15th January 2025
Share

TUMAKURU:SHAKTHIPEETA FOUNDATION

 ತುಮಕೂರು ನಗರ ಗ್ರಂಥಾಲಯ ವಿಶ್ವದಲ್ಲಿಯೇ ವಿನೂತನವಾದ ಚಟುವಟಿಕೆಗಳ ಕೇಂದ್ರವಾಗಲು, ಅಧಿಕಾರಿಗಳ, ಓದುಗರ ಮತ್ತು ಪರಿಣಿತರ ಮಾಹಿತಿ ಸಂಗ್ರಹಸಲಾಗುತ್ತಿದೆ. ಈ ಬಗ್ಗೆ ಗ್ರಂಥಾಲಯ ತಜ್ಞ ಶ್ರೀ ಶಿವಶಂಕರ್ ಕಾಡುದೇವರ ಮಠ ರವರ ತಂqದಿಂದÀ ಒಂದು ಸಮಗ್ರ ವರದಿ ನೀಡಲು ಮನವಿ ಮಾಡಲಾಗಿದೆ.

 ಇಂಡಿಯಾ @ 100 ಅಂಗವಾಗಿ, ರಾಜ್ಯ ಸರ್ಕಾರ ಆರಂಭಿಸಲು ಉದ್ದೇಶಿರುವ ನಾಲೇಡ್ಜ್ ಬ್ಯಾಂಕ್ ಗೆ ಪೂರಕವಾಗಿ, ತುಮಕೂರು ಜಿಲ್ಲೆ ಫೈಲಟ್ ಯೋಜನೆಯಾಗಿಯೂ ಸಮಗ್ರ ಅಭಿವೃದ್ಧಿ ಮಾಹಿತಿಗಳ ಜ್ಞಾನವೂ ಇಲ್ಲಿ ಇರುವುದು ಸೂಕ್ತವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇದು ಒಂದು ಸಿಲಬಸ್ ಆಗಿಯೂ ಇದೆ.

ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು, ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಈ ಬಗ್ಗೆ ವಿಶೇಷ ಆಸಕ್ತಿ ವಹಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶ್ರೀ ಜಿ.ಪರಮೇಶ್ವರ್ ರವರು ತುಮಕೂರು ಜಿಲ್ಲೆಯನ್ನು ಡ್ರಗ್ ಮುಕ್ತ ಜಿಲ್ಲೆಯಾಗಿ ಘೋಶಿಸಲು ಕನಸು ಕಾಣುತ್ತಿದ್ದಾರೆ. ಇದೊಂದು ನಿಜಕ್ಕೂ ಅತ್ಯುತ್ತಮ ಯೋಜನೆಯಾಗಿದೆ. ಈ  ಮಾಹಿತಿಯೂ  ಗ್ರಂಥಾಲಯದಲ್ಲಿ ಇರಬೇಕಿದೆ.

ಜಿಲ್ಲೆಯ ಇನ್ನೊಬ್ಬರು ಸಚಿವರಾದ ಶ್ರೀ ಕೆ.ಎನ್À.ರಾಜಣ್ಣನವರು ಸಹಕಾರಿ ರೈತರ ಮಕ್ಕಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನೂಕೂಲವಾಗುವಂvಹÀ ವಿನೂತನ ಯೋಜನೆಯನ್ನು ಜಾರಿಗೊಳಿಸಲು ಅವರದೇ ಆದ ಯೋಜನೆ ರೂಪಿಸುವ ಸಂಬಂದ ಕಳೆದ ಒಂದು ವರ್ಷದ ಮೊದಲೇ ಚರ್ಚೆ ಮಾಡಿದ್ದೆವು.

ಈ ಹಿನ್ನಲೆಯಲ್ಲಿ ಈಗಾಗಲೇ ಮೂರು ಸಭೆಗಳಲ್ಲಿ ಭಾಗವಹಿಸಲಾಗಿದೆ. ರಾಜ್ಯ ಸರ್ಕಾರಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಸೂಕ್ತ ಪ್ರಸ್ತಾವನೆ ಸಲ್ಲಿಸುವ ಮುಖಾಂತರ ನಿಯಾಮುನುಸಾರ ಸರ್ಕಾರದಿಂದ  ಮಾರ್ಗದರ್ಶಿ ಸೂತ್ರ ರೂಪಿಸಬೇಕಿದೆ.

ಮಾಜಿ ಪ್ರಧಾನಿಯವರಾದ ದಿ.ರಾಜೀವ್ ಗಾಂಧಿಯವರು, ಶ್ರೀ ಮನೋಮೋಹನ್ ಸಿಂಗ್ ರವರು ಮತ್ತು ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ಕಂಡ ಡಿಜಿಟಲ್ ಇಂಡಿಯಾ ಕನಸಿನ ಸಂಶೋಧನಾ ಕೇಂದ್ರದಂತೆ, ಈ ಗ್ರಂಥಾಲಯ ಕಾರ್ಯ ನಿರ್ವವಹಿಸ ಬೇಕಿದೆ.

ಆಸಕ್ತರು ಸೂಕ್ತ ಐಡಿಯಾ ನೀಡಲು ಮನವಿ.