TUMAKURU:SHAKTHIPEETA FOUNDATION
ಯಾವುದೇ ದೇಶ ಅಭಿವೃದ್ಧಿ ಹೊಂದಿದ ದೇಶ ಆಗಬೇಕಾದರೆ ಸಂಶೋಧನೆಗೆ ಒತ್ತು ನೀಡಲೇ ಬೇಕಿದೆ. ಕೇಂದ್ರ ಸರ್ಕಾರ ನ್ಯಾಷನಲ್ ರೀಸರ್ಚ್ ಫೌಂಡೇಷನ್ ರಚಿಸಿರುವುದು ಸ್ವಾಗಾತಾರ್ಹ.
2024-25 ರ ಆಯವ್ಯಯದಲ್ಲಿ ಸಂಶೋಧನೆಗೆ ರೂ ಒಂದು ಲಕ್ಷ ಕೋಟಿ ಹಣ ಮೀಸಲಿಡುವ ಮೂಲಕ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ಬದ್ಧತೆ ಮೆರೆದಿದ್ದಾರೆ. 2047 ಕ್ಕೆ ಅಭಿವೃದ್ಧಿ ಹೊಂದಿದ ಭಾರತ ಕನಸಿಗೆ ಇದು ಅಡಿಪಾಯವಾಗಲಿದೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯರಾದ ಶ್ರೀ ಡಿ.ಕೆ.ಸುರೇಶ್ ರವರ ಹೇಳಿಕೆ ಕೇಂದ್ರ ಸರ್ಕಾರದ ಅನುದಾನ ತಾರತಮ್ಯ ಹೊಸ ವಿವಾದ ಸೃಷ್ಠಿಸಿದೆ. ಅವರು ಹೇಳಿರುವ ಅರ್ಧವಿಚಾರ ವಿವಾದವಾದರೂ ಇನ್ನುಳಿದ ಅರ್ಧ ವಿಚಾರದ ಬಗ್ಗೆ ಚರ್ಚೆಯಾಗಲೇ ಬೇಕು, ಎಲ್ಲಾ ರಾಜಕೀಯ ಪಕ್ಷಗಳು ಈ ಆರೋಪ ಮಾಡುತ್ತಲೇ ಬಂದಿವೆ. ಇದರ ಸತ್ಯಾಸತ್ಯತೆ ಜನತೆಗೆ ತಿಳಿಯಬೇಕಲ್ಲವೇ?
ಪ್ರತಿಯೊಂದು ರಾಜಕೀಯ ಪಕ್ಷವೂ ಸಹ ಒಂದೊಂದು ಸಂಶೋಧನಾ ಕೇಂದ್ರ ಆರಂಭಿಸಿ, 1947 ರಿಂದಲೂ, ಪ್ರತಿಯೊಬ್ಬ ಪ್ರಧಾನಿಯವರ ಕಾಲದಲ್ಲಿ, ದೇಶದ ಎಲ್ಲಾ ರಾಜ್ಯಗಳಿಗೂ ಅನುದಾನ ಬಿಡುಗಡೆಯಾಗಿರುವ ಬಗ್ಗೆ ಅಧ್ಯಯನ ನಡೆಸಿ, ಕರಾರುವಕ್ಕಾದ ಮಾಹಿತಿ ಇಟ್ಟುಕೊಳ್ಳುವುದು ಅಗತ್ಯವಾಗಿದೆ.
ಕೇಂದ್ರ ಸರ್ಕಾರದಿಂದ ಹೆಚ್ಚಿಗೆ ಅನುದಾನ ತರುವುದು ಹೇಗೆ ಎಂಬ ಬಗ್ಗೆ, ಸ್ಟ್ರಾಟಜಿ ರೂಪಿಸಿ ನಿರಂತರವಾಗಿ ಶ್ರಮಿಸುವುದು ಅಗತ್ಯವಾಗಿದೆ. ನಿಖರವಾದ ಮಾಹಿತಿ ಇಲ್ಲದೆ ರಾಜಕೀಯಕ್ಕೋಸ್ಕರ ಯಾರೂ ಸಹ ಆರೋಪ ಮಾಡುವುದು ಸೂಕ್ತವಲ್ಲ.
ಕುಂದರನಹಳ್ಳಿ ರಮೇಶ್ ರವರು ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ ಕರಡು ಪ್ರತಿಯಲ್ಲಿ ಈ ಬಗ್ಗೆ ಪ್ರಸ್ತಾಪಮಾಡುವ ಮೂಲಕ ಅಧ್ಯಯನ ಆರಂಭಿಸಿದ್ದಾರೆ. ಇದೊಂದು ಸಮುದ್ರವಿದ್ದಂತೆ. ಸಾವಿರಾರು ಜನರ ಶ್ರಮದ ಅಗತ್ಯವಿದೆ. ತುಮಕೂರು ಜಿಲ್ಲೆಯ ಸಾವಿರಾರು ವಿದ್ಯಾರ್ಥಿಗಳು ಊರಿಗೊಂದು ಪುಸ್ತಕ/ವಿಷನ್ ಡಾಕ್ಯುಮೆಂಟ್-2047 ಬರೆಯುವ ಸಾಹಸಕ್ಕೆ ಕೈಹಾಕಿದ್ದಾರೆ.
ಇದೊಂದು ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ ಮತ್ತು ಕೇಂದ್ರ ಸರ್ಕಾರಗಳ ಅನುದಾನ ತಾರತಮ್ಯಕ್ಕೆ ಕಾಲಜ್ಞಾನ ಆಗುವ ಮೂಲಕ, ಕ್ರಾಂತಿಕಾರಕ ಹೆಜ್ಜೆಯಾಗಲಿದೆ.
-ಅಗೋಚರ ಶಕ್ತಿ