TUMAKURU:SHAKTHIPEETA FOUNDATION
ತುಮಕೂರು ಜಿಲ್ಲೆಯಲ್ಲಿ ಇರುವ, 3 ಲೋಕಸಭಾ ಕ್ಷೇತ್ರಗಳ, 11 ವಿಧಾನಸಭಾ ಕ್ಷೇತ್ರಗಳ, 330 ಗ್ರಾಮ ಪಂಚಾಯಿತಿ ಮತ್ತು 11 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ 2735 ಗ್ರಾಮಗಳು ಮತ್ತು 253 ವಾರ್ಡ್‍ಗಳ 300 ಕ್ಕೂ ಹೆಚ್ಚು ಬಡಾವಣೆಗಳ, ಊರಿಗೊಂದು ಪುಸ್ತಕ/ಬಡಾವಣೆಗೊಂದು ಪುಸ್ತಕ/ವಿಷನ್ ಡಾಕ್ಯುಮೆಂಟ್-2047 ರ ಸಿದ್ಧತೆ ಭರದಿಂದ ಸಾಗಿದೆ.
ತುಮಕೂರು ವಿಶ್ವ ವಿದ್ಯಾನಿಲಯದಲ್ಲಿ, ಸ್ಥಾಪಿಸಿರುವ ತುಮಕೂರು ರೀಸರ್ಚ್ ಫೌಂಡೇಷನ್-2047 ರ ಮೂಲಕ, ಜಿಲ್ಲಾದ್ಯಾಂತ ಶಕ್ತಿಪೀಠ ಫೌಂಡೇಷನ್ ಒಂದು ಸಮೀಕ್ಷೆ ನಡೆಸಿದೆ. ಬಹುತೇಕ 2000 ಗ್ರಾಮಗಳಲ್ಲಿ ಸಮೀಕ್ಷೆ ಪೂರ್ಣಗೊಂಡಿದ್ದು, 1403 ಗ್ರಾಮಗಳಿಗೆ ತಗಲುವ ವೆಚ್ಚವನ್ನು ದಾನ ಮಾಡುವುದಾಗಿ ವಿವಿಧ ವರ್ಗದ ಜನತೆ ಕುಂದರನಹಳ್ಳಿ ರಮೇಶ್ ರವರಿಗೆ ಆಶ್ವಾಸನೆ ನೀಡಿದ್ದಾರೆ.
ತುಮಕೂರು ರೀಸರ್ಚ್ ಫೌಂಡೇಷನ್-2047 ಗೆ, ತುಮಕೂರು ವಿಶ್ವ ವಿದ್ಯಾನಿಲಯದಲ್ಲಿ ಒಂದು ರೂಪಾಯಿಯನ್ನು ಖರ್ಚು ಮಾಡಿಸದೇ, ವಿದ್ಯಾರ್ಥಿಶಕ್ತಿ ಹಾಗೂ ಮ್ಯಾನ್ ಪವರ್ ಮಾತ್ರ ಬಳಸಿಕೊಂಡು ಶಕ್ತಿಪೀಠ ಫೌಂಡೇಷನ್ ಕೇಂದ್ರ, ರಾಜ್ಯ ಸರ್ಕಾರ, ಸಿ.ಎಸ್.ಆರ್ ಮತ್ತು ದಾನಿಗಳ ಮೂಲಕ ಸಂಪೂರ್ಣ ವೆಚ್ಚ ಮಂಜೂರು ಮಾಡಿಸಲು ಶ್ರಮಿಸುತ್ತಿದೆ.
ಅಗತ್ಯವಿದ್ದಲ್ಲಿ, ತುಮಕೂರು ರೀಸರ್ಚ್ ಫೌಂಡೇಷನ್-2047 ಆಡಳಿತ ಕಚೇರಿಯನ್ನು ಸಹ ಶಕ್ತಿಪೀಠ ಫೌಂಡೇಷನ್ ಕಚೇರಿಯಲ್ಲಿ ನಡೆಸಲು ಉತ್ಸುಕವಾಗಿzಯಂತೆÉ.
- ಆಡಳಿತಾತ್ಮಕÀ ವೆಚ್ಚ.
- ಸಾಪ್ಟ್ ವೇರ್ ವೆಚ್ಚ.
- ವಿವಿಧ ಇಲಾಖೆಗಳ ಡಾಟಾ ಸಂಗ್ರಹ ಮತ್ತು ಅನಾಲೀಸಿಸ್ ವೆಚ್ಚ.
- ಡಾಟಾ ಮಿತ್ರ ಭತ್ಯೆ.
- ವಿದ್ಯಾರ್ಥಿಗಳಿಗೆ ಇಂಟರ್ನ್ ಷಿಪ್ ಭತ್ಯೆ.
- ವಿವಿಧ ಸರ್ಟಿಫಿಕೆಟ್ ವೆಚ್ಚ.
- ನಾಲೇಡ್ಜ್ ಬ್ಯಾಂಕ್-2047 ನ ಜ್ಞಾನದಾನಿಗಳ ಭತ್ಯೆ.
- ಯೂ ಟ್ಯೂಬ್ ವೆಚ್ಚ.
- ಇತರೆ ಕಣ್ಣಿಗೆ ಕಾಣದ ವೆಚ್ಚ
ಹೀಗೆ 9 ವಿಧವಾದ ವೆಚ್ಚಗಳನ್ನು ನಿಗದಿಗೊಳಿಸಿ, ಪಿಪಿಪಿ ಮಾದರಿಯಲ್ಲಿ, ಸರ್ಕಾರದಿಂದ ಅನುಮೋದನೆ ಪಡೆಯುವುದು ಸೂಕ್ತವಾಗಿದೆ. ಊರಿಗೊಂದು ಪುಸ್ತಕ/ಬಡಾವಣೆಗೊಂದು ಪುಸ್ತಕ/ವಿಷನ್ ಡಾಕ್ಯುಮೆಂಟ್-2047 ಸ್ಟೂಡೆಂಟ್ ಮಾಡೆಲ್‍ನಲ್ಲಿಯೇ ದಾನಿಗಳ ಮಾಹಿತಿ ಸಂಗ್ರಹ ಮಾಡಲು ಉದ್ದೇಶಿಸಿದ್ದಾರೆ.
ಕುಂದರನಹಳ್ಳಿ ರಮೇಶ್ ರವರು, ಯಾವುದೇ ಗ್ರಾಮಕ್ಕೆ ಭೇಟಿ ನೀಡಿದಾಗ ಮತ್ತು ಕರೆ ಮಾಡಿದಾಗ ವಿವಿಧ ವರ್ಗದ ಜನತೆ, ಕಳೆದ 30 ವರ್ಷಗಳಿಂದ, ನಿಮ್ಮ ಹೆಸರು ಕೇಳಿದ್ದೆವು, ಆದರೇ ನಿಮ್ಮನ್ನು ನೋಡಿರಲಿಲ್ಲ, ಖಂಡಿತಾ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ, ನಾವೂ ನಿಮ್ಮೊಂದಿಗೆ ಕೈಜೋಡಿಸುತ್ತೇವೆ ಎಂದು ಬಹುತೇಕ ಜನರು ಭರವಸೆ ನೀಡಿದ್ದಾರಂತೆ.
– ಅಗೋಚರ ಶಕ್ತಿ