22nd December 2024
Share

TUMKURU:SHAKTHIPEETA FOUNDATION

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಡವರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸುತ್ತಿವೆ. ತುಮಕೂರು ದಿಶಾ ಸಮಿತಿಯಲ್ಲಿ, ಈ ಪಟ್ಟಿಯನ್ನು ನೀಡಿದ್ದಾರೆ.

ಈ ಪಟ್ಟಿಯಲ್ಲಿರುವ ಸಾಮಾಜಿಕ ಭಧ್ರತೆಗಳ ಜೊತೆಗೆ, ಗ್ಯಾರಂಟಿ, ಭಾಗ್ಯಗಳು, ಯಾವುದೇ ಇಲಾಖೆ, ಒಂದು ಕುಟುಂಬಕ್ಕೆ, ಒಬ್ಬ ವ್ಯಕ್ತಿಗೆ, ಏನೇನು ನೀಡುತ್ತಿವೆ. ಯಾವ ಕಾಲದಲ್ಲಿ ಯಾವ ಯೋಜನೆ ಜಾರಿಯಾಗಿವೆ, ಜಾರಿಯಾದ ಯೋಜನೆ ಯಾವಾಗ ರದ್ದಾಗಿದೆ ಅಥವಾ ಕನ್ವರ್ಜೆನ್ಸ್ ಆಗಿದೆ ಅಥವಾ ಹೊಸ ಹೆಸರಿನೊಂದಿಗೆ ಮುಂದುವರೆದಿದೆ. ಎಂಬ ಮಾಹಿತಿ ದೇಶದ ಪ್ರತಿಯೊಬ್ಬರಿಗೂ, ಪ್ರತಿಕುಂಬಕ್ಕೂ ಅರಿವು ಇರಬೇಕು.

ಇದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಅವರಿಗೆ ಒಳ್ಳೆಯ ಅಭಿಪ್ರಾಯ ಮೂಡಲಿದೆ. ನಮಗಾಗಿ ಸರ್ಕಾರಗಳು ಇಷ್ಟು ಮಾಡುವಾಗ, ನಾವು ಸರ್ಕಾರಕ್ಕೆ ಏನು ಮಾಡಬೇಕು ಎಂಬ ಅರಿವು ಬರಲಿದೆ.

 ಬಾಣಂತಿಯರಿಗೆ, ಶಿಶುಗಳಿಗೆ, ಮಕ್ಕಳಿಗೆ, ವಿದ್ಯಾರ್ಥಿಗಳಿಗೆ, ಪ್ರೌಢರಿಗೆ, ವಯಸ್ಕರಿಗೆ, ಹಿರಿಯರಿಗೆ, ಅಂಗವಿಕಲರಿಗೆ, ಅಪೌಷ್ಠಿಕ ಮಕ್ಕಳಿಗೆ,ಮಹಿಳೆಯರಿಗೆ, ವಿವಿಧ ವರ್ಗದ ಕಾರ್ಮಿಕರಿಗೆ, ಕುಶಲಕರ್ಮಿಗಳಿಗೆ, ನಿರುದ್ಯೋಗಿಗಳಿಗೆ, ರೈತರಿಗೆ ಹೀಗೆ ಪ್ರತಿಯೊಂದು ವರ್ಗಕ್ಕೂ, ಒಂದೊಂದು ಇಲಾಖೆಯಲ್ಲಿ ಯೋಜನೆಗಳಿವೆ. ಅದೆಷ್ಟೋ ಯೋಜನೆಗಳ ಮಾಹಿತಿ, ಚುನಾಯಿತ ಜನಪ್ರತಿನಿಧಿಗಳಿಗೂ ಇಲ್ಲ.

ಅರ್ಹದವರಾದರಿಗೆ, ಯಾರಿಗೆ ಯಾವ ಸೌಲಭ್ಯ ಸಿಕ್ಕಿಲ್ಲ, ಅವುಗಳನ್ನು ನೀಡಲು ಸಹ ಅನೂಕೂಲ ವಾಗಲಿದೆ. ಇವೆಲ್ಲಾ ಸಾಮಾಜಿಕ ನ್ಯಾಯದ ಮೆಟ್ಟಿಲು ಅಲ್ಲವೇ?

ಕುಂದರನಹಳ್ಳಿ ರಮೇಶ್ ರವರು ದಿಶಾ ಸಮಿತಿಯಲ್ಲಿ ಒಂದು ಕೇಳಿದ್ದ ಪ್ರಶ್ನೆ ತುಮಕೂರು ಜಿಲ್ಲೆಯಲ್ಲಿ ಪ್ರತಿ ಗ್ರಾಮವಾರು ಎಷ್ಟು ಕುಟುಂಬಗಳಿವೆ, ಗ್ರಾಮವಾರು ಎಷ್ಟು ಕುಟುಂಬಕ್ಕೆ, ಯಾವ, ಯಾವ ಮಾದರಿ ರೇರ್ಷ್ ಕಾರ್ಡ್ ಕೊಟ್ಟೀದ್ದೀರಿ, ಎಷ್ಟು ಮನೆಯವರಿಗೆ ಯಾವುದೇ ಕಾರ್ಡ್ ಕೊಟ್ಟಿಲ್ಲ. ಕುಟುಂಬವಾರು, ಗ್ರಾಮವಾರು, ಗ್ರಾಮಪಂಚಾಯಿತಿವಾರು, ವಾರ್ಡ್‍ವಾರು, ಬಡವಾಣೆವಾರು, ರಸ್ತೆವಾರು, ಜನಸಂಖ್ಯೆಯೊಂದಿಗೆ, ಅಂತ್ಯೋದಯ ಯೋಜನೆ ಸಹಿತ, ಮಾಹಿತಿ ನೀಡಿ ಎಂದರೆ ಇದೂವರೆಗೂ ಉತ್ತರ ಇಲ್ಲ.

ಎಲ್ಲರೂ ಸಂವಿಧಾನದ ಬಗ್ಗೆ ಭಾಷಣ ಬೀಗಿಯುತ್ತೇವೆ. ಡಾ.ಅಂಬೇಡ್ಕರ್ ರವರ ಬಗ್ಗೆ ಮಾತನಾಡುತ್ತೇವೆ. ಅದರೇ ಅವರು ಬರೆದ ಗ್ರಂಥದ ಪಾಲನೆ ಬಗ್ಗೆ ಏಕೆ ನಿಖರವಾದ ಮಾಡುತ್ತಿಲ್ಲ.

2047 ರೊಳಗೆ ಭಾರತ ವಿಶ್ವ ಗುರು ಆಗಬೇಕಾದರೆ, ಕರ್ನಾಟಕ ರಾಜ್ಯ ಏಷ್ಯಾದಲ್ಲಿಯೇ ನಂಬರ್ ಆಗಬೇಕಾದರೆ, ಇದು ಆಗತ್ಯವಲ್ಲವೇ?

ನಮ್ಮ ವಿದ್ಯಾರ್ಥಿಗಳು, ಊರಿಗೊಂದು / ಬಡಾವಣೆಗೊಂದು ಪುಸ್ತಕ/ ವಿಷನ್ ಡಾಕ್ಯುಮೆಂಟ್-2047 ನಲ್ಲಿ, ಇಲಾಖಾವಾರು ಮಾಹಿತಿ ವಿಶ್ಲೇಷಣೆ ಮಾಡಿ, ಅರ್ಹರನ್ನು ಹುಡುಕಿ, ಮನೆ ಬಾಗಿಲಿಗೆ ತಲುಪಿಸಲು ಅಧಿಕಾರಿಗಳಿಗೆ ಮಾಹಿತಿ ನೀಡುತ್ತಾರೆ.

ಇದು ದೇವರ ಕೆಲಸವಲ್ಲವೇ ? ಇಂಟರ್ನ್ ಷಿಪ್ ಎಂದರೆ, ಪ್ರಾಜೆಕ್ಟ್ ವರ್ಕ್ ಎಂದರೆ, ಪಿ.ಹೆಚ್.ಡಿ. ಎಂದರೆ ಬರೀ ಕಟ್ ಅಂಡ್ ಪೇಸ್ಟ್ ವರದಿ ಆಗಬೇಕೆ. ನೈಜ ಅಧ್ಯಯನಗಳು ಆಗಬಾರದೇ?  

– -ಅಗೋಚರ ಶಕ್ತಿ