16th September 2024
Share

TUMAKURU:SHAKTHIPEETA FOUNDATION

ಲೋಕಸಭಾ ಅಧಿವೇಶನ ನಡೆಯುತ್ತಿರುವಾಗ, ದೆಹಲಿಯಲ್ಲಿ ದಿನಾಂಕ:25.07.2023 ರಿಂದ 27.07.2023 ರವರೆಗೆ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು, ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು, ದೆಹಲಿ ಪ್ರತಿನಿಧಿ ಮತ್ತು ರೆಸಿಡೆಂಟ್ ಕಮೀಷನರ್ ಸೇರಿದಂತೆ 43 ಜನರಿಗೆ ಅವರ ಅಭಿಪ್ರಾಯ ಮತ್ತು ಸಂದೇಶ ನೀಡಲು ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿಪುಸ್ತಕವನ್ನು ದೆಹಲಿಯ ನಮ್ಮ ತಂಡದವರಿಂದ, ಮನೆ, ಮನೆಗೆ ಹಂಚಲಾಗಿದೆ.

ದೆಹಲಿ ವಿಶೇಷ ಪ್ರತಿನಿಧಿಯವರವರಾದ ಶ್ರೀ ಟಿ.ಬಿ.ಜಯಚಂದ್ರರವರು ಇನ್ನೂ ದೆಹಲಿಯಲ್ಲಿ ಕಚೇರಿ ಆರಂಭಿಸದಂತಿಲ್ಲ. ಆಗಸ್ಟ್ ಒಂದರಂದು ದೆಹಲಿಯಲ್ಲಿ ಅಧಿಕೃತವಾಗಿ ಕಚೇರಿ ಆರಂಭಿಸಬಹುದು ಎಂಬ ಸುದ್ದಿ ಹರಿದಾಡುತ್ತಿದೆ.

ದೆಹಲಿ ವಿಶೇಷ ಪ್ರತಿನಿಧಿ ಕಚೇರಿ, ರಾಜಕಾರಣಿಗಳಿಗೆ ಗಂಜಿ ಕೇಂದ್ರ ಎಂಬಂತಿದೆ. ರಾಜ್ಯ ವಿಧಾನಸಭಾ ಅಧಿವೇಶನದಲ್ಲಿಯೇ, ಈ ಪದ ಬಳಸಿ ಚರ್ಚೆ ಮಾಡಿದ್ದಾರೆ. ಕೇಂದ್ರ ಸರ್ಕಾರದಿಂದ ಹೆಚ್ಚಿಗೆ ಅನುದಾನ ತರುವ ಅತ್ಯುತ್ತಮವಾದ ಶಕ್ತಿಕೇಂದ್ರವಾಗ ಬೇಕು ಎಂಬುದು ಶಕ್ತಿಪೀಠ ಫೌಂಡೇಷನ್ ಇಚ್ಚೆಯಾಗಿದೆ.

ಶ್ರೀ ಟಿ.ಬಿ.ಜಯಚಂದ್ರರವರ ಕಾರ್ಯಶೈಲಿ ಮೇಲೆ ಎಲ್ಲವೂ ನಿಂತಿದೆ.