22nd December 2024
Share

ನಂಬರ್ ಒನ್ ಕರ್ನಾಟಕ : ನ್ಯಾಯಾಲಯಕ್ಕೆ ಪಿ..ಎಲ್

TUMAKURU:SHAKTHIPEETA FOUNDATION

 ಕರ್ನಾಟಕ ರಾಜ್ಯ ಕೇಂದ್ರ ಸರ್ಕಾರದಿಂದ ಹೆಚ್ಚಿಗೆ ಅನುದಾನ ಪಡೆಯುವ ಕಾರ್ಯತಂತ್ರದ, ನಂಬರ್ ಒನ್ ಕರ್ನಾಟಕ ಕರಡು ಪ್ರತಿಯನ್ನು  ರಾಜ್ಯದ ಮುಖ್ಯ ಮಂತ್ರಿಯವರಿಗೆ ಸಲ್ಲಿಸಲಾಗುವುದು, ಸುಮಾರು 60 ಪುಟಗಳಲ್ಲಿರುವ ಪ್ರತಿಯೊಂದು ಅಂಶಗಳ ಬಗ್ಗೆ ಸಂಬಂದ ಪಟ್ಟ ಇಲಾಖೆಗಳಿಗೆ ಪತ್ರ ಬರೆಯಲು ಮನವಿ ಮಾಡಲಾಗುವುದು.

ಎಲ್ಲರ ಅಭಿಪ್ರಾಯಗಳ ಕ್ರೋಡೀಕರಣಗಳ ನಂತರ ಅಂತಿಮ ವರದಿ ಸಿದ್ಧಪಡಿಸಲಾಗುವುದು. ರಾಜ್ಯದ ಯಾವುದೇ ಇಲಾಖೆ, ಇಂಡಿಯಾ @ 100 ಅಂಗವಾಗಿ, ನವಕರ್ನಾಟಕ ವಿಷನ್ ಡಾಕ್ಯುಮೆಂಟ್- 2047 ಅನ್ನು ಸಿದ್ಧಪಡಿಸದಿದ್ದರೆ, ವರದಿಗೆ ತಮ್ಮ ಅಭಿಪ್ರಾಯ ನೀಡದೇ ಇದ್ದಲ್ಲಿ ನ್ಯಾಯಾಲಯಕ್ಕೆ ಪಿ.ಐ.ಎಲ್ ಹಾಕಲು ಚಿಂತನೆ ನಡೆಸಲಾಗಿದೆ.

ಎಲ್ಲವೂ ಕಾಲಮಿತಿಗೆ ಅನುಗುಣವಾಗಿ ನಡೆಯಲಿದೆ. ನಾನಂತೂ ವರದಿ ಧೂಳು ತಿನ್ನಲು ಬಿಡುವುದಿಲ್ಲ. ಇದು ಒಬ್ಬಿಬ್ಬರು  ಮಾಡುವ ಕೆಲಸವಲ್ಲ, ಟೀಮ್ ವರ್ಕ್ ಆಗಿ ಮಾಡಲೇ ಬೇಕು.  ನಾಮಕವಸ್ಥೆ ವಿಷನ್ ಡಾಕ್ಯುಮೆಂಟ್ ಮಾಡುವುದು ಸೂಕ್ತವಲ್ಲ. ಪಕ್ಕಾ ಡಿಜಿಟಲ್ ಲೈವ್ ಮಾಹಿತಿಯೊಂದಿಗೆ, ನಿಖರವಾದ ಜಿಐಎಸ್ ಲೇಯರ್ ನೊಂದಿಗೆ, ಆಯಾ ಗ್ರಾಮಗಳ/ಬಡಾವಣೆಗಳ ಜನರ ಮುಂದೆ ವಿಶ್ಲೇಷಣೆ ಆಗ ಬೇಕು ಎನ್ನುವುದು ನಮ್ಮ ಕನಸು, ಆದರೇ  ನ್ಯಾಯಾಲಯ ಏನು ಹೇಳುತ್ತದೋ ಅದೇ ಅಂತಿಮ ಅಲ್ಲವೇ?

ಆಸಕ್ತರು ಸಲಹೆ ನೀಡಲು ಮನವಿ.

  1. ಎಲ್ಲಾ ಹಂತದ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಆಶುಭಾಷಣ ಸ್ಪರ್ದೆ ಏರ್ಪಡಿಸಲಾಗುವುದು.
  2. ಎಲ್ಲಾ ಹಂತದ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಪ್ರಭಂದ ಸ್ಪರ್ದೆ ಏರ್ಪಡಿಸಲಾಗುವುದು.
  3. ರಾಜ್ಯದ ಎಲ್ಲಾ ಗ್ರಾಮಪಂಚಾಯಿತಿಗಳ ಅಭಿಪ್ರಾಯ ಮತ್ತು ಸಲಹೆ ಪಡೆಯಲಾಗುವುದು.
  4. ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಅಭಿಪ್ರಾಯ ಮತ್ತು ಸಲಹೆ ಪಡೆಯಲಾಗುವುದು.
  5. ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳ ಅಭಿಪ್ರಾಯ ಮತ್ತು ಸಲಹೆ ಪಡೆಯಲಾಗುವುದು.
  6. ರಾಜ್ಯದ ಎಲ್ಲಾ ಸಹಕಾರ ಸಂಸ್ಥೆಗಳ ಅಭಿಪ್ರಾಯ ಮತ್ತು ಸಲಹೆ ಪಡೆಯಲಾಗುವುದು.
  7. ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳ ಅಭಿಪ್ರಾಯ ಮತ್ತು ಸಲಹೆ ಪಡೆಯಲಾಗುವುದು.
  8. ರಾಜ್ಯದ ಎಲ್ಲಾ ಜಾತಿ ಸಂಘಟನೆಗಳ ಅಭಿಪ್ರಾಯ ಮತ್ತು ಸಲಹೆ ಪಡೆಯಲಾಗುವುದು.
  9. ರಾಜ್ಯದ ಎಲ್ಲಾ ಮಾಜಿ ಮುಖ್ಯ ಮಂತ್ರಿಯವರ ಅಭಿಪ್ರಾಯ ಮತ್ತು ಸಲಹೆ ಪಡೆಯಲಾಗುವುದು.
  10. ರಾಜ್ಯದ ಎಲ್ಲಾ ಹಂತದ ಚುನಾಯಿತ ಜನಪ್ರತಿನಿಧಿಗಳ ಅಭಿಪ್ರಾಯ ಮತ್ತು ಸಲಹೆ ಪಡೆಯಲಾಗುವುದು.
  11. ರಾಜ್ಯದ ಎಲ್ಲಾ ಆಸಕ್ತ ಪರಿಣಿತರ ಅಭಿಪ್ರಾಯ ಮತ್ತು ಸಲಹೆ ಪಡೆಯಲಾಗುವುದು.
  12. ರಾಜ್ಯದ ಎಲ್ಲಾ ಜಾತಿ/ಧರ್ಮದ ಮಠಾಧಿಪತಿಗಳ/ಮುಖಂಡರ ಅಭಿಪ್ರಾಯ ಮತ್ತು ಸಲಹೆ ಪಡೆಯಲಾಗುವುದು.
  13. ರಾಜ್ಯದ ಎಲ್ಲಾ ಆಸಕ್ತ ಸಂಘಸಂಸ್ಥೆಗಳ  ಅಭಿಪ್ರಾಯ ಮತ್ತು ಸಲಹೆ ಪಡೆಯಲಾಗುವುದು.
  14. ರಾಜ್ಯದ ಎಲ್ಲಾ ಆಸಕ್ತ ಎಲ್ಲಾ ವರ್ಗದ ಅಭಿಪ್ರಾಯ ಮತ್ತು ಸಲಹೆ ಪಡೆಯಲಾಗುವುದು.
  15. ರಾಜ್ಯದ ಎಲ್ಲಾ ಆಸಕ್ತ ಮಾಧ್ಯಮ ವರ್ಗದವರ ಅಭಿಪ್ರಾಯ ಮತ್ತು ಸಲಹೆ ಪಡೆಯಲಾಗುವುದು.

ನಿಮ್ಮ ಸಲಹೆಗಳಿಗೆ ಮುಕ್ತ ಆಹ್ವಾನ.