21st January 2025
Share

TUMAKURU:SHAKTHIPEETA FOUNDATION

  ನಾನು ಇತ್ತೀಚೆಗೆ ಧಾರವಾಡದ ಪ್ರವಾಸಿ ಮಂದಿರಲ್ಲಿ ತಂಗಿದ್ದೆ. ಅಲ್ಲಿನ ಒಬ್ಬ ಮಾಜಿ ಶಾಸಕರು ನನಗೆ ಕರೆ ಮಾಡಿದರು,  ಅವರ ಕರೆಯ ಮೇರೆಗೆ ಭೇಟಿಯಾದೆ.  ಅವರಿಗೆ ನನ್ನ ಹಿನ್ನಲೆ ಪರಿಚಯ ಮೊದಲೇ ಇತ್ತಂತೆ.

 ಅವರು ನನಗೆ ಹೇಳಿದ ಮಾತು ನಾನು ನಿಮ್ಮ ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ ಡಿಜಿಟಲ್ ಪುಸ್ತಕ ಓದಿದ್ದೇನೆ. ಪ್ರತಿ ದಿನ ‘ ಪೇಪರ್ ಶಕ್ತಿಪೀಠ’ ಓದುತ್ತಿದ್ದೇನೆ. ಆದರೆ ನಿಮ್ಮ ಮುಖತಃ ಪರಿಚಯವಿರಲಿಲ್ಲ. ನೀವೂ ಮಾಜಿ ಶಾಸಕರ ವೇದಿಕೆಯನ್ನು ಏಕೆ ಬಳಸಿಕೊಳ್ಳಬಾರದು. ಎಂಬ ಸಲಹೆ ನೀಡಿದರು.

ರಾಜ್ಯದ ಈಗಿನ 224 ವಿಧಾನಸಭಾ ಕ್ಷೇತ್ರಗಳಲ್ಲೂ  ವಿಷನ್-2047 ಡಾಟಾ ಮಿತ್ರ   ನೇಮಕ ಮಾಡಲು ಉದ್ದೇಶಿದ್ದೇವೆ. ಅವರು ಯಾರೇ ಆಗಿರಲಿ, ನಮಗೆ ಅಗತ್ಯವಿರುವ ಮಾಹಿತಿ ನೀಡವಂತರಾಗಿರಬೇಕು. ಆ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಬಗ್ಗೆ ವಿಶೇಷ ಆಸಕ್ತಿ ಹೊಂದಿರಬೇಕು.

ಈ ಹಿನ್ನಲೆಯಲ್ಲಿ ಮಾಜಿ ಶಾಸಕರ ವೇದಿಕೆ ಸಹಾಯ ಅಗತ್ಯ ಎನಿಸಿತು.ನಾನು ವಿಧಾನಸಭೆಯಲ್ಲಿ ಮಾಜಿಶಾಸಕರ ಕಚೇರಿಗೆ ಭೇಟಿ ಮಾಡಲು ಹೋದೆ. ಆದರೆ ಅವರ ಕಚೇರಿಯ ಬೀಗ ಹಾಕಿತ್ತು. ನನಗೂ ಸಮಯ ಇರಲಿಲ್ಲ, ಅಕ್ಕ-ಪಕ್ಕ ವಿಚಾರಿಸದೇ ಬೇಗ ಬಂದು ಬಿಟ್ಟೆ.

ನಿವೇನಂತಿರಾ ?