27th July 2024
Share

TUMKURU:SHAKTHIPEETA FOUNDATION

ಜಾತಿ ಸಮೀಕ್ಷೆ ಆಗಬೇಕು, ಪ್ರತಿಯೊಂದು ಜಾತಿ ಮತ್ತು ಉಪಜಾತಿಯಲ್ಲೂ ಆರ್ಥಿಕ ಆಧಾರದ ಮೇಲೆ RANKING ನೀಡಬೇಕು. 2047 ರವರೆಗೆ ಕೈಗೊಳ್ಳ ಬೇಕಾದ ವಿಷನ್ ಡಾಕ್ಯುಮೆಂಟ್ ಅನ್ನು ಈ ಜಾತಿ ಆಧಾರದ ಮೇಲೆ ಸಿದ್ಧಗೊಳಿಸಬೇಕು ಎಂಬುದು ಎಲ್ಲಾ ವರ್ಗದವರ ಬಯಕೆ.

ಯಾರಿಗೂ ಮೋಸ ಆಗಬಾರದು, ರಾಜ್ಯ ಸರ್ಕಾರದ ಜೊತೆಗೆ ಕೇಂದ್ರ ಸರ್ಕಾರವೂ ಕೈಜೋಡಿಸಬೇಕು. ಪ್ರತಿಯೊಂದು ಹಂತದಲ್ಲೂ ಪಾರದರ್ಶಕವಾಗಿರಬೇಕು. ಈಗಿನ ವರದಿ ಪಾರದರ್ಶಕವಾಗಿಲ್ಲ ಎಂಬ ಸಾರ್ವಜನಿಕ ಕೂಗು ಇದೆ.

ರಾಜ್ಯದ ಸರ್ವಪಕ್ಷಗಳ, ಮಾಜಿ ಮುಖ್ಯ ಮಂತ್ರಿಯವರ, ಎಲ್ಲಾ ಜಾತಿಯ ಸಂಸ್ಥೆಗಳ ಅಭಿಪ್ರಾಯ ಸಂಗ್ರಹ ಅಗತ್ಯ. ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಅತಿ ಹೆಚ್ಚಿನ ಅನುದಾನ ತರಬೇಕಾದಲ್ಲಿ ಡಿಜಿಟಲ್ ವಿಲೇಜ್ ಡೆವಲಪ್ ಮೆಂಟ್ ಮ್ಯಾಪ್ ಹಾಗೂ ‘ಊರಿಗೊಂದು ಪುಸ್ತಕ/ಬಡಾವಣೆಗೊಂದು ಪುಸ್ತಕ   ಎಷ್ಟು ಪ್ರಾಮುಖ್ಯವೋ, ಅದೇ ರೀತಿ ‘ಸಾಮಾಜಿಕ ಮತ್ತು ಆರ್ಥಿಕ ಜನಗಣತಿ’ ಯು ಅಷ್ಟೇ  ಪ್ರಮುಖ ಅಂಶ ಆಗಲಿದೆ.