TUMAKURU:SHAKTHIPEETA FOUNDATION
ಕರ್ನಾಟಕ ರಾಜ್ಯ ಸರ್ಕಾರದ ಯೋಜನಾ ಸಚಿವರಾದ, ಶ್ರೀ ಡಿ.ಸುಧಾಕರ್ ರವರ ಮುಂದೆ ಒಂದು ಅತ್ಯುತ್ತಮವಾದ ಯೋಜನೆ ಇದೆ. ಐಟಿ-ಬಿಟಿ ಯಿಂದಾಗಿ ಇಡೀ ವಿಶ್ವ ಇಂದು ಬೆಂಗಳೂರು ಕಡೆ ತಿರುಗಿ ನೋಡುತ್ತಿದೆ. ಸ್ಟಾಟ್ ಅಪ್ ನಿಂದಲೂ ಬೆಂಗಳೂರು ಬಹಳ ಸುದ್ದಿ ಮಾಡುತ್ತಿದೆ.
ಕೇಂದ್ರ ಸರ್ಕಾರ ತರಲು ಉದ್ದೇಶಿರುವ ‘ನ್ಯಾಷನಲ್ ರೀಸರ್ಚ್ ಫೌಂಡೇಷನ್’ ಅಡಿಯಲ್ಲಿ, ವಿಶ್ವ ಸಂಸ್ಥೆಯಿಂದ ಆರಂಭಿಸಿ, ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರ ಹುಟ್ಟೂರಾದ ಸಿದ್ಧರಾಮನ ಹುಂಡಿವರೆಗೂ ಅಂದರೆ ‘ಸಿದ್ದರಾಮನ ಹುಂಡಿ ರೀಸರ್ಚ್ ಫೌಂಡೇಷನ್’ ಸ್ಥಾಪಿಸುವ ಮೂಲಕ, ನಿಖರವಾದ ರಿಯಲ್ ಟೈಮ್ ಡಾಟಾ ಸಿದ್ಧಪಡಿಸುವ ಮೂಲಕ, ಇಡೀ ರಾಜ್ಯವನ್ನೇ ಒಂದು ಮಾದರಿ ರಾಜ್ಯವನ್ನಾಗಿ ಮಾಡಬಹುದಾಗಿದೆ.
ಕೇಂದ್ರ ಸರ್ಕಾರ ಐದು ವರ್ಷಗಳ ಅವಧಿಗೆ ರೂ 50000 ಕೋಟಿ ಅನುದಾನ ಮೀಸಲಿಟ್ಟಿದೆ. ಇದರಲ್ಲಿ ಅತಿ ಹೆಚ್ಚು ಅನುದಾನ ಪಡೆಯುವ ಮೂಲಕ, ಪ್ರತಿಯೊಂದು ಗ್ರಾಮ ಮತ್ತು ಪ್ರತಿಯೊಂದು ಬಡಾವಣೆಗಳಲ್ಲೂ ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಬಹುದಾಗಿದೆ.
ಇಂಡಿಯಾ @ 100 ಅಂಗವಾಗಿ ಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ಅನ್ನು ಸಿದ್ಧಪಡಿಸಲು, ಈಗಾಗಲೇ ಯೋಜನಾ ಇಲಾಖೆ ‘ನಾಲೇಡ್ಜ್ ಬ್ಯಾಂಕ್’ ಸ್ಥಾಪಿಸಲು ಆರಂಭಿಕ ಸಿದ್ದತೆ ನಡೆಸಿದೆ.
ಕೇಂದ್ರ ಸರ್ಕಾರದಿಂದ ಅತಿ ಹೆಚ್ಚಿನ ಅನುದಾನವನ್ನು, ಕರ್ನಾಟಕ ಸರ್ಕಾರ ಪಡೆಯ ಬೇಕಾದರೆ, ಯೋಜನಾವಾರು, ಇಲಾಖಾವಾರು ಪಕ್ಕಾ ಪ್ರಸ್ತಾವನೆ ಸಲ್ಲಿಸಲೇ ಬೇಕಿದೆ. ಇದಕ್ಕೊಂದು ಮುನ್ನುಡಿ ಬರೆಯುವರೇ ಯೋಜನಾ ಸಚಿವರಾದ ಶ್ರೀ ಡಿ.ಸುಧಾಕರ್ ರವರು.
ಮುಖ್ಯ ಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರಿಗೆ, ಉಪಮುಖ್ಯ ಮಂತ್ರಿಯವರಾದ ಶ್ರೀ ಡಿ.ಕೆ.ಶಿವಕುಮಾರ್ ರವರಿಗೆ ಒಂದು ಈ ಸಂಭಂದ ಮಧ್ಯಂತರ ವರದಿ ನೀಡಲು ಕೈಗೊಂಡಿರುವ ಕ್ರಮ.