27th July 2024
Share

TUMKURU:SHAKTHIPEETA FOUNDATION

ತುಮಕೂರು ಜಿಲ್ಲೆಯನ್ನು ಮೂರು ಜಿಲ್ಲೆಗಳಾಗಿ ಮಾಡಬೇಕು ಎಂಬ ಕೂಗು ಬಹಳ ದಿನಗಳಿಂದ ಎದ್ದಿದೆ. ಮಧುಗಿರಿ, ತಿಪಟೂರು ಮತ್ತು ಹಾಲಿ ಇರುವ ತುಮಕೂರು ಜಿಲ್ಲೆ.

ದಿನಾಂಕ:15.07.2023 ರಂದು ತಿಪಟೂರು ನಗರದಲ್ಲಿರುವ ಎಸ್.ಎಸ್.ಪಿ ಕಾಲೇಜು ವಿದ್ಯಾರ್ಥಿಗಳ ಜೊತೆ ಇಂಡಿಯಾ @ 100 ಅಂಗವಾಗಿ ನಂಬರ್ ಒನ್ ಕರ್ನಾಟಕದ ಬಗ್ಗೆ ಸಂವಾದ ನಡೆಸಿದಾಗ ಎಸ್.ಎಸ್.ಪಿ ಕಾಲೇಜು ವಿದ್ಯಾರ್ಥಿಗಳ ಐಡಿಯಾ! ಕೇಳಿ ನಾನೇ ಸುಸ್ತಾದೆ.

ಮಕ್ಕಳು ಏನಾದರೂ ಹೇಳಲು ಹೊರಟರೆ ತಂದೆ ತಾಯಿಗಳು ಮತ್ತು ಮನೆಯಲ್ಲಿ ಇರುವವರು ನಿನಗೇನು ಗೊತ್ತು ಸುಮ್ಮನಿರು ಎನ್ನುತ್ತಾರೆ, ಶಾಲೆಗಳಲ್ಲಿ ಹೇಳಲು ಹೊರಟರೇ ಎಷ್ಟೋ ನಿನ್ನ ತಲೆಹರಟೆ ಬಾಯಿ ಮುಚ್ಚಕೊಂಡು ಇರು ಎಂದು ಮಾಸ್ಟರ್‍ಗಳು ಹೇಳುತ್ತಾರೆ. ಇನ್ನೂ ಕಚೇರಿಗಳ್ಲಿ ಹೇಳಲು ಹೊರಟರೆ ಇವನೊಬ್ಬ ಪ್ರಧಾನ ಮಂತ್ರಿ ಆಗಿ ಬಿಟ್ಟ ಎಂದು ಹೀಯಾಳಿಸುತ್ತಾರೆ ಉನ್ನತ ಅಧಿಕಾರಿಗಳು.

ಸ್ನೇಹಿತರ ಜೊತೆ ಹಂಚಿಕೊಂಡರೆ ಏನಾದರೂ ಒಂದು ಅಡ್ಡ ಹೆಸರು ಇಟ್ಟು ಇವನೊಬ್ಬ ಸರ್ವಜ್ಞ ಎನ್ನುತ್ತಾರೆ. ಮತ್ತೆ ಯಾರು ಮಕ್ಕಳ ಐಡಿಯಾಗಳಿಗೆ ಬೆಲೆಕೊಡುವವರು. ಈ ಬಗ್ಗೆ ನನ್ನ ಉಪನ್ಯಾಸದ ನಂತರ ವಿದ್ಯಾರ್ಥಿಗಳು ಪೈಪೋಟಿ ಮೇಲೆ ಎದ್ದು ಸಲಹೆ ನೀಡಲು ಆರಂಭಿಸಿದರು.

ನಾವು ನಿಗದಿ ಗೊಳಿಸಿದ 2 ಗಂಟೆ ಸಮಯಕ್ಕೆ ಸರಿಯಾಗಿ ಹೋಗಲು ಸಾಧ್ಯಾವಾಗಲಿಲ್ಲ. ತುಮಕೂರಿನ ಸಾಯಿಬಾಬಾ ದೇವಾಲಯದ ಬಳಿ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಊಟಮಾಡಿಕೊಂಡು ಹೋಗಿ ಎಂದಿದ್ದರಿಂದ ತಡವಾಯಿತು.

ಶ್ರೀ ವೇದಾನಂದಾಮೂರ್ತಿರವರು 1.30 ಗಂಟೆ ತಡವಾಗಿ ಹೋಗಿದ್ದರಿಂದ 20 ನಿಮಿಷ ಕಾಲಮಿತಿ ಗೊಳಿಸಿದರು.ನಾನು 10 ನಿಮಿಷ ಮಾತನಾಡಿ, ನಂತರ 5 ವಿದ್ಯಾರ್ಥಿನಿಯರು ಮತ್ತು 5 ವಿದ್ಯಾರ್ಥಿಗಳ ಸಲಹೆ ಕೇಳಿದೆ.

ಎಲ್ಲರ ಹೆಸರು ಬರೆದುಕೊಳ್ಳಲಿಲ್ಲ, ಇನ್ನೂ ಮುಂದೆ ಸಲಹೆ ನೀಡಿದವರ ಹೆಸರು ಮತ್ತು ಅವರ ಜೊತೆ ಪೋಟೋ ಕಡ್ಡಾಯ.

  1. 2047 ರ ಒಳಗಡೆ ತಿಪಟೂರು ಜಿಲ್ಲೆಯಾಗಲೇ ಬೇಕು ಒಬ್ಬ ವಿದ್ಯಾರ್ಥಿ ಸಲಹೆ.
  2. ಏಕೆ ತಿಪಟೂರು ಜಿಲ್ಲೆಯಾಗ ಬೇಕು ಎಂಬ ನನ್ನ ಪ್ರಶ್ನೆಗೆ ಒಬ್ಬ ವಿದ್ಯಾರ್ಥಿನಿ ಉತ್ತರ, ಬಾಲ್ ಕೊಬ್ಬರಿ ಇಡೀ ವಿಶ್ವದಲ್ಲಿಯೇ ಉತ್ತಮವಾದ ತಿನ್ನುವ ಕೊಬ್ಬರಿ, ವಹಿವಾಟು ಅಂತರರಾಷ್ಟ್ರೀಯ ಮಟ್ಟದಲ್ಲಿ ತಿಪಟೂರು ಹೆಸರು ಮಾಡಿದೆ ಎನ್ನುವುದಾಗಿತ್ತು.
  3. ಜಿಲ್ಲೆ ವ್ಯಾಪ್ತಿ ಎಷ್ಟಿರ ಬೇಕು ಎಂಬ ನನ್ನ ಪ್ರಶ್ನೆಗೆ ಒಬ್ಬ ವಿದ್ಯಾರ್ಥಿ ಉತ್ತರ, ತಿಪಟೂರು ನಗರಕ್ಕೆ ಪ್ರತಿ ನಿತ್ಯ ವಿದ್ಯಾಬ್ಯಾಸಕ್ಕೆ ಬರುವ ತಾಲ್ಲೋಕುಗಳ ವ್ಯಾಪ್ತಿ ಎನ್ನುವುದಾಗಿತ್ತು.
  4. ಯಾವ ತಾಲ್ಲೋಕುಗಳ ವಿದ್ಯಾರ್ಥಿಗಳು ಬರುತ್ತಾರೆ, ಎಂಬ ನನ್ನ ಪ್ರಶ್ನೆಗೆ ಒಬ್ಬ ವಿದ್ಯಾರ್ಥಿನಿ ಉತ್ತರ, ಹಾಸನ ಜಿಲ್ಲೆಯ ಅರಸೀಕೆರೆ, ತುಮಕೂರು ಜಿಲ್ಲೆಯ ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಹೊಸದಾಗಿ ಹುಳಿಯಾರು ತಾಲ್ಲೂಕು ಮಾಡಬಹುದು ಎನ್ನುವುದಾಗಿತ್ತು.
  5. ಇನ್ನೊಬ್ಬ ವಿದ್ಯಾರ್ಥಿನಿ ಸಲಹೆ, ಮೊದಲು ತಿಪಟೂರು ತಾಲ್ಲೋಕಿನ ಎಲ್ಲಾ ಕೆರೆಗಳಿಗೆ ನದಿ ನೀರು ತುಂಬಿಸಿ ಎನ್ನುವುದಾಗಿತ್ತು.
  6. ಇನ್ನೊಬ್ಬ ವಿದ್ಯಾರ್ಥಿ ಸಲಹೆ, ಮೊದಲು ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಕೊಡಲಿ ಎನ್ನುವುದಾಗಿತ್ತು.
  7. ಇನ್ನೊಬ್ಬ ವಿದ್ಯಾರ್ಥಿನಿ ಸಲಹೆ, ಮೊದಲು ಎಲ್ಲರಿಗೂ ಉಚಿತ ಶಿಕ್ಷಣ ಕೊಡಲಿ ಎನ್ನುವುದಾಗಿತ್ತು.
  8. ಇನ್ನೊಬ್ಬ ವಿದ್ಯಾರ್ಥಿನಿ ಸಲಹೆ, ಮೊದಲು ಎಲ್ಲರಿಗೂ ಉಚಿತ ವೈಧ್ಯಕೀಯ ಸೌಲಭ್ಯ ಕೊಡಲಿ ಎನ್ನುವುದಾಗಿತ್ತು.
  9. ಇನ್ನೊಬ್ಬ ವಿದ್ಯಾರ್ಥಿನಿ ಸಲಹೆ, ಮೊದಲು ನಮ್ಮ ಸಂಸ್ಕøತಿ ಉಳಿಸಿ ಎನ್ನುವುದಾಗಿತ್ತು.
  10. ಇನ್ನೊಬ್ಬ ವಿದ್ಯಾರ್ಥಿ ಸಲಹೆ, ಮೊದಲು ಲಂಚ ನಿರ್ಮೂಲನೆ ಆಗಲಿ ಎನ್ನುವುದಾಗಿತ್ತು.

ಲಂಚದ ಬಗ್ಗೆ ಸ್ವಾರಸ್ಯಕರ ಚರ್ಚೆ ನಡೆಯಿತು, ಹೇ ಗುರು ನೀನು ಈ ವರ್ಷ ಮತ ಹಾಕಿದೆಯಾ, ಹೌದು, ಯಾವ ಯಾವ ಪಾರ್ಟಿಯವರು ಎಷ್ಟೆಷ್ಟು ದುಡ್ಡು ಕೊಟ್ಟರು. ನಾನು ದುಡ್ಡು ತೆಗೆದುಕೊಳ್ಳಲಿಲ್ಲ, ನಿಮ್ಮ ಮನೆಯವರು, ಅವರು ಮುಟ್ಟಲಿಲ್ಲ. ನಿಮ್ಮ ಊರಿನವರು ಎಂದಾಗ ಹೌದು ಸಾರ್ ಎಲ್ಲಾ ಪಾರ್ಟಿವರು ದುಡ್ಡು ಕೊಟ್ಟರು ಒಬ್ಬರು ರೂ 5000 ವರೆಗೆ ಕೊಟ್ಟರು.

ಮತ್ತೆ ಲಂಚ ನಿಮ್ಮೂರಿನವರು ತಗೊಂಡರಲ್ಲ, ಇದು ನಿಲ್ಲುವುದು ಬೇಡವೇ ಎಂದಾಗ, ಆತನ ಉತ್ತರ ಒಂದು ದಿವಸ ಅಲ್ಲವಾ ಎನ್ನುವುದಾಗಿತ್ತು. ಸರಿ ಎಷ್ಟು ಮನೆ ಇದ್ದಾವೆ ತಿಪಟೂರು ವಿಧಾನಸಭಾ ಕ್ಷೇತ್ರದಲ್ಲಿ ಎಂದಾಗ ಸುಮಾರು 50000 ಸಾವಿರ ಮನೆ ಎನ್ನುವುದಾಗಿತ್ತು.

ಇಷ್ಟು ಮನೆಗೆ ಮತಗಳವಾರು 5000 ನೀಡಲು ಎಷ್ಟು ಲಂಚ ಹೊಡೆಯಬೇಕು ಎಂದಾಗ ಆತನ ಮುS ಗಾಬರಿ ಆಯಿತು. ಈ ದುಡ್ಡು ಕೊಡುವವರು ಯಾರು ಎಂದಾಗ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಎನ್ನುವುದಾಗಿತ್ತು.

ಅವರು ಹೊಡೆದ ಎಲ್ಲಾ ಹಣವನ್ನು ರಾಜಕಾರಣಿಗಳಿಗೆ ಕೊಡುತ್ತಾರಾ ಎಂಬ ನನ್ನ ಪ್ರಶ್ನೆಗೆ ಇಲ್ಲ ಸಾರ್, ಅವರು 95% ಇಟ್ಟುಕೊಂಡು ದಕ್ಷಿಣೆ ಕಾಸು ಹಾಕಿದ ಹಾಗೆ 5% ಕೊಡುತ್ತಾರಂತೆ ಎಂದಾಗ ಎಲ್ಲರೂ ಗೊಳ್ಳೆಂದು ನಕ್ಕರು.

ಮತ್ತೆ ಲಂಚ ಕಡಿಮೆ ಮಾಡುವುದು ಹೇಗೆ ಎಂದಾಗ ಎಲ್ಲರ ಮುಖದಲ್ಲಿ ಗಂಭೀರತೆ ಇತ್ತು1 ವಿದ್ಯಾರ್ಥಿಗಳ ಹಂತದಿಂದಲೇ ಸಾಧ್ಯ ಎನ್ನುವಂತಿತ್ತು.

ಶ್ರೀ ನವೀನ್ ಕುಮಾರ್ ರವರು, ಶ್ರೀ ವೇದಾನಂz ಮೂರ್ತಿಯವರು, ಶ್ರೀ ಶಿವಣ್ಣನವರು, ಶ್ರೀ ಶಿವಕುಮಾರ್ ರವರು, ಶ್ರೀನಿವಾಸ್ ರವರು  ವೇದಿಕೆಯಲ್ಲಿ ಇದ್ದರು.