21st November 2024
Share

TUMAKURU:SHAKTHIPEETA FOUNDATION

ಕುಂದರನಹಳ್ಳಿ ರಮೇಶ್  ಮನಸ್ಸಿಗೆ ನೆಮ್ಮದಿ ಮತ್ತು ಗೊಂದಲ ಎರಡು ಏಕಕಾಲದಲ್ಲಿ ಆರಂಭವಾಗಿದೆ. ಅಭಿವೃದ್ಧಿ ರೆವೂಲ್ಯೂಷನ್ ಫೋರಂ ದಿನಾಂಕ:10.11.2017 ರಲ್ಲಿ ಬಿಡುಗಡೆ ಮಾಡಿದ್ದ ವಿಷನ್ ಡಾಕ್ಯುಮೆಂಟ್-2025 ರ ಮತ್ತು ದಿನಾಂಕ:29.06.2023 ರಂದು ಬಿಡುಗಡೆ ಮಾಡಿದ್ದ ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ ಕರಡು ಪ್ರತಿಯಲ್ಲಿನ ಅಂಶಗಳ ಸಾರವೇ ವಿಕ್ಷಿತ್ @ ಭಾರತ.

ವಿಕಾಸ್, ವಿಕಾಸ, ವಿಕ್ಷಿತ್  ಅಂದರೆ ಅಭಿವೃದ್ಧಿ, ನೋಡಿ ಕುಂದರನಹಳ್ಳಿ ರಮೇಶ್ ದಿನಾಂಕ:04.05.2001 ರಂದು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಸ್ಥಾಪನೆ ಮಾಡಿ, ತುಮಕೂರು ನಗರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಾ ಬಂದಿದ್ದಾರೆ.

ದಿನಾಂಕ:10.11.2017 ರಿಂದ ಶಕ್ತಿಪೀಠ ಫೌಂಡೇಷನ್ ಮೂಲಕ ರಾಜ್ಯ ಮತ್ತು ದೇಶದ ವ್ಯಾಪ್ತಿಗೆ ವಿಸ್ತರಣೆ ಮಾಡಲಾಗಿದೆ.

ಈಗ ದೇಶದ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ವಿಕ್ಷಿತ್ ಭಾರತ್ @ 2047 ಘೋಷಣೆ ಮಾಡುವ ಮೂಲಕ, ಕುಂದರನಹಳ್ಳಿ ರಮೇಶ್ ರವರ 35 ವರ್ಷಗಳಿಂದ ನಡೆಸುತ್ತಾ ಬಂದಿದ್ದ ಅಭಿವೃದ್ಧಿ ಪರ ಹೋರಾಟಕ್ಕೆ ಆತ್ಮ ಸ್ಥೈರ್ಯ ಹೆಚ್ಚಿಸಿದೆ. ಪ್ರಧಾನಿಯವರ ಹೆಜ್ಜೆ ನಿಜಕ್ಕೂ ಹೆಮ್ಮೆ ತಂದಿದೆ.

ದಿನಾಂಕ:22.03.2023 ರಂದು ರಾಜ್ಯ ಸರ್ಕಾರದ ಯೋಜನಾ ಇಲಾಖೆಯ ಜೊತೆ ಎಂ.ಓ.ಯು ಮಾಡಿಕೊಂಡು, ನಿರಂತರವಾಗಿ ಶ್ರಮಿಸುತ್ತಾ ಬಂದಿದ್ದಾರೆ.

ಕರ್ನಾಟಕ ರಾಜ್ಯದ ಎಲ್ಲಾ ವಿಶ್ವ ವಿದ್ಯಾನಿಲಯಗಳಿಗೆ ಶಕ್ತಿಪೀಠ ಫೌಂಡೇಷನ್ ಮನವಿ ಮೇರೆಗೆ, ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರ ಶಿಪಾರಸ್ಸು ಮೇರೆಗೆ, ನಾಲೇಡ್ಜ್ ಬ್ಯಾಂಕ್@ 2047 ಮಾಡಲು ರಾಜ್ಯ ಸರ್ಕಾರದ ಯೋಜನಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಾದ ಶ್ರೀಮತಿ ಶಾಲಿನಿ ರಜನೀಶ್ ರವರು ಪತ್ರ ಬರೆದ ಹಿನ್ನಲೆಯಲ್ಲಿ, ಶಿಕ್ಷಣ ಇಲಾಖೆಯ ಅಪರಮುಖ್ಯ ಕಾರ್ಯದರ್ಶಿಯವರಾದ ಶ್ರೀ ಉಮಾಶಂಕರ್ ರವರು ರಾಜ್ಯದ ಎಲ್ಲಾ ವಿಶ್ವ ವಿದ್ಯಾನಿಯಗಳಿಗೆ ಪತ್ರ ಬರೆದಿದ್ದರು.

ಕಳೆದ ಒಂದು ವರ್ಷದಿಂದ ಕುಂದರನಹಳ್ಳಿ ರಮೇಶ್ ರವರು ಆನೇಕ ವಿಶ್ವ ವಿದ್ಯಾಲಯಗಳಲ್ಲಿ, ಶಾಲಾ ಕಾಲೇಜುಗಳಲ್ಲಿ, ಈ ಬಗ್ಗೆ ಉಪನ್ಯಾಸ ಮಾಡುತ್ತಾ ಬಂದಿದ್ದಾರೆ. ತುಮಕೂರು ವಿಶ್ವ ವಿದ್ಯಾನಿಲಯದ ಜೊತೆ ಒಡಂಬಡಿಕೆ ಮಾಡಿಕೊಳ್ಳಲು ಮನವಿ ಮಾಡಿದ, ತಕ್ಷಣವೇ ತುಮಕೂರು ವಿಶ್ವ ವಿದ್ಯಾನಿಲಯ ಮತ್ತು ಶಕ್ತಿಪೀಠ ಫೌಂಡೇಷನ್ ಸಂಯುಕ್ತವಾಗಿ ದಿನಾಂಕ:02.10.2023 ರಂದು  ತುಮಕೂರು ರೀಸರ್ಚ್ ಫೌಂಡೇಷನ್-2047 ಉದ್ಘಾಟನೆ ಮಾಡಿಕೊಂಡು, ಮೌನವಾಗಿ ಕಾರ್ಯ ಚಟುವಟಿಕೆ ಆರಂಭಿಸಿದೆ.

ಈಗ ಕೇಂದ್ರ ಸರ್ಕಾರದ ವೀಕ್ಷಿತ್ ಭಾರತ @ 2047 ಅಥವಾ ರಾಜ್ಯ ಸರ್ಕಾರ ಈಗಾಗಲೇ ಆರಂಭಿಸಲು ಉದ್ದೇಶಿರುವ ನಾಲೇಡ್ಜ್ ಬ್ಯಾಂಕ್ @ 2047 ಅಥವಾ ಅಭಿವೃದ್ಧಿ ಕರ್ನಾಟಕ @ 2047 ಎಂಬ ಗೊಂದಲ ಕುಂದರನಹಳ್ಳಿ ರಮೇಶ್ ರವರಿಗೆ ಶುರುವಾಗಿದೆಯಂತೆ.

ಪ್ರಧಾನಿಯವರ ಪರಿಕಲ್ಪನೆ ದೇಶದ 1113 ವಿಶ್ವ ವಿದ್ಯಾನಿಲಯ ಮತ್ತು ಸಮಾನಾಂತರ ಶಿಕ್ಷಣ ಸಂಸ್ಥೆಗಳ ಮೂಲಕ 43796 ಕಾಲೇಜುಗಳು ಮತ್ತು 11296 ಶಿಕಣ ಸಂಸ್ಥೆಗಳ 4.33 ಕೋಟಿ ವಿದ್ಯಾರ್ಥಿಗಳ ಮನಸ್ಸು ತಟ್ಟಿರುವುದು ನಿಜಕ್ಕೂ ದಿಟ್ಟ ನಿರ್ಧಾರ.

ತುಮಕೂರು ಜಿಲ್ಲೆ ಫೈಲಟ್ ಯೋಜನೆಗೆ 3241 ಅಂಗನವಾಡಿ, 1938 ಕಿರಿಯ ಪ್ರಾಥಮಿಕ ಶಾಲೆ,1171 ಹಿರಿಯ ಪ್ರಾಥಮಿಕ ಶಾಲೆ,201 ಪ್ರೌಢಶಾಲೆ, 94 ವಿಶ್ವ ವಿದ್ಯಾನಿಲಯದ ಕಾಲೇಜುಗಳು, 8 ಇಂಜಿನಿಯರಿಂಗ್ ಕಾಲೇಜುಗಳು, 3 ಮೆಡಿಕಲ್ ಕಾಲೇಜುಗಳು ಮತ್ತು ಇತರೆ ಎಲ್ಲಾ ಶಾಲಾ ಕಾಲೇಜುಗಳ  ಲಕ್ಷಾಂತರ ವಿದ್ಯಾರ್ಥಿಗಳ ಮನಸ್ಸು ಗೆಲ್ಲಲು ತುಮಕೂರು ರೀಸರ್ಚ್ ಫೌಂಡೇಷನ್-2047 ‘ಡಾಟಾಮಿತ್ರ @ 2047’ ಮೂಲಕ ಅಧ್ಯಯನ ಆರಂಭಿಸಿದೆ.

ಶ್ರೀ ಜಿ.ಎಸ್.ಬಸವರಾಜ್ ರವರ ಅಧ್ಯಕ್ಷತೆಯ ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಯಲ್ಲಿ, ಈ ಎಲ್ಲಾ ಅಂಶಗಳ ಬಗ್ಗೆ ನಿರ್ಣಯ ಮಾಡಿದ್ದ, ದಿಶಾ ಸಮಿತಿ ಸದಸ್ಯ ಕಾರ್ಯದರ್ಶಿಯಾಗಿದ್ದ ಶ್ರೀಮತಿ ಶುಭ ಕಲ್ಯಾಣ್ ರವರು, ತುಮಕೂರು ಜಿ.ಐ.ಎಸ್ ಪೋರ್ಟಲ್ ಮತ್ತು ತುಮಕೂರು ಎಂಪಿ ಪೋರ್ಟಲ್ ಮಾಡುವ ಮೂಲಕ ಗುರುತರವಾದ ಹೆಜ್ಜೆ ಇಟ್ಟಿದ್ದರು.

ಈಗ ಶ್ರೀಮತಿ ಶುಭ ಕಲ್ಯಾಣ್ ರವರು, ತುಮಕೂರು ಜಿಲ್ಲಾಧಿಕಾರಿಯಾಗಿ ಬಂದಿರುವುದು, ನಿಜಕ್ಕೂ ಹೆಮ್ಮೆಯ ವಿಚಾರ. 2001 ರಿಂದ ಈವರೆಗೂ ತುಮಕೂರು ಜಿಲ್ಲಾಧಿಕಾರಿ ಸೇರಿದಂತೆ, ಯಾವುದೇ ಪ್ರಮುಖ ಹುದ್ದೆಯಲ್ಲಿ ಇರುವ ನೂರಾರು ಅಧಿಕಾರಿಗಳ ಸಹಾಯ ಹೇಳ ತೀರದು.

ದಿನಾಂಕ:16.12.2023 ರಂದು ರಾಜ್ಯದ ಹಿರಿಯ ಉನ್ನತ ಅಧಿಕಾರಿಯವರ ಜೊತೆ ಸಮಾಲೋಚನೆ ನಡೆಸುವ ಮೂಲಕ, ಮುಂದಿನ ರೂಪುರೇಷೆ ಬಗ್ಗೆ ವಿಶೇಷ ಗಮನ ಹರಿಸಿದ್ದಾರೆ.

ತಮ್ಮ ಸಲಹೆಗೆ ಮುಕ್ತ ಆಹ್ವಾನ.

–      ಆಗೋಚರ ಶಕ್ತಿ