22nd December 2024
Share

TUMKURU:SHAKTHIPEETA FOUNDATION

ತುಮಕೂರು ಸ್ಮಾರ್ಟ್ ಸಿಟಿ ಹಲವಾರು ಉತ್ತಮವಾದ ಕಾಮಗಾರಿಗಳನ್ನು ಕೈಗೊಂಡಿದೆ. ಅವುಗಳ ನಿರ್ವಹಣೆ ಬಹಳ ಮುಖ್ಯವಾಗಿದೆ. ಈ ಹಿನ್ನಲೆಯಲ್ಲಿ ನಿರ್ವಹಣೆ ಮಾಡುವ ಅಗತ್ಯವಿರುವ ಕಾಮಗಾರಿಗಳ ವೀಕ್ಷಣೆ ಕಾರ್ಯವನ್ನು ಆರಂಭಿಸಲಾಗಿದೆ.

ದಿನಾಂಕ:28.06.2023 ರಂದು ಸ್ಥಳ ವೀಕ್ಷಣೆಯನ್ನು ಕಾಲೀಜಿನ ಪ್ರಾಂಶುಪಾಲರಾದ ಶ್ರೀ ರಾಜಕುಮಾರ್ ಮತ್ತು ತುಮಕೂರು ಸ್ಮಾರ್ಟ್ ಸಿಟಿಯ ಶ್ರೀ ಸಂಧೀಪ್ ತಂಡದ ಜೊತೆ ನಡೆಸಲಾಯಿತು. ಶೀಘ್ರದಲ್ಲಿ ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಮತ್ತು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಸಮ್ಮುಖದಲ್ಲಿ ಆಸಕ್ತರ ಸಭೆ ನಡೆಸಲು ಚಿಂತನೆ ನಡೆಸಲಾಗಿದೆ.

ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಡಾ.ಜಿ.ಪರಮೇಶ್ವರ್ ರವರು ಹಾಗೂ ಜಿಲ್ಲೆಯ ಸಚಿವರಾದ ಶ್ರೀ ಕೆ.ಎನ್.ರಾಜಣ್ಣವರೊಂದಿಗೂ ಸಮಾಲೋಚನೆ ನಡೆಸಲಾಗುವುದು.

ಅಂತಿಮವಾಗಿ ತುಮಕೂರು ಜಿಲ್ಲಾಧಿಕಾರಿಗಳು, ಸರ್ಕಾರದ ಸಹಮತದೊಂದಿಗೆ ಸರ್ಕಾರಿ ಆದೇಶ ಮಾಡಬೇಕಿದೆ.

ಕಾಮಗಾರಿ:  ತುಮಕೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ವೇದಿಕೆಯನ್ನು ಮತ್ತು ಸಂಭಂದಿತ ಮೂಲಸೌಕರ್ಯವನ್ನು ಪುನಾರಾಭಿವೃದ್ಧಿಗೊಳಿಸುವ ಬಗ್ಗೆ.

ಸ್ಥಳ:ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣ.ತುಮಕೂರು

ಯೋಜನಾವೆಚ್ಚ:ರೂ 1.31 ಕೋಟಿ

ಆಲೋಚನೆ:

  1. ಪ್ರಧಾನ ಮಂತ್ರಿಯವರು, ಮುಖ್ಯಮಂತ್ರಿಯವರು ಭಾಗವಹಿಸುವ ಸಮಾರಂಭಗಳ ಸಮಯದಲ್ಲಿ ವಿಐಪಿ ಅತಿಥಿ ಗೃಹ
  2. ಪ್ರತಿ ದಿನ ಪತ್ರಿಕಾಘೋಷ್ಠಿ,
  3. ತುಮಕೂರು ಜಿಲ್ಲೆಯ ಸಂಘ ಸಂಸ್ಥೆಗಳ ನಡೆಸುವ ಅಭಿವೃದ್ಧಿ ಸಭೆ, ಸಂವಾದ, ತರಬೇತಿ ಕಾರ್ಯಕ್ರಮ
  4. ತುಮಕೂರು ಜಿಲ್ಲೆಯ ಅಭಿವೃದ್ಧಿ ಮ್ಯೂಸಿಯಂ.
  5. ತುಮಕೂರು @ 2047 ಭವನ.
  6. ತುಮಕೂರು ಜಿಲ್ಲೆಯ ರೀಸರ್ಚ್ ಹಬ್
  7. ತುಮಕೂರು ಜಿಲ್ಲೆಯ ಅಭಿವೃದ್ಧಿ ಡಾಟಾ ಸೆಂಟರ್.
  8. ತುಮಕೂರು ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳ ಮ್ಯೂಸಿಯಂ.
  9. 1947 ರಿಂದ ಮುಖ್ಯಮಂತ್ರಿಯವರ ಮತ್ತು ಪ್ರಧಾನಮಂತ್ರಿಯವರ ಅವಧಿಯ ಯೋಜನೆಗಳ ಮ್ಯೂಸಿಯಂ.
  10. ಅಭಿವೃದ್ಧಿ ನಾಲೇಡ್ಜ್ ಬ್ಯಾಂಕ್.
  11. ತುಮಕೂರು ನಗರ ಶಾಸಕರ ಅಭಿವೃದ್ಧಿ ಅಧ್ಯಯನ ಕೇಂದ್ರ.
  12. ಊರಿಗೊಂದು ಪುಸ್ತಕ ಹಾಗೂ ಬಡಾವಣೆಗೊಂದು ಪುಸ್ತಕ ಗ್ರಂಥಾಲಯ.

ನಿರ್ವಹಣೆ:

  1. ಲೋಕೋಪಯೋಗಿ ಇಲಾಖೆ.
  2. ತುಮಕೂರು ಜಿಲ್ಲೆಯ ಸಂಘ ಸಂಸ್ಥೆಗಳ ಒಕ್ಕೂಟ.
  3. ತುಮಕೂರು ಮಹಾನಗರ ಪಾಲಿಕೆ.
  4. ಪಿಪಿಪಿ ಮಾದರಿಯಲ್ಲಿ ಆಸಕ್ತರು
  5. ಕರ್ನಾಟಕ ರ್ಮಲ್ಯಮಾಪನ ಪ್ರಾಧಿಕಾರ, ಯೋಜನಾ ಇಲಾಖೆ. ಕರ್ನಾಟಕ ಸರ್ಕಾರ.

ಜನಾಭಿಪ್ರಾಯ ಮತ್ತು ಚುನಾಯಿತ ಜನಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹದ ನಂತರ ಜಿಲ್ಲಾಡಳಿತಕ್ಕೆ ಮನವಿ.

ಆಸಕ್ತರ ಐಡಿಯಾಗಳಿಗಾಗಿ ಮನವಿ.