21st January 2025
Share

TUMAKURU:SHAKTHIPEETA FOUNDATION

ಸ್ನೇಹಿತರೇ,

01.08.1988 ರಿಂದ 01.08.2023 ವರೆಗೆ, ಒಬ್ಬ ಸರ್ಕಾರಿ ನೌಕರರು ಸೇವೆ ಮಾಡುವಷ್ಟು 35 ವರ್ಷಗಳ ಕಾಲ ನಿರಂತರವಾಗಿ, ಅಭಿವೃದ್ಧಿ ಹೋರಾಟ ಮತ್ತು ಅಧ್ಯಯನ ಮಾಡುತ್ತಾ ಬಂದಿದ್ದೇನೆ. ಅಲ್ಲಿನಿಂದ ಇಲ್ಲಿಯವರೆಗೂ ಬಹುತೇಕ ದಾಖಲೆಗಳನ್ನು ಇಟ್ಟು ಕೊಂಡಿದ್ದೇನೆ.

 1990 ರಿಂದ ತುಮಕೂರು ಲೋಕಸಭಾ ಸದಸ್ಯ ಶ್ರೀ ಜಿ.ಎಸ್.ಬಸವರಾಜ್ ರವರ ಜೊತೆ ಸಂಪರ್ಕ ಬೆಳೆದ ನಂತರ ಸುಮಾರು  33 ವರ್ಷಗಳ ಕಾಲ ಅವರ ನೇತೃತ್ವದಲ್ಲಿಯೇ ಅಭಿವೃದ್ಧಿ ಬೇಟೆ’ ನಡೆದಿದೆ.

07.01.1997 ರಿಂದ ನೀರಾವರಿ ತಜ್ಞ ಕೀರ್ತಿಶೇಷ ಜಿ.ಎಸ್.ಪರಮಶಿವಯ್ಯನವರ ಒಡನಾಟದಿಂದ, ರಾಜ್ಯದ ಸಮಗ್ರ ನೀರಾವರಿಗೆ ಅಪ್ನಾಸ್ ಸಂಸ್ಥೆ ರಚಿಸಿಕೊಂಡು, ಶ್ರಮಿಸಿರುವ ದಾಖಲೆಗಳು ನಿಜಕ್ಕೂ ಇತಿಹಾಸ ಬರೆಯಲಿವೆ.

ಸುಮಾರು 1999 ರಿಂದ ಅಭಿವೃದ್ಧಿ ತಜ್ಞ ಶ್ರೀ ಟಿ.ಆರ್.ರಘೋತ್ತಮರಾವ್ ರವರ ಪರಿಚಯವಾದರೂ, ಅವರು ನಿವೃತ್ತಿ ಹೊಂದಿದ ನಂತರ ಬಹುತೇಕ  ಶ್ರೀ ಜಿ.ಎಸ್.ಬಸವರಾಜ್ ರವರ ಅಭಿವೃದ್ಧಿ ಪತ್ರಗಳನ್ನು ಅವರೇ ಸಿದ್ಧಪಡಿಸಿದ್ದಾರೆ.ನಿವೃತ್ತಿ ಆದ ನಂತರ ಕಂಪ್ಯೂಟರ್ ಕೊಂಡು ಕೊಂಡು, ಟೈಪ್ ಮಾಡುವುದು, ಇಂಟರ್ ನೆಟ್ ನಲ್ಲಿ ಯೋಜನೆ ಮಾಹಿತಿ ಹುಡುಕುವುದು ಅವರ ಹವ್ಯಾಸ.

 ಈ ಎಲ್ಲಾ ಯೋಜನೆಗಳನ್ನು ನೋಡಿದರೆ ಆಡು ಮುಟ್ಟದ ಸೊಪ್ಪಿಲ್ಲಅಭಿವೃದ್ಧಿ ರೆವೂಲ್ಯೂಷನ್ ಫೋರಂ ಕೈ ಹಾಕದ ಕೆಲಗಳಿಲ್ಲ ಎಂಬ ಹೊಸ ಗಾದೆ ಮಾತು ಉದ್ಬವಾಗಲಿದೆ.

ಆದ್ದರಿಂದ ಅಭಿವೃದ್ಧಿ ಮ್ಯೂಸಿಯಂನಲ್ಲಿ, ಈ ಎಲ್ಲಾ ದಾಖಲೆಗಳ ಜೊತೆ, ಶ್ರೀ ಜಿ.ಎಸ್.ಬಸವರಾಜ್ ರವರ ಅಭಿವೃದ್ಧಿ ಚಿಂತನೆಗಳ ಡಿಜಿಟಲ್ ದಾಖಲೆಗಳನ್ನು ಸಂಗ್ರಹಿಸಿ ಇಡಲಾಗುವುದು.

ಇವುಗಳ À ಜೊತೆಗೆ 1947 ರಿಂದ ತುಮಕೂರು ಜಿಲ್ಲೆಯ ಅಭಿವೃದ್ಧಿ ಬಗ್ಗೆ ಶ್ರಮಿಸಿದ ಹೋರಾಟಗಾರರ, ಸಂಶೋಧಕರ, ಎಲ್ಲಾ ವರ್ಗದ ಸಂಘಸಂಸ್ಥೆಗಳ, ವ್ಯಕ್ತಿ, ಕುಟುಂಬದ, ಚುನಾಯಿತ ಜನಪ್ರತಿನಿಧಿಗಳ ಅಭಿವೃದ್ಧಿ ದಾಖಲೆಗಳನ್ನು ವಿಧಾನಸಭಾ ಕ್ಷೇತ್ರವಾರು ಅಥವಾ ಗ್ರಾಮಗಳವಾರು ಸಂಗ್ರಹ ಮಾಡಲಾಗುವುದು.

   ದಾಖಲೆಗಳ ಸಂಗ್ರಹ, ಹುಡುಕಾಟ, ಸ್ಕಾನಿಂಗ್ ಮಾಡುವುದು, ಟೈಪ್ ಮಾಡುವುದು, ಕನ್ನಡ, ಇಂಗ್ಲಿಷ್, ಹಿಂದಿ ಬಾಷಾಂತರ ಮಾಡಲು ಹೊರಗುತ್ತಿಗೆ ಆಧಾರದಲ್ಲಿ, ಮ್ಯೂಸಿಯಂ ಕಟ್ಟಡದಲ್ಲಿಯೇ ವಸತಿ ಮತ್ತು ಊಟದ ವ್ಯವಸ್ಥೆ ಉಚಿತವಾಗಿ ಮಾಡಲಾಗುವುದು.  ಕಾರು ಡ್ರೈವಿಂಗ್ ಮಾಡಿಕೊಂಡು ಜಿಲ್ಲಾದ್ಯಾಂತ ಓಡಾಡಲು ಆಸಕ್ತಿ ಇರುವವರು ಸಂಪರ್ಕಿಸಲು ಮನವಿ.

  ಜಾತಿ ಭೇದಭಾವವಿಲ್ಲ, ವಿದ್ಯಾರ್ಹತೆ ಅಗತ್ಯವಿಲ್ಲ, ನಾವು ಹೇಳಿದ ಕೆಲಸ ಮಾಡಲು ಮನಸ್ಸಿರಬೇಕು. ಸೋಶಿಯಲ್ ಮೀಡಿಯಾದಲ್ಲಿ ನಿಪುಣರಾಗಿರ ಬೇಕು. ತುಮಕೂರು ಜಿಲ್ಲೆಯ ಪ್ರತಿ ಗ್ರಾಮ ಮತ್ತು ನಗರ ಪ್ರದೇಶಗಳ ಬಡಾವಣೆ ಸುತ್ತಲೂ ರೆಡಿ ಇರಬೇಕು. ಊರಿಗೊಬ್ಬ ಮತ್ತು ಬಡಾವಣೆಗೊಬ್ಬ ಡಾಟಾ ಮಿತ್ರರ ನೇಮಕ, ಅವರಿಂದ ಮಾಹಿತಿ ಸಂಗ್ರಹ ಪ್ರಮುಖ ಕೆಲಸÀ, ಒಳ್ಳೆಯ ವೇತನ ಮತ್ತು ಹೆಚ್ಚುವರಿ ಕೆಲಸ ಮಾಡಿದಕ್ಕಾಗಿ ಒಳ್ಳೆಯ ಇನ್ಸ್‍ಂಟೀವ್ ದೊರೆಯಲಿದೆ.

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಇಂಥವರ ಅಗತ್ಯ ಇದೆ. 01.08.2023 ರಿಂದ ನಂಬರ್ ಒನ್ ಕರ್ನಾಟಕ ಮಾಡಲು ‘ಭಾರತ @ 100 ಸ್ವಾತಂತ್ರ್ಯ ಸೇನೆ(ಬಿ.ಎಸ್.ಎಸ್) ಅಡಿಯಲ್ಲಿ ನಿರಂತರವಾಗಿ ಶ್ರಮಿಸುವ ತಂಡ ಕಟ್ಟ ಬೇಕಿದೆ.