24th April 2024
Share

TYMAKURU:SHAKTHIPEETA FOUNDATION

ನಂಬರ್ ಒನ್ ಕರ್ನಾಟಕ ನಮ್ಮ ನಿಮ್ಮೆಲ್ಲರ ಕನಸಾಗ ಬೇಕು.

ನಂಬರ್ ಒನ್ ಕರ್ನಾಟಕ ಆಗಬೇಕಾದರೆ, ಕೇಂದ್ರ ಸರ್ಕಾರದಿಂದ ಹೆಚ್ಚಿಗೆ ಅನುದಾನ ಪಡೆಯಲೇ ಬೇಕು. ಹೆಚ್ಚಿಗೆ ಅನುದಾನ ಪಡೆಯಲು ಕಾರ್ಯತಂತ್ರ ರೂಪಿಸಲು, ತಮ್ಮೆಲ್ಲರ ಜ್ಞಾನದ ಅವಶ್ಯಕತೆ ಇದೆ. ಆದರಿಂದ ತಾವೂ ಜ್ಞಾನ ದಾನ ಮಾಡಲು ಹೃದಯಪೂರ್ವಕ ಮನವಿ.

ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಅಂತಿಮ ವರದಿ ನೀಡಲು ನಿರಂತರವಾಗಿ ಶ್ರಮಿಸುತ್ತಿದ್ದೇವೆ. ಸರ್ಕಾರದಿಂದ ಯಾವುದೇ ಅನುದಾನ ಪಡೆಯದೇ ಎಂ.ಓ.ಯು ಮಾಡಿಕೊಂಡು ಅಧ್ಯಯನ ಮಾಡುತ್ತಿದ್ದೇವೆ. ಜನರ ಅನಿಸಿಕೆ, ಅಭಿಪ್ರಾಯ ತಿಳಿದುಕೊಳ್ಳ ಬೇಕಾದರೆ, ಅವರ ಕೈಗೆ ಒಂದಿಷ್ಟು ಮಾಹಿತಿ ನೀಡಿದ ನಂತರ ವ್ಯಾಖ್ಯಾನ ಆರಂಭವಾಗುವುದು ವಾಡಿಕೆ.

ನಂಬರ್ ಒನ್ ಕರ್ನಾಟಕ ನಮ್ಮ ನಿಮ್ಮೆಲ್ಲರ ಕನಸಾಗ ಬೇಕು.. ಈ ಹಿನ್ನಲೆಯಲ್ಲಿ ರಾಜ್ಯಾಧ್ಯಾಂತ ಹಲವಾರು ಕಡೆ ಸಭೆ, ಸಂವಾದ, ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಅಭಿಪ್ರಾಯ ಮತ್ತು ಸಲಹೆ ಮೇರೆಗೆ, ಈ ಮಧ್ಯಂತರ ವರದಿಯ ಡ್ರಾಪ್ಟ್ ಸಿದ್ಧಪಡಿಸಿದ್ದೇವೆ. ಇಂಡಿಯಾ @ 100 ಅಂಗವಾಗಿ, ನವಕರ್ನಾಟಕ ವಿಷನ್ ಡಾಕ್ಯುಮೆಂಟ್-2047, ಬರೀ ಫ್ಯಾಷನ್ ಆಗಬಾರದು.

  ಹಾಗೆ ಸುಮ್ಮನೆನಾನು ಮುಖ್ಯ ಮಂತ್ರಿ ಆಗಿದ್ದರೇ?

 1. ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರ ಹೆಚ್ಚಿಗೆ ಅನುದಾನ ಪಡೆಯಲು ಯಾವುದೇ ಹೆಚ್ಚುವರಿ ಆರ್ಥಿಕ  ಹೊರೆಮಾಡದೆ, ರಾಜ್ಯದ ಎಲ್ಲಾ ಸಹಕಾರ ಸಂಸ್ಥೆಗಳಲ್ಲಿ ಅಭಿವೃದ್ಧಿ ನಿಧಿ ಹಾಗೂ ಪ್ರತಿಯೊಂದು ಸ್ಥಳೀಯ ಸಂಸ್ಥೆಗಳಲ್ಲಿ, ಪ್ರತಿಯೊಂದು ಇಲಾಖೆಯ ಅನುದಾನದಲ್ಲಿಯೇ ಶೇ 3 ರಷ್ಟು ಅಭಿವೃದ್ಧಿ ನಿಧಿ ಘೋಷಣೆ ಮಾಡಿ, ಕರ್ನಾಟಕ ಮೇಲ್ವೀಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರಕ್ಕೆ ವರ್ಗಾವಣೆ ಮಾಡಿಸುತ್ತಿದ್ದೆ.
 2. ಸಿಎಸ್‍ಆರ್ ಫಂಡ್, ದಾನಿಗಳಿಂದ, ಪಿಪಿಪಿ ಮಾದರಿಯಲ್ಲಿ ಆರ್ಥಿಕ ಸಮತೋಲನ ಕಾಪಾಡಿಕೊಳ್ಳಲು ಆದೇಶ ಮಾಡುತ್ತಿದ್ದೆ.
 3. ಕೇಂದ್ರ ಸರ್ಕಾರದ ನ್ಯಾಷನಲ್ ರೀಸರ್ಚ್ ಫೌಂಡೇಷನ್ ಅನುದಾನದೊಂದಿಗೆ, ರಾಜ್ಯದ ಪ್ರತಿಯೊಂದು ಗ್ರಾಮ ಮಟ್ಟದ ಅಭಿವೃದ್ಧಿ ರೀಸರ್ಚ್ ಫೌಂಡೇಷನ್ ರಚಿಸುತ್ತಿದ್ದೆ. ಊರಿಗೊಂದು ಪುಸ್ತಕ ರಚಿಸಲು ಆದೇಶ ಮಾಡುತ್ತಿದ್ದೆ.
 4. ಕೇಂದ್ರ ಸರ್ಕಾರದ ನ್ಯಾಷನಲ್ ರೀಸರ್ಚ್ ಫೌಂಡೇಷನ್ ಅನುದಾನದೊಂದಿಗೆ, ರಾಜ್ಯದ ಪ್ರತಿಯೊಂದು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬಡಾವಣೆ ಘೋಷಣೆ ಮಾಡಿ, ಬಡಾವಣೆ ಮಟ್ಟದ ಅಭಿವೃದ್ಧಿ ರೀಸರ್ಚ್ ಫೌಂಡೇಷನ್ ರಚಿಸುತ್ತಿದ್ದೆ. ಬಡಾವಣೆಗೊಂದು ಪುಸ್ತಕ ರಚಿಸಲು ಆದೇಶ ಮಾಡುತ್ತಿದ್ದೆ.
 5. ರಾಜ್ಯದ ಪ್ರತಿಯೊಂದು ಗ್ರಾಮ ಪಂಚಾಯತ್, ತಾಲ್ಲೋಕು ಪಂಚಾಯತ್, ಜಿಲ್ಲಾ ಪಂಚಾಯತ್, ನಗರ ಸ್ಥಳೀಯ ಸಂಸ್ಥೆಗಳಾದ ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ ಮತ್ತು ಮಹಾನಗರ ಪಾಲಿಕೆ, ಶಾಸಕರು, ವಿಧಾನಪರಿಷತ್ ಸದಸ್ಯರು, ಸಂಸದರು, ರಾಜ್ಯಸಭಾ ಸದಸ್ಯರು, ದೆಹಲಿ ಪ್ರತಿನಿಧಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಓ ಮತ್ತು ವಿವಿಧ ವರ್ಗದವರ ಅಧ್ಯಕ್ಷತೆಯಲ್ಲಿ ಇರುವ ವಿವಿಧ ಸಮಿತಿಗಳಿಗೆ ರ್ಯಾಂಕಿಂಗ್/ರೇಟಿಂಗ್ ಘೋಷಣೆ ಮಾಡುತ್ತಿದ್ದೆ. 
 6. ಕೇಂದ್ರ ಸರ್ಕಾರದ ನ್ಯಾಷನಲ್ ರೀಸರ್ಚ್ ಫೌಂಡೇಷನ್ ಅನುದಾನದೊಂದಿಗೆ, ರಾಜ್ಯದ ಎಲ್ಲಾ ವರ್ಗದ ವಿಶ್ವ ವಿದ್ಯಾನಿಲಯಗಳಲ್ಲಿ ಪಟ್ಟಿಯಲ್ಲಿ ಇರುವ, ವಿವಿಧ 545 ಅಧ್ಯಯನ ಪೀಠಗಳನ್ನು ರಚಿಸಿ, ಮಾರ್ಗದರ್ಶಿ ಸೂತ್ರ ಸಿದ್ಧಪಡಿಸಲು ಆದೇಶ ಮಾಡುತ್ತಿದ್ದೆ. 
 7. ರಾಜ್ಯದ ಎಲ್ಲಾ ವಿಶ್ವ ವಿದ್ಯಾನಿಲಯಗಳ ಅಧ್ಯಯನ ಪೀಠಗಳಿಗೆ ವಿಧಾನಸಭಾ ಕ್ಷೇತ್ರವಾರು ವ್ಯಾಪ್ತಿ ಹಂಚಿಕೆ ಮಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ಯೋಜನೆಗಳನ್ನು ಹಂಚಿಕೆ ಮಾಡಿ, ವಿಶ್ವ ವಿದ್ಯಾನಿಲಯಗಳಲ್ಲಿರುವ ಅಧ್ಯಯನ ಪೀಠಗಳಿಗೆ ಮಾರ್ಗದರ್ಶಿ ಸೂತ್ರ ಸಿದ್ಧಪಡಿಸಿ. ಯೋಜನಾ ಇಲಾಖೆಯ ಅಡಿಯಲ್ಲಿ ಇರುವ ಕರ್ನಾಟಕ ಮೇಲ್ವೀಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರದ ಮೂಲಕ ಅಗತ್ಯ ಅನುದಾನ ನೀಡಲು ಆದೇಶ ಮಾಡುತ್ತಿದ್ದೆ.
 8. ಒಂದು ರಾಜ್ಯಒಂದು ನಕ್ಷೆ ಮತ್ತು ಒಂದು ರಾಜ್ಯಒಂದೇ ಡಾಟಾ  ಘೋಷಣೆ ಮಾಡಿ, ಪ್ರತಿಯೊಂದು ಗ್ರಾಮ ಹಾಗೂ ಬಡಾವಣೆ ಹಂತದಲ್ಲಿ, ಇಲಾಖೆಯ ಪ್ರತಿಯೊಂದು ಕಾಮಗಾರಿ ಬಗ್ಗೆ, ಗುತ್ತಿಗೆದಾರರೇ ಜಿಐಎಸ್ ಪೋರ್ಟಲ್‍ನಲ್ಲಿ ಅಫ್ ಡೇಟ್ ಮಾಡಿಸÀಲು, ಗುತ್ತಿಗೆ ಕರಾರಿನಲ್ಲಿಯೇ ಇದಕ್ಕೆ ಹಣ ಮೀಸಲಿಟ್ಟು, ಬಿಲ್ ಮಾಡುವಾಗ   ಕಡ್ಡಾಯ ಮಾಡಿ ಆದೇಶ ಮಾಡುತ್ತಿದ್ದೆ.
 9. ರಾಜ್ಯದ ಎಲ್ಲಾ ಇಲಾಖೆಗಳ ಡಾಟಾ ಆಪರೇಟರ್‍ಗಳನ್ನು  ಜಿಐಎಸ್‍ಗೆ ಅಫ್ ಡೇಟ್ ಮಾಡಲು ಆದೇಶ ನೀಡುತ್ತಿದ್ದೆ.
 10. ಹಲವಾರು ವರ್ಷಗಳಿಂದ ರೆವಿನ್ಯೂ ಸರ್ವೇ ವಿಲೇಜ್ ಮ್ಯಾಪ್ ಗಳಿವೆ, ಅವುಗಳ ಜೊತೆಗೆ ಡೆವಲಪ್ ಮೆಂಟ್ ಡಿಜಿಟಲ್ ವಿಲೇಜ್ ಮ್ಯಾಪ್ ರಚಿಸಲು ಆದೇಶ ಮಾಡಿ, ಇಲ್ಲಿ 1947 ಕ್ಕಿಂತ ಮೊದಲು ಆಗಿರುವ ಕಾಮಗಾರಿಗಳು ಒಂದು ಕಲರ್‍ನಲ್ಲಿ, 75 ನೇ ಸ್ರಾತಂತ್ರ್ಯದ ವೇಳೆವರೆಗೆ ಆಗಿರುವ ಕಾಮಗಾರಿಗಳು ಒಂದು ಕಲರ್‍ನಲ್ಲಿ, ಜಿಐಎಸ್ ಆಧಾರಿತ ನಕ್ಷೆಯೊಂದಿಗೆ ಮಾಹಿತಿ ಲಭ್ಯವಾಗಬೇಕು. ಮುಂದಿನ 2047 ರವರೆಗೆ ಅಂದರೆ 100 ನೇ ಸ್ರಾತಂತ್ರ್ಯದ ವೇಳೆವರೆಗೆ ಏನೇನು ಕೆಲಸ ಆಗಬೇಕು ಎಂಬ ‘ನೀಡ್ ಬೇಸ್ಡ್’ ಯೋಜನೆಗಳ ಡಿಜಿಟಲ್ ದಾಖಲೆ ಇನ್ನೊಂದು ಕಲರ್‍ನಲ್ಲಿ ಗುರುತು ಮಾಡಲು ಆದೇಶ ಮಾಡುತ್ತಿದ್ದೆ.
 11. ವಿದ್ಯಾರ್ಥಿಗಳ ಹಂತದಲ್ಲಿ ಇರುವ ಇಕೋಕ್ಲಬ್, ರೆಡ್‍ಕ್ರಾಸ್ ಕ್ಲಬ್, ಎನ್.ಎಸ್.ಎಸ್. ಎನ್.ಸಿ.ಸಿ. ನ್ಯಾಷನಲ್ ಟೂರಿಸಂ ಯೂತ್ ಕ್ಲಬ್, ಇಂಜಿನಿಯರಿಂಗ್ ವಿದ್ಯಾರ್ಥಿಗಳ ಆಕ್ಟಿವಿಟಿ ಪಾಯಿಂಟ್ ಪಿ.ಹೆಚ್.ಡಿ ಮಾಡುವ ವಿಷಯ ಮತ್ತು ಎಲ್ಲಾ ಹಂತದ ಪದವಿಗಳಲ್ಲಿ ಪ್ರಾಜೆಕ್ಟ್ ಮಾಡುವ ವಿದ್ಯಾರ್ಥಿಗಳು, ದೇಶದ ಎಲ್ಲೇ ಯಾವುದೇ ಕಾಲೆಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದರು, ಅವರವರ ಹುಟ್ಟೂರಿನ/ಬಡಾವಣೆಯ, ‘ಊರಿಗೊಂದುÀ/ಬಡಾವಣೆಗೊಂದು ಪುಸ್ತಕ ರಚಿಸುವುದು ಒಂದು ಪ್ರಾಜೆಕ್ಟ್’ ಎಂದು ಸರ್ಕಾರಿ ಆದೇಶ ಮಾಡುತ್ತಿದ್ದೆ.
 12. ವಿದ್ಯಾರ್ಥಿಗಳ ಜೊತೆಗೆ ಆಯಾ ಗ್ರಾಮದ ವಿವಿಧ ಸಂಘ ಸಂಸ್ಥೆಗಳು, ಯುವ ಸಂಘಟನೆಗಳು, ಹಾಲಿ ಮತ್ತು ನಿವೃತ್ತ ಸರ್ಕಾರಿ ಅಧಿಕಾರಿಗಳು, ಗ್ರಾಮ ಮಟ್ಟದ ಸರ್ಕಾರಿ ನೌಕರರ, ಎಲ್ಲಾ ರಾಜಕೀಯ ಪಕ್ಷಗಳ ಪ್ರಮುಖರು, ಸ್ತ್ರಿ ಶಕ್ತಿ ಸ್ವಸಹಾಯ ಸಂಘಗಳ, ಆಯಾ ಹಂತದಲ್ಲಿ ವಾಸಿಸುವ ಎಲ್ಲಾ ಜಾತಿಯ ಪ್ರತಿನಿಧಿಗಳು, ಎಲ್ಲಾ ಧರ್ಮದ ಪ್ರತಿನಿಧಿಗಳು, ಚುನಾಯಿತ ಪ್ರತಿನಿಧಿಗಳು ಮತ್ತು ವಿಷಯವಾರು ಪರಿಣಿತರು/ಜ್ಞಾನಿಗಳು ಭಾಗಿಯಾಗಲು ‘ಮಾರ್ಗದರ್ಶಿ ಸೂತ್ರ’ ಸಿದ್ಧಪಡಿಸಿ, ಇವರೆಲ್ಲರನ್ನು ಗ್ರಾಮ ಮಟ್ಟದ ಅಥವಾ ಬಡಾವಣೆ ಮಟ್ಟದ ರೀಸರ್ಚ್ ಪೌಂಡೇಷನ್ ಸದಸ್ಯರನ್ನಾಗಿ ಮಾಡುತ್ತಿದ್ದೆ.
 13. ರಾಜ್ಯದ ಪ್ರತಿಯೊಂದು ಗ್ರಾಮಗಳಲ್ಲಿ ಮತ್ತು ಬಡಾವಣೆಗಳಲ್ಲಿ ಪವಿತ್ರವನ ಮಾದರಿಯಲ್ಲಿ ಸರ್ಕಾರಿ ಜಮೀನು ಕಾಯ್ದಿರಿಸಿ, ನರೇಗಾ ಅನುದಾನದಲ್ಲಿ ಆಯಾ ಗ್ರಾಮದ/ಬಡಾವಣೆಯ ಥೀಮ್ ಪಾರ್ಕ್ ಮಾಡಲು ಆದೇಶ ಮಾಡುತ್ತಿದ್ದೆ. ನಗರ ಪ್ರದೇಶಗಳಿಗೂ ಥೀಮ್ ಪಾರ್ಕ್ ನಿರ್ಮಾಣಕ್ಕೆ ಅನುದಾನ ನೀಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತಿದ್ದೆ.
 14. ಉದ್ದೇಶಿತ 545 ಅಧ್ಯಯನ ಪೀಠಗಳವಾರು, ಥೀಮ್ ಪಾರ್ಕ್ ನಿರ್ಮಾಣಕ್ಕೆ ಕನಿಷ್ಠ ಒಂದು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎರಡು ಥೀಮ್ ಪಾರ್ಕ್ ಸ್ಥಾಪಿಸಲು, ಕನಿಷ್ಠ 5 ಎಕರೆಯಿಂದ 100 ಎಕರೆವರೆಗೂ ಸರ್ಕಾರಿ ಜಮೀನು ಕಾಯ್ದಿರಿಸಿ, ಅನುದಾನ ನೀಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತಿದ್ದೆ.
 15. 224 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ, ಆಯಾ ಶಾಸಕರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ಸಭೆಯ ಟೆಂಪ್ಲೇಟ್ ರಚಿಸಿ ಅಭಿವೃದ್ಧಿ ರ್ಯಾಂಕಿಂಗ್ ನೀಡಲು ಆದೇಶ ನೀಡುತ್ತಿದ್ದೆ. 
 16. 75 ವಿಧಾನ ಪರಿಷತ್ ಸದಸ್ಯರ  ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ಸಭೆಯ ಟೆಂಪ್ಲೇಟ್ ರಚಿಸಿ ಅಭಿವೃದ್ಧಿ RANKING ನೀಡಲು ಆದೇಶ ನೀಡುತ್ತಿದ್ದೆ. 
 17. 28 ಲೋಕಸಭಾ ಸದಸ್ಯರ  ಅಧ್ಯಕ್ಷತೆಯಲ್ಲಿ, ಅವರ ವ್ಯಾಪ್ತಿಗೆ ದಿಶಾ ಸಮಿತಿ ರಚಿಸಿ, ಸಭೆಯ ಟೆಂಪ್ಲೇಟ್ ರಚಿಸಿ ಅಭಿವೃದ್ಧಿ ರ್ಯಾಂಕಿಂಗ್ ನೀಡಲು ಆದೇಶ ನೀಡುತ್ತಿದ್ದೆ. 
 18. 13 ರಾಜ್ಯಸಭಾ ಸದಸ್ಯರ  ಅಧ್ಯಕ್ಷತೆಯಲ್ಲಿ ನಿರ್ಧಿಷ್ಠ ಯೋಜನೆಗಳ ದಿಶಾ ಸಮಿತಿ ರಚಿಸಿ, ಸಭೆಯ ಟೆಂಪ್ಲೇಟ್ ರಚಿಸಿ ಅಭಿವೃದ್ಧಿ ರ್ಯಾಂಕಿಂಗ್ ನೀಡಲು ಆದೇಶ ನೀಡುತ್ತಿದ್ದೆ. 
 19. ದೆಹಲಿ ವಿಶೇಷ ಪ್ರತಿನಿಧಿ ಮ್ಯೂಸಿಯಂ, ಫಿಸಿಕಲ್ ಗ್ರಂಥಾಲಯ, ಡಿಜಿಟಲ್ ಗ್ರಂಥಾಲಯ, ಹ್ಯೂಮನ್ ಗ್ರಂಥಾಲಯ ಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತಿದ್ದೆ.
 20. ಕರ್ನಾಟಕ ಮೇಲ್ವೀಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರದ ಸಹಭಾಗಿತ್ವದೊಂದಿಗೆ ರಾಜ್ಯದ ಪ್ರತಿಯೊಂದು ಗ್ರಾಮಗಳಲ್ಲಿರುವ ಹಾಗೂ ನಗರ ಪ್ರದೇಶಗಳಲ್ಲಿರುವ ಬಡಾವಣೆವಾರು ವಿವಿಧ ವಿಷಯಗಳಲ್ಲಿನ ಪರಿಣಿತರ ನಾಲೇಡ್ಜ್ ಬ್ಯಾಂಕ್ ಸ್ಥಾಪಿಸಲು ಆದೇಶ ನೀಡುತ್ತಿದ್ದೆ.
 21. ರಾಜ್ಯದ ಗ್ರಾಮ ಪಂಚಾಯಿತಿಗಳ ಮಟ್ಟದ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಗ್ರಂಥಾಲಯಗಳಲ್ಲಿ ಊರಿಗೊಂದು/ಬಡಾವಣೆಗೊಂದು ಪುಸ್ತಕದ ಮಾಹಿತಿಗಳನ್ನು ಇಡಲು ಆದೇಶ ಮಾಡುತ್ತಿದ್ದೆ.
 22. ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ ದೊರೆಯ ಬೇಕಾದರೆಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅಡಿಪಾಯ ಆಗಲೇ ಬೇಕು. ಎಲ್ಲಾ ವರದಿಗಳ/ಯೋಜನೆಗಳ ಮೌಲ್ಯಮಾಪನ ಆಯಾ ಗ್ರಾಮಗಳ/ಬಡಾವಣೆಗಳÀ ಜನತೆಯ ಮುಂದೆಯೇ ಆಗಬೇಕು. ಆಯಾ ಗ್ರಾಮ/ಬಡಾವಣೆ ಹಂತದ ಸೋಶಿಯಲ್ ಮೀಡಿಯಾಗಳಲ್ಲಿ ವ್ಯಾಪಕ ಪ್ರಚಾರ ಮಾಡಲು. ಗ್ರಂಥಾಲಯಗಳ ಸಹಭಾಗಿತ್ವದಲ್ಲಿ, ಗ್ರಾಮಗಳ/ಬಡಾವಣೆಗಳ ಹಂತದಲ್ಲಿ ‘ಡಾಟಾ ಮಿತ್ರ’ ನೇಮಕ ಮಾಡುತ್ತಿದ್ದೆ. ಆಯಾ ಕಾಮಗಾರಿ ಗುತ್ತಿಗೆಯಲ್ಲಿ ಇಂತಿಷ್ಟು ಹಣ ಎಂದು ನಿಗದಿ ಮಾಡುತ್ತಿದ್ದೆ. ಸರ್ಕಾರಿ ಮತ್ತು ಖಾಸಗಿ ಪ್ರತಿಯೊಂದು ಕಾಮಗಾರಿ ವಿವರವನ್ನು ಅಫ್ ಲೋಡ್ ಮಾಡಲು ಆದೇಶ ನೀಡುತ್ತಿದ್ದೆ. ಖಾಸಗಿ ಯೋಜನೆಗಳಿಗೆ ಖಾಸಗಿಯವರಿಂದಲೇ ಇಂತಿಷ್ಟು ಹಣ ಎಂದು ನಿಗದಿ ಮಾಡಿ ಆದೇಶ ಮಾಡುತ್ತಿದ್ದೆ.
 23. ಇಂಡಿಯಾ @ 100 ಅಂಗವಾಗಿ, 2047 ರ  ಎಲ್ಲಾ ಯೋಜನೆಗಳ ಮಾನಿಟರಿಂಗ್ ಸೆಲ್ ಅಥವಾ ಫಿಸ್ಕಲ್ ಪಾಲಿಸಿ ಇನ್ಸ್ಟಿಟ್ಯೂಟ್   ಮಾದರಿಯಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಕ್ಯಾಪ್ಚರಿಂಗ್ ಗೌರ್ವನಮೆಂಟ್ ಆಪ್ ಇಂಡಿಯಾ ಫಂಡ್ಸ್ ಸಂಸ್ಥೆಯನ್ನು ಪಿಪಿಪಿ ಮಾದರಿಯಲ್ಲಿ ಸ್ಥಾಪಿಸುತ್ತಿದ್ದೆ.
 24. ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಸೇರಿದಂತೆ ಇದೂವರೆಗೂ ಮಾಡಿರುವ ಎಲ್ಲಾ ವಿಧವಾದ ಗಣತಿಗಳ ಮೌಲ್ಯಮಾಪನಕ್ಕೆ ರಿಯಲ್ ಟೈಮ್ ಡಾಟಾ ಅನಾಲೀಸಿಸ್  ಹೊಣೆಗಾರಿಕೆಯನ್ನು ಗ್ರಾಮ ಮಟ್ಟದ ಹಾಗೂ ಬಡಾವಣೆ ವiಟ್ಟದ  ರೀಸರ್ಚ್ ಪೌಂಡೇಷನ್‍ಗೆ ವಹಿÀಸಿ, ಉಚಿತವಾಗಿ ಮಾಹಿತಿ ನೀಡಲು ಆದೇಶ ಮಾಡುತ್ತಿದ್ದೆ.
 25. ಕೇಂದ್ರ ಸರ್ಕಾರ ಮಂಜೂರು ಮಾಡಿದ ಹಣದ ಮಾಹಿತಿ, ಕ್ಲಿಕ್ ಮಾಡಿದರೆ ಎಲ್ಲೆಲ್ಲಿ ಎಷ್ಟು ಖರ್ಚು ಆಗಿದೆ. ಯಾವ ಬ್ಯಾಂಕಿನಲ್ಲಿ ಎಷ್ಟೆಷ್ಟು ಹಣ ಡಿಪಾಸಿಟ್ ಇದೆ ಎಂಬ ಬಗ್ಗೆ ಡಿಜಿಟಲ್ ವಿಷ್ಲೇಷಣೆ ಅಗತ್ಯಕ್ಕಾಗಿ ಮನಿ ಟ್ರ್ಯಾಕಿಂಗ್ ಯೋಜನೆ ಜಾರಿ ಮಾಡುತ್ತಿದ್ದೆ.
 26. ರಿಯಲ್ ಟೈಮ್ ಡಾಟಾ ಅನಾಲೀಸಿಸ್  ಹೊಣೆಗಾರಿಕೆಯನ್ನು ಗ್ರಾಮ ಮಟ್ಟದ ಹಾಗೂ ಬಡಾವಣೆ ವiಟ್ಟದ  ರೀಸರ್ಚ್ ಪೌಂಡೇಷನ್‍ಗೆ ವಹಿÀಸಿ, ಕೆಳಕಂಡ ಇಲಾಖೆಗಳಲ್ಲಿ ಅಂದರೆ,   ಎನ್.ಐ.ಸಿ. ಕರ್ನಾಟಕ, ಎನ್.ಆರ್.ಡಿ.ಎಂ.ಎಸ್. ಪ್ರತಿ ಜಿಲ್ಲಾ ಮಟ್ಟ ಮತ್ತು ಕರ್ನಾಟಕ ರಾಜ್ಯ ಮಟ್ಟ, ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್  ಅಪ್ಲಿಕೇಷನ್ ಸೆಂಟರ್,  ಕೆ.ಎಂ.ಡಿ.ಎಸ್.ಕರ್ನಾಟಕ ಸರ್ಕಾರ, ಸ್ಮಾರ್ಟ್ ಇ ಗೌರ್ವನೆನ್ಸ್, ಕರ್ನಾಟಕ ಸರ್ಕಾರದ ಕೋಡಿ, ಮಾಹಿತಿ ಕಣಜ, ಕುಟುಂಬ ಪೋರ್ಟಲ್. ಮತ್ತು ಯೋಜನಾ ಇಲಾಖೆಯ ಡಾಟಾ ಲೇಕ್ ಇತ್ಯಾದಿ ಮಾಹಿತಿ ಸಂಗ್ರಹ, ಕರ್ನಾಟಕ ರಾಜ್ಯ ಮತ್ತು 31 ಜಿಲ್ಲೆಗಳ ಅಂಕಿ ಅಂಶಗಳ ಇಲಾಖೆ,  ಇದೂವರೆಗೂ ವಿವಿಧ ಇಲಾಖಾವಾರು, ಮಾಡಿರುವ ವೆಬ್ ಪೋರ್ಟಲ್,ಡಾಟಾ ಸಾಪ್ಟ್ ವೇರ್/ ಅಧ್ಯಯನ ವರದಿಗಳ ಮಾಹಿತಿ, ಯೋಜನಾ ಇಲಾಖೆಯ ಅವಲೋಕನ ಮತ್ತು ಡಿಜಿಟಲ್ ಗ್ರಂಥಾಲಯ, 7 ನಗರಗಳ ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ನಿರ್ಮಿಸಿರುವ ಇಂಟಿಗ್ರೇಟೆಡ್ ಕಮ್ಯಾಂಡ್ ಕಂಟ್ರೋಲ್ ಸೆಂಟರ್(ಐಸಿಸಿಸಿ) ಮತ್ತು ಇತರೆ ಯಾವುದೇ ಹಂತದ ಮಾಹಿತಿಗಳನ್ನು, ಆಯಾ ಊರಿನ ಮತ್ತು ಬಡಾವಣೆಯ ಮಾಹಿತಿಗಳನ್ನು ಉಚಿತವಾಗಿ ನೀಡಲು ಆದೇಶ ನೀಡುತ್ತಿದ್ದೆ.
 27. ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು ಘೋಷಣೆ ಮಾಡಿ, ಇಂತಿಂಥ ನದಿ ನೀರು, ಇಂತಿಂತ ಗ್ರಾಮಗಳಿಗೆ/ಬಡಾವಣೆಗಳಿಗೆ ಎಂದು ನಿಗದಿ ಮಾಡಿ, ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಮುಂದಿನ 25 ವರ್ಷಗಳಲ್ಲಿ ಪೂರ್ಣಗೊಳಿಸಲು ಆದೇಶ ಮಾಡುತ್ತಿದ್ದೆ.
 28. ಇದೂವರೆಗೂ ವಿವಿಧ ಇಲಾಖೆಗಳಲ್ಲಿ ರಚಿಸಿರುವ ಎಲ್ಲಾ ವರದಿಗಳ ಅನ್ವಯ ಹಾಗೂ ಗ್ರಾಮ/ಬಡಾವಣೆಗಳಲ್ಲಿನ ಕೊರತೆಗಳ ಮತ್ತು ನೀಡ್ ಬೇಸ್ಡ್ ಯೋಜನೆಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಆದೇಶ ಮಾಡುತ್ತಿದ್ದೆ.
 29. ಕೇಂದ್ರ ಸರ್ಕಾರಕ್ಕೆ, 224 ವಿಧಾನಸಭಾ ಕ್ಷೇತ್ರವಾರು, ಪ್ರಸ್ತಾವನೆ ಸಿದ್ಧಪಡಿಸಲು ಆಸಕ್ತ ಸಂಸ್ಥೆಗಳಿಗೆ ಪಿಪಿಪಿ ಮಾದರಿಯಲ್ಲಿ ಯೋಜನೆ ಮಂಜೂರಾದ ಮೇಲೆ ಶೇಕಡವಾರು ಹಣ ನೀಡುವ ಷರತ್ತಿನೊಂದಿಗೆ ಆಯಾ ಶಾಸಕರಿಗೆ ಹೊಣೆಗಾರಿಕೆ ನೀಡಿ ಆದೇಶ ಮಾಡುತ್ತಿದ್ದೆ.
 30. ಗ್ರಾಮವಾರು/ಬಡಾವಣೆವಾರು ಅಗತ್ಯವಿರುವ ಯೋಜನೆಗಳ ಸೀನಿಯಾರಿಟಿ ಪಟ್ಟಿ ಪ್ರಕಟಿಸಿ  2047 ರವರೆಗೆ ಎಲ್ಲಾ ಯೋಜನೆ ಜಾರಿ ಮಾಡಿ ನಂಬರ್ ಒನ್ ಕರ್ನಾಟಕ ಮಾಡಲು ಎಲ್ಲಾ ಇಲಾಖೆಗಳಿಗೆ ಆದೇಶ ಮಾಡುತ್ತಿದ್ದೆ.
 31. ಇಷ್ಟೆಲ್ಲಾ ಆದೇಶ ಮಾಡಿದರು ಕೇವಲ ಕನಿಷ್ಠ ಗ್ರಾಮಕ್ಕೆ/ಬಡಾವಣೆಗೆ ಕೇವಲ ರೂ 10,000 ದಂತೆ ಸುಮಾರು 30000 ಗ್ರಾಮ ಹಾಗೂ 5000 ಬಡಾವಣೆಗಳು ಅಂದರೂ ಕೇವಲ ರೂ 350 ಕೋಟಿ ಹಣ ಸೀಡ್ ಮನಿ ಸಾಕಾಗಲಿದೆ. ಪ್ರಸಕ್ತ ವರ್ಷ ಇಷ್ಟು ಹಣ ಖರ್ಚು ಮಾಡುವುದು ಕಷ್ಟ. ಏಕೆಂದರೆ ಅಭಿವೃದ್ಧಿ ನಿಧಿಯಲ್ಲಿಯೇ ಸಾಕಷ್ಟು ಹಣ ದೊರೆಯಲಿದೆ. ಆಯಾ ಇಲಾಖೆ ಅನುದಾನದಲ್ಲಿಯೇ ಖರ್ಚು ಮಾಡಬಹುದು, ಹೊಸದಾಗಿ ಯಾವುದೇ ಅನುದಾನದ ಅಗತ್ಯವಿಲ್ಲ.

ಈ ವರ್ಷ ವಿವಿಧ ಆದೇಶಗಳ ಮಾರ್ಗದರ್ಶಿ ಸೂತ್ರ, ವಿವಿಧ ಸಭೆಗಳ ಟೆಂಪ್ಲೇಟ್ ಸಿದ್ಧಪಡಿಸುವುದರಲ್ಲಿಯೇ ಸಮಯವಾಗುತ್ತದೆ. ಅದರ ಜೊತೆಗೆ ಯಾವ ಯೋಜನೆಗೆ ಎಷ್ಟೆಷ್ಟು ಖರ್ಚು ಬರಲಿದೆ ಎಂಬ ಬಗ್ಗೆ ಅಂದಾಜು ಪಟ್ಟಿ ಸಿದ್ಧಪಡಿಸಲು  ಆದೇಶ ಮಾಡುತ್ತಿದ್ದೆ. 

ಎಲ್ಲಾ ನಿಖರವಾದ ಮಾಹಿತಿ ಬಂದ ನಂತರ ಆಯವ್ಯಯದಲ್ಲಿ ಮಂಡಿಸಿ, 2047 ರವರೆಗೆ ಅಭಿವೃದ್ಧಿ ಸುತ್ತಿಗೆ ಹಿಡಿದು ಎಲ್ಲರಿಗೂ ಪ್ರೀತಿಯಿಂದ ಬಡಿಯುತ್ತಿದ್ದೆ. ಪ್ರತಿ ತಿಂಗಳು ಪ್ರಗತಿ ಪರಿಶೀಲನೆ ನಡೆಸುತ್ತಿದ್ದೆ. 

   ಹುಟ್ಟಿದ, ಬದುಕಿರುವ ಪ್ರತಿಯೊಬ್ಬರೂ ನಂಬರ್ ಒನ್ ಕರ್ನಾಟಕ ಆಂದೋಲನದಲ್ಲಿ ಬಾಗವಹಿಸಲು ನಿರಂತರವಾಗಿ ಕಾರ್ಯಕ್ರಮ ಆಯೋಜಿಸಲು ಆದೇಶ ಮಾಡುತ್ತಿದ್ದೆ. ಆದರೇ ಹಣೆ ಬರಹ ಸರಿಯಿಲ್ಲ, ನಾನು ರೈತನಾಗಿದ್ದೇನೆ. ವರದಿ ನೀಡಿ ನಂಬರ್ ಒನ್ ಕರ್ನಾಟಕದ ಕನಸು ಕಾಣುತ್ತಿದ್ದೇನೆ.

  ವ್ಯಾಪಕ ಜನಜಾಗೃತಿ ಆಂದೋಲನ ಕೈಗೊಳ್ಳುವ ಮೂಲಕ ಎಲ್ಲರಲ್ಲೂ ಅಭಿವೃದ್ಧಿ ಪ್ರಜ್ಞೆ ಮೂಡಿಸಲು, ಶಕ್ತಿಪೀಠ ಫೌಂಡೇಷನ್ ಮೂಲಕ, ಶಕ್ತಿಪೀಠ ಮ್ಯೂಸಿಯಂಶಕ್ತಿಪೀಠ ಡಾಟಾ ಪಾರ್ಕ್ ಮತ್ತು ಶಕ್ತಿಪೀಠ ಕ್ಯಾಂಪಸ್ ನಿರ್ಮಾಣ ಮಾಡಲು ಆರಂಭಿಸಿದ್ದೇನೆ, ಕಾದು ನೋಡೋಣ!