22nd November 2024
Share

TUMKURU:SHAKTHIPEETA FOUNDATION

ತುಮಕೂರು ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಗಳಾಗಿ ಶ್ರೀ ಶ್ರಿನಿವಾಸ್ ರವರು ಬಂದಿದ್ದಾರೆ. ಇಂದು(27.06.2023) ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಸಭೆ ಇದ್ದ ಕಾರಣ, ನಾನು ಸಭೆಗೆ ಹೋಗಿದ್ದೆ.

ಸಭೆಯ ಆರಂಭಕ್ಕೆ ಮೊದಲು ಜಿಲ್ಲಾಧಿಕಾರಿಗಳ ಛೇಂಬರ್‍ನಲ್ಲಿದ್ದ, ತುಮಕೂರು ನಗರ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು, ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ನನ್ನನ್ನು ಒಳಗೆ ಕರೆಸಿದರು.

ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ನೂತನ ಜಿಲ್ಲಾಧಿಕಾರಿಗಳಿಗೆ ನನ್ನನ್ನು ಪರಿಚಯಸಿದ ರೀತಿ ಹೀಗಿತ್ತು. ಸಾರ್ ಇವರು ಕುಂದರನಹಳ್ಳಿ ರಮೇಶ್, ಅಭಿವೃದ್ದಿ ವಿಕಿಪೀಡಿಯಾ, ಒಂದೊಂದು ಸಲ ನಮ್ಮ ವಾಟಾಳ್ ನಾಗರಾಜ್ ಸ್ಟೈಲ್? ಅನುಸರಿಸುತ್ತಾರೆ.

ಕೆಲವು ಸಲ ಸತ್ಯ ಹೇಳುವಾಗ ಈ ಮಾರ್ಗ ಅನುಸರಿಸಲೇ ಬೇಕು, ನಾನು ಆ ಕೆಲಸ ಮಾಡಲೇ ಬೇಕು ಸಾರ್ ಎಂದಾಗ ಸಂಸದರು ನಗುತ್ತಿದ್ದರು.

ವಿಜಯ ಕರ್ನಾಟಕ ಮತ್ತು ವಿದ್ಯಾನಿಧಿ ಸಂಸ್ಥೆ ಮೊನ್ನೆ ಅಭಿವೃದ್ಧಿ ಶೃಂಗ ನಡೆಸಿದಾಗ ಜಿ.ಬಿ.ಜ್ಯೋತಿಗಣೇಶ್ ರವರು, ಅಲ್ಲಿ ಭಾಗವಹಿಸಿದ್ಧ ಸರ್ವಪಕ್ಷಗಳ ಪ್ರತಿನಿಧಿಗಳಿಗೆ ಮತ್ತು ಬುದ್ದಿ ಜೀವಿಗಳಿಗೆ ಹಲವಾರು ಅಭಿವೃದ್ಧಿ ವಿಷಯಗಳಲ್ಲಿ ಜೊತೆ ಗೂಡಿ, ತುಮಕೂರು ನಗರದ ಅಭಿವೃದ್ಧಿ ಅಂತರರಾಷ್ಟ್ರೀಯ ಗಮನ ಸೆಳೆಯುವಂತಾಗ ಬೇಕು ಎಂದು ಬಹಿರಂಗ ಕರೆ ನೀಡಿದರು.

 ಸಭೆಯಲ್ಲಿ ಇದ್ದ ಸಹಕಾರ ಸಚಿವರಾದ ಶ್ರೀ ಕೆ.ಎನ್.ರಾಜಣ್ಣನವರು ಸಹ ಉದ್ದೇಶಿತ ತುಮಕೂರು ಏರ್ ಪೋರ್ಟ್ ಸ್ಥಾಪನೆ ಬಗ್ಗೆ ಮಾತನಾಡುವಾಗ, ನಾನು ಅವರೊಂದಿಗೆ ದೆಹಲಿಯಲ್ಲಿ ಬಹಳ ಹಿಂದೆ ಮಾತನಾಡಿದ್ದ ವಿಷಯಗಳನ್ನು ಮೆಲುಕು ಹಾಕಿದರು.

ಇದೇ ರೀತಿ ಸಂಸದರು ಮುಂದಿನ 25 ವರ್ಷಗಳ ಅವಧಿಯಲ್ಲಿ, ತುಮಕೂರು ನಗರ ಹೇಗೆ ಆಗಬೇಕು ಎಂಬ ಬಗ್ಗೆ ಒಂದು ಡಾಕ್ಯುಮೆಂಟ್ ಮಾಡಲು ಸೂಚಿಸಿದ್ದಾರೆ.

ಹಿರಿಯ ಸಾಹಿತಿಗಳಾದ ಶ್ರೀ ಕವಿತಾ ಕೃಷ್ಣರವರು ತುಮಕೂರು ಅಭಿವೃದ್ಧಿ ಬಗ್ಗೆ ಅಂದುಇಂದುಮುಂದು ಸರಣಿ ಕಾರ್ಯಕ್ರಮ ಆಯೋಜಿಸಲು ಸಲಹೆ ನೀಡಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಡಾ.ಜಿ.ಪರಮೇಶ್ವರ್ ರವರಿಗೂ ಸಹ, ನಗರದ ಅಭಿವೃದ್ಧಿ ಬಗ್ಗೆ ವಿಶೇಷ ಆಸಕ್ತಿ ಇದೆ.

ಈ ಹಿನ್ನಲೆಯಲ್ಲಿ ನಗರದ ಸರ್ವಪಕ್ಷಗಳ ಮತ್ತು ವಿವಿಧ ವರ್ಗದ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ‘ಬ್ರ್ಯಾಂಡ್ತುಮಕೂರುಸರಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು.

ಪಾಲಿಕೆ ಆಯಕ್ತರಾದ ಶ್ರೀ ದರ್ಶನ್ ರವರೊಂದಿಗೆ ಸಮಾಲೋಚನೆ ನಡೆಸಿ, ಜಿಲ್ಲಾಧಿಕಾರಿಗಳ ಮತ್ತು ಹಲವಾರು ಇಲಾಖೆಗಳ ಸಹಭಾಗಿತ್ವದೊಂದಿಗೆ ಡಾಕ್ಯುಮೆಂಟರಿ ಆರಂಭಿಸಲು ಶೀಘ್ರದಲ್ಲಿ ಚಾಲನೆ ನೀಡಲಾಗುವುದು.

ನನ್ನ 35 ವರ್ಷಗಳ ನಿರಂತರ ಅಭಿವೃದ್ಧಿ ಜ್ಞಾನ ಸಂಪಾದನೆ ಮತ್ತು ತುಮಕೂರು ನಗರದ ಅಭಿವೃದ್ಧಿಗಾಗಿ 2001 ರಲ್ಲಿ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ರಚಿಸಿ, 25 ವರ್ಷಗಳಾಗುವ ವೇಳೆಗೆ ಒಂದು ಅಭಿವೃದ್ಧಿ ಡೈರಿ ಪ್ರಕಟಿಸುವುದು ನನ್ನ ಕನಸಾಗಿದೆ.

‘ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ, ನಗರದ ಹಲವಾರು ಬುದ್ದೀಜೀವಿಗಳು ನನಗೆ ಅಕ್ಷರ ಸಹ ಛೀಮಾರಿ ಹಾಕಿದ್ದಾರೆ. ಅವರೆಲ್ಲರ ಕಟು ಟೀಕೆಗಳ ಹಿಂದೆ ನಾನು ಮಾಡಬೇಕಾದ ಕೆಲಸಗಳ ಗಮನ ಸೆಳೆದಿದ್ದು ನಿಜಕ್ಕೂ ನನಗೆ ತೃಪ್ತಿ ತಂದಿದೆ.

ನನ್ನ ಬಗ್ಗೆ ನಗರದ ಹಿರಿಯ ಜೀವಗಳು ಇಟ್ಟುಕೊಂಡಿರುವ ಭರವಸೆ, ಈ ಕಾರ್ಯಕ್ರಮ ಆಯೋಜಿಸಲು ನನಗೆ ಕೆಟಾಲಿಸ್ಟ್ ಆಗಿದೆ.

ಆಸಕ್ತರು ಸಹಕರಿಸಲು ಮನವಿ.