26th July 2024
Share

TUMAKURU:SHAKTHIPEETA FOUNDATION

ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯರಾದ  ಶ್ರೀ ಡಿ.ಕೆ.ಸುರೇಶ್ ರವರ ಹೇಳಿಕೆ  ಕೇಂದ್ರ ಸರ್ಕಾರದ ಅನುದಾನ ತಾರತಮ್ಯಕ್ಕೆ ಮದ್ದು. ಜನಪ್ರತಿನಿಧಿಗಳ ಡಾಟಾ ಬ್ಯಾಂಕ್ ಆರಂಭ ಎಂದರೆ ತಪ್ಪಾಗಲಾರದು.

ಕುಂದರನಹಳ್ಳಿ ರಮೇಶ್ ರವರು ‘ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ’ ಕರಡು ಪ್ರತಿಯಲ್ಲಿ ಈ ಬಗ್ಗೆ ಪ್ರಸ್ತಾಪಮಾಡುವ ಮೂಲಕ ಕಾರ್ಯೋನ್ಮುಖವಾಗಿದ್ದಾರೆ. 

ತುಮಕೂರು ನಗರದ ಜಯನಗರ ಪೂರ್ವದಲ್ಲಿ ಶಕ್ತಿಭವನ ಕಟ್ಟಡ ನಿರ್ಮಾಣ ಮುಕ್ತಾಯ ಹಂತದಲ್ಲಿ ಇರುವಾಗಲೇ, ಈ ವಿವಾದ ಎದ್ದಿರುವುದು ನಿಜಕ್ಕೂ ಖುಷಿ ತಂದಿದೆ. ಏಕೆಂದರೆ ಕುಂದರನಹಳ್ಳಿ ರಮೇಶ್ ರವರು, ತುಮಕೂರಿನಲ್ಲಿ ಇದ್ದ ಒಂದು ಮನೆಯನ್ನು ಕೆಡವಿ ಹಾಕಿ, ತನ್ನ ಕುಟುಂಬವನ್ನು ಒಪ್ಪಿಸಿ, ಅಭಿವೃದ್ಧಿ ಮ್ಯೂಸಿಯಂ ಸ್ಥಾಪಿಸಲು, 2047 ರವರೆಗೆ ಶಕ್ತಿಪೀಠ ಫೌಂಡೇಷನ್ ಗೆ ಬಾಡಿಗೆ ನೀಡುವ ಮೂಲಕ ಇಂಥದ್ದೊಂದು ಸಾಹಸಕ್ಕೆ ಕೈಹಾಕಿದ್ದಾರೆ.

ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ವಿಕಸಿತ ಭಾರತ @ 2047, ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರ ಕರ್ನಾಟಕ ರಾಜ್ಯ ಏಷ್ಯಾದಲ್ಲೇ ನಂಬರ್ ಒನ್ ಕರ್ನಾಟಕ, ಉಪಮುಖ್ಯ ಮಂತ್ರಿಯವರಾದ ಶ್ರೀ ಡಿ.ಕೆ.ಶಿವಕುಮಾರ್ ರವರ ಬ್ರ್ಯಾಂಡ್ ಬೆಂಗಳೂರು ಯೋಜನೆಗಳ ಡಾಟಾ ಬ್ಯಾಂಕ್ ಆಗಲಿದೆ.

 ನಾಲೇಡ್ಜ್ ಬ್ಯಾಂಕ್ @ 2047 ಕ್ಕೆ ಪೂರಕವಾಗಿ, ಫಿಸಿಕಲ್ ಲೈಬ್ರರಿ, ಡಿಜಿಟಲ್ ಲೈಬ್ರರಿ, ಹ್ಯೂಮನ್ ಲೈಬ್ರರಿಗೆ ಆರ್ಥಿಕ ಹೊಂದಾಣಿಕೆ ಕಸರತ್ತು ಆರಂಭವಾಗಿದೆ. ಯಾವ ಸರ್ಕಾರ, ಸಂಸ್ಥೆ, ಪುಣ್ಯಾತ್ಮರು ದಾನ ನೀಡುವರೋ ಕಾದು ನೋಡಬೇಕಿದೆ.

ಅಗೋಚರ ಶಕ್ತಿ