21st November 2024
Share

TUMAKURU:SHAKTHIPEETA FOUNDATION

  ರಾಮರಾಜ್ಯದ ಕನಸು ಕಾಣುತ್ತಿದ್ದೇವೆ. ಸಮಾನತೆಯ ಬಗ್ಗೆ ಮಾತನಾಡುತ್ತಿದ್ದೇವೆ. ಜನರು ನೆಮ್ಮದಿ ಕಳೆದುಕೊಳ್ಳುತ್ತಿರುವುದು, ಕೇವಲ ಒಂದು ಅಡಿ ನಿವೇಶನ ಒತ್ತುವರಿ ಅಥವಾ ಒಂದು ಗುಂಟೆ ಜಮೀನು ಒತ್ತುವರಿಗಾಗಿ.

  ನಿವೇಶನ ಮತ್ತು ಜಮೀನುಗಳ ದಾಖಲೆಗಳ ತಿದ್ದುಪಡಿಗಾಗಿ. ಕೋಟಿಗಟ್ಟಲೇ ಅವ್ಯವಹಾರ ನಡೆಯುತ್ತಿದೆಯಂತೆ. ಒಂದು ತಹಶೀಲ್ಧಾರ್ ಕಚೇರಿಯಲ್ಲಿ ತಿಂಗಳಿಗೆ ಇಂತಿಷ್ಟು ಪಹಣೆಯಲ್ಲಿ ತಪ್ಪು ಮಾಡಲೇ ಬೇಕು ಎಂಬ ನಿಗದಿ ಮಾಡಿದ್ದಾರಂತೆ.

  ತಪ್ಪು ತಿದ್ದುಪಡಿ ಮಾಡಿಸಿಕೊಳ್ಳುವವರಿಂದ ಸಾವಿರ ಗಟ್ಟಲೆ ಪೀಕುವುದೇ ಇವರ ಜ್ಞಾನವಂತೆ. ಡಿಜಿಟಲ್ ಇಂಡಿಯಾದಲ್ಲಿಯೂ, ಈ ತರಹ ಬ್ಲಾಕ್ ಮೇಲ್ ಮಾಡುವ ಪ್ರಕ್ರೀಯೇ ಸರಾಗವಾಗಿ ನಡೆಯುತ್ತದೆಯಂತೆ.   

ತುಮಕೂರಿನ ಒಂದು ಸ್ಟಾಟ್ ಅಫ್ ಕಂಪನಿ, ಪ್ರಾಪರ್ಟಿ ಜೋತಿಷ್ಯ ಬಗ್ಗೆ ಅಧ್ಯಯನ ಮತ್ತು ಸಂಶೋಧನೆ ಆರಂಭಿಸಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಈ ಬಗ್ಗೆ ಜಾರಿಗೊಳಿಸಿರುವ ಯೋಜನೆಗಳ ಸಾಧಕ-ಬಾಧಕಗಳ ಅವಲೋಕನವೂ ಆರಂಭವಾಗಿದೆ. ಈ ಸಮಸ್ಯೆ ಶಾಶ್ವತವಾಗಿ ಬಗೆಹರಿದರೆ ಮಾತ್ರ, ಜನರಿಗೆ ನೆಮ್ಮದಿ ಬರಲಿದೆ ಎನ್ನುವುದು ನೂರಾರು ಜನರ ಅಭಿಪ್ರಾಯವಾಗಿದೆ.

ಆದರೇ ಈ ಸಮಸ್ಯೆ ಬಗೆಹರಿಯಬಾರದು ಎಂಬುದೇ ಒಂದು ವರ್ಗದ ಜನರ ಅಭಿಪ್ರಾಯವಂತೆ.

ನಾಲೇಡ್ಜ್ ಬ್ಯಾಂಕ್ @ 2047  ಬಗ್ಗೆ, ಮಾಹಿತಿ ಸಂಗ್ರಹ ಆರಂಭ ಮಾಡಿದೆ. ಯಾವುದೇ ನಿವೇಶನ ಅಥವಾ ಜಮೀನು ಕೊಂಡುಕೊಳ್ಳುವವರು, ತಮ್ಮ ಅನುಭವದ ನಿವೇಶನ ಮತ್ತು ಜಮೀನು ವಿವಾದ ಇರುವವರು ನಿಖರವಾದ, ವಸ್ತು ಸ್ಥಿತಿ ಸಮಸ್ಯೆಗಳ ಜ್ಞಾನವನ್ನು ಹೊಂಚಿಕೊಳ್ಳಬಹುದಾಗಿದೆ.