TUMAKURU:SHAKTHI PEETA FOUNDATION
ತುಮಕೂರು ತಾಲ್ಲೋಕಿನ ಪಂಡಿತನಹಳ್ಳಿಯ ಪಕ್ಕ ಪ್ರಸಿದ್ಧ ಮಂದಾರಗಿರಿ ಬಸೀದಿ ಬೆಟ್ಟವಿದೆ. ಈ ಬೆಟ್ಟಕ್ಕೆ ಬೆಂಗಳೂರು-ತುಮಕೂರು ರಸ್ತೆಯಿಂz ಎರಡು ರಸ್ತೆಗಳು ಇವೆ. ಈ ರಸ್ತೆಗಳು ಹಾಳಾಗಿವೆ, ಇಲ್ಲಿಗೆ ಕಡೇ ಪಕ್ಷ ರಸ್ತೆ ಬೇಡವೇ ಎಂಬ ಪ್ರಶ್ನೆ ಅಲ್ಲಿನ ಪರಿಸರ ಪ್ರೇಮಿಗಳ ಇಚ್ಚೆಯಾಗಿದೆ.
ಈ ರಸ್ತೆಗೆ ಹೊಂದಿಕೊಂತೆ, ಸರ್ಕಾರಕ್ಕೆ ನೂರಾರು ಕೋಟಿ ತೆರಿಗೆ ಕಟ್ಟುವ ಇನ್‍ಕ್ಯಾಪ್ ಮತ್ತು ಟಿ.ವಿ.ಎಸ್, ಕೈಗಾರಿಕೆಗಳು, ಟಿವಿಎಸ್ ಶಾಲೆ, ಪ್ರೂಡೆಂಟ್ ಶಾಲೆ ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳು ಪ್ರತಿ ದಿವಸ ಪ್ರಯಾಣ ಮಾಡುತ್ತಿದ್ದಾರೆ.
‘ಊರಿಗೊಂದು ಪುಸ್ತಕ/ವಿಷನ್ ಡಾಕ್ಯುಮೆಂಟ್- 2047’ ಸಿದ್ಧಪಡಿಸುವ ವಿದ್ಯಾರ್ಥಿಗಳು, ಈ ಪ್ರದೇಶ ಹೇಗೆ ಅಭಿವೃದ್ಧಿ ಆಗಬೇಕು ಎಂಬ ಬಗ್ಗೆ ವರದಿ ಸಿದ್ಧಪಡಿಸುವ ಜೊತೆಗೆ, ಮಂದಾರ ಬಸೀದಿ ಬೆಟ್ಟ ಇಲ್ಲಿ ಇರುವ ಎಲ್ಲಾ ಕೈಗಾರಿಕಾ ಮತ್ತು ಶಾಲೆಗಳ ಆಡಳಿತ ಮಂಡಳಿಗಳ ಜೊತೆ ಸಮಾಲೋಚನೆ ನಡೆಸುವುದು ಸೂಕ್ತವಾಗಿದೆ.
ತುಮಕೂರು ಜಿಲ್ಲೆಯ ಅನಿವಾಸಿಗಳಾದ ಹಲವಾರು ಜನರು, ಕುಂದರನಹಳ್ಳಿ ರಮೇಶ್ ರವರ ಜೊತೆ ಚರ್ಚೆ ಮಾಡಿದ್ದಾರೆ. ಈ ಪ್ರದೇಶದ ಅಭಿವೃದ್ಧಿ ಆಸಕ್ತರು ಸಂಪರ್ಕಿಸಲು ಮತ್ತು ಸಲಹೆ ನೀಡಲು ಮನವಿ.
ತುಮಕೂರು ಜಿಲ್ಲೆಯ 11 ವಿಧಾನ ಸಭಾ ಕ್ಷೇತ್ರಗಳಲ್ಲಿಯೂ, ಕನಿಷ್ಠ ಪಕ್ಷ 5 ಪ್ರವಾಸಿ ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಿದ್ಧಪಡಿಸಲು, ಪ್ರವಾಸೋಧ್ಯಮ ಇಲಾಖೆ ಗಮನ ಹರಿಸಬೇಕಿದೆ.
ಕೇಂದ್ರ ಸರ್ಕಾರ ಪ್ರವಾಸೋಧ್ಯಮಕ್ಕೆ ವಿಶೇಷ ಒತ್ತು ನೀಡಲಿದೆ. ಈ ಬಗ್ಗೆ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಏರ್ಪಡಿಸಿ, 224 ವಿಧಾನಸಭಾ ಕ್ಷೇತ್ರಗಳ 5 ಪ್ರವಾಸಿ ಕೇಂದ್ರಗಳ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಲು ಒಂದು ತಂಡ ಮುಂದೆ ಬಂದಿದೆ.
ಈ ವೇಳೆಗೆ ರಸ್ತೆ ಮತ್ತು ಮೂಲಭೂತ ಸೌಕರ್ಯ ಕಲ್ಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು, ಮಾಸ್ಟರ್ ಪ್ಲಾನ್ ಸಿದ್ಧಪಡಿಸಲು ಚಾಲನೆ ನೀಡಬೇಕಿದೆ. ಮಂದಾರ ಗಿರಿ ಬಸೀದಿ ಬೆಟ್ಟದ ಆಸಕ್ತರು ಕೈಜೋಡಿಸ ಬಹುದು.
ಪ್ರವಸೋಧ್ಯಮಕ್ಕೆ ಸಂಭಂಧಿಸಿದ ಎಲ್ಲಾ ಮಾಹಿತಿಗಳನ್ನು ವಿದ್ಯಾರ್ಥಿಗಳು ‘ಊರಿಗೊಂದು ಪುಸ್ತಕ/ವಿಷನ್ ಡಾಕ್ಯುಮೆಂಟ್– 2047’ ದಾಖಲಿಸಲು ಟೆಂಪ್ಲೇಟ್‍ನಲ್ಲಿ ಸೇರ್ಪಡೆ ಮಾಡಲು ಆಧ್ಯಪ್ರಜ್ಞಾ ಕಂಪನಿಗೆ ಸಲಹೆ ನೀಡಲಾಗಿದೆ.
ತುಮಕೂರಿನ ಸ್ಪೆಕ್ಟ್ರಾ ಅಸೋಶಿಯೇಟ್ಸ್, ಸುಮಾರು 3 ಕೀ.ಮೀ ರಸ್ತೆಯ, ಈ ನಕ್ಷೆ ಸಿದ್ಧಪಡಿಸಿ ನೀಡಿದೆ.
-ಅಗೋಚರ ಶಕ್ತಿ.