26th December 2024
Share

TUMAKURU:SHAKTHIPEETA FOUNDATION

ಇಂದು ರಾತ್ರಿ 12 ಗಂಟೆಗೆ ಸ್ವಾತಂತ್ರ್ಯ ಬಂದ ದಿನ, ಬೆಳಿಗ್ಗೆ ನಂಬರ್ ಒನ್ ಕರ್ನಾಟಕ ಕ್ಕೆ ಪೂರಕವಾಗಿ, ಇಂಡಿಯಾ @ 100 ಅಂಗವಾಗಿ, ವಿಷನ್ ಡಾಕ್ಯುಮೆಂಟ್ 2047 ವಿಶ್ಲೇಷಣೆ ಮಾಡಲು ನಾಲೇಡ್ಜ್ ಬ್ಯಾಂಕ್ ರೂಪುರೇಷೆ ಸಿದ್ಧಪಡಿಸಲು, ಎಲ್ಲಾ ಹಂತದ ಪ್ರತಿಯೊಂದು ಗ್ರಾಮದ ವಿದ್ಯಾರ್ಥಿಗಳು ಪ್ರಾಜೆಕ್ಟ್ ವರ್ಕ್ ಆಗಿ ಊರಿಗೊಂದು ಪುಸ್ತಕ ಸಿದ್ಧಪಡಿಸಲು ಸರ್ಕಾರಿ ಆದೇಶ ಹೊರಡಿಸುವುದು.

ರಾಜ್ಯದ ಎಲ್ಲಾ ವಿಶ್ವ ವಿದ್ಯಾನಿಲಯಗಳಲ್ಲಿರುವ ಅಧ್ಯಯನ ಪೀಠಗಳಿಗೆ ಮಾರ್ಗದರ್ಶಿ ಸೂತ್ರ ಸಿದ್ಧಪಡಿಸಿ, ವಿಧಾನಸಭಾ ಕ್ಷೇತ್ರವಾರು ವ್ಯಾಪ್ತಿ ಹಂಚಿಕೆ ಮಾಡಿ, ವಿಷಯವಾರು 545 ಅಧ್ಯಯನ ಪೀಠಗಳ ಸ್ಥಾಪನೆ ಮಾಡಿ, 2047 ರವರೆಗೆ ನಿರಂತರವಾಗಿ ಶ್ರಮಿಸುವುದು.

ಕೇಂದ್ರ ಸರ್ಕಾರದ ನ್ಯಾಷನಲ್ ರೀಸರ್ಚ್ ಫೌಂಡೇಷನ್‍ಗೆ ಪ್ರಸ್ತಾವನೆ ಸಲ್ಲಿಸುವ ಬಗ್ಗೆ ಉನ್ನತ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಾದ ಶ್ರೀ ಎಸ್.ಆರ್.ಉಮಾಶಂಕರ್ ರವರೊಂದಿಗೆ ಸಮಾಲೋಚನೆ ನಡೆಸಲಾಯಿತು.

ಈಗಾಗಲೇ ದಿನಾಂಕ:06.04.2023 ರಂದು ರಾಜ್ಯದ ಎಲ್ಲಾ ವಿಶ್ವ ವಿದ್ಯಾನಿಲಯಗಳಿಗೆ ಬರೆದಿರುವ ಪತ್ರದ ಅಂಶಗಳ ಬಗ್ಗೆಯೂ ಚರ್ಚೆ ನಡೆಸಲಾಯಿತು.

ಉಮಾಶಂಕರ್ ರವರು ಯಾವುದಾದರೂ ವಿಷಯ ಕೈಗೆತ್ತಿಕೊಂಡರೇ ಪಕ್ಕಾ ಮಾಡುವ ದೂರದೃಷ್ಠಿ ಉಳ್ಳವರು. ಅವರ ಉತ್ತರ  ಪಕ್ಕಾ ಮಾಡೋಣ ಎಂಬುದಾಗಿತ್ತು. ಅಧೀನ ಕಾರ್ಯದರ್ಶಿಯವರನ್ನು ಕರೆದು ಈ ಕಡತ ಯಾವ ಹಂತದಲ್ಲಿದೆ, ನಾವು ಏನು ಮಾಡಬೇಕು ಎಂಬ ವರದಿಯೊಂದಿಗೆ ಸಂಜೆ 6 ಗಂಟೆಗೆ ಚರ್ಚಿಸೋಣ ಎಂಬ ಆದೇಶ ನೀಡಿದ್ದು ಸ್ವಾಗಾತಾರ್ಹ.

ನಾನು ಕೇಸ್ ವರ್ಕರ್ ನಿಂದ ಆರಂಭಿಸಿ, ಎಸ್.ಒ. ಶ್ರೀ ರಘುನಾಥ್ ರವರು, ಅಧೀನ ಕಾರ್ಯದರ್ಶಿ ಶ್ರೀ ನಂದಕುಮಾರ್ ರವರು, ಸರ್ಕಾರದ ಉಪ ಕಾರ್ಯದರ್ಶಿ ಶ್ರೀಮತಿ ಎಂ.ಎಸ್ ಜ್ಯೋತಿಯವರೊಂದಿಗೆ ಸಮಾಲೋಚನೆ ನಡೆಸಿ, ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ ಪುಸ್ತಕ ನೀಡಲಾಯಿತು.

ವಿಶಿಷ್ಠ ಅನುಭವ ?

ನಾನು ಅವರನ್ನು ಭೇಟಿಯಾಗಲು ಅವರ ಆಪ್ತ ಕಾರ್ಯದರ್ಶಿಯವರನ್ನು ಕೇಳಿದಾಗ, ಅವರ ಉತ್ತರ ಮಧ್ಯಾಹ್ನ 3 ಗಂಟೆಗೆ ಬನ್ನಿ, ಈಗ ಆಗಲ್ಲ ಎಂದರು. ನಾನು ನನ್ನ ಪುಸ್ತಕ ನೀಡಿ, ಇವರು ಬಂದಿದ್ದಾರೆ ಎಂಬ ವಿಷಯ ತಿಳಿಸಿ, ಅವರು ಕರೆದರೆ ಭೇಟಿಯಾಗುತ್ತೇನೆ, ಇಲ್ಲ ಅಂದರೆ ಮಧ್ಯಾಹ್ನ ಬರುವುದಾಗಿ ತಿಳಿಸಿದೆ.

ಪಾಪ ಆತ ಪುಸ್ತಕವನ್ನು ಅವರಿಗೆ  ನೀಡಲು ಸುಮಾರು 30 ನಿಮಿಷ ತೆಗೆದು ಕೊಂಡರು, ನಂತರ ನನ್ನ ಒತ್ತಾಯದ ಮೇರೆಗೆ, ಒಳಗೆ ಹೋದರು, ನಂತರ ಬಂದು ಸಾಹೇಬರು ಕರೆಯುತ್ತಾ ಇದ್ದಾರೆ ಬನ್ನಿ ಸಾರ್ ಎಂದರು.

ಉಮಾಶಂಕರ್ ರವರೊಂದಿಗೆ ಸುಮಾರು ಕಾಲ ಸಮಾಲೋಚನೆ, ಅವರ ಆತಿಥ್ಯ ನೋಡಿದ ಆತ, ನಾನು ಹೊರಗೆ ಬರುವಾಗ ಸಾರಿ ಸಾರ್, ನಿಮ್ಮನ್ನು ಕಾಯಿಸಿದೆ. ಸಾಹೇಬರು ನಿಮ್ಮ ಹೆಸರು ಹೇಳಿದ ತಕ್ಷಣ ಕರೆದರು. ಮೊದಲೇ ನೀವೂ ಅವರಿಗೆ ಗೊತ್ತಿರುವವರು ಎಂದು ಹೇಳ ಬಹುದಿತ್ತಲ್ಲಾ ಸಾರ್, ಎಂಬ ಮಾತು ನನಗೆ ತುಂಬಾ ಸಂತೋಷ ನೀಡಿತು.

ನಿಮ್ಮ ಕೆಲಸವನ್ನು ನೀವೂ ಪಕ್ಕಾ ಮಾಡಿದ್ದೀರಿ ಧನ್ಯವಾದಗಳು ಎಂದು ಹೇಳಿ ಹೊರಬಂದೆ.