23rd December 2024
Share

ಕುಂದರನಹಳ್ಳಿ ರಮೇಶ್ ರವರ ಸೋಶಿಯಲ್ ಮಿಡಿಯಾಗಳನ್ನು ಇನ್ನೂ ಮುಂದೆ, ಒಂದು ವರ್ಷಗಳ ಕಾಲ ಆಗೋಚರ ಶಕ್ತಿ ನಾಮಾಂಕಿತದಲ್ಲಿ ನಿರ್ವಹಣೆ ಮಾಡಲು ಎಂ.ಓ.ಯು ಮಾಡಿಕೊಳ್ಳಲಾಗಿದೆ.

ಇದೂವರೆಗಿದ್ದ ಅವರ ಶೈಲಿಯನ್ನು ಬದಾಯಿಸಲಾಗಿದೆ. ಇದೂವರೆಗೂ ಅವರು ಮಾಡಿರುವ ವಾಟ್ಸ್ ಅಪ್ ಗ್ರೂಪ್ ಗಳು ಮತ್ತು ಇದೂವರೆಗೂ ಅವರು ಇರುವ ವಾಟ್ಸ್ ಅಪ್ ಗ್ರೂಪ್ ಗಳಿಗೆ ಹಾಗೂ ವೈಯಕ್ತಿಕವಾಗಿ ಯಾರಿಗೂ ಬರಹಗಳನ್ನು ಪೋಸ್ಟ್ ಮಾಡದೇ ಇರಲು ನಿರ್ಧರಿಸಲಾಗಿದೆ.

ಆಸಕ್ತರು ವೆಬ್ ಸೈಟ್, ಸ್ಟೇಟಸ್ ಹಾಗೂ ಇತರೆ ಸೋಶಿಯಲ್ ಮೀಡಿಯಾಗಳಲ್ಲಿ ನೋಡಬಹುದಾಗಿದೆ. ಒಂದೆರಡು ವಾರದಲ್ಲಿ ಎಲ್ಲಾ ಬದಲಾವಣೆಗಳು ಜಾರಿಗೆ ಬರಲಿವೆ.

ಸಾಪ್ಟ್ ವೇರ್ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡು, ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ ಕರಡು ಪ್ರತಿಯಲ್ಲಿನ ಎಲ್ಲಾ ಅಂಶಗಳನ್ನು ಹಾಗೂ ತುಮಕೂರು ರೀಸರ್ಚ್ ಫೌಂಡೇಷನ್-2047 ಪರಿಕಲ್ಪನೆಯ ಪ್ರಸ್ತಾವನೆಗಳು ಸೇರಿದಂತೆ, ಎಲ್ಲಾ ಮಾಹಿತಿಗಳನ್ನು, ಡಿಜಿಟಲ್ ಮಾಡಲು ಮುಂದಾಗಿರುವುದರಿಂದ ಹಾಗೂ ಶಕ್ತಿಪೀಠ ಫೌಂಡೇಷನ್ ಸರ್ಕಾರಗಳÀ ಯೋಜನೆಗಳ ಭಾಗವಾಗಲು ಪ್ರಯತ್ನಿಸುತ್ತಿರುವದರಿಂದ ಅವರು ಯಾವುದೇ ಸ್ಟೇಟಸ್ ಹಾಕುವುದಿಲ್ಲಾ. ಅವರ  ಎಲ್ಲಾ ಯೋಜನೆಗಳ ಪ್ರಗತಿಯ ವಿಶ್ಲೇಷಣೆ ಬಗ್ಗೆ ಮಾತ್ರ ವರದಿ ಮಾಡಲಾಗುವುದು. 

ತುಮಕೂರಿನಲ್ಲಿ ನಾಲೇಡ್ಜ್ ಬ್ಯಾಂಕ್-2047 ಹಾಗೂ ಡಾಟಾ ಮಿತ್ರ-2047 ಅನ್ನು ಶಕ್ತಿಪೀಠ ಗೋಪುರದಲ್ಲಿ ಧ್ಯಾನ ಮಾಡುವ ಮೂಲಕ ಅಧಿಕೃತಕವಾಗಿ ಚಾಲನೆ ನೀಡಲಾಗಿದೆ. ಕಟ್ಟಡದ ಕಾಮಗಾರಿಗಳು ಪೂರ್ಣಗೊಂಡಿಲ್ಲವಾದ್ದರಿಂದ ಯಾವುದೇ, ನಾಮಫಲಕ ಹಾಕದೇ, ಅಬ್ಬರ ಆಡಂಭರ ಮಾಡದೇ, ಇರುವ ಸ್ಥಿತಿಯಲ್ಲಿಯೇ ಚಟುವಟಿಕೆ ಆರಂಭಿಸಲಿದ್ದಾರೆ.

ಹೊಗೆ ಸಿಟಿ ದೆಹಲಿಯ ಬಗ್ಗೆ ಅಧ್ಯಯನ ಮತ್ತು ಸಂಶೋಧನೆಗೆ ಪೂರಕವಾಗಿರುವ ಮಾಪನಗಳನ್ನು, ಶಕ್ತಿ ಭವನ ಕಟ್ಟಡದ ಎತ್ತರ ಪ್ರದೇಶದಲ್ಲಿ ನೀರಿನ ಸಿಂಟೆಕ್ಸ್ ಬಳಿ ಸ್ಥಾಪಿಸಿ, ತುಮಕೂರು ಮಹಾನಗರ ಪಾಲಿಕೆಯ ಗಡಿಯಿಂದ, ಸುತ್ತಲೂ 10 ಕೀಮೀ ಸುತ್ತಳತೆಯ ಪ್ರದೇಶದಲ್ಲಿ ಗಮನಿಸಲು, ದೆಹಲಿಯ ಒಂದು ಸ್ಟಾಟ್ ಅಫ್ ಕಂಪನಿ ಮುಂದಾಗಿದೆ. ಅದಕ್ಕೆ ಸರ್ಕಾರದ ಹಂತದಲ್ಲಿ ಪ್ರಸ್ತಾವನೆಯ ಅನುಮತಿಗಾಗಿ ಶ್ರಮಿಸುತ್ತಿದ್ದಾರೆ.

  1. ಶಕ್ತಿಪೀಠ ಅಡಿಯಲ್ಲಿ, ತುಮಕೂರು ಶಕ್ತಿ ಭವನದಲ್ಲಿ ವಿವಿಧ ಸಂಸ್ಥೆಗಳ ಆಡಳಿತ ಕಚೇರಿ ಮತ್ತು ಶಕ್ತಿಪೀಠ ಮ್ಯೂಸಿಯಂ
  2. ಕುಂದರನಹಳ್ಳಿ ಹೆಚ್.ಎ.ಎಲ್ ಮ್ಯೂಸಿಯಂ.
  3. ಅಭಿವೃದ್ಧಿ ಪೀಠ ಅಡಿಯಲ್ಲಿ, ವಸಂತಾನರಸಾಪುರ ಕೈಗಾರಿಕಾ ಕಾರಿಡಾರ್‍ನಲ್ಲಿ ಶಕ್ತಿಪೀಠ ಡಾಟಾ ಪಾರ್ಕ್ ಹಾಗೂ ನಿರುದ್ಯೋಗಿ ಮ್ಯೂಸಿಯಂ.
  4. ಜಲ ಪೀಠ ಅಡಿಯಲ್ಲಿ, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೋಕು, ಬಗ್ಗನಡು ಶಕ್ತಿಪೀಠ ಕ್ಯಾಂಪಸ್‍ನಲ್ಲಿ ವಾಣಿ ವಿಲಾಸ ಗ್ರೀನ್ ಕಾರಿಡಾರ್, ಜಲಗ್ರಂಥ ಮತ್ತು ವಾಟರ್ ಮ್ಯೂಸಿಯಂ.
  5. ಅಭಿವೃದ್ಧಿ ಪೀಠ ಅಡಿಯಲ್ಲಿ, ಬೆಂಗಳೂರು ನಗರದ ಗೆಸ್ಟ್ ಹೌಸ್‍ನಲ್ಲಿ ಬ್ರ್ಯಾಂಡ್ ಬೆಂಗಳೂರು ಮ್ಯೂಸಿಯಂ.
  6. ಅಭಿವೃದ್ಧಿ ಪೀಠ ಅಡಿಯಲ್ಲಿ, ದೆಹಲಿ ಗೆಸ್ಟ್ ಹೌಸ್‍ನಲ್ಲಿ. ಹೊಗೆ ಸಿಟಿ ದೆಹಲಿಯ ಮ್ಯೂಸಿಯಂ
  7. ಅಭಿವೃದ್ಧಿ ಪೀಠ ಅಡಿಯಲ್ಲಿ, ದೆಹಲಿಯಲ್ಲಿ ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಪರೀಕ್ಷೆಗಳ ಹಾಸ್ಟೆಲ್ ಮತ್ತು 224 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೇಂದ್ರ ಸರ್ಕಾರದ ಅಭಿವೃದ್ಧಿ   ಯೋಜನೆಗಳ ಮ್ಯೂಸಿಯಂ ಮತ್ತು ಕೇಂದ್ರ ಸರ್ಕಾರದ ದಿಶಾ ಮ್ಯೂಸಿಯಂ.
  8. ಪ್ರವಾಸಿ ಪೀಠ ಅಡಿಯಲ್ಲಿ, ಹಾಸನ ಜಿಲ್ಲೆಯ ಸಕಲೇಶ ಪುರ ತಾಲ್ಲೋಕಿನಲ್ಲಿ ಪಶ್ಚಿಮ ಘಟ್ಟಗಳ ಮ್ಯೂಸಿಯಂ.
  9. ತುಮಕೂರು ರೀಸರ್ಚ್ ಫೌಂಡೇಷನ್-2047 ಅಡಿಯಲ್ಲಿ ವಿವಿಧ ಯೋಜನೆಗಳ

ಪ್ರಸ್ತಾವನೆಗಳ ಅಧ್ಯಯನ ಮತ್ತು ಸಂಶೋಧನೆಗಳನ್ನು ಆರಂಭಿಸಲು ಪೂರಕ ವ್ಯವಸ್ಥೆಗೆ ವಿವಿಧ ಸಂಸ್ಥೆಗಳ ಜೊತೆ ಎಂ.ಓ.ಯು ಮಾಡಿಕೊಳ್ಳುವ ಯೋಜನೆ ಪ್ರಗತಿಯಲ್ಲಿದೆ.

ಡಿಸೆಂಬರ್-2023 ರೊಳಗೆ ಮೇಲ್ಕಂಡ ಎಲ್ಲಾ ಯೋಜನೆಗಳ ಕಡತಗಳ ಅನುಸರಣೆಗಾಗಿ ಲೈಸನಿಂಗ್ ಟೀಮ್ ನೇಮಿಸಲು ಶ್ರಮಿಸುತ್ತಿದ್ದಾರೆ.

ಆಸಕ್ತರು ಸಂಪರ್ಕಿಸ ಬಹುದಾಗಿದೆ.

      ಆಗೋಚರ ಶಕ್ತಿ.