21st January 2025
Share

TUMAKURU:SHAKTHIPEETA FOUNDATION

 ವಿಶ್ವ ಪರಿಸರ ದಿನದಂದು, ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು, ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ನಿರ್ಮಾಣ ಮಾಡಿರುವ ಗ್ರಂಥಾಲಯಕ್ಕೆ ದೀಡಿರ್ ಭೇಟಿ ನೀಡಿ,  ಪರಿಶೀಲನೆ ನಡೆಸಿದರು

ಓದುಗರೊಂದಿಗೆ ಸಂವಾದ ನಡೆಸಿ, ವಿದ್ಯಾರ್ಥಿಗಳಿಗೆ ಬೇಡಿಕೆಗಳ ಜೊತೆಗೆ ಅಗತ್ಯವಿರುವ ಎಲ್ಲಾ ಮಾಹಿತಿಗಳನ್ನು ಕ್ರೋಡೀಕರಿಸಿ ವರದಿ ನೀಡಲು ಗ್ರಂಥಾಲಯದ ಅಧಿಕಾರಿಗಳಿಗೆ ಸೂಚಿಸಿದರು.

ನಗರ ಗ್ರಂಥಾಲಯದ ಆವರಣದಲ್ಲಿ ಮತ್ತು ಕಟ್ಟಡದಲ್ಲಿ ಇರುವ ಲೋಪದೋóಷಗಳನ್ನು ಒಂದು ವಾರದೊಳಗೆ ಸರಿ¥ಡಿಸಲು , ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಎಂ.ಡಿ.ಯವರಿಗೆ ಸೂಚಿಸಿದರು.

ಐ.ಎ.ಎಸ್, ಕೆ.ಎ.ಎಸ್ ಸಮಾನಂತರ ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಲು ಬರುತ್ತಿರುವ ವಿದ್ಯಾರ್ಥಿಗಳ ಆಧಾರ್ ಬಯೋಮೆಟ್ರಿಕ್ ಡಿಜಿಟಲ್ ಡಾಟಾ ಸಂಗ್ರಹ ಮಾಡಲು ಸಲಹೆ ನೀಡಿದರು.

ಎಲ್ಲಾ ಬೇಡಿಕೆಗಳ ಜಾರಿ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲು ಒಂದು ವಾರದೊಳಗೆ ಸಭೆ ಆಯೋಜಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಓದುಗ ವಿದ್ಯಾರ್ಥಿಗಳಿಂದ ಪ್ರತೀಜ್ಞೆ ಮಾಡಿಸಿದರು.

ಅಂಧರ ವಿಭಾಗಕ್ಕೆ ಬೇಟಿ.

ತುಮಕೂರು ಜಿಲ್ಲೆಯಲ್ಲಿ ಇರುವ ಅಂದರು ಎಷ್ಟು, ಎಷ್ಟು ಅಂದರು ಇಲ್ಲಿಗೆ ಬರುತ್ತಾರೆ ಎಂದು ವಿಚಾರ ವಿನಿಮಯ ಮಾಡಿಕೊಂಡು ಮುಂದಿÀನ ಒಂದು ವಾರದೊಳಗೆ ಎಲ್ಲಾ ಮಾಹಿತಿ ಪ್ರದರ್ಶಿಶಲು ಸೂಚಿಸಿದರು.

ನಾಲೇಡ್ಜ್ ಬ್ಯಾಂಕ್ತುಮಕೂರು ಗ್ರಂಥಾಲಯ:ದತ್ತುವಿಗೆ ಚಿಂತನೆ

ಜಿಲ್ಲೆಯ ಸಚಿವರಾದ ಶ್ರೀ ಡಾ. ಜಿ.ಪರಮೇಶ್ವರ್ ರವರು, ಶ್ರೀ ಕೆ.ಎನ್.ರಾಜಣ್ಣನವರು, ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು, ಸಂಸದರಾದ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ಜಿಲ್ಲಾಧಿಕಾರಿ ಶ್ರೀ ವೈ.ಎಸ್.ಪಾಟೀಲ್ ರವರ ಮಾರ್ಗದರ್ಶನ ಪಡೆದು.

ಯೋಜನಾ ಸಚಿವರಾದ ಶ್ರೀ ಸುಧಾಕರ್ ರವರು ಮತ್ತು ಹಿರಿಯ ಐ.ಎ.ಎಸ್ ಅಧಿಕಾರಿ ಶ್ರೀಮತಿ ಶಾಲಿನಿ ರಜನೀಶ್ ರವರೊಂದಿಗೆ ಸಮಾಲೋಚನೆ ನಡೆಸಿ,    ಇಂಡಿಯಾ @ 100 ಅಂಗವಾಗಿ ನಾಲೇಡ್ಜ್ ಬ್ಯಾಂಕ್ ಮಾಡಲು ಮತ್ತು ನಂಬರ್ ಒನ್ ಗ್ರಂಥಾಲಯವಾಗಿ ಮಾಡಲು ಪರಿಣಿತರ ನೇತೃತ್ವದಲ್ಲಿ ದತ್ತು ಪಡೆಯುವ ಚಿಂತನೆ ಇದೆ.

ಸರಣಿ ಸಭೆಗಳನ್ನು ನಡೆಸುವ ಮೂಲಕ, ಸರ್ಕಾರಗಳ ನಿಯಮಗಳಿಗೆ ಅನುಗುಣವಾಗಿ,  ಒಂದು ನಿರ್ಧಾರಕ್ಕೆ ಬರಲಾಗುವುದು. ಆಸಕ್ತರು ಸಹಕರಿಸಿ.