9th October 2024
Share

TUMAKURU:SHAKTHIPEETA FOUNDATION

  ರಾಜ್ಯದ ಸನ್ಮಾನ್ಯ ಉಪಮುಖ್ಯಮಂತ್ರಿಯವರಾದ ಶ್ರೀ ಡಿ.ಕೆ.ಶಿವಕುಮಾರ್ ರವರು, ಅವರು ಸಚಿವರಾಗಿರುವÀ ಎರಡು ಇಲಾಖೆಗಳಲ್ಲಿ ಕೈಗೊಳ್ಳ ಬೇಕಾಗಿರುವ ಯೋಜನೆಗಳ ಬಗ್ಗೆ ತಮ್ಮ ಸ್ಪಷ್ಟ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ನಾನು 1997 ರಿಂದಲೂ ನೀರಾವರಿ ತಜ್ಞ ಕೀರ್ತಿಶೇóಷ ಜಿ.ಎಸ್.ಪರಮಶಿವಯ್ಯನವರು ಮತ್ತು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರೊಂದಿಗೆ ಊರಿಗೊಂದು ಕೆರೆ ಕೆರೆಗೆ ನದಿ ನೀರು ಯೋಜನೆಗೆ ನಿರಂತರವಾಗಿ ಶ್ರಮಿಸುತ್ತಿದ್ದೇನೆ.

ರಾಜ್ಯದ ಒಂದೊಂದು ಹನಿ ನೀರಿನ ಮಾಹಿತಿಯುಳ್ಳ ಜಲಗ್ರಂಥ ಬರೆಯಲು ಆರಂಭಿಸಿದ್ದೇನೆ, ಜಲಸಂಪನ್ಮೂಲ ಇಲಾಖೆಯಲ್ಲಿ ನಾನು ಕೇಳಿರುವ ಮಾಹಿತಿಗಳನ್ನು ನೀಡಲು ಅವರಿಗೆ ಇನ್ನೂ ಸಾಧ್ಯವಾಗಿಲ್ಲ. ಜಲಸಂಪನ್ಮೂಲ ಸಚಿವರ ಈ ಪತ್ರದ ಸಂದೇಶ ನನಗೆ ಸ್ಪೂರ್ತಿಯಾಗಲಿದೆ.

  ದೆಹಲಿ ವಿಶೇಷ ಪ್ರತಿನಿಧಿಯಾಗಿರುವ ಶ್ರೀ ಟಿ.ಬಿ.ಜಯಚಂದ್ರರವರು, ತುಮಕೂರಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ನೀರಾವರಿ  ಯೋಜನೆಗಳ ಸಭೆಯಲ್ಲಿ ಹೇಳಿದ ಮಾತು, ಬೆಂಗಳೂರು ನಗರದಲ್ಲಿ ಸುಮಾರು 6 ಲಕ್ಷ ಕೋಟಿ ಬೆಲೆಬಾಳುವ ಜಮೀನು’ ಒತ್ತುವರಿಯಾಗಿದೆ, ಈ ಜಮೀನು ಹರಾಜು ಹಾಕಿ ರಾಜ್ಯದ ಪ್ರತಿಯೊಂದು ಗ್ರಾಮದ ಕೆರೆಗಳಿಗೂ ನದಿ ನೀರು ತುಂಬಿಸುವ ಯೋಜನೆಯನ್ನು ನಮ್ಮ ಸರ್ಕಾರ ಬಂದರೆ ಮಾಡುತ್ತೇವೆ ಎಂದು ಹೇಳಿದ್ದರು.

ಕಾಕತಾಳೀಯ ಈ ಎರಡು ಖಾತೆಗಳು ಮಾನ್ಯ ಉಪಮುಖ್ಯ ಮಂತ್ರಿಯವರ ಬಳಿ ಇವೆ. ಈ ಎರಡು ಯೋಜನೆಗಳು ಹೇಳಿದಷ್ಟು ಸುಲಭವಲ್ಲದಿದ್ದರೂ, ಜಾರಿ ಮಾಡಬಹುದಾದ ಯೋಜನೆಗಳು, ಪೂರ್ಣಗೊಳ್ಳಲು ಎರಡು ಯೋಜನೆಗಳಿಗೂ ಸಮಯ ಬೇಕಾಗುತ್ತದೆ. ಆದರೂ ಯೋಜನೆ ಆರಂಭಿಸಿದ ಕೀರ್ತಿಯನ್ನು ಉಪಮುಖ್ಯ ಮಂತ್ರಿಯವರ ತಮ್ಮದಾಗಿಸಿ ಕೊಳ್ಳುವರೇ ಕಾದು ನೋಡಬೇಕು.

ನಾನು ಎರಡು ಗ್ಯಾರಂಟಿ ಯೋಜನೆಗಳ ಕಡತದ ಅನುಸರಣೆ ಮಾಡಲು ನಿಶ್ಚಯ ಮಾಡಿದ್ದೇನೆ.