14th January 2025
Share

TUMKURU:SHAKTHIPEETA FOUNDATION

ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು ಜಾತಿಗಣತಿಯ ಪಿತಾಮಹರು ಎಂದರೆ ತಪ್ಪಾಗಲಾರದು. ಜಾತಿಗಣತಿಯನ್ನು ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ’ಎಂದು ಕರೆದಿರುವುದು ತಪ್ಪಿಲ್ಲ.

ಕರ್ನಾಟಕದ ಎಲ್ಲಾ ರಾಜಕೀಯ ಪಕ್ಷಗಳು ಒಕ್ಕೊರಲಿನಿಂದ ಒಪ್ಪಬೇಕು. ಅದೇ ರೀತಿ ಈ ಗಣತಿ ಪಕ್ಕಾ ಆಗಲು ಶ್ರಮಿಸಬೇಕು.

  1. ದಿನಾಂಕ:09.06.2023 ರಂದು ವಿಜಯವಾಣಿ ದಿನ ಪತ್ರಿಕೆ ವರದಿ ಆಧಾರದ ಮೇಲೆ, ಸುಮಾರು 2359 ಜಾತಿಗಳು ಇವೆಯಂತೆ.
  2. 2359 ಜಾತಿಗಳ ಸಂಸ್ಥೆಗಳವಾರು ಇರುವ ರಾಜ್ಯಮಟ್ಟದ ಸಂಸ್ಥೆಗಳಿಗೆ ಸರ್ಕಾರ ಮಾನ್ಯತೆ ನೀಡಬೇಕು.
  3. ಸಮಿತಿ ಇಲ್ಲದ ಜಾತಿಗಳಿಗೆ ಸಂಸ್ಥೆ ರಚಿಸಲು ಅವಕಾಶ ನೀಡಬೇಕು.
  4. ರಾಜ್ಯ ಮಟ್ಟದ ಸಂಸ್ಥೆಗಳವಾರು, ಜಾತಿವಾರು ಅಧ್ಯಯನ ಪೀಠ ಆರಂಭಿಸಬೇಕು. ಅತ್ಯುತ್ತಮವಾದ ಮಾರ್ಗದರ್ಶಿ ಸೂತ್ರ ಸಿದ್ಧಪಡಿಸಬೇಕು.
  5. ರಾಜ್ಯದ ಮಧ್ಯೆ ಬಾಗದಲ್ಲಿ ಸುಮಾರು 3000 ಎಕರೆ ಅಥವಾ 1500 ಎಕರೆ ಅಥವಾ 750 ಎಕರೆ ಜಮೀನು ಗುರುತಿಸಬೇಕು.
  6. ಈಗಾಗಲೇ ಮಾಜಿ ಸಚಿವರಾದ ಶ್ರೀ ಟಿ.ಬಿ.ಜಯಚಂದ್ರವರು, ತುಮಕೂರು ಜಿಲ್ಲೆ, ಶಿರಾ ತಾಲ್ಲೋಕಿನಲ್ಲಿ, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಸುಮಾರು 900 ಎಕರೆ ಜಮೀನು ಗುರುತಿಸಿ, ಕರ್ನಾಟಕ ಹೆರಿಇಟೇಜ್ ಹಬ್‍ಗೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿ, ಜಮೀನು ಕಾಯ್ದೀರಿಸಿದ್ದಾರೆ. ಅಥವಾ ಬೇರೆ ಕಡೆ ಗುರುತಿಸಬಹುದು.
  7. ಎಲ್ಲಾ ಜಾತಿಯ ಅಧ್ಯಯನ ಪೀಠಗಳು ಒಂದೇ ಕಡೆ ಇರಬೇಕು, ಅಂತರ ರಾಷ್ಟ್ರೀಯ ಮಟ್ಟದ ಕಾಮನ್ ಫೆಸಿಲಿಟಿ ಸೆಂಟರ್ ನಿರ್ಮಾಣ ಮಾಡಬೇಕು.
  8. ಇಲ್ಲಿ ಎಲ್ಲಾ ಜಾತಿಯ ಅಧ್ಯಯನ ಪೀಠಕ್ಕೂ, ಜಮೀನು ಹಂಚಿಕೆ ಮಾಡಬೇಕು.
  9. ಅಧ್ಯಯನ ಪೀಠದ ಕಟ್ಟಡಕ್ಕೆ ತಲಾ 5 ಕೋಟಿ ಅನುದಾನ ಮಂಜೂರು ಮಾಡಬೇಕು.
  10. ಸರ್ಕಾರದ ಗಣತಿಯನ್ನೇ ಆಧರಿಸಿ, ಜನಸಂಖ್ಯೆವಾರು ತಲೆವಾರು, ಅನುದಾನ ಮಂಜೂರು ಮಾಡಬೇಕು.
  11. ಆಯಾ ಜಾತಿ ಸಂಂಸ್ಥೆಗಳು ಸರ್ಕಾರ ಮಾಡಿರುವ ಸಮೀಕ್ಷೆಗಳನ್ನು ಮೌಲ್ಯ ಮಾಪನ ಮಾಡಬೇಕು.
  12. ನಂತರ ರಾಜ್ಯದ ಪ್ರತಿ ಗ್ರಾಮವಾರು ಮತ್ತು ನಗರ ಪ್ರದೇಶಗಳ ಬಡಾವಣೆವಾರು, ಆಧಾರ್ ಬಯೋಮೆಟ್ರಕ್ ಸಹಿತ, ಆಯಾ ಗ್ರಾಮದ ಎಲ್ಲಾ ಜಾತಿ ಸದಸ್ಯರುಗಳ ಸಮ್ಮುಖದಲ್ಲಿ ಅನುಮೋದನೆ ಮಾಡಬೇಕು.
  13. ಜಾತಿವಾರು ಪ್ರತಿಯೊಂದು ಕುಟುಂಬದ ಪ್ರೂಟ್ಸ್ ಯೋಜನೆಯಡಿ ಜಮೀನುಗಳ, ಸ್ವಮಿತ್ವ ಯೋಜನೆಯಡಿಯ ನಿವೇಶನ ಮತ್ತು ಮನೆಗಳೂ ಸೇರಿದಂತೆ, ಆದಾಯ ಮೌಲ್ಯಮಾಪನ ಮಾಡಿ ಆರ್ಥಿಕ ಆಧಾರದ ರ್ಯಾಂಕಿಂಗ್ ನೀಡಬೇಕು.
  14. ಈಗ ಇರುವ ಜಾತಿವಾರು ನಿಗಮಗಳನ್ನು ರದ್ದುಪಡಿಸಬೇಕು. ಒಂದೇ ಒಂದು ನಿಗಮ ಮಾಡಿ, ಈ ಎಲ್ಲಾ ಜಾತಿಯ ಅಧ್ಯಯನ ಪೀಠಗಳನ್ನು ಅದರಡಿ ತರಬೇಕು.
  15. ಆಯಾ ಜಾತಿಯಲ್ಲಿ ಆರ್ಥಿಕವಾಗಿ ಹಿಂದುಳಿದವರನ್ನು, ಮೇಲಕ್ಕೆ ಎತ್ತಲು, ಆಯಾ ರಾಜ್ಯ ಮಟ್ಟದ ಸಂಸ್ಥೆಗಳಿಗೆ ಹೊಣೆಗಾರಿಕೆ ನೀಡಿ, ಅಗತ್ಯವಿರುವ ಎಲ್ಲಾ ಸವಲತ್ತುಗಳನ್ನು ನೀಡಬೇಕು.
  16. ಯಾವುದಾದರೂ ಒಂದು ಜಾತಿಯಲ್ಲಿ ನೋಂದಾವಣೆ ಮಾಡದೇ ಇರುವವರಿಗೆ ಸರ್ಕಾರದ ಯಾವುದೇ ಸವಲತ್ತು ನೀಡಬಾರದು.
  17. ಊರಿಗೊಂದು ಪುಸ್ತಕ ಹಾಗೂ ನಗರ ಪ್ರದೇಶಗಳಲ್ಲಿ ಬಡಾವಣೆಗೊಂದು ಪುಸ್ತಕ ಮಾಡಿ, ವ್ಯಕ್ತಿ, ಕುಟುಂಬ, ಗ್ರಾಮವಾರು/ಬಡಾವಣೆವಾರು‘ಅಂದುಇಂದುಮುಂದು ಡಿಜಿಟಲ್ ಡೆವಲಪ್‍ಮೆಂಟ್ ವಿಲೇಜ್/ಬಡಾವಣೆ ಪ್ಲಾನ್ ಮತ್ತು ವಿಷನ್ ಡಾಕ್ಯುಮೆಂಟ್ ಮಾಡಿ, ಆಯಾ ಗ್ರಾಮದ/ಬಡಾವಣೆ ಜನತೆಯ, ಮೌಲ್ಯಮಾಪನ ವರದಿಯೊಂದಿಗೆ, ಇಂಡಿಯಾ @ 100 ಅಂಗವಾಗಿ, ನವಕರ್ನಾಟಕ @ 100 ಗೆ ಚಾಲನೆ ನೀಡಬೇಕು.

ಇದೊಂದು ಐತಿಹಾಸಿಕ ಯೋಜನೆಯಾಗಲಿದೆ. ಸರ್ವರಿಗೂ ಸಮಪಾಲು ಘೋಷಣೆಗೆ ಅರ್ಥ ಬರಲಿದೆ. ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ ದೊರೆಯಲಿದೆ.

ನಿವೇನಂತಿರಾ?