9th October 2024
Share

TUMAKURU:SHAKTHIPEETA FOUNDATION

  ಕರ್ನಾಟಕ ರಾಜ್ಯದಲ್ಲಿ ಮುಜರಾಯಿ ಸಚಿವರಾದವರ ಸೋಲು ಗ್ಯಾರಂಟಿ ? ಎಂಬ ಮಾತು ಇದೆ. ಈ ಬಗ್ಗೆ ವಿಶ್ಲೇಷಣೆ ಮಾಡಲು ಹೋಗುವುದಿಲ್ಲ. ಆದರೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಜರಾಯಿ ಸಚಿವರಾಗಿದ್ದ ಶ್ರೀಮತಿ ಶಶಿಕಲಾ ಜೊಲ್ಲೆಯವರು ಹೇಗೆ ಗೆದ್ದರು? ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.

ಚಿಕ್ಕೋಡಿ ಲೋಕಸಭಾ ಸದಸ್ಯರಾದ ಶ್ರೀ ಅಣ್ಣಸಾಹೇಬ್ ಶಂಕರ್ ಜೊಲ್ಲೆರವರು ಮತ್ತು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಸಮ್ಮುಖದಲ್ಲಿ, ಈ ಸ್ವಾರಸ್ಯಕರ ಚರ್ಚೆ ಆರಂಭವಾಯಿತು.

ಪತಿ ಪತ್ನಿಯರಿಬ್ಬರೂ ಅಧಿಕಾರದಲ್ಲಿ ಇದ್ದಾರೆ, ಪತ್ನಿ  ಶ್ರೀಮತಿ ಶಶಿಕಲಾ ಜೊಲ್ಲೆಯವರು ನಿಪ್ಪಾಣಿ ವಿಧಾನಸಭಾ ಸದಸ್ಯರಾದರೆ, ಪತಿ ಶ್ರೀ ಅಣ್ಣಸಾಹೇಬ್ ಶಂಕರ್ ಜೊಲ್ಲೆರವರು ಚಿಕ್ಕೋಡಿ ಲೋಕಸಭಾ ಸದಸ್ಯರಾಗಿದ್ದಾರೆ.

 ಅದೃಷ್ಟವಂತ ಕುಟುಂಬ, ತುಮಕೂರು ವಿಧಾನಸಭಾ ಸದಸ್ಯರಾದ ಶ್ರೀ ಜಿ,ಬಿ, ಜ್ಯೋತಿಗಣೇಶ್ ರವರು ಒಮ್ಮೆ ಹೇಳಿದ್ದರು, ಅವರ ಮನೆಗೆ ಬೇಟಿ ನೀಡಿದ್ದರಂತೆ. ಅವರ ಮನೆಯೇ ಎಕರೆಗಟ್ಟಲೆ ಇದೆ ಸಾರ್ ಎಂದಿದ್ದರು.

ಮುಜರಾಯಿ ಸಚಿವರಾದವರೂ ಹೇಗೆ ಗೆದ್ದರು ಎಂಬ ನನ್ನ ಮಾತಿಗೆ, ಲೋಕಸಭಾ ಸದಸ್ಯರಾದ ಜೊಲ್ಲೆಯವರು ನೀಡಿದ ಉತ್ತರಗಳ ಬಗ್ಗೆ, ನನಗೆ ವಿಚಿತ್ರ ಎನಿಸಿದರೂ, ಅವರ ಕ್ಷೇತ್ರಕ್ಕೆ ಹೋಗಿ ಖುದ್ದು ಮತದಾರರ ಅಭಿಪ್ರಾಯ ಸಂಗ್ರಹಿಸಿ ವರದಿ ಮಾಡಲು ಇಬ್ಬರೂ ತೀರ್ಮಾನಿಸಿದೆವು.

ಈ ಲೋಕಸಭಾ ಅಧಿವೇಶನದ ನಂತರ ನಿಪ್ಪಾಣಿ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಿÀ, ನಿಪ್ಪಾಣಿ ವಿಧಾನಸಭಾ ಕ್ಷೇತ್ರದ, ಸರ್ವಧರ್ಮಗಳ ಮುಖಂಡರೊಂದಿಗೆ, ಅಧಿಕಾರಿಗಳೊಂದಿಗೆ, ಮತದಾರರೊಂದಿಗೆ, ಇವರ ವಿರೋಧ ಪಕ್ಷಗಳ ಮುಖಂಡರೊಂದಿಗೆ ಸಮಾಲೋಚನೆ ಮಾಡಲು ನಿರ್ಧರಿಸಲಾಗಿದೆ.

ಈ ಬಗ್ಗೆ ನನಗೆ ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಲು ಅವರ ಆಪ್ತ ಕಾರ್ಯದರ್ಶಿಯವರಾದ ಶ್ರೀ ಆನಂದ್ ರವರಿಗೆ ಸಂಸದರು ಈಗಾಗಲೇ ಸೂಚಿಸಿದ್ದಾರೆ. ನಾನು ಸಹ ಅವರೊಂದಿಗೆ ಚರ್ಚೆ ಮಾಡಿದ್ದೇನೆ.

ಇಂಡಿಯಾ @ 100 ಅಂಗವಾಗಿ, 2047 ಕ್ಕೆ ಕರ್ನಾಟಕ ನಂಬರ್ ಒನ್ ಆಗಬೇಕಾದರೆ, ಏನೇನು ಮಾಡಬೇಕು ಎಂಬ ಬಗ್ಗೆ ಶಾಸಕರು ಮತ್ತು ಸಂಸದರೊಂದಿಗೆ ಸಮಾಲೋಚನೆ ಮಾಡಲು ಉದ್ದೇಶಿರುವುದರಿಂದ. ಪಟ್ಟಿಯಲ್ಲಿ ರಾಜ್ಯದ ನಂಬರ್ ಒನ್ ವಿಧಾನಸಭಾ ಕ್ಷೇತ್ರವಾದ ನಿಪ್ಪಾಣಿಯಿಂದಲೇ ಆರಂಭಿಸಲಾಗುವುದು.

‘ವಿಶ್ವದ 108 ಶಕ್ತಿಪೀಠಗಳ ಸಂಶೋಧನೆ ನಡೆಸುತ್ತಿರುವ ನನಗೂ ಮುಜರಾಯಿ, ವಕ್ಪ್, ಹಜ್  ಇಲಾಖೆ ಬಗ್ಗೆ ವಿಶೇಷ ಆಸಕ್ತಿ ಇದೆ. ಇದೂವರೆಗೂ ಕರ್ನಾಟಕ ರಾಜ್ಯದ ಮುಜರಾಯಿ, ವಕ್ಪ್, ಹಜ್  ಸಚಿವರಾಗಿದ್ದ ಮತ್ತು ಕಮೀಷನರ್ ಆಗಿದ್ದ ಎಲ್ಲರ ಜೊತೆಯಲ್ಲಿಯೂ ಸಮಾಲೋಚನೆ ನಡೆಸಲಾಗುವುದು.

ಈ ಖಾತೆಗಳಿಗೆ ಸಂಬಂಧಿಸಿದಂತೆ, ರಾಜ್ಯ ಮಟ್ಟದ ವಿವಿಧ ಸಮಿತಿಗಳ ಪಧಾದಿಕಾರಿಗಳ ಜೊತೆಯೂ ಚರ್ಚೆ ನಡೆಸಿ ಅಭಿಪ್ರಾಯ ಸಂಗ್ರಹಿಸ ಬೇಕಿದೆ. ಕೇಂದ್ರ ಸರ್ಕಾರದ ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ಒಂದು ಸೆಮಿನಾರ್ ಸಹ ಮಾಡಲಾಗುವುದು.

ಈ ಬಗ್ಗೆ ಆಸಕ್ತರು ತಮಗೆ ಗೊತ್ತಿರುವ ಮಾಹಿತಿ ನೀಡಲು ಮನವಿ ಮಾಡಲಾಗಿದೆ. ಅಧ್ಯಯನ, ಸಂಶೋಧನಾ ವರದಿಗಳಿದ್ದಲ್ಲಿ ಸಂಗ್ರಹ ಮಾಡಲಾಗುವುದು. ರಾಜ್ಯದ ಆಸಕ್ತ ಯಾವುದಾದರೊಂದು ವಿಶ್ವ ವಿದ್ಯಾನಿಲಯದ ಅಧ್ಯಯನ ಪೀಠಗಳ ಜೊತೆಯೂ ಚರ್ಚೆ ನಡೆಸಲಾಗುವುದು.