TUMAKURU:SHAKTHIPEETA FOUNDATION
ಸುಮಾರು 1999 ರಿಂದ ನಮ್ಮ ಆಶ್ರಮಕ್ಕೆ ಒಮ್ಮೆ ಬನ್ನಿ ಎಂದು ಮುಖ್ಯಸ್ಥರಾದ ಶ್ರೀ ಲೇಪಾಕ್ಷರವರು ಕರೆಯುತ್ತಿದ್ದರು. ‘ಕುದುರೆ ಬಾಯಾರಿದರೇ ಮಾತ್ರ ನೀರು ಕುಡಿಯೋದು’ ಎಂಬ ಗಾದೆ ಮಾತಿನಂತೆ ಶಕ್ತಿಪೀಠ ಪೌಂಡೇಷನ್ 545 ನಿರ್ಗತಿಕ, ಅನಾಥ 6 ನೇ ತರಗತಿಗೆ ಮೇಲ್ಪಟ್ಟ ವಿದ್ಯಾರ್ಥಿಗಳನ್ನು ಜ್ಞಾನಾರ್ಜೆನೆಗೆ ಮಾತ್ರ ದತ್ತು ತೆಗೆದುಕೊಳ್ಳುವ ಆಲೋಚನೆ ಮಾಡುತ್ತಿದೆ.
ಈ ಹಿನ್ನಲೆಯಲ್ಲಿ ದಿನಾಂಕ:07.07.2023 ರಂದು ತುಮಕೂರು ನಗರಕ್ಕೆ ಹೊಂದಿಕೊಂಡಿರುವಂತಹ ಮೈದಾಳ ಗ್ರಾಮದ ಶಿವಶೈಕ್ಷಣಿಕ ಆಶ್ರಮಕ್ಕೆ ಬೇಟಿ ನೀಡಿ ಪ್ರಾಥಮಿಕ ಚರ್ಚೆ ಆರಂಭಿಸಿದೆ. ಇಲ್ಲಿ 28 ಜಿಲ್ಲೆಗಳ, 76 ತಾಲ್ಲೋಕಿನ ವಿದ್ಯಾರ್ಥಿಗಳು ಇದ್ದಾರಂತೆ.
ತಂದೆ ತಾಯಿ ಇಲ್ಲದ, ವಿಚ್ಚೇದನ ಪಡೆದುಕೊಂಡಿರುವ, ತಂದೆ ತಾಯಿಗಳನ್ನು ಕಳೆದುಕೊಂಡಿರುವ ಮಕ್ಕಳು ಇಲ್ಲಿ ಇದ್ದಾರಂತೆ. ಮಕ್ಕಳ ಜ್ಞಾನದ ಬಗ್ಗೆ ಚರ್ಚೆ ಆರಂಭಿಸಿದಾಗ ಒಬ್ಬ ವಿದ್ಯಾರ್ಥಿಯನ್ನು ಬಲವಂತವಾಗಿ ಎಬ್ಬಿಸಿ ನಿಲ್ಲಿಸಿ, ಆತನ ಕನಸು ಕೇಳಿದರೆ ಆತ ಹೇಳಿದ ಮಾತು, ‘ನಾನು ಬೆಂಗಳೂರಿನಲ್ಲಿ ಎಂ.ಎಲ್.ಎ ಆಗುತ್ತೇನೆ’ ಎಂದಾಗ ನಿಜಕ್ಕೂ ಬೆನ್ನು ತಟ್ಟಬೇಕು ಎನಿಸಿತು.
ಮುಖ್ಯಸ್ಥರಿಗೆ ವಿದ್ಯಾರ್ಥಿಗಳ ನಿಖರವಾದ ಮಾಹಿತಿ ಸಿದ್ಧಪಡಿಸಿ ನಂತರ, ನಾನು ಇನ್ನೊಮ್ಮೆ ಬರುತ್ತೇನೆ ಎಂದು ಹೇಳಿ ಬಂದೆ. ನಾನು ಬರುವಾಗ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರೊಂದಿಗೆ ಬರುವುÀದಾಗಿ ಹೇಳಿ ಬಂದೆ, ಜೊತೆಯಲ್ಲಿ ಶ್ರೀ ಹರೀಶ್ ರವರು, ಶ್ರೀ ಸಚ್ಚಿನ್ ರವರು ಶ್ರೀ ಬಸವರಾಜ್ ಹುಬ್ಬಳ್ಳಿ ರವರು ಇದ್ದರು.