TUMKURU:SHAKTHIPEETA FOUNDATION
ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು ಜಾತಿಗಣತಿಯ ಪಿತಾಮಹರು ಎಂದರೆ ತಪ್ಪಾಗಲಾರದು. ಜಾತಿಗಣತಿಯನ್ನು ‘ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ’ಎಂದು ಕರೆದಿರುವುದು ತಪ್ಪಿಲ್ಲ.
ಕರ್ನಾಟಕದ ಎಲ್ಲಾ ರಾಜಕೀಯ ಪಕ್ಷಗಳು ಒಕ್ಕೊರಲಿನಿಂದ ಒಪ್ಪಬೇಕು. ಅದೇ ರೀತಿ ಈ ಗಣತಿ ಪಕ್ಕಾ ಆಗಲು ಶ್ರಮಿಸಬೇಕು.
- ದಿನಾಂಕ:09.06.2023 ರಂದು ವಿಜಯವಾಣಿ ದಿನ ಪತ್ರಿಕೆ ವರದಿ ಆಧಾರದ ಮೇಲೆ, ಸುಮಾರು 2359 ಜಾತಿಗಳು ಇವೆಯಂತೆ.
- 2359 ಜಾತಿಗಳ ಸಂಸ್ಥೆಗಳವಾರು ಇರುವ ರಾಜ್ಯಮಟ್ಟದ ಸಂಸ್ಥೆಗಳಿಗೆ ಸರ್ಕಾರ ಮಾನ್ಯತೆ ನೀಡಬೇಕು.
- ಸಮಿತಿ ಇಲ್ಲದ ಜಾತಿಗಳಿಗೆ ಸಂಸ್ಥೆ ರಚಿಸಲು ಅವಕಾಶ ನೀಡಬೇಕು.
- ರಾಜ್ಯ ಮಟ್ಟದ ಸಂಸ್ಥೆಗಳವಾರು, ಜಾತಿವಾರು ಅಧ್ಯಯನ ಪೀಠ ಆರಂಭಿಸಬೇಕು. ಅತ್ಯುತ್ತಮವಾದ ಮಾರ್ಗದರ್ಶಿ ಸೂತ್ರ ಸಿದ್ಧಪಡಿಸಬೇಕು.
- ರಾಜ್ಯದ ಮಧ್ಯೆ ಬಾಗದಲ್ಲಿ ಸುಮಾರು 3000 ಎಕರೆ ಅಥವಾ 1500 ಎಕರೆ ಅಥವಾ 750 ಎಕರೆ ಜಮೀನು ಗುರುತಿಸಬೇಕು.
- ಈಗಾಗಲೇ ಮಾಜಿ ಸಚಿವರಾದ ಶ್ರೀ ಟಿ.ಬಿ.ಜಯಚಂದ್ರವರು, ತುಮಕೂರು ಜಿಲ್ಲೆ, ಶಿರಾ ತಾಲ್ಲೋಕಿನಲ್ಲಿ, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಸುಮಾರು 900 ಎಕರೆ ಜಮೀನು ಗುರುತಿಸಿ, ಕರ್ನಾಟಕ ಹೆರಿಇಟೇಜ್ ಹಬ್‍ಗೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿ, ಜಮೀನು ಕಾಯ್ದೀರಿಸಿದ್ದಾರೆ. ಅಥವಾ ಬೇರೆ ಕಡೆ ಗುರುತಿಸಬಹುದು.
- ಎಲ್ಲಾ ಜಾತಿಯ ಅಧ್ಯಯನ ಪೀಠಗಳು ಒಂದೇ ಕಡೆ ಇರಬೇಕು, ಅಂತರ ರಾಷ್ಟ್ರೀಯ ಮಟ್ಟದ ಕಾಮನ್ ಫೆಸಿಲಿಟಿ ಸೆಂಟರ್ ನಿರ್ಮಾಣ ಮಾಡಬೇಕು.
- ಇಲ್ಲಿ ಎಲ್ಲಾ ಜಾತಿಯ ಅಧ್ಯಯನ ಪೀಠಕ್ಕೂ, ಜಮೀನು ಹಂಚಿಕೆ ಮಾಡಬೇಕು.
- ಅಧ್ಯಯನ ಪೀಠದ ಕಟ್ಟಡಕ್ಕೆ ತಲಾ 5 ಕೋಟಿ ಅನುದಾನ ಮಂಜೂರು ಮಾಡಬೇಕು.
- ಸರ್ಕಾರದ ಗಣತಿಯನ್ನೇ ಆಧರಿಸಿ, ಜನಸಂಖ್ಯೆವಾರು ತಲೆವಾರು, ಅನುದಾನ ಮಂಜೂರು ಮಾಡಬೇಕು.
- ಆಯಾ ಜಾತಿ ಸಂಂಸ್ಥೆಗಳು ಸರ್ಕಾರ ಮಾಡಿರುವ ಸಮೀಕ್ಷೆಗಳನ್ನು ಮೌಲ್ಯ ಮಾಪನ ಮಾಡಬೇಕು.
- ನಂತರ ರಾಜ್ಯದ ಪ್ರತಿ ಗ್ರಾಮವಾರು ಮತ್ತು ನಗರ ಪ್ರದೇಶಗಳ ಬಡಾವಣೆವಾರು, ಆಧಾರ್ ಬಯೋಮೆಟ್ರಕ್ ಸಹಿತ, ಆಯಾ ಗ್ರಾಮದ ಎಲ್ಲಾ ಜಾತಿ ಸದಸ್ಯರುಗಳ ಸಮ್ಮುಖದಲ್ಲಿ ಅನುಮೋದನೆ ಮಾಡಬೇಕು.
- ಜಾತಿವಾರು ಪ್ರತಿಯೊಂದು ಕುಟುಂಬದ ಪ್ರೂಟ್ಸ್ ಯೋಜನೆಯಡಿ ಜಮೀನುಗಳ, ಸ್ವಮಿತ್ವ ಯೋಜನೆಯಡಿಯ ನಿವೇಶನ ಮತ್ತು ಮನೆಗಳೂ ಸೇರಿದಂತೆ, ಆದಾಯ ಮೌಲ್ಯಮಾಪನ ಮಾಡಿ ಆರ್ಥಿಕ ಆಧಾರದ ರ್ಯಾಂಕಿಂಗ್ ನೀಡಬೇಕು.
- ಈಗ ಇರುವ ಜಾತಿವಾರು ನಿಗಮಗಳನ್ನು ರದ್ದುಪಡಿಸಬೇಕು. ಒಂದೇ ಒಂದು ನಿಗಮ ಮಾಡಿ, ಈ ಎಲ್ಲಾ ಜಾತಿಯ ಅಧ್ಯಯನ ಪೀಠಗಳನ್ನು ಅದರಡಿ ತರಬೇಕು.
- ಆಯಾ ಜಾತಿಯಲ್ಲಿ ಆರ್ಥಿಕವಾಗಿ ಹಿಂದುಳಿದವರನ್ನು, ಮೇಲಕ್ಕೆ ಎತ್ತಲು, ಆಯಾ ರಾಜ್ಯ ಮಟ್ಟದ ಸಂಸ್ಥೆಗಳಿಗೆ ಹೊಣೆಗಾರಿಕೆ ನೀಡಿ, ಅಗತ್ಯವಿರುವ ಎಲ್ಲಾ ಸವಲತ್ತುಗಳನ್ನು ನೀಡಬೇಕು.
- ಯಾವುದಾದರೂ ಒಂದು ಜಾತಿಯಲ್ಲಿ ನೋಂದಾವಣೆ ಮಾಡದೇ ಇರುವವರಿಗೆ ಸರ್ಕಾರದ ಯಾವುದೇ ಸವಲತ್ತು ನೀಡಬಾರದು.
- ಊರಿಗೊಂದು ಪುಸ್ತಕ ಹಾಗೂ ನಗರ ಪ್ರದೇಶಗಳಲ್ಲಿ ಬಡಾವಣೆಗೊಂದು ಪುಸ್ತಕ ಮಾಡಿ, ವ್ಯಕ್ತಿ, ಕುಟುಂಬ, ಗ್ರಾಮವಾರು/ಬಡಾವಣೆವಾರು‘ಅಂದು–ಇಂದು–ಮುಂದು’ ಡಿಜಿಟಲ್ ಡೆವಲಪ್‍ಮೆಂಟ್ ವಿಲೇಜ್/ಬಡಾವಣೆ ಪ್ಲಾನ್ ಮತ್ತು ವಿಷನ್ ಡಾಕ್ಯುಮೆಂಟ್ ಮಾಡಿ, ಆಯಾ ಗ್ರಾಮದ/ಬಡಾವಣೆ ಜನತೆಯ, ಮೌಲ್ಯಮಾಪನ ವರದಿಯೊಂದಿಗೆ, ಇಂಡಿಯಾ @ 100 ಅಂಗವಾಗಿ, ನವಕರ್ನಾಟಕ @ 100 ಗೆ ಚಾಲನೆ ನೀಡಬೇಕು.
ಇದೊಂದು ಐತಿಹಾಸಿಕ ಯೋಜನೆಯಾಗಲಿದೆ. ಸರ್ವರಿಗೂ ಸಮಪಾಲು ಘೋಷಣೆಗೆ ಅರ್ಥ ಬರಲಿದೆ. ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ ದೊರೆಯಲಿದೆ.
ನಿವೇನಂತಿರಾ?