22nd December 2024
Share

TUMAKURU:SHAKTHIPEETA FOUNDATION

ಊರಿಗೊಂದು ಪುಸ್ತಕ/ಬಡಾವಣೆಗೊಂದು ಪುಸ್ತಕ ಅಂದರೆ, ನಿಮ್ಮ ಊರಿನ/ಬಡಾವಣೆಯ ವಿಷನ್ ಡಾಕ್ಯುಮೆಂಟ್ @ 2047

  ತಾವೂ ಈ ಪುಣ್ಯದ ಕಾರ್ಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳಲು, ತುಮಕೂರು ವಿಶ್ವ ವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳಿಗೆ ಇಂಟರ್ನ್ ಶಿಪ್ ಪ್ರೋಗ್ರಾಂ’ ಆಗಿ ಘೋಶಿಸಿ, ದಿನಾಂಕ:02.10.2023 ರಂದು ತುಮಕೂರು ವಿಶ್ವ ವಿದ್ಯಾನಿಲಯ ಮತ್ತು ಶಕ್ತಿಪೀಠ ಫೌಂಡೇಷನ್ ಸಹಭಾಗಿತ್ವದಲ್ಲಿ ತುಮಕೂರು ರೀಸರ್ಚ್ ಫೌಂಡೇಷನ್-2047’ ಸ್ಥಾಪಿಸುವ ಮೂಲಕ ತುಮಕೂರು ವಿಶ್ವ ವಿದ್ಯಾನಿಲಯದ ಕುಲಪತಿಗಳಾದ ಶ್ರೀ ಎಂ.ವೆಂಕಟೇಶ್ವರಲುರವರು ಮತ್ತು ವಿಶ್ವ ವಿದ್ಯಾನಿಲಯದ ಪ್ಯಾಕಲ್ಟಿ, ನೌಕರರ ಸುಮಾರು 1000 ಜನರ ತಂಡ ಹಾಗೂ ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಹೃದಯ ಪೂರ್ವಕ ಧನ್ಯವಾದಗಳು.

ಹಿನ್ನಲೆ:

ದಿನಾಂಕ:21.09.2019 ರಂದು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಅಧ್ಯಕ್ಷತೆಯ ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಯ ಸದಸ್ಯನಾಗಿ ಕುಂದರನಹಳ್ಳಿ ರಮೇಶ್ ನೇಮಕವಾಗಿದೆ.

ದಿನಾಂಕ: 24.09.2020 ರಂದು ಕೇಂದ್ರ ಮತ್ತು ಕೇಂದ್ರ ಪುರಸ್ಕøತ ಯೋಜನೆಗಳ ಉಸ್ತುವಾರಿಗಾಗಿ ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ಇರುವ ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯನಾಗಿ ಕುಂದರನಹಳ್ಳಿ ರಮೇಶ್ ಆದೇಶ ಪಡೆಯಲಾಗಿದೆ.

ದಿನಾಂಕ: 17.12.2021 ರಂದು ಕೆಳಕಂಡ ಮೂರು ವಿಚಾರಗಳ ಅಧ್ಯಯನ ಮಾಡಲು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದಿಂದ ಕುಂದರನಹಳ್ಳಿ ರಮೇಶ್ ಮತ್ತು ಚಿ.ಕೆ.ಆರ್.ಸೋಹನ್ ರವರಿಗೆ ಅನುಮತಿ ಪತ್ರ ಮತ್ತು ಗುರುತಿನ ಚೀಟಿ ನೀಡಲು ಆದೇಶ ಪಡೆಯಲಾಗಿದೆ.

  1. ಕೇಂದ್ರ ಸರ್ಕಾರದ ಅನುದಾನದಲ್ಲಿ ರಾಜ್ಯದ 31 ಜಿಲ್ಲೆಗಳಿಗೂ ಸಾಮಾಜಿಕ ನ್ಯಾಯ
  2. ಹೊರದೇಶದ ಹೂಡಿಕೆಗಳಲ್ಲಿ ರಾಜ್ಯದ 31 ಜಿಲ್ಲೆಗಳಿಗೂ ಸಾಮಾಜಿಕ ನ್ಯಾಯ
  3. ತುಮಕೂರು ಜಿಲ್ಲಾ ದಿಶಾ ಮಾನಿಟರಿಂಗ್ ಸೆಲ್

ದಿನಾಂಕ: 29.12.2021 ರಂದು ರಾಜ್ಯ ಮಟ್ಟದಲ್ಲಿ ಕೇಂದ್ರ ಪುರಸ್ಕøತ ಯೋಜನೆಗಳ ದತ್ತಾಂಶ ಸಂಗ್ರಹಣೆ, ವಿಶ್ಲೇಷಣೆ ಮತ್ತು ರಿಯಲ್ ಟೈಮ್ ಮಾನಿಟರಿಂಗ್ ಕುರಿತು ಅಧ್ಯಯನ ಮಾಡಲು ಎಲ್ಲಾ ಇಲಾಖೆಗಳು ದತ್ತಾಂಶ ನೀಡಲು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದಿಂದ ಕುಂದರನಹಳ್ಳಿ ರಮೇಶ್ ಮತ್ತು ಚಿ.ಕೆ.ಆರ್.ಸೋಹನ್ ರವರಿಗೆ ಅನುಮತಿ ಪತ್ರ ಮತ್ತು ಗುರುತಿನ ಚೀಟಿ ವಿತರಣೆ ಮಾಡಲು ಆದೇಶವಾಗಿದೆ.

ದಿನಾಂಕ: 22.03.2022 ರಂದು ವಿಶ್ವ ಜಲದಿನಾಚರಣೆ ದಿವಸ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದೊಂದಿಗೆ ಎಂ.ಓ.ಯು ಮಾಡಿಕೊಳ್ಳಲಾಗಿದೆ.

 Title of thc study: Analysis of Flow of Funds undcr Ccntral Scctor Schemcs and Stratcgics to gct morc rcsourccs from thc Ccntral Govt.  ಪೈಲಟ್ ಆಗಿ ಜಲಶಕ್ತಿ ಸಚಿವಾಲಯದ ಯೋಜನೆಗಳ ಬಗ್ಗೆ ವರದಿ ಸಿದ್ಧಪಡಿಸಲು ಎಂ.ಓ.ಯು ಮಾಡಿಕೊಳ್ಳಲಾಗಿದೆ.

ದಿನಾಂಕ: 31.03.2022 ರಂದು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದಲ್ಲಿ ಶಕ್ತಿಪೀಠ ಫೌಂಡೇಷನ್ ಎಂಪ್ಯಾನಲ್ ಮೆಂಟ್ ಕಮಿಟಿ 16 ನೇ ಸಭೆ ನಡವಳಿಕೆ ಮೂಲಕ ಎಂಪ್ಯಾನಲ್ ಮಾಡಿಕೊಳ್ಳಲಾಗಿದೆ.

ದಿನಾಂಕ: 29.06.2022 ರಂದು Title of thc study: Analysis of Flow of Funds undcr Ccntral Scctor Schemcs and Stratcgics to gct morc rcsourccs from thc Ccntral Govt.    ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದೊಂದಿಗೆ ತಿದ್ದುಪಡಿ  ಎಂ.ಓ.ಯು ಮಾಡಿಕೊಳ್ಳಲಾಗಿದೆ.

ದಿನಾಂಕ:29.06.2023 ರಂದು ಕರ್ನಾಟಕ ರಾಜ್ಯವು ಕೇಂದ್ರ ಸರ್ಕಾರದಿಂದ ಹೆಚ್ಚಿಗೆ ಅನುದಾನ ಪಡೆಯುವ ಕಾರ್ಯತಂತ್ರದ ಮಧ್ಯಂತರ ವರದಿಯ ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ’ ಡ್ರಾಪ್ಟ್ ಅನ್ನು ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರಿಗೆ ಮತ್ತು ಉಪಮುಖ್ಯಮಂತ್ರಿಯವರಾದ ಶ್ರೀ ಡಿ.ಕೆ.ಶಿವಕುಮಾರ್ ರವರಿಗೆ ಸಲ್ಲಿಸಲಾಗಿದೆ. ಅಂತಿಮ ವರದಿಯನ್ನು, ಇವರ ಮೂಲಕ ದೇಶದ ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಯವರಿಗೆ ಸಲ್ಲಿಸಸುವ ಆಲೋಚನೆ ಇದೆ.

ಈ ವರದಿಯಲ್ಲಿನ ಒಂದು ಪ್ರಮುಖ ಅಂಶವೇ ‘ಊರಿಗೊಂದು ಪುಸ್ತಕ/ಬಡಾವಣೆಗೊಂದು ಪುಸ್ತಕ ಅಂದರೆ, ನಿಮ್ಮ ಊರಿನ/ಬಡಾವಣೆಯ ವಿಷನ್ ಡಾಕ್ಯುಮೆಂಟ್ @ 2047’ ಇದೊಂದು ಸಮುದ್ರವಿದ್ದಂತೆ, ಅಂತಿಮ ವರದಿಯ ಪಾಲುದಾರರು ತಾವೆಲ್ಲಾ ಎಂಬ ಅಂಶವನ್ನು ತಮ್ಮ ಅಧ್ಯಗಮಕ್ಕೆ ತರಬಯಸುತ್ತೇನೆ.

ಕರ್ನಾಟಕ ರಾಜ್ಯ, ಕೇಂದ್ರ ಸರ್ಕಾರದಿಂದ ಹೆಚ್ಚಿಗೆ ಅನುದಾನ ಪಡೆದ ರಾಜ್ಯವಾಗಬೇಕು, ರಾಜ್ಯದ 31 ಜಿಲ್ಲೆಗಳ, 224 ವಿಧಾನಸಭಾ ವ್ಯಾಪ್ತಿಯ ಪ್ರತಿಯೊಂದು ಗ್ರಾಮ/ಬಡಾವಣೆಗೂ  ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ ದೊರಕಬೇಕು. ತುಮಕೂರು ಜಿಲ್ಲೆ ಪೈಲಟ್ ಯೋಜನೆಯಾಗಿ ಜಾರಿಯಾಗ ಬೇಕು. ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಯ ಸುಮಾರು 19 ಸಭೆಗಳಲ್ಲಿ, ಕೈಗೊಂಡಿರುವ ಪ್ರತಿಯೊಂದು ಅಂಶಗಳೂ ಸಹ ಪ್ರಾಮಾಣಿಕವಾಗಿ ಜಾರಿಯಾಗಬೇಕು.

 ಮಾನ್ಯ ಮುಖ್ಯಮಂತ್ರಿಯವರ ಅಧ್ಯಕ್ಷತೆಯ ಕರ್ನಾಟಕ ರಾಜ್ಯ ಮಟ್ಟದ ದಿಶಾ ಸಮಿತಿ ಹಾಗೂ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ದೇಶದಲ್ಲಿಯೇ ಮಾದರಿಯಾಗ ಬೇಕು. ಎಂಬ ದೂರದೃಷ್ಟಿಯಿಂದ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯೊಂದಿಗೆ ಹಾಗೂ ಮಾದರಿಯಾಗಿ/ಪೈಲಟ್ ಯೋಜನೆಯಾಗಿ ಜಲಶಕ್ತಿ ಸಚಿವಾಲಯದ ಯೋಜನೆಗಳ ಅಧ್ಯಯನವನ್ನು ಈಗಾಗಲೇ ಆರಂಬಿಸಲಾಗಿದೆ. ಜೊತೆಗೆ ಕೇಂದ್ರ ಸರ್ಕಾರದ ಅನುದಾನಗಳ ಬಗ್ಗೆಯೂ, ವಿವಿಧ ಇಲಾಖೆಗಳೊಂದಿಗೆ ನಿಕಟ ಸಂಪರ್ಕ ಹೊಂದಲಾಗಿದೆ ಎಂದು ತಿಳಿಸಲು ಹರ್ಷಿಸುತ್ತೇನೆ.

ತಾವೂಗಳು ಕೈಜೋಡಿಸುತ್ತಿರುವ, ಈ ಸಮಯದಲ್ಲಿ ಕೇಂದ್ರ ಸರ್ಕಾರವೂ ವಿಕಸಿತ ಭಾರತ @ 2047’ ಅಡಿಯಲ್ಲಿ ತಮ್ಮಗಳ ಐಡಿಯಾ ಮತ್ತು ರಾಜ್ಯ ಸರ್ಕಾರ ನಾಲೇಡ್ಜ್ ಬ್ಯಾಂಕ್@ 2047’  ಗೆ ವಿಶ್ವ ವಿದ್ಯಾನಿಲಯಗಳ ಅಭಿಪ್ರಾಯ ಕೇಳಿರುವ ಈ ಸಂದರ್ಭ ಸಮಯೋಚಿತವಲ್ಲವೇ?

ತುಮಕೂರು ಜಿಲ್ಲೆಯ 2734 ಗ್ರಾಮಗಳು ಮತ್ತು ಹೊಸದಾಗಿ ಘೋಷಣೆಯಾಗುತ್ತಿರುವ ಸುಮಾರು 519 ಗ್ರಾಮಗಳು ಹಾಗೂ 11 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ 253 ವಾರ್ಡ್ ಗಳಲ್ಲಿನ ಸುಮಾರು 300 ಕ್ಕೂ ಹೆಚ್ಚು ಬಡಾವಣೆಗಳ ವಿಷನ್ ಡಾಕ್ಯುಮೆಂಟ್@2047 ಸಿದ್ಧಪಡಿಸುತ್ತಿರುವ ತಮಗೆ, ಮಾನ್ಯ ಪ್ರಧಾನಿಯವರಿಂದ ಮತ್ತು ಮಾನ್ಯ ಮುಖ್ಯಮಂತ್ರಿಯವರಿಂದ ‘ಅಭಿನಂದನಾ ಪತ್ರ’ವನ್ನು ಕೊಡಿಸಲು ಚಿಂತನೆ ನಡೆಸಲಾಗಿದೆ.

‘ಅತ್ಯುತ್ತಮವಾದ ವಿಷನ್ ಡಾಕ್ಯುಮೆಂಟ್@2047 ಸಿದ್ಧಪಡಿಸುವ ವಿದ್ಯಾರ್ಥಿ/ವಿದ್ಯಾನಿಯರ ತಂಡಕ್ಕೆ ಒಂದು ಲಕ್ಷ ಪ್ರಥಮ ಬಹುಮಾನ, 75 ಸಾವಿರ ದ್ವಿತೀಯ ಬಹುಮಾನ ಮತ್ತು ರೂ 50 ಸಾವಿರ ತೃತೀಯ ಬಹುಮಾನ ನೀಡಿ ಗೌರವಿಸಲಾಗುವುದು’.

ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ’ ವರದಿಯಲ್ಲಿನ ಪ್ರತಿಯೊಂದು ಅಂಶಗಳಿಗೂ, ಸಲಹೆ ನೀಡಲು ಹೃದಯಪೂರ್ವಕ ಮನವಿ.

ಡಾಟಾಮಿತ್ರ@ 2047’ ಅಪ್ಲಿಕೇಷನ್ ಅಭಿವೃದ್ಧಿಯಲ್ಲಿ ಒಂದು ಹೊಸ ಮುನ್ನಡಿ ಬರೆಯಲಿದೆ. ಶಕ್ತಿಪೀಠ ಫೌಂಡೇಷನ್ ಜೊತೆ ಎಂ.ಓ.ಯು ಮಾಡಿಕೊಂಡು ಶ್ರಮಿಸುತ್ತಿರುವ ಸಂಸ್ಥೆಗಳಿಗೂ ಹಾಗೂ ಯಾವುದೇ ಪ್ರತಿಫಲವಿಲ್ಲದೆ ಸಹಕರಸುತ್ತಿರುವ ಪ್ರತಿಯೊಬ್ಬ ಜ್ಞಾನಿಗಳಿಗೂ ಧನ್ಯವಾದಗಳು.

                                                                                       ಕುಂದರನಹಳ್ಳಿ ರಮೆಶ್ .