22nd December 2024
Share

TUMAKURU:SHAKTHIPEETA FOUNDATION

  ದೇಶದ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರ ಪರಿಕಲ್ಪನೆಯಿಂದ  ವಿಶ್ವದ ಗಮನ ಸೆಳೆದಿರುವ ರಾಮ ಪ್ರತಿಷ್ಠಾಪನೆಯ ಮೂಲಕ, ರಾಮನ ಆದರ್ಶಗಳ ‘ರಾಮ ರಾಜ್ಯ’ ದ ಕನಸು ಕಾಣುತ್ತಿರುವ ಜನತೆ. 

 ರಾಜ್ಯದ ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರ ಮತ್ತು ಉಪಮುಖ್ಯಮಂತ್ರಿಯವರಾದ ಶ್ರೀ ಡಿ.ಕೆ.ಶಿವಕುಮಾರ್ ರವರ ಪರಿಕಲ್ಪನೆಯ ಸಾಂಸ್ಕøತಿಕ ನಾಯಕ ಬಸವಣ್ಣÀ ರವರ ಕಾಯಕವೇ ಕೈಲಾಸ, ಜಾತಿ ರಹಿತ ಸಮಾಜ, ಸಮಾನತೆಯ ಕನಸು ಕಾಣುತ್ತಿರುವ ಜನತೆ.

ಈ ಎರಡು ಪರಿಕಲ್ಪನೆಗಳು ಮತ್ತು ಡಾ.ಅಂಬೇಡ್ಕರ್ ರವರ ‘ಸಂವಿಧಾನ,  ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಮತ್ತು ಶಕ್ತಿಪೀಠ ಫೌಂಡೇಷನ್ ಸ್ಥಾಪಿಸುತ್ತಿರುವ ನಾಲೇಡ್ಜ್ ಬ್ಯಾಂಕ್ @ 2047 ಗೆ ಅಡಿಪಾಯವಾಗಲಿವೆ.

ಈ ಹಿನ್ನಲೆಯಲ್ಲಿ, ತುಮಕೂರು ಜಿಲ್ಲೆಯ ಪೌರಕಾರ್ಮಿಕರ ಮತ್ತು ಡಿ ದರ್ಜೆ ನೌಕರರ ಮಕ್ಕಳ ವಿದ್ಯಾಬ್ಯಾಸದ ನೀಡ್ ಬೇಸ್ಡ್ ಡೊನೇಷನ್ ಆಂದೋಲನ ಕ್ಕೆ, ದಿನಾಂಕ:22.01.2024 ರಂದು 12 ಗಂಟೆಗೆ, ರಾಮ ಪ್ರತಿಷ್ಠಾಪನೆ ಸಮಯದಲ್ಲಿ, ತುಮಕೂರಿನ ಜಯನಗರದ, ಎರಡನೇ ರಸ್ತೆಯಲ್ಲಿ ಇರುವ ಎಡಕಲ್ಲು ಗುಡ್ಡದ ಪಾರ್ಕ್‍ನಲ್ಲಿ, ಪರಿಸರವೇ ದೇವರು ಘೋಷಣೆಯಡಿಯಲ್ಲಿ ಪಂಚವಟಿ ಗಿಡ ಹಾಕುವ ಮೂಲಕ ಚಾಲನೆ ನೀಡಲಾಗುವುದು.

ನಂತರ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೂ ವಿಸ್ತರಣೆ ಮಾಡಲು ರೂಪುರೇಷೆಗಳ ಸಿದ್ಧತೆ ಆರಂಭವಾಗಿದೆ. ಈ ಸರಳ ಸಮಾರಂಭಕ್ಕೆ ಆಸಕ್ತಿ ಇರುವವರು ಬಾಗವಹಿಸಲು ಮನವಿ.

ತುಮಕೂರು ನಗರದ ಪಾರ್ಕ್ಗಳ ಶುಚಿತ್ವ ಮಾಡುತ್ತಿರುವ 11 ಜನ ಕಾರ್ಮಿಕರ ಕುಟುಂಬಗಳನ್ನು ವಿಶೇಷ ಅತಿಥಿಗಳಾಗಿ ಅಹ್ವಾನಿಸುವ ಚಿಂತನೆ ಇದೆ.

 ಶ್ರೀ ಸುಬ್ರಮಣ್ಯರವರು ಪಂಚವಟಿಗಿಡ ಹಾಕಲು ಗುಂಡಿ ತೆಗೆಸುತ್ತಿದ್ದಾರೆ. ಗಿಡಗಳ ಸಂರಕ್ಷಣೆ ಹೊಣೆ ಹೊತ್ತಿರುವ ಶ್ರೀ ಕೃಷ್ಣಮೂರ್ತಿಯವರು ಉಸ್ತುವಾರಿ ವಹಿಸಿಕೊಂಡಿರುವ ಶ್ರೀ ಕಾಂತಪ್ಪನವರು ಜೊತೆಯಲ್ಲಿ ಇದ್ದಾರೆ.

ತುಮಕೂರು ಸ್ಮಾಟ್ ಸಿಟಿ ವತಿಯಿಂದ ನಿರ್ಮಾಣ ಮಾಡಿರುವ ಗೇಟ್ ಈಗಾಗಲೇ ಕಿತ್ತುಕೊಂಡಿದೆ, ಇದನ್ನು ಸರಿಪಡಿಸುವುದು ಮತ್ತು ಗೇಟ್ ಹಾಗೂ ಸಂಪ್ ಬೀಗಹಾಕಿ ಕೀ ಯಾರ ಬಳಿ ಇದೆ, ಅದನ್ನು ಸ್ಥಳೀಯರಿಗೆ ನೀಡಲು ಶ್ರೀ ಅನ್ನಪೂರ್ಣ ಚನ್ನಬಸಪ್ಪನವರು ಆಗ್ರಹಪಡಿಸಿದ್ದಾರೆ.

-ಅಗೋಚರ ಶಕ್ತಿ