22nd November 2024
Share

TUMAKURU:SHAKTHIPEETA FOUNDATION

     ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಾಲೇಡ್ಡ್ ಬ್ಯಾಂಕ್ 20247  ಬಗ್ಗೆ ಚರ್ಚೆ ನಡೆಯುತ್ತಿದೆ. ರಾಜ್ಯದ ಎಲ್ಲಾ ವಿಶ್ವ ವಿದ್ಯಾನಿಲಯಗಳ ಅಭಿಪ್ರಾಯವನ್ನು ಸಂಗ್ರಹಿಸಲು ದಿನಾಂಕ:06.04.2023 ರಂದೇ ಉನ್ನತ ಶಿಕ್ಷಣ ಇಲಾಖೆಯ ಅಪರಮುಖ್ಯ ಕಾರ್ಯದರ್ಶಿಯವರಾದ ಶ್ರೀ ಎಸ್.ಆರ್.ಉಮಾಶಂಕರ್ ರವರು ಪತ್ರ ಬರೆದಿದ್ದಾರೆ. ಶೀಘ್ರವಾಗಿ ರಾಜ್ಯ ಸರ್ಕಾರದ ಯೋಜನಾ ಇಲಾಖೆ ಒಂದು ಅಂತಿಮ ನಿರ್ಧಾರ ಕೈಗೊಳ್ಳುವ ಭರವಸೆಯಿದೆ.

ನಾವು ಸರ್ಕಾರದ ನಿರ್ಧಾರವನ್ನು ಕಾಯದೇ, ನಾಲೇಡ್ಜ್ ಬ್ಯಾಂಕ್-2047 ರ ರೂಪುರೇಷೆ ಬಗ್ಗೆ, ಪ್ರಾಯೋಗಿಕವಾಗಿ ಕಾರ್ಯಾರಂಭವನ್ನು ದಿನಾಂಕ:16.08.2023 ರಿಂದಲೇ ಆರಂಭಿಸಿದ್ದೇವೆ ಎಂದು ತಿಳಿಸಲು ಹರ್ಷಿಸುತ್ತೇನೆ.

ನಿಮ್ಮ ಶಿಕ್ಷಣದ ಅವಶ್ಯಕತೆಯಿಲ್ಲ, ನಿಮ್ಮ ಅಧಿಕಾರವೂ ಅಡ್ಡ ಬರುವುದಿಲ್ಲ. ಹೆಸರು ಮತ್ತು ಭಾವ ಚಿತ್ರ ಪ್ರಕಟಿಸಿ ಎಂದರೆ ಪ್ರಕಟಣೆ ಮಾಡುತ್ತೇವೆ. ಗೌಪ್ಯವಾಗಿ ಇಡಿ ಎಂದರೆ ತಮ್ಮ ಹೆಸರನ್ನು ಗೌಪ್ಯವಾಗಿ ಇಡುತ್ತೇವೆ.

ನೀವು ಸೋಶಿಯಲ್ ಮೀಡಿಯಾ ಮೂಲಕ ವಿಷಯ ತಿಳಿಸಬಹುದು, ಮುಕ್ತವಾಗಿ ಭೇಟಿಯಾಗಿ ಚರ್ಚೆ ಮಾಡಬಹುದು ಅಥವಾ ನೀವು ನನ್ನೊಂದಿಗೆ ಮಾತನಾಡುವಾಗ ತಮ್ಮ ಅಮೂಲ್ಯವಾದ ವಿಷಯವನ್ನು ನಾನೇ ಆಯ್ಕೆ ಮಾಡಿಕೊಳ್ಳಬಹುದು.

ಸಂವಾದಗಳಲ್ಲಿ ನೀವೂ ನನ್ನನ್ನು ಕೇಳುವ ಪ್ರಶ್ನೆಯೇ ದಾಖಲಾಗಬಹುದು, ಯಾವುದೇ ವಿಚಾರವಾದರೂ  ಸ್ಪಷ್ಟ ಪಲಿತಾಂಶ ಪಡೆಯಲು ಪ್ರಯತ್ನ ಮಾಡೋಣ. ಪ್ರತಿಫಲ ನಮ್ಮದಲ್ಲ.

ಇಂದಿನಿಂದ ನೊಂದಣಿ ಆರಂಭವಾಗಲಿದೆ. ಟೋಕನ್ ಸಿಸ್ಟಂ ಮಾಡಿ ತಮ್ಮನ್ನು ಮುಕ್ತ ಚರ್ಚೆಗೆ ಯೂ ಟ್ಯೂಬ್ ಚಾನಲ್ ಗೆ ಆಹ್ವಾನಿಸಲಾಗುವುದು.

 ಈ ಕಾರ್ಯಕ್ರಮಕ್ಕೂ ಒಂದು ಹೆಸರು ಇಡಲು ಚಿಂತನೆ ಆರಂಭವಾಗಿದೆ.  ಹೆಸರುಗಳು ಜನ್ಮ ತಾಳಲು ಆರಂಭಿಸಿವೆ, ನೀವೂ ಸಲಹೆ ನೀಡಬಹುದು. ಶೀಘ್ರದಲ್ಲಿ ಪ್ರಕಟಿಸಲಾಗುವುದು. ವರ್ಷದ 365 ದಿನಗಳಿಗೂ ಒಬ್ಬೊಬ್ಬರಂತೆ ಅಥವಾ ಒಂದು ತಂಡದಂತೆ ನೋಂದಣೆ ಮಾಡಲು ಉದ್ದೇಶಿಸಲಾಗಿದೆ.

  1. ವಿಷಯಕ್ಕೊಬ್ಬ ಒಬ್ಬ ಜ್ಞಾನಿ
  2. ಎಪಿಸೋಡ್ಗೆ ಒಬ್ಬ ಜ್ಞಾನಿ.
  3. ದಿನಕ್ಕೊಬ್ಬ ಜ್ಞಾನಿ

ನಾನು ಇದೂವರೆಗೂ ಬರೆದಿರುವ 12 ಪುಸ್ತಕಗಳಲ್ಲಿನ ಯೋಜನೆಗಳ ಪೈಕಿ  ಇದರಲ್ಲಿ ಕಣ್ಣಿಗೆ ಗೋಚರಿಸುವ ನಿಮ್ಮ ಸಾಧನೆ ಯಾವುಗಳೆಂದು ತಿಳಿಸಿ ಎಂದು ತುಮಕೂರು ಜಿಲ್ಲೆ, ಕೊರಟಗೆರೆ ತಾಲ್ಲೋಕು, ಮಲ್ಲೇಕಾವು ಗ್ರಾಮದ ವಕೀಲರಾದ ಶ್ರೀ ಲೋಕೇಶ್ ರವರು ವಾಟ್ಸ್‍ಅಪ್  ಮೂಲಕ ಕೇಳಿದ್ದಾರೆ. ಈ ವಿಚಾರ ನೊಂದಾವಣೆಯಾಗಿದೆ.

ಬಹುತೇಕ ದಿನಾಂಕ:15.10.2023 ರಿಂದ ನಮ್ಮ ಯೂ ಟ್ಯೂಬ್ ಚಾನಲ್ ಆರಂಭವಾಗಲಿದೆ.

ವಾಟ್ಸ್ಅಪ್ 9886774477 ತಾವೂ ಕಳುಹಿಸಿ.