27th July 2024
Share

TUMAKURU:SHAKTHIPEETA FOUNDATION

ನಮ್ಮ ದೇಶದ ಮಟ್ಟದಲ್ಲಿ, ನಮ್ಮ ರಾಜ್ಯ ಮಟ್ಟದಲ್ಲಿ, ನಮ್ಮ ಜಿಲ್ಲಾ ಮಟ್ಟದಲ್ಲಿ, ನಮ್ಮ ನಗರ ಮಟ್ಟದಲ್ಲಿ, ಹಲವಾರು ಸಚಿವರು, ಅಧಿಕಾರಿಗಳುÀ, ಚುನಾಯಿತ ಜನಪ್ರತಿನಿಧಿಗಳು ಹಲವಾರು ಘೋಷಣೆಗಳನ್ನು ಮಾಡುತ್ತಿದ್ದಾರೆ.

  ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಹೆಚ್ಚು ಅನುದಾನ  ಪಡೆಯಲು ಕಾರ್ಯತಂತ್ರ ರೂಪಿಸುವ ಸಂಭಂದ, ರಾಜ್ಯದ 31 ಜಿಲ್ಲೆಗಳಲ್ಲೂ ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯನಾದ ನಾನು   ಪ್ರವಾಸ ಮಾಡುತ್ತಿದ್ದೇನೆ.

ಇಂಡಿಯಾ @ 100 ಅಂಗವಾಗಿ, ನವ ಕರ್ನಾಟಕ ವಿಷನ್ ಡಾಕ್ಯುಮೆಂಟ್ -2047 ವಿಶ್ಲೇಷಣೆ ಮಾಡಲು, ಸಿದ್ಧಪಡಿಸಲು, ನಾಲೇಡ್ಜ್ ಬ್ಯಾಂಕ್-2047 ಸ್ಥಾಪಿಸಲು, ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ ಕೈಪಿಡಿ ಹಂಚಿಕೊಂಡು ಜನ ಜಾಗೃತಿ ಮೂಡಿಸಲಾಗುತ್ತದೆ.

 ಕೆಳಕಂಡ 10 ವಿಷಯಗಳ ಬಗ್ಗೆ, ತುಮಕೂರು ನಗರ ಗ್ರಂಥಾಲಯದಲ್ಲಿ ಚರ್ಚೆ, ಉಪನ್ಯಾಸ, ಸಂವಾದ ನಡೆಸಿ, ಕೇಂದ್ರ ಸಚಿವರಾದ ಶ್ರೀ ಎ.ನಾರಾಯಣಸ್ವಾಮಿರವರ ಅಧ್ಯಕ್ಷತೆಯ, ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಯಲ್ಲಿ ಇಟ್ಟು ನಿರ್ಣಯ ಮಾಡಿ, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು  ಉದ್ದೇಶಿಸಲಾಗಿದೆ.

ಈ ಸಂಭಂದ ತುಮಕೂರು ಜಿಲ್ಲೆಯ, ಸಂಸದರ, ಎಲ್ಲಾ 11 ವಿಧಾನಸಭಾ ಸದಸ್ಯರು, ಎಲ್ಲಾ ವಿಧಾನ ಪರಿಷತ್ ಸದಸ್ಯರು, ಸಂಘಸಂಸ್ಥೆಗಳು, ರಾಜಕೀಯ ಪಕ್ಷಗಳು, ಧಾರ್ಮಿಕ ಮುಖಂಡರು, ಶಿಕ್ಷಣ ಸಂಸ್ಥೆಗಳ, ವಿಶ್ವ ವಿದ್ಯಾನಿಲಯಗಳಲ್ಲಿ, ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ ಕೈಪಿಡಿಯಲ್ಲಿ ನೀಡಿರುವಂತ ಎಲ್ಲಾ ಸಲಹೆಗಳ ಜಾರಿಗೆ ಇರುವ ಸಾಧಕ-ಭಾದಕಗಳ ಅಧ್ಯಯನ ವರದಿ ಬಗ್ಗೆಯೂ ವಿಶೇಷ ಗಮನ ಹರಿಸಲಾಗುವುದು.

  ಈ 10 ವಿಷಯಗಳ ವರದಿ ಸಂಗ್ರಹಿಸುವ ವೇಳೆಗೆ, ತುಮಕೂರು ನಗರ ಗ್ರಂಥಾಲಯ, ತುಮಕೂರು ಜಿಲ್ಲೆಯ ಎಲ್ಲಾ ನಗರಗಳ ಗ್ರಂಥಾಲಯ, ಗ್ರಾಮಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಂಥಾಲಯಗಳನ್ನು ವಿಶ್ವದಲ್ಲಿಯೇ ನಂಬರ್ 1 ಮಾಡಲು, ರೂಪುರೇಷೆಯನ್ನು ಅಂತಿಮಗೊಳಿಸಿ, ಜಾರಿಗೆ ನಿರಂತರವಾಗಿ ಶ್ರಮಿಸಲು ಶಕ್ತಿಪೀಠ ಫೌಂಡೇಷನ್ ನಿರ್ಣಯ ಮಾಡಿದೆ.

ದಿನಾಂಕ:30.08.2023 ರಿಂದ ಈ ಸಂಭಂದ ಪೂರ್ವ ಭಾವಿ ಚರ್ಚೆಗಳು ಆರಂಭವಾಗಲಿವೆ. ಇಂದು ತುಮಕೂರು ನಗರ ಗ್ರಂಥಾಲಯಕ್ಕೆ ಭೇಟಿ ನೀಡಲಾಗುವುದು. ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರೊಂದಿಗೂ ಸಮಾಲೋಚನೆ ಮಾಡಲಾಗುವುದು.

  1. 2047 ಕ್ಕೆ ವಿಶ್ವಗುರು ಭಾರತ – ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಯವರು.
  2. ಏಷ್ಯಾದಲ್ಲಿಯೇ ಕರ್ನಾಟಕ ರಾಜ್ಯ ನಂಬರ್-1 –ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು.
  3. ಬ್ರ್ಯಾಂಡ್ ಬೆಂಗಳೂರು ಮತ್ತು ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ – ಉಪಮುಖ್ಯ ಮಂತ್ರಿಯವರಾದ ಶ್ರೀ ಡಿ.ಕೆ.ಶಿವಕುಮಾರ್‍ರವರು.
  4. ಡ್ರಗ್ಸ್ ಮುಕ್ತ ಕರ್ನಾಟಕ ರಾಜ್ಯ- ಗೃಹಸಚಿವರಾದ ಶ್ರೀ ಡಾ.ಜಿ.ಪರಮೇಶ್ವರ್‍ರವರು.
  5. ದೆಹಲಿಯಲ್ಲಿ ಸ್ಪರ್ಧಾತ್ಮಕ ಹಾಸ್ಟೆಲ್ – ಸಹಕಾರ ಸಚಿವರಾದ ಶ್ರೀ ಕೆ.ಎನ್.ರಾಜಣ್ಣನವರು.
  6. ಊರಿಗೊಂದು ಪುಸ್ತಕ, ಊರಿಗೊಂದು ಥೀಮ್ ಪಾರ್ಕ್/ ಪವಿತ್ರವನ, ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು. ತುಮಕೂರು ಡಾಟಾ ಜಿಲ್ಲೆ , ತುಮಕೂರು ಜಿಲ್ಲಾ ದಿಶಾ ಭಾರತದಲ್ಲಿಯೇ ನಂಬರ್ 1- ತುಮಕೂರು ಲೋಕ¸ಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‍ರವರು.
  7. ತುಮಕೂರು ನಗರ ವಿಧಾನಸಭಾ ಕ್ಷೇತ್ರ ಭಾರತದಲ್ಲಿಯೇ ನಂಬರ್ 1 – ತುಮಕೂರು ನಗರ ವಿಧಾನಸಭಾ ಸದಸ್ಯರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್‍ರವರು.
  8. ಇಂಡಿಯಾ @ 100 ಅಂಗವಾಗಿ, ನವ ಕರ್ನಾಟಕ ವಿಷನ್ ಡಾಕ್ಯುಮೆಂಟ್ -2047 ವಿಶ್ಲೇಷಣೆ ಮಾಡಲು, ಸಿದ್ಧಪಡಿಸಲು, ನಾಲೇಡ್ಜ್ ಬ್ಯಾಂಕ್-2047 ಸ್ಥಾಪಿಸಲು ಪಕ್ಕಾ ರೂಪರೇಷೆ ಸಿದ್ಧಪಡಿಸೋಣ- ಉನ್ನತ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಾದ ಶ್ರೀ ಎಸ್.ಆರ್.ಉಮಾಶಂಕರ್‍ರವರು.
  9. ತುಮಕೂರು ಜಿಲ್ಲೆ ಸಮಗ್ರ ಅಭಿವೃದ್ಧಿ ನನ್ನ ಗುರಿ- ಜಿಲ್ಲಾಧಿಕಾರಿಯವರಾದ ಶ್ರೀ ಶ್ರೀನಿವಾಸ್
  10. ತುಮಕೂರು ನಗರ ಗ್ರಂಥಾಲಯ ವಿಶ್ವದಲ್ಲಿಯೇ ನಂಬರ್-1 – ತುಮಕೂರು ಸ್ಮಾರ್ಟ್ ಸಿಟಿ ಎಂ.ಡಿ. ಶ್ರೀ ರಂಗಸ್ವಾಮಿರವರು.

ಇದೇ ರೀತಿ ಎಲ್ಲಾ ಸಚಿವರ, ಅಧಿಕಾರಿಗಳ ಅಭಿಪ್ರಾಯಗಳ ಬಗ್ಗೆ ಇತರೆ ಜಿಲ್ಲೆಗಳಲ್ಲಿಯೂ ಸಭೆಗಳು ಆರಂಭವಾಗಲಿವೆ.

ಆಸಕ್ತರು ಕೈಜೋಡಿಸಬಹುದು.