆಯ ಪುಸ್ತಕ ಸಿದ್ಧಪಡಿಸಲು ಮನವೊಲಿಸುವ ನಿರ್ಣಯ ಕೈಗೊಳ್ಳಲಾಯಿತು.
  12. ರಾಜ್ಯದ ಎಲ್ಲಾ ಐಎಸ್ ಮತ್ತು ಸಮಾನಂತರ/ಕೆ.ಎ.ಎಸ್ ಮತ್ತು ಸಮಾನಂತರ ಅಧಿಕಾರಿಗಳ ಹುಟ್ಟೂರಿನ/ಬಡಾವಣೆಯ ಪುಸ್ತಕ ಸಿದ್ಧಪಡಿಸಲು ಮನವೊಲಿಸುವ ನಿರ್ಣಯ ಕೈಗೊಳ್ಳಲಾಯಿತು.
  13. ಮಾದರಿಯಾಗಿ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ, ಶೆಟ್ಟಿಕೆರೆ ಗ್ರಾಮಪಂಚಾಯಿತಿಯ ಗೋಪಾಲನಹಳ್ಳಿಯ ಶ್ರೀ ಆರ್ಕ ರಘುರವರ ಸಹಭಾಗಿತ್ವದಲ್ಲಿ ಮತ್ತು ಮಧುಗಿರಿ ವಿಧಾನಸಭಾ ಕ್ಷೇತ್ರದ ನೇರಲೆ ಕೆರೆ ಗ್ರಾಮಪಂಚಾಯಿತಿಯ ವೀರಾಪುರ ಗ್ರಾಮದ 5 ಎಸ್ ಶ್ರೀ ಸಿದ್ಧಗಂಗಪ್ಪನವರ ಸಹಭಾಗಿತ್ವದಲ್ಲಿ ಊರಿಗೊಂದು ಪುಸ್ತಕ ರಚಿಸುವ ನಿರ್ಣಯ ಕೈಗೊಳ್ಳಲಾಯಿತು. ಅವರವರ ಗ್ರಾಮದ/ಬಡಾವಣೆಯ ಆಸಕ್ತರು ಮುಂದೆ ಬಂದಲ್ಲಿ ಸಹಕರಿÀಸಲು ನಿರ್ಣಯ ಕೈಗೊಳ್ಳಲಾಯಿತು.
  14. ದಿನಾಂಕ:05.06.2023 ರೊಳಗೆ ಊರಿಗೊಂದು ಪುಸ್ತಕದ ವಿಷಯ ಸೂಚಿಯನ್ನು ಕನ್ನಡ, ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಸಿದ್ಧಪಡಿಸಲು ನಿರ್ಣಯ ಕೈಗೊಳ್ಳಲಾಯಿತು.
  15. ಶಕ್ತಿಪೀಠ ಫೌಂಡೇಷನ್ ವೆಬ್‍ಸೈಟ್, ಇ-ಪೇಪರ್, ಯೂಟ್ಯೂಬ್ ಚಾನಲ್ ಮತ್ತು ಸೋಶೀಯಲ್ ಮೀಡಿಯಾಗಳನ್ನು ವಿವಿಧ ಬಾಷೆಗಳಲ್ಲಿ ಹೊರತರುವ  ಬಗ್ಗೆ  ವರದಿ ಸಿದ್ಧಪಡಿಸಲು ಕೈಗೊಳ್ಳಲಾಯಿತು.