TUMAKURU:SHAKTHIPEETA FOUNDATION
ದಿನಾಂಕ:07.01.1997 ರಂದು ತುಮಕೂರಿನ ಪ್ರವಾಸಿ ಮಂದಿರದಲ್ಲಿ ಅಪ್ನಾಸ್ (ಅಭಾವ ಪೀಡೀತ ಪ್ರದೇಶಗಳ ನೀರಾವರಿ ಅಭಿವೃದ್ಧಿ ಸಲಹಾ ಸಮಿತಿ) ಸ್ಥಾಪಿಸಿ, ದಿನಾಂಕ: 07.01.1997 ರಿಂದ 27 ವರ್ಷಗಳ ನಿರಂತರ ನೀರಾವರಿ ಹೋರಾಟಕ್ಕೆ ಚಾಲನೆ ನೀಡಿದ ‘ಶುಭದಿವಸ’.
ಈ ದಿವಸದ ಅಂಗವಾಗಿ ದಿನಾಂಕ:07.01.2024 ರಂದು, ಚಿತ್ರದುರ್ಗ ಜಿಲ್ಲೆಯ, ಹಿರಿಯೂರು ತಾಲ್ಲೋಕಿನ, ಬಗ್ಗನಡು ಕಾವಲ್‍ನ ಶಕ್ತಿಪೀಠ ಕ್ಯಾಂಪಸ್ ನ ‘ಪಂಚವಟಿ’ ಗಿಡಗಳ ಮುಂದೆ, ಕುಂದರನಹಳ್ಳಿ ರಮೇಶ್ ರವರ ತಂಡದ ಆತ್ಮಾವಲೋಕನ.
ಇಲ್ಲಿ ‘ಪಂಚವಟಿ’ ಗಿಡಹಾಕಿ 2 ವರ್ಷಗಳಾಗಿವೆ. ಬನ್ನಿ ಗಿಡ ಒಂದುವರೆ ಅಡಿ ಬೆಳಿದಿದ್ದರೆ, ಉಳಿದ ಗಿಡಗಳು ಒಂದೊಂದು ರೀತಿ ಎತ್ತರಕ್ಕೆ ಬೆಳೆದಿವೆ, ಅರಳಿ ಗಿಡವಂತೂ ಸುಮಾರು 20 ಅಡಿಗಿಂತ ಹೆಚ್ಚು ಬೆಳೆದಿರಬಹುದು.ಇವುಗಳ ಅಳತೆ ಮಾಡುವ ಆಲೋಚನೆ ಕುಂದರನಹಳ್ಳಿ ರಮೇಶ್ ರವರಿಗೆ ಇದೆ.
ಕುಂದರನಹಳ್ಳಿ ರಮೇಶ್ ರವರ ಸಹೋದರರ ಜಮೀನು ಸೇರಿದಂತೆ, ಸುಮಾರು 25 ಎಕರೆಯಲ್ಲಿ, ಸುಮಾರು 3500 ಕ್ಕೂ ಹೆಚ್ಚು ಗಿಡಗಳನ್ನು ಹಾಕಿರಬಹುದು, ನೂರಾರು ಗಿಡಗಳು ಹಾಳಾಗಿವೆ ಸಾವಿರಾರು ಗಿಡಗಳು ಬೆಳೆಯುತ್ತಿವೆ, ಹಣ್ಣು ಹಂಪಲುಗಳನ್ನು ತಿನ್ನುತ್ತಾ ಇದ್ದಾರೆ.
ಸುಮಾರು ಒಂದು ಕೋಟಿ ಲೀಟರ್ ಗಿಂತ ಹೆಚ್ಚು ಮಳೆ ನೀರನ್ನು ನಿಲ್ಲಿಸುವ ಗಂಗಾಮಾತೆ ಜಲಸಂಗ್ರಹಾಗಾರ/ದೇವಾಲಯಗ¼ನ್ನು ನಿರ್ಮಾಣ ಮಾಡಿದ್ದಾರೆ. ನೀರು ಸಹ ಸಂಗ್ರಹವಾಗುತ್ತಿದೆ. ಅವರೆಲ್ಲರಿಗೂ ಬಹಳ ಆನಂದವಾಗುತ್ತಿದೆ, ಅಕ್ಕ-ಪಕ್ಕದ ಬೇರೆಯವರಿಗೆ ಇವರದೊಂದು ಹುಚ್ಚಾಟ ಎನಿಸಿರಬಹುದು.
2047 ಕ್ಕೆ ಭಾರತ ವಿಶ್ವ ಗುರು ಆಗಬೇಕೆಂದರೆ, 2047 ಕ್ಕೆ ಕರ್ನಾಟಕ ಎಷ್ಯಾದಲ್ಲೇ ರಾಜ್ಯ ನಂಬರ್-1 ಆಗಬೇಕಾದರೆ. 2047 ಕ್ಕೆ ಶಕ್ತಿಪೀಠ ಕ್ಯಾಂಪಸ್ ಹೇಗಿರಬೇಕು, ಶಕ್ತಿಪೀಠ ಡಾಟಾ ಪಾರ್ಕ್ ಹೇಗಿರಬೇಕು, ಶಕ್ತಿಭವನ ಹೇಗಿರಬೇಕು ಮತ್ತು ಕಳೆದ 35 ವರ್ಷಗಳ ಹಿಂದೆ, ಕುಂದರನಹಳ್ಳಿ ರಮೇಶ್ ರವರ ಮನೆಯಲ್ಲಿ ಓದುತ್ತಿದ್ದ ಅವರ ಚಿಕ್ಕಮ್ಮನ ಮಗ ರಾಜು (ಸಾಪ್ಟ್ ವೇರ್ ಇಂಜಿನಿಯರ್) ಮತ್ತು ವರ ಅಕ್ಕನ ಮಗ ಬಾಬು (ಲಾಯರ್) ನಾವು ಮತ್ತು ನಮ್ಮ ಕುಟುಂಬಗಳು ಹೇಗಿರಬೇಕು ಎಂಬ ವಿಚಾರ ವಿನಿಮಯ ಮಾಡಿಕೊಂಡಿದ್ದಾರೆ.
ಪ್ರತಿ ತಿಂಗಳು ಒಂದು ಶನಿವಾರ ಮತ್ತು ಭಾನುವಾರ ಅವರ ಕುಟುಂಬ ಮತ್ತು ಸಂಬಂಧಗಳ ಪ್ರಗತಿ ಬಗ್ಗೆ ಸಮಾಲೋಚನೆ ನಡೆಸಲು ನಿರ್ಧಾರ ಮಾಡಿದ್ದಾರೆ. ಶೀಘ್ರದಲ್ಲಿ ‘ತೋಟದ ದೇವರು’ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ.
ಶಕ್ತಿಪೀಠ, ಅಭಿವೃದ್ಧಿ ಪೀಠ ಮತ್ತು ಜಲಪೀಠಗಳ ವಾರ್ಷಿಕ ಗುರಿ.
- ದಿನಾಂಕ:04.05.2001 ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಸ್ಥಾಪಿಸಿದ ದಿನ. ದಿನಾಂಕ:04.05.2024 ರ ವೇಳೆಗೆ, ಶಕ್ತಿಭವನ ನಿರ್ಮಾಣ ಕಾರ್ಯ ಪೂರ್ಣಗೊಂಡು ಲೋಕಾರ್ಪಣೆಗೊಳ್ಳಬೇಕು, 1000 ಯೂ ಟ್ಯೂಬ್ ಎಪಿಸೋಡ್ ಆರಂಭವಾಗಬೇಕು, ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ ಕರಡು ಪ್ರತಿಯಲ್ಲಿನ ಪ್ರತಿಯೊಂದು ಅಂಶಗಳ ಆಧಾರದ ಮೇಲೆ, ತುಮಕೂರು ಜಿಲ್ಲೆ ಫೈಲಟ್ ಯೋಜನೆಗಳ ಕರಡು ಪ್ರತಿ ಬಿಡುಗಡೆಯಾಗಬೇಕು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು.
- ದಿನಾಂಕ:01.08.1988 ಹೆಚ್.ಎ.ಎಲ್ ಜಮೀನಿನ ಯೋಜನೆಗೆ ಹೋರಾಟ ಆರಂಭಿಸಿದ ದಿನ, ಆ ವೇಳೆಗೆ ಶಕ್ತಿಪೀಠ ಡಾಟಾ ಪಾರ್ಕ್ ರೂಪುರೇಷೆಗಳೊಂದಿಗೆ, ಕಟ್ಟಡ ನಿರ್ಮಾಣ ಆರಂಭಿಸಬೇಕು. ತುಮಕೂರು ಜಿಲ್ಲೆಯ 2735 ಗ್ರಾಮಗಳ ಮತ್ತು 11 ನಗರ ಸ್ಥಳೀಯ ಸಂಸ್ಥೆಗಳ ಎಲ್ಲಾ ಬಡಾವಣೆಗಳಲ್ಲೂ ಊರಿಗೊಂದು/ಬಡಾವಣೆಗೊಂದು ಪುಸ್ತಕ/ವಿಷನ್ ಡಾಕ್ಯುಮೆಂಟ್-2047 ಪ್ರಗತಿಯಲ್ಲಿ ಇರಬೇಕು.
- ದಿನಾಂಕ:16.08.2019 ಶಕ್ತಿಪೀಠ ಫೌಂಡೇಷನ್ ಸ್ಥಾಪಿಸಿದ ದಿನ, ಆ ವೇಳೆಗೆ ಕರ್ನಾಟಕ ರಾಜ್ಯದ ಸುಮಾರು 6022 ಗ್ರಾಮಪಂಚಾಯಿತಿಗಳು ಮತ್ತು 315 ನಗರ ಸ್ಥಳೀಯ ಸಂಸ್ಥಗಳ ವ್ಯಾಪ್ತಿಯ ಕೆರೆ-ಕಟ್ಟೆಗಳಲ್ಲಿ, ಎಷ್ಟು ಕೆರೆಗಳಿಗೆ, ಯಾವ ನದಿ ನೀರು ಬರುತ್ತಿದೆ, ಎಷ್ಟು ಕೆರೆಗಳಿಗೆ ಯಾವ ನದಿ ನೀರಿನ ಯೋಜನೆ ರೂಪಿಸಲಾಗಿದೆ, ಉಳಿದ ಕೆರೆಗಳಿಗೆ ‘ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು’ ಯೋಜನೆಯಡಿ, ರಾಜ್ಯದ ಎಲ್ಲಾ 224 ಕ್ಷೇತ್ರಗಳ ಶಾಸಕರಿಗೆ ನಕ್ಷೆ ಸಿದ್ಧಪಡಿಸಿ ಮನವರಿಕೆ ಮಾಡುವ ಕಾರ್ಯಕ್ಕೆ ಚಾಲನೆ ನೀಡುವುದು.
- ವಿಶ್ವದ 108 ಶಕ್ತಿಪೀಠಗಳ ನಿಖರವಾದ ಮಾಹಿತಿಗಳನ್ನು ಕ್ರೋಡೀಕರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ 7 ದೇಶಗಳ ಜೊತೆ ಸಮಾಲೋಚನೆ ಮಾಡುವುದು.
- ರಾಜ್ಯದ್ಯಾಂತ ಸ್ಥಾಪಿಸಲು ಉದ್ದೇಶಿರುವ 545 ಅಧ್ಯಯನ ಪೀಠಗಳಿಗೆ ಚಾಲನೆ ನೀಡಲು ಅಭಿಯಾನ ಆರಂಭಿಸುವುದು.
- ಶಕ್ತಿಪೀಠ ಕ್ಯಾಂಪಸ್‍ನಲ್ಲಿ, ನನ್ನ ಸಹೋದರರ ಜಮೀನನಲ್ಲಿ ಮತ್ತು ಪಕ್ಕದಲ್ಲಿ ಇರುವ ವಾಣಿ ವಿಲಾಸ ಕಾಲುವೆಯ ಅಕ್ಕ-ಪಕ್ಕ ಸೇರಿ 6022 ಗ್ರಾಮ ಪಂಚಾಯಿತಿಗಳಿಗೊಂದು, 315 ನಗರ ಸ್ಥಳೀಯ ಸಂಸ್ಥೆಗಳಿಗೊಂದು ಮತ್ತು 545 ಅಧ್ಯಯನ ಪೀಠಗಳಿಗೊಂದು ಸೇರಿದಂತೆ, ಹಾಲಿ ಹಾಕಿರುವ, ಮೊದಲೆ ಇದ್ದ ಮತ್ತು ಹೊಸದಾಗಿ ಹಾಕುವ ಗಿಡಗಳು ಸೇರಿದಂತೆ, ಸುಮಾರು 7 ಗಿಡಗಳನ್ನು ಬೆಳೆಸುವ ಯೋಜನೆ.
- ಕೇಂದ್ರ ಸರ್ಕಾರದಿಂದ 1947 ರಿಂದ 2023 ರವರೆಗೆ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಬಂದಿರುವ ಅನುದಾನ ಮತ್ತು ಕರ್ನಾಟಕ ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ಹೋಗಿರುವ ತೆರಿಗೆ ಹಣದ ವಿಶ್ಲೇಷಣೆ ಆರಂಭ ಮಾಡುವುದು.
- 224 ವಿಧಾನಸಭಾ ಕ್ಷೇತ್ರವಾರು, ಆಯಾ ಶಾಸಕರು ಅಧ್ಯಕ್ಷತೆಯಲ್ಲಿ, 2047 ರ ಯೋಜನೆಗ¼ ಸಮಾಲೋಚನೆ ನಡೆಸಲು ಟೆಂಪ್ಲೇಟ್ ಸಿದ್ಧಪಡಿಸುವುದು.
- 28 ಲೋಕÀಸಭಾ ಕ್ಷೇತ್ರವಾರು, ಆಯಾ ಸಂಸದರ ಅಧ್ಯಕ್ಷತೆಯಲ್ಲಿ, 2047 ರ ಯೋಜನೆಗ¼ ಸಮಾಲೋಚನೆ ನಡೆಸಲು ಟೆಂಪ್ಲೇಟ್ ಸಿದ್ಧಪಡಿಸುವುದು.
ಆಧ್ಯಾಪ್ರಜ್ಞಾ ಕಂಪನಿಯವರಿಗೆ ಡಿಜಿಟಲ್ ಪ್ಲಾಟ್ ಫಾರಂ ಮಾಡಲು ಪ್ರಸ್ತಾವನೆ ಸಲ್ಲಿಸಲು ತಿಳಿಸಿದ್ದಾರೆ.
ಸಲಹೆಗಳಿಗೆ ಮುಕ್ತ ಆಹ್ವಾನ. ಬದಲಾವಣೆಗಳಿಗೆ ಅವಕಾಶ ಇದೆ.
– ಅಗೋಚರ ಶಕ್ತಿ.