TUMAKURU:SHAKTHIPEETA FOUNDATION
ತುಮಕೂರು ನಗರದ, ಜಯನಗರ ಪೂರ್ವದ, ಒಂದನೇ ಮುಖ್ಯ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿರುವ, ಪಾರ್ವತಿ ನಿಲಯದಲ್ಲಿ ದಿನಾಂಕ:15.10.2023 ರಂದು ಬ್ರಾಹ್ಮಿ ಲಗ್ನದಲ್ಲಿ ‘ವಿಶ್ವಗುರು-2047-ನಾಲೇಡ್ಜ್ಬ್ಯಾಂಕ್’ ಪ್ರಾರಂಭೊತ್ಸವ ಮಾಡಲು ಉದ್ದೇಶಿಸಲಾಗಿದೆ.
ಭಾರತ ದೇಶ 2047 ರ ವೇಳಗೆ ‘ವಿಶ್ವ ಗುರು’ ಆಗಬೇಕು. ಕರ್ನಾಟಕ ರಾಜ್ಯ ‘ಏಷ್ಯಾದಲ್ಲಿಯೇ ನಂಬರ್ ಒನ್’ ಆಗಬೇಕು. ಈ ಬಗ್ಗೆ ಅಭಿವೃದ್ಧಿ ವಿಷಯ ತಜ್ಞರ ಜ್ಞಾನಗಳನ್ನು ಸಂಗ್ರಹ ಮಾಡುವುದೇ ಪ್ರಮುಖ ಉದ್ದೇಶ.
ಯಾವುದೇ ಹಣಕಾಸು ವ್ಯವಹಾರ ಇರುವುದಿಲ್ಲ. ನೊಂದಾವಣೆ ಇರುವುದಿಲ್ಲ, ‘ಭಾರತ @ 100 ಸ್ವಾತಂತ್ರ್ಯ ಸೇನೆ(ಬಿ.ಎಸ್.ಎಸ್)’ ಅಡಿಯಲ್ಲಿ ಅಭಿವೃದ್ಧಿ ಜ್ಞಾನಿಗಳ ಸಂಗಮವಾಲಿದೆ. ಶಕ್ತಿಪೀಠ ಫೌಂಡೇಷನ್ ಸಂಪೂರ್ಣ ಹೊಣೆಗಾರಿಕೆ ನಿರ್ವಹಿಸಲಿದೆ.
‘ಪಾರ್ವತಿ ನಿಲಯ’ದ ನೂತನ ಕಟ್ಟಡದ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ, ‘ಶಕ್ತಿ ಭವನ’ ದ ವಿವಿಧ ಕಾಮಗಾರಿ ನಿರ್ವಹಣೆ ಮಾಡುವವರು, ಕಾಲಮಿತಿಯಲ್ಲಿ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ.
ದಿನಾಂಕ:15.10.2023 ರಿಂದ ದಿನಾಂಕ:15.10.2047 ರವರೆಗೆ 24 ವರ್ಷಗಳ ಕಾಲ, ಪ್ರತಿ ತಿಂಗಳ ಖರ್ಚು ವೆಚ್ಚಗಳನ್ನು ಇ-ಪೇಪರ್ ಶಕ್ತಿಪೀಠದಲ್ಲಿ ಪ್ರಕಟಿಸಲಾಗುವುದು. ಅದೇ ರೀತಿ ಪ್ರತಿಯೊಂದು ಅಭಿವೃದ್ಧಿ ಅನುಸರಣೆಯ ವಿಧಾನಗಳನ್ನು ಇ-ಪೇಪರ್ ಶಕ್ತಿಪೀಠದಲ್ಲಿ ಪ್ರಕಟಿಸಲಾಗುವುದು.
ಜ್ಞಾನದಾನಿಗಳ ಹೆಸರುಗಳನ್ನು ಬರೆಯಲು, ಭಾವಚಿತ್ರ ಪ್ರಕಟಿಸಲು ಒಪ್ಪಿಗೆ ನೀಡಿದವರ ವಿವರ ಪ್ರಕಟಿಸಲಾಗುವುದು. ಹೆಸರು ಗೌಪ್ಯವಾಗಿಡಲು ಬಯಸಿದವರ ಹೆಸರು, ಭಾವಚಿತ್ರವನ್ನು ಪ್ರಕಟಣೆ ಮಾಡುವುದಿಲ್ಲ.
ಈ ಬಗ್ಗೆ ಜ್ಞಾನಿಗಳ ಸಲಹೆ ಪಡೆದು ರೂಪುರೇಷೆ ನಿರ್ಧರಿಸಲಾಗುವುದು. ಆಸಕ್ತರು ಕೈಜೋಡಿಸಲು ಮನವಿ ಮಾಡಲಾಗಿದೆ.
ನೀರಿನ ಟ್ಯಾಂಕ್- ಜಲಪೀಠ