22nd December 2024
Share

TUMKURU:SHAKTHIPEETA FOUNDATION

ದಿನಾಂಕ:27.06.2023 ರಂದುÀ ತುಮಕೂರು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಸಭೆ ಮಹತ್ವದ ನಿರ್ಧಾರ ಕೈಗೊಂಡಿದೆ.

ಸಭೆಯಲ್ಲಿ ಭಾಗವಹಿಸಿದ್ಧ ತುಮಕೂರು ನಗರ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು, ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಸೇರಿದಂತೆ ಅಡ್ವೈಸರಿ ಫೋರಂ ಸದಸ್ಯರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.

ಇವರೆಲ್ಲರ ಸಲಹೆಗಳಂತೆ, ತುಮಕೂರು ಸ್ಮಾರ್ಟ್ ಸಿಟಿ ಕೈಗೊಂಡಿರುವ ಹಲವಾರು ಯೋಜನೆಗಳ ನಿರ್ವಹಣೆ ಬಗ್ಗೆ, ಮುಂದೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ, ಸಭೆಯಲ್ಲಿ ನಡೆದ  ಚರ್ಚೆಗೆ ಅನುಗುಣವಾಗಿ, ಸರಣೆ ವರದಿ ಬರೆಯಲು ನಿರ್ಧರಿಸಿದ್ದೇನೆ.

ನಗರದ ಬುದ್ದೀಜೀವಿಗಳ ಜೊತೆ ಸಮಾಲೋಚನೆ ಸಭೆಗಳನ್ನು ಆಯೋಜಿಸುವ ಮೂಲಕ ಒಂದು ಉತ್ತಮವಾದ ಸಲಹೆ ನೀಡುವುದು ಅಗತ್ಯವಾಗಿದೆ. ಆಸಕ್ತರು ಸಹಕರಿಸಲು ಮನವಿ.

ಈ ಹಿನ್ನಲೆಯಲ್ಲಿ ನಗರ ಗ್ರಂಥಾಲಯಕ್ಕೆ ಭೇಟಿ ನೀಡಿ, ಉಪನಿರ್ದೇಶಕರ ಜೊತೆ ಮತ್ತು ಓದುಗರ ಜೊತೆ ಸಮಾಲೋಚನೆ ನಡೆಸಲಾಯಿತು.

ನಗರ ಗ್ರಂಥಾಲಯ ಪ್ರಾಧಿಕಾರದ ಅಧ್ಯಕ್ಷರಾದ ತುಮಕೂರು ಮಹಾನಗರ ಪಾಲಿಕೆ ಮೇಯರ್ ಜೊತೆಯೂ ಚರ್ಚೆ ನಡೆಸಲಾಗಿದೆ. ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಇಲಾಖೆಯ ಸಮಸ್ಯೆಗಳ ಮತ್ತು ಓದುಗರ ಬೇಡಿಕೆಗಳ ಬಗ್ಗೆ ಸಮಾಲೋಚನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವುದು ಅಗತ್ಯವಾಗಿದೆ.

ಹಿಂದೆ ಶಾಸಕರ ನಿರ್ದೇಶನದಂತೆ ಒಂದು ಉಪಸಮಿತಿ ರಚಿಸಿ ವರದಿ ಪಡೆಯಲು ನಿರ್ಣಯ ಕೈಗೊಳ್ಳಲಾಗಿತ್ತು. ಆ ವರದಿಯ ಹಂತವನ್ನು ಪರಿಗಣನೆಗೆ ತೆಗೆದುಕೊಂಡು, ತುಮಕೂರು ಮಹಾನಗರ ಪಾಲಿಕೆ ಆಯುಕ್ತರು, ಮತ್ತೊಂದು ವಿವರವಾದ ವರದಿ ನೀಡಲು ಇಂದಿನ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.