12th April 2024
Share

TUMAKURU:SHAKTHIPEETA FOUNDATION

ದೆಹಲಿ ವಿಶೇಷ ಪ್ರತಿನಿಧಿ ಮತ್ತು ಕರ್ನಾಟಕ ರಾಜ್ಯ ಪರಿವರ್ತನಾ ಸಂಸ್ಥೆ, ಈ ಎರಡು ಹುದ್ದೆಗಳು ಗಂಜಿಕೇಂದ್ರ ಎಂಬ ಭಾವನೆ ಹಲವರಿಗಿದೆ. ನಿಜಕ್ಕೂ ಇವು ಶಕ್ತಿಕೇಂದ್ರ’ ಗಳು.

ಮುಖ್ಯ ಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು ಮತ್ತು ಉಪಮುಖ್ಯಮಂತ್ರಿಯವರಾದ ಶ್ರೀ ಡಿ.ಕೆ.ಶಿವಕುಮಾರ್ ರವರ  ನೇತೃತ್ವದ ಸರ್ಕಾರ ಗ್ಯಾರಂಟಿ ಸರ್ಕಾರ ಎಂದು ಬಿಂಬಿತವಾಗಿದೆ. ನನ್ನ ಪ್ರಕಾರ, ಈ ಸರ್ಕಾರ ಯೂನಿವರ್ಸಲ್ ಬೇಸಿಕ್ ಇನ್ಕಮ್ (UNIVERSAL BASIC INCOME) ನೀಡುತ್ತಿದ್ದೇವೆ ಎಂಬ ಘೋಷಣೆಯನ್ನು ಶೀಘ್ರದಲ್ಲಿ  ಮಾಡುವ ತವಕದಲ್ಲಿದ್ದಾರೆ.

ಬಹುಷಃ ಬಿಪಿಎಲ್ ಎಂಬ ಪದ ಕರ್ನಾಟಕದಲ್ಲಿ ಮಾಯಾವಾಗಲಿದೆ ಅಥವಾ ಆದಾಯದ ಮಿತಿ ಹೆಚ್ಚಲಿದೆ.ಸರ್ಕಾರ ಇದಕ್ಕೆ ಒಂದು ನೀತಿಯನ್ನು ಜಾರಿಗೊಳಿಸಬೇಕು. ಕಟ್ಟು ನಿಟ್ಟಾಗಿ ಪಾಲಿಸಿದರೆ. ಸಿದ್ಧರಾಮಯ್ಯನವರು ಹೇಳುವ ಹಾಗೆ ಏಷ್ಯಾದಲ್ಲಿ ಕರ್ನಾಟಕ ರಾಜ್ಯ ನಂಬರ್-1 ಆಗಲಿದೆ ಎಂದರೆ ತಪ್ಪಾಗಲಾರದು. ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ಹೇಳುವ ವಿಶ್ವಗುರು ಭಾರತ-2047 ಕ್ಕೂ ಪ್ರಥಮ ರಾಜ್ಯವಾಗಲಿದೆ.

ಇವೆರಡು ಹಾಸ್ಯದ ಮಾತಲ್ಲ, ಆಶಾವಾದಿಗಳ ಕನಸು.ಈ ಕನಸು ನನಸಾಗಬೇಕಾದರೆ ಕರ್ನಾಟಕ ಯೋಜನಾ ಆಯೋಗದ ಉಪಾಧ್ಯಕ್ಷÀ ಹೆಸರು ಬದಲಿಸಿರುವ, ರಾಜ್ಯ ಪರಿವರ್ತನಾ ಸಂಸ್ಥೆಯ ಉಪಾದ್ಯಾಕ್ಷರಾದ ಶ್ರೀ ರಾಜೀವ್ ಗೌಡರವರು ಮತ್ತು ದೆಹಲಿ ವಿಶೇಷ ಪ್ರತಿ ನಿಧಿಗಳಾದ ಶ್ರೀ ಟಿ.ಬಿ.ಜಯಚಂದ್ರರವರು ಮತ್ತು ಶ್ರೀ ಪ್ರಕಾಶ್ ಹುಕ್ಕೇರಿರವರ ಪಾತ್ರ ಬಹಳ ಮಹತ್ತರವಾಗಿದೆ.

ಇವರಿಗೆ ಹೆಗಲು ಕೊಡಬೇಕಾದವರು ಯೋಜನಾ ಇಲಾಖೆಯ ಸಚಿವರಾದ ಶ್ರೀ ಸುಧಾಕರ್ ರವರು. ಗಂಜಿಕೇಂದ್ರಗಳನ್ನು ಶಕ್ತಿಕೇಂದ್ರಗಳಾಗಿ ಬದಲಾವಣೆ ಮಾಡುವ ಅವಕಾಶ ಇವರಿಗೆ ಇದೆ.  ನಾನು ಸರ್ಕಾರಕ್ಕೆ ನೀಡಿರುವ ‘ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ’ ಇದರ ಯಜಮಾನರು ಇವರು ಎಂದರೆ ತಪ್ಪಾಗಲಾರದು.

ನಾನು ಬಹಳ ಹತ್ತಿರದಿಂದ ಬಲ್ಲವರು ಶ್ರೀ ರಾಜೀವ್ ಗೌಡರವರು, ಶ್ರೀ ಟಿ.ಬಿ.ಜಯಚಂದ್ರರವರು, ಶ್ರೀ ಪ್ರಕಾಶ್ ಹುಕ್ಕೇರಿರವರು  ಇವರಿಗೆ ಅನುಭವ ಮತ್ತು ಬದ್ಧತೆ ಇದೆ. ಮನಸ್ಸು ಮಾಡಬೇಕು ಅಷ್ಟೆ.  ಮತ್ತು ಶ್ರೀ ಸುಧಾಕರ್ ರವರು ತುಮಕೂರಿಗೆ ಹತ್ತಿರದವರಾದರೂ ಹಾಗೂ ನಮ್ಮ ಶಕ್ತಿಪೀಠ ಕ್ಯಾಂಪಸ್ ಮಾಡುತ್ತಿರುವ ಹಿರಿಯೂರು ವಿಧಾನಸಭಾ ಕ್ಷೇತ್ರದ ಶಾಸಕರಾದರೂ ನನಗೆ ಪರಿಚಯವಿಲ್ಲ.

‘ಈ ನಾಲ್ಕು ಜನರ ಕಚೇರಿಗಳ ಅಧಿಕಾರಿಗಳು, ಪಾದರಸದಂತೆ ಕಾರ್ಯನಿರ್ವಹಿಸಬೇಕುನೌಕರರು ಚುರುಕಾಗಬೇಕು. ಚುರುಕು ಮಾಡುವ ಹಾಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ’.

ಮಾಜಿ ಪ್ರಧಾನಿಯವರಾದ ಶ್ರೀ ಮನೋಮೋಹನ್ ಸಿಂಗ್ ರವರ ಮಾಹಿತಿ ಹಕ್ಕು ಅಧಿನಿಯಮ’ ಅಥವಾ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರ ರಾಜ್ಯ ಮಟ್ಟದ ದಿಶಾ ಸಮಿತಿ’ ಇವೆರಡರಲ್ಲಿ ಯಾವುದು ಕೆಲಸಕ್ಕೆ ಬರಲಿದೆ ಕಾದುನೋಡಬೇಕಿದೆ.