24th July 2024
Share

TUMAKURU:SHAKTHIPEETA FOUNDATION

 ತುಮಕೂರು ಜಿಲ್ಲೆಯ ಪ್ರತಿಯೊಂದು ಗ್ರಾಮಗಳು ಮತ್ತು ನಗರ ಪ್ರದೇಶಗಳ ಪ್ರತಿಯೊಂದು ಬಡಾವಣೆಗೊಬ್ಬ ಡಾಟಾ ಮಿತ್ರರರನ್ನು ನೇಮಕ ಮಾಡಲು, ಮೊದಲು ಸ್ಕಿಲ್ ಡೆವಲಪ್ ಮೆಂಟ್ ಇಲಾಖೆಯಿಂದ ತರಬೇತಿ ನೀಡಲು ಸಮಾಲೋಚನೆ ನಡೆಸಲಾಗುತ್ತಿದೆ,

ಊರಿಗೊಂದು/ಬಡಾವಣೆಗೊಂದು ಪುಸ್ತಕ ಬರೆಯಲು ಪೂರಕವಾಗುವ ಡಾಟಾಗಳ ಸಂಗ್ರಹ ಮತ್ತು ನಿರಂತರವಾಗಿ 2047 ರವರೆಗೂ ಆಯಾ ವ್ಯಾಪ್ತಿಯ ಎಲ್ಲಾ ಡಿಜಿಟಲ್ ಮಾಹಿತಿಗಳನ್ನು ಹೈಟೆಕ್ ಮೊಬೈಲ್ ಮೂಲಕ ಸರ್ಕಾರಕ್ಕೆ ಅಪ್ ಲೋಡ್ ಮಾಡುವಂತ ವ್ಯವಸ್ಥೆಗೆ ಪೂರಕವಾಗಲಿದೆ.

ಇದೊಂದು ವಿಶ್ವದಲ್ಲಿಯೇ ವಿನೂತನ ಯೋಜನೆಯಾಗಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಂತದಲ್ಲಿ ಸಮಾಲೋಚನೆ ಆರಂಭವಾಗಿದೆ.

ಡಾಟಾ ಮಿತ್ರರ ಕೆಲಸಗಳು ಈ ರೀತಿ ಇರಲಿವೆ.

ಪ್ರತಿಯೊಂದು ಊರಿನಲ್ಲಿ/ಬಡಾವಣೆಯಲ್ಲಿ

1.ಮಗು ಹುಟ್ಟಿದರೆ ಪೋಟೋ ಸಮಯ ಮತ್ತು ವಿವರ ಸಹಿತ ಮಾಹಿತಿ ಅಪ್ ಲೋಡ್ ಮಾಡುವುದು.

2.ಯಾರಾದರೂ ಸಾವು ಆದರೆ ವಿವರ ಸಹಿತ ಮಾಹಿತಿ ಅಪ್ ಲೋಡ್ ಮಾಡುವುದು.

3.ಒಂದು ಗಿಡಹಾಕಿದರೆ ಜಿಐಎಸ್ ಮಾಹಿತಿ ಅಪ್ ಲೋಡ್ ಮಾಡುವುದು.

4.ಮನೆ ಕಟ್ಟಲು ಆರಂಭ ಮಾಡಿದರೆ ಜಿಐಎಸ್ ಮಾಹಿತಿ ಅಪ್ ಲೋಡ್ ಮಾಡುವುದು.

5.ಸರ್ಕಾರದ ಯಾವುದೇ ಯೋಜನೆ ಆರಂಭಿಸಿದರೆ ಜಿಐಎಸ್ ಮಾಹಿತಿ ಅಪ್ ಲೋಡ್ ಮಾಡುವುದು.

6.ಕಳ್ಳತನವಾದರೆ ಜಿಐಎಸ್ ಮಾಹಿತಿ ಅಪ್ ಲೋಡ್ ಮಾಡುವುದು.

7.ಒಂದು ಬೋರ್ ವೆಲ್ ಕೊರೆದರೆ ಜಿಐಎಸ್ ಮಾಹಿತಿ ಅಪ್ ಲೋಡ್ ಮಾಡುವುದು.

8.ಒಂದು ಟಿಸಿ ಇಟ್ಟರೆ ಜಿಐಎಸ್ ಮಾಹಿತಿ ಅಪ್ ಲೋಡ್ ಮಾಡುವುದು.

9.ಯಾರಾದರೂ ಒಂದು ವಾಹನ ತಂದರೆ ವಿವರ ಸಹಿತ ಮಾಹಿತಿ ಅಪ್ ಲೋಡ್ ಮಾಡುವುದು.

10.ಮಳೆಯಾzರೆ ವಿವರ ಸಹಿತ ಮಾಹಿತಿ ಅಪ್ ಲೋಡ್ ಮಾಡುವುದು.

ಹೀಗೆ ಆಯಾ ಗ್ರಾಮ ಮತ್ತು ಬಡಾವಣೆಗಳಲ್ಲಿ ವ್ಯಕ್ತಿಗತವಾಗಿ, ಕುಟುಂಬದಲ್ಲಿ ಹಾಗೂ ಸಮುದಾಯದ ಯಾವುದೇ ಚಟುವಟಿಕೆಗಳ ಲೈವ್ ಡಾಟಾ ನೀಡುವುದಾಗಿದೆ. ಜೊತೆಗೆ 1947 ಕ್ಕಿಂತ ಮೊದಲು ನಂತರದ 2023 ರವರೆಗೆ ಆಗಿರುವ ಕೆಲಸಗಳು ಮತ್ತು ಮುಂದೆ 2047 ರವರೆಗೆ ಕೈಗೊಳ್ಳಬೇಕಾಗಿರುವ ಯೋಜನೆಗಳ ಬಗ್ಗೆಯೂ ಅಪ್ ಲೋಡ್ ಮಾಡಬೇಕಾಗುತ್ತದೆ.

ಡಾಟಾ ಮಿತ್ರರಿಗೆ ಒಂದು ಕೆಲಸಕ್ಕೆ ಇಂತಿಷ್ಟು ಅಥವಾ ಮಾಸಿಕ ವೇತನ ನೀಡುವ ಬಗ್ಗೆಯೂ ಸರ್ಕಾರದ ಜೊತೆ ಚರ್ಚೆ ನಡೆಸಲಾಗುತ್ತಿದೆ.

  ತುಮಕೂರು ಜಿಲ್ಲೆಯಲ್ಲಿ ಪೈಲಟ್ ಯೋಜನೆಯಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ನಡೆಯುತ್ತಿದೆ. ಡಾಟಾ ಮಿತ್ರರಾಗಲು ಹಾಗೂ ಡಾಟಾ ಮಿತ್ರರಿಗೆ ತರಬೇತಿ ನೀಡಲು ಮುಂದೆ ಬರುವವರು ಸಂಪರ್ಕಿಸಬಹುದು.