TUMAKURU:SHAKTHIPEETA FOUNDATION
2047 ರೊಳಗೆ ‘ಭಾರತ ವಿಶ್ವ ಗುರು’ ಆಗಬೇಕು ಎಂಬ ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಯವರ ಕನಸಿನ ಯೋಜನೆ ಹಾಗೂ ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ ದೊರೆಯಬೇಕಾದರೆ ‘ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ’ ಜಾರಿಯಾಗಲೇ ಬೇಕು ಎಂಬ ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರ ಪರಿಕಲ್ಪನೆಯ ಜೊತೆಗೆ, ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯನಾಗಿ, ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಹೆಚ್ಚಿಗೆ ಅನುದಾನ ಪಡೆಯಲು ಕಾರ್ಯತಂತ್ರ ರೂಪಿಸಲು ಜ್ಞಾನಿಗಳ ‘ಜ್ಞಾನದಾನ’ ಅಗತ್ಯವಾಗಿದೆ.
ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಮತ್ತು ನನ್ನ ಸುಮಾರು 33 ವರ್ಷಗಳ ಅಭಿವೃದ್ಧಿ ಒಡನಾಟದ ನೆನಪಿಗಾಗಿ, ತುಮಕೂರು ಜಿಲ್ಲೆಯನ್ನು ಪೈಲಟ್ ಯೋಜನೆಯಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ‘ತುಮಕೂರು ಲೋಕಸಭಾ ಕ್ಷೇತ್ರದ ಪ್ರತಿಯೊಂದು ಗ್ರಾಮಗಳಿಗೂ ಅಭಿವೃದ್ಧಿ ಪ್ರವಾಸ’ ಮಾಡಬೇಕಿದೆ.
‘ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ, ಅಭಿವೃದ್ಧಿ ಪ್ರವಾಸ ಮಾಡಬೇಕಿದೆ. ದೇಶದ 37 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲೂ ಅಭಿವೃದ್ಧಿ ಪ್ರವಾಸ ಮಾಡಲು ಉದ್ದೇಶಿಸಲಾಗಿದೆ.’
ಈ ಹಿನ್ನಲೆಯಲ್ಲಿ ದಿನಾಂಕ:01.08.2023 ರಿಂದ, ಇಂಡಿಯಾ @ 100 ಅಂಗವಾಗಿ ‘ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ ಆಂದೋಲನ’ ವನ್ನು ಹಮ್ಮಿಕೊಳ್ಳಲಾಗುವುದು. ಆರಂಭದಲ್ಲಿ ತುಮಕೂರು ಲೋಕಸಭಾ ಕ್ಷೇತ್ರzಲ್ಲಿನ,À 6 ನೇ ತರಗತಿ ಮೇಲ್ಪಟ್ಟ ಶಾಲಾ-ಕಾಲೇಜುಗಳ ವಿದ್ಯಾರ್ಥಿ/ವಿದ್ಯಾರ್ಥಿನಿಯರೊಂದಿಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಎಲ್ಲಾ ಗ್ರಾಮಗಳ ಮತ್ತು ನಗರ ಪ್ರದೇಶಗಳ ಪ್ರತಿಯೊಂದು ಬಡಾವಣೆಗಳ ಜನರ ಸಂಪರ್ಕ ಹೊಂದಲು ಚಿಂತನೆ ನಡೆಸಲಾಗಿದೆ.
ಅಭಿವೃದ್ಧಿ ರೆವೂಲ್ಯೂಷನ್ ಫೋರಂ, ಶಕ್ತಿಪೀಠ ಫೌಂಡೇಷನ್ ಮತ್ತು ಭಾರತ @ 100 ಸ್ವಾತಂತ್ರ್ಯ ಸೇನೆ(ಬಿಎಸ್ಎಸ್) ಮತ್ತು ಆಸಕ್ತ ಸಂಘ ಸಂಸ್ಥೆಗಳೊಂದಿಗೆ ಶ್ರಮಿಸಲಾಗುವುದು. ಆಸಕ್ತರು ಕೈ ಜೋಡಿಸಲು ಮನವಿ.
ಇದೊಂದು ಪಕ್ಷಾತೀತ, ಜಾತ್ಯಾತೀತ ಕಾರ್ಯಕ್ರಮ ಯಾರೂ ಬೇಕಾದರೂ ಭಾಗವಹಿಸ ಬಹುದು.
ತುಮಕೂರು ಜಿಲ್ಲೆ ಅಭಿವೃದ್ಧಿಗೆ ಸಂಭಂಧಿಸಿದಂತೆ, ಸುಮಾರು 1000 ಯೂ ಟ್ಯೂಬ್ ಚಾನಲ್ ಎಪಿಸೋಡ್ ಮಾಡಲು ಉದ್ದೇಶಿಸಲಾಗಿದೆ. ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವರು ಸಂಪರ್ಕಿಬಹುದು.