22nd December 2024
Share

TUMAKURU:SHAKTHIPEETA FOUNDATION

  ಸಂಸದ ಶ್ರೀ ಜಿ.ಎಸ್.ಬಸವರಾಜ್ ರವರು ಗ್ರಂಥಾಲಯಕ್ಕೆ ಭೇಟಿ ನೀಡಿ ಸೂಚಿಸಿದ ಸಲಹೆಗಳ ಅನುಷ್ಠಾನಕ್ಕೆ ಹಾಗೂ ವಿಶ್ವ ಮಟ್ಟದ ಲೈಬ್ರರಿ ಸಾಲಿಗೆ ತುಮಕೂರು ನಗರ ಗ್ರಂಥಾಲಯ ಸೇರ್ಪಡೆಗೆ ಏನೇನು ಕ್ರಮಕೈಗೊಳ್ಳಬೇಕು ಎಂಬ ಬಗ್ಗೆ, ದಿನಾಂಕ:12.07.2023 ರಂದು ತುಮಕೂರು ನಗರ ಮಹಾಪಾಲಿಕೆ ಮೇಯರ್  ಶ್ರೀಮತಿ ಪ್ರಭಾವತಿ ಸುಧೀಶ್ವರ್‍ರವರ ಅಧ್ಯಕ್ಷತೆಯಲ್ಲಿ ವಿವರವಾಗಿÀ ಚರ್ಚೆ ನಡೆಯಿತು.

ನಗರ ಗ್ರಂಥಾಲಯದ ಆವರಣದ ಒಂದೊಂದು ಇಂಚಿನ ಜಾಗದ ಮತ್ತು ಕಟ್ಟಡದ  ಸದ್ಭಳಕೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಸಂಸ್ಥೆಗಳಿಂದ ಏನೇನು ಸೌಲಭ್ಯ ಪಡೆಯಬಹುದು. ವಿಶ್ವದ ದಿನದ 24 ಗಂಟೆ ತೆರೆದಿರುವ ಗ್ರಂಥಾಲಯಗಳ ಬೆಸ್ಟ್ ಪ್ರಾಕ್ಟೀಸಸ್, ಸ್ಪರ್ಧಾತ್ಮಕ ವಿದ್ಯಾರ್ಥಿಗಳಿಗೆ ಹಾಗೂ ಜಿಲ್ಲೆಯ ನಿರುದ್ಯೋಗಿಗಳಿಗೆ ಅನೂಕೂಲವಾಗುವಂತಹ ಯೋಜನೆಗಳ ಬಗ್ಗೆಯೂ ಸಮಾಲೋಚನೆ ನಡೆಸಲಾಯಿತು.

ಡಿಜಿಟಲ್ ಗ್ರಂಥಾಲಯ, ಹ್ಯೂಮನ್ ಗ್ರಂಥಾಲಯ, ಜಿಲ್ಲೆಯ 10 ನಗರಗಳ ಗ್ರಂಥಾಲಯ, ಜಿಲ್ಲೆಯ 330 ಗ್ರಾಮಪಂಚಾಯಿತಿಗಳ ಗ್ರಂಥಾಲಯ, ತುಮಕೂರು ನಗರದಲ್ಲಿ ವಾರ್ಡ್‍ಗೊಂದು ಹಾಗೂ ಬಡಾವಣೆಗೊಂದು ಗ್ರಂಥಾಲಯದ ಅವಶ್ಯಕತೆ ಹಾಗೂ ಮಾನಿಟರಿಂಗ್ ವ್ಯವಸ್ಥೆ ಬಗ್ಗೆಯೂ ಚರ್ಚೆ ನಡೆಯಿತು.

ತುಮಕೂರು ನಗರ ಗ್ರಂಥಾಲಯದಲ್ಲಿ ಜಿಲ್ಲೆಯ ಎಲ್ಲಾ ವರ್ಗದ ಜನತೆಗೂ ಅಗತ್ಯವಿರುವ ವಿಭಾಗಗಳನ್ನು ತೆರೆಯುವುದು. ತುಮಕೂರು ಯೂನಿವರ್ಸಿಟಿ ಮಾದರಿಯಲ್ಲಿ ಮದ್ಯಾಹ್ನದ ಉಪಹಾರಕ್ಕೆ ಓದುಗರ ನಿಖರವಾದ ಡಾಟಾ ಸಂಗ್ರಹದ ಬಗ್ಗೆಯೂ ಚರ್ಚೆ ನಡೆಯಿತು.

ನಿರ್ಧಿಷ್ಠ ಯೋಜನೆಗಳ ಬಗ್ಗೆ ವಿವರವಾದ ಲಿಖಿತ ವರದಿ ನೀಡಲು ಹೊಣೆಗಾರಿಕೆ ನೀಡಲು ನಿರ್ಧರಿಸಲಾಯಿತು.  ಗ್ರಂಥಾಲಯ ಸಪ್ತಾಹದ ವೇಳೆಗೆ ಒಂದು ಪುಸ್ತಕ ಹೊರತಂದು ಮುಂದಿನ 25 ವರ್ಷಗಳ ಅವಧಿವರೆಗಿನ ಯೋಜನೆಗಳ ಬಗ್ಗೆ ಜನಾಭಿಪ್ರಾಯ ಸಂಗ್ರಹ ಮಾಡಲು ಚರ್ಚಿಸಲಾಗಿದೆ.

ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ನಿರ್ಣಯ ಹಾಗೂ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರ ಸಲಹೆಯಂತೆ, ಗ್ರಂಥಾಲಯ ಆಸಕ್ತರ ವಿಷನ್ ಗ್ರೂಪ್ ರಚಿಸಿ, ಅವರ ಸಲಹೆಗಳನ್ನು ಸ್ವೀಕರಿಸುವುದು ಹಾಗೂ ಪಿಪಿಪಿ ಮಾದರಿಯಲ್ಲಿ ವಿವಿಧ ಕಾರ್ಯಕ್ರಮ ರೂಪಿಸಲು ಸಂಘ ಸಂಸ್ಥೆಗಳನ್ನು ಆಹ್ವಾನಿಸುವ ಬಗ್ಗೆಯೂ ಚರ್ಚೆ ನಡೆಸಲಾಯಿತು.

ಶಾಸಕರ, ಸಂಸದರ, ಜಿಲ್ಲಾ ಉಸ್ತುವಾರಿ ಸಚಿವg, ಸರ್ಕಾರಗಳ Àಗಮನ ಸೆಳೆಯಲು, ಎಲ್ಲಾ ಮಾಹಿತಿಗಳ ಕ್ರೋಡೀಕರಣದ ನಂತರ ಮುಂದಿನ ಸಭೆಯನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಸಿ, ಸರ್ಕಾರದ ಅನುಮತಿಗಾಗಿ ವರದಿ ಸಲ್ಲಿಸಲು ಚರ್ಚೆ ನಡೆಯಿತು.