24th April 2024
Share

TUMAKURU:SHAKTHIPEETA FOUNDATION

ಸ್ಮಾರ್ಟ್ ಸಿಟಿ ಎಂದರೆ ದೊಡ್ಡ, ದೊಡ್ಡ ಯೋಜನೆಗಳಲ್ಲ, ಜನತೆ ನೆಮ್ಮದಿಯಿಂದ ತಮ್ಮ ಕನಸಿನ ಮನೆಯಲ್ಲಿ ಬದುಕು ನಡೆಸುವುದು ಮೂಲ ಮಂತ್ರವಾಗಬೇಕು.

ತುಮಕೂರು ಸ್ಮಾರ್ಟ್ ಸಿಟಿ ವತಿಯಿಂದ ಕಟ್ಟಡದ ಮಾಹಿತಿಯನ್ನು ಡ್ರೋಣ್ ಮೂಲಕ ಸೆರೆ ಹಿಡಿದಿದ್ದಾರೆ. ಈ ಮಾಹಿತಿ ಅನಾಲೀಸಿಸ್ ಮಾಡಿದರೇ, ಬಹುತೇಕ ಶೇ 99 ರಷ್ಟು ಮನೆ ಅಕ್ರಮ, ಅನಧಿಕೃತ, ನಿಯಮ ಬಾಹಿರ, ಒತ್ತುವರಿ, ನಿವೇಶನ ಶಿಪ್ಟ್ ಆಗಿರುವುದು, ಹೀಗೆ ತಲೆ ನೋವು ತರುವಂತಾಗಿದೆ.

ಈ ಸಮಸ್ಯೆ ಶಕ್ತಿಭವನದ ಕಟ್ಟಡವೂ ಸೇರಿದಂತೆ, ದೇಶಾದ್ಯಾಂತ ಶೇ 99 ರಷ್ಟು ಕಟ್ಟಡಕ್ಕೆ ಅನ್ವಯಿಸುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಇದಕ್ಕೆ ಒನ್ ಟೈಮ್ ಸೆಂಟ್ಲ್ ಮೆಂಟ್ ಮೂಲಕ ಎಲ್ಲಾ ಮಾದರಿಯ ತಪ್ಪುಗಳಿಗೆ ಪರಿಹಾರ ನೀಡಲು ಸಾದ್ಯಾವೇ ಎಂಬ ಬಗ್ಗೆ ಒಂದು ಅಧ್ಯಯನ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು ಸೂಕ್ತವಾಗಿದೆ ಎಂಬ ಅಭಿಪ್ರಾಯಕ್ಕೆ ಒಂದು ತಂಡ ಮುಂದೆ ಬಂದಿದೆ.

ಅನುಭವ ಮತ್ತು ಜ್ಞಾನಕ್ಕೆ ಬೆಲೆ ಕಟ್ಟಲು ಸಾದ್ಯಾವಿಲ್ಲ. ಅಗತ್ಯವಿರುವ ಎಲ್ಲಾ ವಿಧವಾದ ಸೇವೆಗಳಿಗೆ ಆಸಕ್ತರ ಎಂಪ್ಯಾನಲ್ ಮಾಡುವ ಮೂಲಕ, ಒಂದು ತಂಡವನ್ನು ಸಿದ್ಧಪಡಿಸುವ ಅಗತ್ಯವಿದೆ. ಆದ್ದರಿಂದ ಈ ಬಗ್ಗೆ ಅನುಭವವಿರುವ ಆಸಕ್ತರು ಸಂಪರ್ಕಿಸಲು ಬಹಿರಂಗ ಮನವಿ.

ಸ್ಟಾಟ್ ಅಫ್ ಕಂಪನಿಯವರು, ಯಾರಾದರೂ ಈ ಬಗ್ಗೆ ಗಮನ ಹರಿಸಿದ್ದಾರೆಯೇ, ಈ ಬಗ್ಗೆ ಯಾರಾದರೂ ಅಧ್ಯಯನ ಮತ್ತು ಸಂಶೋಧನೆ ಮಾಡಿದ್ದಲ್ಲಿ ಮಾಹಿತಿ ನೀಡಲು ಬಹಿರಂಗ ಮನವಿ ಮಾಡಲಾಗಿದೆ.

ಒಂದು ನಿವೇಶನ ಕೊಂಡು ಕೊಂಡು ಸಮಸ್ಯೆಯಲ್ಲಿ ಬಿದ್ದವರಿಂದಲೇ, ಈ ಅಪ್ಲಿಕೇಷನ್ ಮಾಡಿಸುವ ಮೂಲಕ ಕೊನೆ ಪಕ್ಷ, ಅವರ ಸಂಬಂಧಿಕರು ಮತ್ತು ಸ್ನೇಹಿತರು ಮೋಸಹೋಗದಂತೆ ತಡೆಯುವ ಉದ್ದೇಶವಂತೆ. ಅವರ ನಿವೇಶನದ ಸಮಸ್ಯೆ ಪರಿಹಾರಕ್ಕೆ ದಾರಿ ತೋರುವ ಕೆಲಸವನ್ನು ವಿಶ್ವದ 108 ಶಕ್ತಿಪೀಠಗಳ ಮೇಲೆ ಹಾಕಿ, ಅಪ್ಲಿಕೇಷನ್ ಆರಂಭಿಸಲು ಆರ್ಥಿಕ ನೆರವು ನೀಡಲು ಚಿಂತನೆ ನಡೆಸುತ್ತಿದ್ದಾರಂತೆ.

ತುಮಕೂರಿನ ಶಕ್ತಿಭವನ ಕಟ್ಟಡದ ನಿರ್ಮಾಣ ಕುಂದರನಹಳ್ಳಿ ರಮೇಶ್ ರವರಿಗೆ ಹಲವಾರು ಪಾಠ ಕಲಿಸಿದೆ. 2047 ರ ವೇಳೆಗೆ ಕರ್ನಾಟಕ ರಾಜ್ಯ ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ಪಡೆಯುವ ಸ್ಟ್ರಾಟಜಿ ಮತ್ತು ಅನುಷ್ಠಾನಕ್ಕಾಗಿ, ಪಿಪಿಪಿ ಮಾದರಿಯಲ್ಲಿ ರಾಜ್ಯಾಧ್ಯಾಂತ 545 ಅಧ್ಯಯನ ಪೀಠಗಳನ್ನು ಸ್ಥಾಪಿಸಲು ಚಿಂತನೆ ನಡೆದಿದೆ.

ಶಕ್ತಿಭವನ ಕಟ್ಟಡದ ಅನುಭವದ ಮೇರೆಗೆ ಪ್ರಾಪರ್ಟಿ ಜ್ಯೋತಿಷ್ಯ ಎಂಬ ಅಪ್ಲಿಕೇಷನ್ ಮಾಡಿ, ಒಂದು ಕಟ್ಟಡ ನಿರ್ಮಾಣ ಮಾಡುವಾಗ, ಜನತೆ ಎಲ್ಲೆಲ್ಲಿ ಹೇಗೆ ಎಡವುತ್ತಾರೆ, ನಿವೇಶನ ಕೊಂಡುಕೊಳ್ಳುವಾಗ ಯಾವ ತಪ್ಪು ಮಾಡುತ್ತಾರೆ, ಯಾವ ದಾಖಲೆಗಳು ಅಗತ್ಯ, ಜಮೀನು/ನಿವೇಶನದ ಇತಿಹಾಸ, ಡಾಕ್ಯುಮೆಂಟ್, ಆಯ, ವಾಸ್ತು, ಆರ್ಕಿಟೆಕ್ಟ್, ಜ್ಯೋತಿಷ್ಯ, ರಾಜ ಯೋಗ, ಲೈಸೆನ್ಸ್, ವಿವಿಧ ಸ್ಕಿಲ್ ಲೇಬರ್, ಕಟ್ಟಡ ಸಾಮಾಗ್ರಿಗಳು, ಪ್ಲಾನ್, ಲೇ ಔಟ್, ಪಿರಮಿಡ್ ಸೇರಿದಂತೆ ವಿವಿಧ ಬಗೆಯ ಗ್ರೀನ್ ಬಿಲ್ಡಿಂಗ್ ನಿರ್ಮಾಣ, ಹೀಗೆ ಅಗತ್ಯವಿರುವ ಎಲ್ಲಾ ಮಾಹಿತಿಗಳನ್ನು ಅನುಭವಿಗಳ, ಅನುಭವದÀ ಮೇಲೆ ಸಿದ್ಧಪಡಿಸಿರುವ ವರದಿಗಳನ್ನು ಸಂಗ್ರಹ ಮಾಡಲು ಆರಂಭಿಸಲಾಗಿದೆ.

ಶಕ್ತಿಭವನದ ಇನ್ನೂ ಆನೇಕ ಕಾಮಗಾರಿಗಳು ಆಗಬೇಕಿವೆ. ಆಗಿರುವ ತಪ್ಪಿನ ಅರಿವಿನ ಮೇಲೆ, ಮುಂದಿನ ಕಾಮಗಾರಿಗಳ ಗುಣಮಟ್ಟದ ಕಡೆ ಆಧ್ಯತೆ ಕೊಡಬೇಕಿದೆ ‘ಯಾರನ್ನೂ ನಂಬುವ ಹಾಗಿಲ್ಲ, ಎಲ್ಲರನ್ನೂ ನಂಬಲೇ ಬೇಕು’ ಎಂಬ ತತ್ವ ಅನುಸರೀಸಲೇ ಬೇಕಿದೆ.

ಕಮಿಷನ್ ಆಸೆಗೆ ಕಟ್ಟಡದ ಗುಣಮಟ್ಟ ಹಾಳಾಗಲಿದೆ. ಕಡಿಮೆ ಮಾತನಾಡಿ ಕೊಂಡು ನಂತರ, ಪ್ರತಿಯೊಂದಕ್ಕೂ ವಿವಾದ ಮಾಡುವ ಪರಿಸ್ಥಿತಿ ಎಲ್ಲರನ್ನೂ ಕಾಡುತ್ತಿದೆ. ಅಂಗಡಿಯವರು ಒಂದು ವಸ್ತುವಿಗೆ ಕಡಿಮೆ ರೇಟ್ ಹೇಳಿ, ಉಳಿದವುಗಳಿಗೆ ಹೆಚ್ಚಿಗೆ ದರ ಹಾಕುವುದು. ಬಿಲ್ ಹಾಕಿ ಕೆಲವು ಸಾಮಾನುಗಳನ್ನೇ ಕೊಡದೆ ಮದ್ಯ ವರ್ತಿಗಳೊಂದಿಗೆ ಅಡ್ಜೆಸ್ಟ್ ಮಾಡಿಕೊಳ್ಳುವುದು.

ಒಂದು ಕಟ್ಟಡಕ್ಕೆ ಕರಣಿ ಹಿಡಿದವನು, ಮುಂದಿನ ಕಟ್ಟಡದ ಮೇಸ್ತ್ರಿ ಆಗುವುದು. ಸ್ಕಿಲ್ ಲೇಬರ್ ಕೊರತೆ, ಸೆಟ್ ಬ್ಯಾಕ್ ನಿಯಮಕ್ಕೆ ತಿಲಾಂಜಿಲಿ ಹೀಗೆ ಒಂದರ ಮೇಲೆ ಒಂದು ತಪ್ಪು ಮಾಡುತ್ತಾ, ಇಡೀ ವ್ಯವಸ್ಥೆ ಹಾಳಾಗಿದೆ. ಯಾವುದೇ ಮನೆ ಕಟ್ಟಿರುವವರನ್ನು ಕೇಳಿದರೂ ಒಂದಲ್ಲ, ಒಂದು ಸಮಸ್ಯೆ ಹೇಳಿಕೊಂಡು ಗೊಣಗಾಡುತ್ತಾರೆ.

ಕಟ್ಟಡ ನಿರ್ಮಾಣ ಮಾಡಿಸಿಕೊಳ್ಳುವವರೂ ಗುತ್ತಿಗೆದಾರರಿಗೆ, ಕಾರ್ಮಿಕರಿಗೆ ಮೋಸ ಮಾಡುತ್ತಾರಂತೆ. ಎಲ್ಲಾ ಕೆಲಸ ಮುಗಿದ ಮೇಲೂ ಹಣ ಕೊಡಲು ಕುಂಟು ನೆಪ ಹೇಳುತ್ತಾರಂತೆ. ಒಬ್ಬರೂ ಮೋಸ ಮಾಡಿದ ಹಣವನ್ನು ಇನ್ನೊಬ್ಬರಿಂದ ಪಡೆಯುವಾಗ ಇದೆಲ್ಲಾ ಮಾಮೂಲಿ ಎಂಬಂತೆ ಆಗಿದೆಯಂತೆ.

                                                     -ಅಗೋಚರ ಶಕ್ತಿ