22nd December 2024
Share

TUMAKURU:SHAKTHIPEETA FOUNDATION

 ತುಮಕೂರು ವಿಶ್ವ ವಿದ್ಯಾನಿಲಯ ಜಗ ಮೆಚ್ಚುವಂಥ ಕೆಲಸ ಆರಂಭಿಸಿದೆ. ಶಕ್ತಿಪೀಠ ಫೌಂಢೇಷನ್ ಪಣತೊಟ್ಟು ನಿಂತಿದೆ. ಸ್ಟಾರ್ಟ್ ಅಫ್ ಕಂಪನಿ ಆದ್ಯಪ್ರಜ್ಞಾ ಟೆಕ್ನಾಲಾಜಿಸ್ ಡಾಟಾ ವಿಶ್ಲೇಷಣೆ ಫ್ಲಾಟ್ ಫಾರಂ ಸೃಷ್ಠಿಸಿದೆ. ತುಮಕೂರೂ ರೀಸರ್ಚ್ ಫೌಂಡೇಷನ್-2047 ನ ಕೆಲವರು ಹಗಲು ಇರುಳು ಶ್ರಮಿಸುತ್ತಿದ್ದಾರೆ.

 ಊರಿಗೊಂದು/ಬಡಾವಣೆಗೊಂದು ಪುಸ್ತಕ/ವಿಷನ್ ಡಾಕ್ಯುಮೆಂಟ್-2047 ಸಿದ್ಧಪಡಿಸಲು ಇದೂವರೆಗೂ  ಸುಮಾರು 7495 ವಿದ್ಯಾರ್ಥಿಗಳು ನೊಂದವಣೆ ಮಾಡಿಕೊಂಡಿದ್ದಾರೆ.

ಬಹುತೇಕ ವಿದ್ಯಾರ್ಥಿಗಳ ಇ-ಮೇಲ್ ಐಡಿ ಮ್ಯಾಚ್ ಆಗುತ್ತಿಲ್ಲ ಎನ್ನುವುದು ಒಂದು ಯಕ್ಷಪ್ರಶ್ನೆಯಾಗಿದೆ. ವಿಧಾನಸಭಾ ಕ್ಷೇತ್ರವಾರು, ಗ್ರಾಮವಾರು/ಬಡಾವಣೆವಾರು ವಿದ್ಯಾರ್ಥಿಗಳ ಮಾಹಿತಿಯನ್ನು ಟೇಬಲ್‍ನಲ್ಲಿ ನೀಡಲಾಗಿದೆ.

  ಮೊದಲ ಆಧ್ಯತೆ

  1. ತುಮಕೂರು ಜಿಲ್ಲೆಯ ಪ್ರತಿಯೊಂದು ಗ್ರಾಮ/ಬಡಾವಣೆಗೂ ವಿದ್ಯಾರ್ಥಿಗಳ ಹಂಚಿಕೆ.
  2. ತುಮಕೂರು ಜಿಲ್ಲೆಯ ಪ್ರತಿಯೊಂದು ಗ್ರಾಮ/ಬಡಾವಣೆಗೂ ಡಾಟಾಮಿತ್ರ-2047 ನೇಮಕ.
  3. ತುಮಕೂರು ಜಿಲ್ಲೆಯ ಪ್ರತಿಯೊಂದು ಗ್ರಾಮ/ಬಡಾವಣೆಗೂ ವಿಶ್ವ ವಿದ್ಯಾನಿಲಯದ ಫ್ಯಾಕಲ್ಟಿಗಳಿಗೆ ಹೊಣೆಗಾರಿಕೆ.
  4. ತುಮಕೂರು ಜಿಲ್ಲೆಯ ಪ್ರತಿಯೊಂದು ಗ್ರಾಮ/ಬಡಾವಣೆಗೂ ಪುಸ್ತಕ ಸಿದ್ಧಪಡಿಸಲು ಆಸಕ್ತರ ನೇಮಕ.
  5. ತುಮಕೂರು ಜಿಲ್ಲೆಯ ಪ್ರತಿಯೊಂದು ಗ್ರಾಮ/ಬಡಾವಣೆ ವ್ಯಾಪ್ತಿಗೂ ವಿದ್ಯಾರ್ಥಿಗಳ ನೇತೃತ್ವದಲ್ಲಿ ಆಯಾ ವ್ಯಾಪ್ತಿಯ ರೀಸರ್ಚ್ ಫೌಂಡೇಷನ್-2047 ರಚನೆ. ಹಂಚಿಕೆ.
  6. ತುಮಕೂರು ಜಿಲ್ಲೆಯ ಪ್ರತಿಯೊಂದು ಗ್ರಾಮ/ಬಡಾವಣೆ ವ್ಯಾಪ್ತಿಗೂ ನಾಲೇಡ್ಜಬಲ್ ಮತ್ತು ಚುನಾಯಿತ ಜನಪ್ರತಿನಿಧಿಗಳು, ಅಧಿಕಾರಿಗಳು ಸೇರಿದಂತೆ ವಿವಿಧ ವರ್ಗದವರ  ವಿಷನ್ ಗ್ರೂಪ್ ಪಟ್ಟಿ. 
  7. ತುಮಕೂರು ಜಿಲ್ಲೆಯ ಪ್ರತಿಯೊಂದು ಗ್ರಾಮ/ಬಡಾವಣೆ ವ್ಯಾಪ್ತಿಗೂ ಆಸಕ್ತರ ನೇತೃತ್ವದಲ್ಲಿ ಆಯಾ ವ್ಯಾಪ್ತಿಯ ಪ್ರಷರ್ ಗ್ರೂಪ್ ರಚನೆ.
  8. ಡಾಟಾಮಿತ್ರ-2047 ವಾರ್ ರೂಂ ನಂತೆ ಕಾರ್ಯನಿರ್ವಹಿಸಲು, ಎಲ್ಲಾ ಹೈಟೆಕ್ ಮೂಲಭೂತ ಸೌಕರ್ಯಗಳೊಂದಿಗೆ ನಾಲೇಡ್ಬ್ ಬ್ಯಾಂಕ್-2047  ಸ್ಥಾಪನೆ.
  9. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಪ್ರಸ್ತಾವನೆ ಸಲ್ಲಿಸುವ ಮುನ್ನ ಅಭಿಯಾನ. ನಂತರ ವ್ಯವಸ್ಥಿತವಾಗಿ ಕಾರ್ಯಪ್ರವೃತ್ತಿ.

ಆಸಕ್ತರು ಸಹಕರಿಸಬಹುದು.

–      ಆಗೋಚರಶಕ್ತಿ.