TUMAKURU:SHAKTHIPEETA FOUNDATION
ದಿನಾಂಕ:31.01.2024 ರೊಳಗೆ ಶಕ್ತಿಭವನ ಕಟ್ಟಡದ, ಅಂತಿಮ ರೂಪುರೇಷೆಯೊಂದಿಗೆ ಲೋಕಾರ್ಪಣೆಗೆ ಸಜ್ಜುಗೊಳ್ಳಲಿದೆ ಎಂದು ತಿಳಿಸಲು ಹರ್ಷಿಸುತ್ತೇನೆ.
ಕುಂದರನಹಳ್ಳಿ ರಮೇಶ್ ಸ್ವಂತವಾಗಿ, ಯಾವುದೇ ಕಟ್ಟಡ ನಿರ್ಮಾಣ ಮಾಡಬಾರದು, ಸ್ವಂತಕ್ಕೆ ಆಸ್ತಿ ಮಾಡಬಾರದು, ಬೇರೆ ಸಂಸ್ಥೆಗಳಿಗೆ ಕಟ್ಟಡ ನಿರ್ಮಾಣ ಮಾಡಿ, ಆ ಕಟ್ಟಡದಲ್ಲಿಯೇ ಅಭಿವೃದ್ಧಿ ಅಧ್ಯಯನ ಕೇಂದ್ರ, ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ನೀರಾವರಿ ಅಧ್ಯಯನ ಕೇಂದ್ರ ಮತ್ತು ಜಿ.ಎಸ್.ಬಸವರಾಜ್ ರವರ ಹೆಸರಿÀನಲ್ಲಿ ತುಮಕೂರು ಲೋಕಸಭಾ ಕ್ಷೇತ್ರದ ಅಧ್ಯಯನ ಕೇಂದ್ರ ಸ್ಥಾಪಿಸ ಬೇಕೆಂದು, ಅದು ಸಾರ್ವಜನಿಕ ಆಸ್ತಿ ಆಗಿ ಉಳಿಯಬೇಕು ಎಂದು, ಸುಮಾರು 1988 ರಿಂದ ಒಂದಲ್ಲ, ಒಂದು ಕಟ್ಟಡ ನಿರ್ಮಾಣ ಮಾಡಬೇಕು ಎಂಬ 36 ವರ್ಷದ ಆದರೂ ಕುಂದರನಹಳ್ಳಿ ರಮೇಶ್ ಕನಸು ನನಸಲಾಗಲೇ ಇಲ್ಲ.
ಆದರೂ ಛಲ ಬಿಡಲೇ ಇಲ್ಲ. ಈಗ ವಿಶ್ವದ 108 ಶಕ್ತಿದೇವತೆಗಳ ನೇತೃತ್ವದಲ್ಲಿ ಕಟ್ಟಡ ನಿರ್ಮಾಣ ಎಷ್ಟು ಖುಷಿ ಅಲ್ಲವೇ. ಕಾರಣಗಳಿಲ್ಲದೆ ವಿವಾದಗಳು ಸೃಷ್ಠಿಯಾಗುತ್ತಿದ್ದವು. ನಂತರ 2019 ರಲ್ಲಿ, ಎಲ್ಲಾ ಸ್ಥಳಗಳ ಕಟ್ಟಡಗಳ ಬಗ್ಗೆ ಆದ ಅವಮಾನಗಳಿಂದ, ಕುಂದರನಹಳ್ಳಿ ರಮೇಶ್ ಒಂದು ದೃಢ ನಿರ್ಧಾರ ಮಾಡಿ, ಒಂದು ಕಟ್ಟಡ ನಿರ್ಮಾಣ ಮಾಡಬೇಕೆಂದು ಪಣ ತೊಟ್ಟರು. ಅದರ ಫಲವೇ ‘ಶಕ್ತಿಭವನ’.
ಕುಂದರನಹಳ್ಳಿ ರಮೇಶ್ ರವರ ಪ್ರಕಾರ, ಆ ಶಕ್ತಿದೇವತೆಯೇ ಅನಗತ್ಯ ವಿವಾದ ಉಂಟುಮಾಡಿ, ಅವರ ಕುಟುಂಬವೇ ಶಕ್ತಿಭವನ ಕಟ್ಟಡ ನಿರ್ಮಾಣ ಮಾಡಲು ಆಧೇಶ ನೀಡಿರಬಹುದು. ಎಂಬ ಅನಿಸಿಕೆ ಅವರದ್ದಾಗಿದೆ. ನಿಜಕ್ಕೂ ಇದು ಅವರಿÀಗೆ ತೃಪ್ತಿ ತಂದಿದೆಯಂತೆ.
ವಿವಿಧ ಸ್ಥಳಗಳಲ್ಲಿ ಕುಂದರನಹಳ್ಳಿ ರಮೇಶ್ ಕಟ್ಟಡ ನಿರ್ಮಾಣ ಮಾಡಲು ಮಾಡಿದ ಪ್ರಯತ್ನಗಳ ಪಕ್ಷಿನೋಟ.
- ತುಮಕೂರು ಜಿಲ್ಲೆ, ಕುಂದರನಹಳ್ಳಿ ಗ್ರಾಮದ, ಬೇವಿನ ಮರದ ಕೆಳಗಿನ ಕಟ್ಟಡ ನಿರ್ಮಾಣ ಮಾಡಿದ್ದು ವಿವಾದವಾಯಿತು.
- ತುಮಕೂರು ಜಿಲ್ಲೆ, ಕುಂದರನಹಳ್ಳಿ ಗೇಟ್‍ನಲ್ಲಿ ಅಫಿಕ್ಸ್ ಕಟ್ಟಡ ನಿರ್ಮಾಣ ಮಾಡಿದ್ದು ವಿವಾದವಾಯಿತು.
- ತುಮಕೂರು ಜಿಲ್ಲೆ, ಗುಬ್ಬಿ ನಗರದಲ್ಲಿ ಕಟ್ಟಡ ನಿರ್ಮಾಣ ಮಾಡಿದ್ದು ಕೈತಪ್ಪಿತು.
- ತುಮಕೂರು ನಗರದ ಕುಣಿಗಲ್ ರಸ್ತೆಯಲ್ಲಿನ ಸಾಯಿಬಾಬಾ ದೇವಾಲಯದ ಹಿಂಭಾಗದಲ್ಲಿರುವ ಯೋಗಭವನದ ಪಕ್ಕ ಅಪ್ನಾಸ್ ಗೆ 5 ಗುಂಟೆ ಜಮೀನು ಮಂಜೂರು ಮಾಡಿಸಿಕೊಂಡು ಕಟ್ಟಡದ ನಿರ್ಮಾಣ ಸಾಧ್ಯಾವಾಗಲೇ ಇಲ್ಲ.
- ತುಮಕೂರಿನಲ್ಲಿ ಕೇಂದ್ರೀಯ ವಿದ್ಯಾಲಯ ಪೇರೆಂಟ್ಸ್ ವೆಲ್ ಫೇರ್ ಅಸೋಶೀಯೇಷನ್ ವತಿಯಿಂದ ಕಟ್ಟಡ ನಿರ್ಮಾಣ ಪರ- ವಿರೋಧ.
- ತುಮಕೂರು ಜಿಲ್ಲೆ, ತುಮಕೂರು ತಾಲ್ಲೋಕು ಅಜ್ಜಪ್ಪನಹಳ್ಳಿಯಲ್ಲಿ ಕೇಂದ್ರೀಯ ವಿದ್ಯಾಲಯ ಪೇರೆಂಟ್ಸ್ ವೆಲ್ ಫೇರ್ ಅಸೋಶೀಯೇಷನ್ ವತಿಯಿಂದ ಜಮೀನು ಕೊಂಡುಕೊಂಡು, ಕಟ್ಟಡ ನಿರ್ಮಾಣ ಪರ- ವಿರೋಧ.
- ತುಮಕೂರು ಜಿಲ್ಲೆ, ತುಮಕೂರು ತಾಲ್ಲೋಕು ಅಜ್ಜಪ್ಪನಹಳ್ಳಿಯಲ್ಲಿ ಸ್ನೇಹಿತರ ವತಿಯಿಂದ ಕಟ್ಟಡ ನಿರ್ಮಾಣ ಪರ- ವಿರೋಧ.
- ತುಮಕೂರು ಜಿಲ್ಲೆ, ಕುಂದರನಹಳ್ಳಿಯಲ್ಲಿ ಗಂಗಮಲ್ಲಮ್ಮ ದೇವಾಲಯದ ಆವರಣದಲ್ಲಿ ಕಟ್ಟಡ ನಿರ್ಮಾಣ ಪರ- ವಿರೋಧ.
- ತುಮಕೂರು ಜಿಲ್ಲೆ, ಕುಂದರನಹಳ್ಳಿ ತೀರ್ಥರಾಮೇಶ್ವರ ಪತ್ತಿನ ಸಹಕಾರ ಸಂಘದ ಕಟ್ಟಡ ನಿರ್ಮಾಣ ಪರ- ವಿರೋಧ.
- ತುಮಕೂರು ಜಿಲ್ಲೆ, ಕುಂದರನಹಳ್ಳಿಯ ನನ್ನ ಮನೆ, ನಮ್ಮ ತಾಯಿಯ ವಿರೋಧ.
- ಹಾಸನ ಜಿಲ್ಲೆಯ, ಸಕಲೇಶ ಪುರದ, ಜೇಡಿಗದ್ದೆಯಲ್ಲಿ ಜಮೀನು, ಪರ- ವಿರೋಧ. ಈಗಿನ ಮೂಕಾನನ ರೇಸಾರ್ಟ್ ಸ್ಥಳದಲ್ಲಿ.
- ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ, ತೀರ್ಥರಾಮೇಶ್ವರ ದೇವಾಲಯದ ಪಕ್ಕ ಕಟ್ಟಡ ನಿರ್ಮಾಣ ಪರ- ವಿರೋಧ.
- ತುಮಕೂರು ವಿಶ್ವ ವಿದ್ಯಾನಿಲಯದ ಆವರಣದಲ್ಲಿ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ವತಿಯಿಂದ ಕಟ್ಟಡ ನಿರ್ಮಾಣ ಪರ- ವಿರೋಧ.
- ತುಮಕೂರು ನಗರದ ಗಂಗಸಂದ್ರದಲ್ಲಿ, ತುಮಕೂರು ವಿಶ್ವ ವಿದ್ಯಾನಿಲಯದಲ್ಲಿ ಸ್ಥಾಪಿಸಿರುವ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ವತಿಯಿಂದ ಕಟ್ಟಡ ನಿರ್ಮಾಣ ಪರ- ವಿರೋಧ.
- ತುಮಕೂರು ನಗರದ ಕುಣಿಗಲ್ ರಸ್ತೆಯಲ್ಲಿನ ಸಾಯಿಬಾಬಾ ದೇವಾಲಯದ ಬಳಿಯಲ್ಲಿನ ಕಟ್ಟಡದ ಬಳಕೆ ಪರ- ವಿರೋಧ.
- ತುಮಕೂರು ನಗರದ ಕುಣಿಗಲ್ ರಸ್ತೆಯಲ್ಲಿನ ಸಾಯಿಬಾಬಾ ದೇವಾಲಯದ ಹಿಂಭಾಗದಲ್ಲಿರುವ ಯೋಗಭವನದಲ್ಲಿ ಕಟ್ಟಡದ ನಿರ್ಮಾಣ ಪರ- ವಿರೋಧ.
- ತುಮಕೂರು ನಗರದ ಸೋಮೇಶ್ವರ ಪುರಂನಲ್ಲಿ ಶ್ರೀ ಟಿ.ಎಂ.ಕರುಣ್ ರವರ ಕಟ್ಟಡದಲ್ಲಿ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಕೇಂದ್ರ.
- ಬೆಂಗಳೂರಿನ ನಾಗರಭಾವಿಯಲ್ಲಿ ಶ್ರೀ ವೇದಾನಂದಾಮೂರ್ತಿಯವರ ಕಟ್ಟಡದಲ್ಲಿ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಕೇಂದ್ರ.
- ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೋಕು, ಬಗ್ಗನಡು ಕಾವಲ್ ನಲ್ಲಿ ಕಟ್ಟಡ ನಿರ್ಮಾಣ ಗೊಂದಲ/ವಿಳಂಭ.
- ತುಮಕೂರು ಜಿಲ್ಲೆ, ವಸಂತಾನರಸಾಪುರದಲ್ಲಿ ಶಕ್ತಿಪೀಠ ಡಾಟಾ ಪಾರ್ಕ್ ವಿಳಂಭ.
- ತುಮಕೂರು ನಗರದ, ಜಯನಗರ ಪೂರ್ವದ, ಒಂದನೇ ಮುಖ್ಯ ರಸ್ತೆಯಲ್ಲಿದ್ದ, ಕುಂದರನಹಳ್ಳಿ ರಮೇಶ್ ಪತ್ನಿ ಶ್ರೀಮತಿ ಬಿ.ಸುಜಾತಕುಮಾರಿರವರ, ಪಾರ್ವತಿ ನಿಲಯ ಕಟ್ಟಡ, ಸ್ಥಳಾವಕಾಶದ ಅಭಾವ.
- ತುಮಕೂರು ನಗರದ, ಜಯನಗರ ಪೂರ್ವದ, ಒಂದನೇ ಮುಖ್ಯ ರಸ್ತೆಯಲ್ಲಿದ್ದ, ಕುಂದರನಹಳ್ಳಿ ರಮೇಶ್ ಪತ್ನಿ ಶ್ರೀಮತಿ ಬಿ.ಸುಜಾತಕುಮಾರಿರವರ ಅನುಭವದ, ಪಾರ್ವತಿ ನಿಲಯ ಕಟ್ಟಡ ಕೆಡವಿ ಹಾಕಿ, ಈಗ ಶಕ್ತಿಭವನದ ಕಟ್ಟಡ ನಿರ್ಮಾಣ ಮಾಡಿ, 2047 ರವರೆಗೂ ಶಕ್ತಿಪೀಠ ಫೌಂಡೇಷನ್ ಗೆ ಬಾಡಿಗೆ ಪಡೆಯಲಾಗಿದೆ. ಈ ಕಟ್ಟಡದಲ್ಲಿ ಕುಂದರನಹಳ್ಳಿ ರಮೇಶ್ ಕನಸಿನ ಎಲ್ಲಾ ಯೋಜನೆಗಳಿಗೆ ಬಳಸಲು ಉದ್ದೇಶಿಸಿದ್ದಾರೆ.
ಮೇಲ್ಕಂಡ ಎಲ್ಲಾ ಕಟ್ಟಡಗಳ ವಿವಾದಗಳು ಮತ್ತು ಕೈಬಿಟ್ಟ ಬಗ್ಗೆ ಒಂದು ಅಧ್ಯಯನ ವರದಿ ಮತ್ತು ಸ್ಥಳವಾರು 22 ಯೂಟ್ಯೂಬ್ ಎಪಿಸೋಡ್ ಮಾಡುವ ಆಲೋಚನೆ ಇದೆಯಂತೆ.
ಕುಂದರನಹಳ್ಳಿ ರಮೇಶ್ ರವರಿಗೆ, ನಮ್ಮ ಶತ್ರುಗಳಿಗೂ ಬೇಡ ಈ ರೀತಿಯ ಅವಮಾನ ಎನಿಸಿದೆಯಂತೆ.
ಆದರೂ ಕುಂದರನಹಳ್ಳಿ ರಮೇಶ್ ಛಲ ಬಿಡಲೇ ಇಲ್ಲ. ಈಗ ವಿಶ್ವದ 108 ಶಕ್ತಿದೇವತೆಗಳ ನೇತೃತ್ವದಲ್ಲಿ ಕಟ್ಟಡ ನಿರ್ಮಾಣ ಎಷ್ಟು ಖುಷಿ ಅಲ್ಲವೇ.
– ಅಗೋಚರ ಶಕ್ತಿ