22nd December 2024
Share

TUMAKURU:SHAKTHIPEETA FOUNDATION

ನಂಬರ್ ಒನ್ ಕರ್ನಾಟಕ ಜ್ಞಾನ ದಾನ ಮಾಡಿ’ ವರದಿಯನ್ನು ಸರ್ಕಾರಗಳಿಗೆ ನೀಡಿದರೆ,  ಪುಸ್ತಕ ಮಾಡಿ ಜನರಿಗೆ ಹಂಚಿದರೆ, ನಂಬರ್ ಒನ್ ಕರ್ನಾಟಕ ಆಗುವುದಿಲ್ಲ ನಿರಂತರವಾಗಿ ವರದಿಯಲ್ಲಿನ ಪ್ರತಿಯೊಂದು ಅಂಶಗಳ ಜಾರಿಗೆ ಸರ್ಕಾರದೊಂದಿಗೆ ಶ್ರಮಿಸಬೇಕಿದೆ. ‘ಇದೊಂದು ಅಭಿವೃದ್ಧಿ ತಪಸ್ಸು.

ಈ ಕೆಲಸವನ್ನು ತುಮಕೂರಿನ ಶಕ್ತಿಪೀಠ ಫೌಂಡೇಷನ್, ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಮತ್ತು ಭಾರತ @ 100 ಸ್ವಾತಂತ್ರ್ಯ ಸೇನೆ(ಬಿ.ಎಸ್.ಎಸ್.), ರಾಜ್ಯದ ವಿವಿಧ ಪರಿಣಿತ ಜ್ಞಾನಿಗಳ ನೇತೃತ್ವದಲ್ಲಿ ನಾಲೇಡ್ಜ್ ಬ್ಯಾಂಕ್ ರಚಿಸಿಕೊಂಡು,  ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ  ಪಿಪಿಪಿ ಮಾದರಿಯಲ್ಲಿ ಶ್ರಮಿಸಲು’, ದಿನಾಂಕ: 01.08.2023  ರಂದು ದೆಹಲಿಯಲ್ಲಿ ನೂತನವಾಗಿ ನಿರ್ಮಾಣ ಮಾಡುತ್ತಿರುವ ಕರ್ನಾಟಕ ಭವನ-1 ರಲ್ಲಿ ಪ್ರತಿಜ್ಞೆ’ ಮಾಡಲಾಗಿದೆ.

ತುಮಕೂರಿನ ಶಕ್ತಿ ಭವನದ ಟೆರ್ರೆಸ್ ನಲ್ಲಿ ಸುಮಾರು 1000 ಚದುರ ಅಡಿಯ ವಿಸ್ಥೀರ್ಣದಲ್ಲಿ, ಶಕ್ತಿಪೀಠ ಫೌಂಡೇಷನ್ ‘ನಂಬರ್ ಒನ್ ಕರ್ನಾಟಕ ಮ್ಯೂಸಿಯಂ’ ಸ್ಥಾಪಿಸಲು ಮುಂದಾಗಿದೆ.

ಇದೇ ರೀತಿ ದೆಹಲಿಯಲ್ಲಿ ರಾಜ್ಯ ಸರ್ಕಾರ, ನಿರ್ಮಾಣ ಮಾಡುತ್ತಿರುವ ಕರ್ನಾಟಕ ಭವನ ಕಟ್ಟಡದ ಟೆರ್ರೆಸ್ ಸುಮಾರು 10000 ಚದುರ ಅಡಿ ಇದ್ದು, ಇಲ್ಲಿ ಪಿಪಿಪಿ ಮಾದರಿಯಲ್ಲಿ ‘ನಂಬರ್ ಒನ್ ಕರ್ನಾಟಕ ಮ್ಯೂಸಿಯಂ’  ಸ್ಥಾಪಿಸಲು, ದಿನಾಂಕ:01.08.2023 ರಂದು ‘ವಿಶ್ವದ 108 ಶಕ್ತಿಪೀಠಗಳ’ ಸಮ್ಮುಖದಲ್ಲಿ  ಅಧ್ಯಯ£ವನ್ನು ಆರಂಭಿಸಲು ಪ್ರತಿಜ್ಞೆ ಮಾಡಲಾಗಿದೆ.

ಆಸಕ್ತ ಜ್ಞಾನಿಗಳು ಜ್ಞಾನದಾನ ಮಾಡಲು ಬಹಿರಂಗ ಮನವಿ ಮಾಡಲಾಗಿದೆ.