12th October 2024
Share

TUMAKURU:SHAKTHIPEETA FOUNDATION

ಕರ್ನಾಟಕ ರಾಜ್ಯದ 225 ವಿಧಾನಸಭಾ ಸದಸ್ಯರ, 75 ವಿಧಾನಪರಿಷತ್ ಸದಸ್ಯರ, 28 ಲೋಕಸಭಾ ಸದಸ್ಯರ, 12/13 ರಾಜ್ಯಸಭಾ ಸದಸ್ಯರ, 2 ದೆಹಲಿಪ್ರತಿನಿಧಿಯವರ, 31 ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರ, 31 ಜಿಲ್ಲಾಧಿಕಾರಿಗಳ, 31 ಜಿಲ್ಲಾಪಂಚಾಯತ್ ಸಿಇಓಗಳ, ಸೇರಿದಂತೆ ಅವರವರ ಅಧ್ಯಕ್ಷತೆಯಲ್ಲಿ, ಅವರವರ ಕ್ಷೇತ್ರದ ವ್ಯಾಪ್ತಿಯಲ್ಲಿ ಒಂದೊಂದು ಅಧ್ಯಯನ ಪೀಠ ಆರಂಭಿಸಬೇಕು ಎನ್ನುವುದು ಕುಂದರನಹಳ್ಳಿ ರಮೇಶ್ ರವರ ಪರಿಕಲ್ಪನೆ.

ಜೊತೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಎಲ್ಲಾ ಇಲಾಖೆಗಳ, ದೇಶದ ಎಲ್ಲಾ ರಾಜ್ಯಗಳ, ಪ್ರಧಾನ ಮಂತ್ರಿಯವರ, ಮುಖ್ಯ ಮಂತ್ರಿಯವರ, ರಾಜ್ಯಪಾಲರ, ರಾಷ್ಟ್ರಪತಿಗಳಿಗೂ ಒಂದೊಂದು ಅಧ್ಯಯನ ಪೀಠ ಇರಲೇಬೇಕು.

 ರಾಜ್ಯದ ಎಲ್ಲಾ ವಿಶ್ವ ವಿದ್ಯಾನಿಲಯಗಳು, ಶಿಕ್ಷಣ ಸಂಸ್ಥೆಗಳು, ಸಂಶೋಧಕರು, ಸಂಘ ಸಂಸ್ಥೆಗಳು ಮತ್ತು ಪರಿಣಿತ ತಜ್ಞರು, ಪಿಪಿಪಿ ಯೋಜನೆಯಡಿಯಲ್ಲಿ ಒಂದೊಂದು ಅಧ್ಯಯನ ಪೀಠ ಸ್ಥಾಪಿಸಲು ಮುಂದೆ ಬರಬೇಕು ಅಥವಾ ಸರ್ಕಾರವೇ ನೇರವಾಗಿ ತನ್ನ ಖರ್ಚಿನಲ್ಲಿಯೇ ಆರಂಭಿಸಬೇಕು.

ಕೇಂದ್ರ ಸರ್ಕಾರದ ನ್ಯಾಷನಲ್ ರೀಸರ್ಚ್ ಫೌಂಡೇಷನ್ ಅಡಿಯಲ್ಲಿ ಅಗತ್ಯ ಅನದಾನ ಮಂಜೂರು ಮಾಡಿಸಿಕೊಳ್ಳಬೇಕು. 2047 ಕ್ಕೆ ಯಾವ ರೀತಿ ಅಭಿವೃದ್ಧಿ ಹೊಂದಬೇಕು ಎಂಬ ಬಗ್ಗೆ ಅಧ್ಯಯನ ಆರಂಭವಾಗಬೇಕು.

ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಹೆಚ್ಚಿನ ಅನುದಾನ ಪಡೆಯಬೇಕಾದರೇ ಏನು ಕಾರ್ಯತಂತ್ರ ರೂಪಿಸಬೇಕು ಎಂಬ ಬಗ್ಗೆ ಪಕ್ಕಾ ಅಧ್ಯಯನ ಮಾಹಿತಿ ಇಲ್ಲಿರಬೇಕು.

 ಅವರವರ ವ್ಯಾಪ್ತಿಯಲ್ಲಿ, 1947 ಕ್ಕೆ ಮೊದಲು ಹೇಗಿತ್ತು, 2023 ರವರೆಗೆ ಹೇಗೆ ಅಭಿವೃದ್ಧಿ ಹೊಂದಿದೆ, 2047 ಕ್ಕೆ ಹೇಗೆ ಅಭಿವೃದ್ಧಿ ಹೊಂದ ಬೇಕು, ಅವರವರ ಕ್ಷೇತ್ರದಲ್ಲಿ ಆಗಿರುವ, ಆಗುತ್ತಿರುವ, ಆಗಬೇಕಾಗಿರುವ, ಯೋಜನೆಗಳ ನಿಖರವಾದ ಮಾಹಿತಿ ನಿರಂತರವಾಗಿ ಒಂದೇ ಕಡೆ ಇರಬೇಕು.

ಶಾಸಕರು, ಸಂಸದರು, ಅಧಿಕಾರಿಗಳು ಬದಲಾದರೂ ಈ ವ್ಯವಸ್ಥೆ ಬದಲಾಗಬಾರು, ಅದೇ ಕಟ್ಟಡದಲ್ಲಿ, ಅದೇ ಮೂಲಭೂತ ಸೌಕರ್ಯಗಳೊಂದಿಗೆ, ಯಾವುದೇ ಪಕ್ಷದ ಶಾಸಕ, ಸಂಸದರಾದರೂ ಮುಂದುವರೆಯಬೇಕು.

ಸಂಶೋಧಕರು  ಅದೇ ಕಟ್ಟಡದಲ್ಲಿ ವಾಸವಿರಬೇಕು, ಶಾಸಕರು, ಸಂಸದರು, ಅಧಿಕಾರಿಗಳು ಅವರ ಅಧ್ಯಯನ ಪೀಠಗಳ ಬಗ್ಗೆ, ಎಷ್ಟೇ ಹೊತ್ತಿನಲ್ಲಿ ಏನೇ ಕೇಳಿದರೂ ಮಾಹಿತಿ ನೀಡುವಂತಿರಬೇಕು. ಇದೊಂದು ಅಭಿವೃದ್ಧಿ ರಾಜಭವನ ದಂತಿರಬೇಕು.

ಫಿಸಿಕಲ್, ಡಿಜಿಟಲ್ ಮತ್ತು ಹ್ಯೂಮನ್(ಯೂಟ್ಯೂಬ್) ಲೈಬ್ರರಿ ಇರಬೇಕು. ಅವರು ಕೇಳುವ ಒಂದು ಗ್ರಾಮ. ಬಡಾವಣೆಯ ಯಾವುದೇ ಯೋಜನೆಗಳ ಮಾಹಿತಿ ಆದರೂ, ಕ್ಷಣ ಮಾತ್ರದಲ್ಲಿ ನೀಡುವ ಡಾಟಾ ಬ್ಯಾಂಕ್ ವ್ಯವಸ್ಥೆ ಆಗಬೇಕು.

ಅಭಿವೃದ್ದಿಯಲ್ಲಿ ಸಾಮಾಜಿಕ ನ್ಯಾಯ ದೊರೆಯ ಬೇಕಾದರೆ, ವ್ಯಕ್ತಿ, ಕುಟುಂಬ, ಗ್ರಾಮಗಳ ಸರ್ವೇ ನಂಬರ್ ವಾರು ಅಭಿವೃದ್ಧಿ ಮಾಹಿತಿ ಬೆರಳ ತುದಿಯಲ್ಲಿ ಇರಲೇ ಬೇಕು. ಯೋಜನೆ ಕೇಂದ ಸರ್ಕಾರದ್ದೋ, ರಾಜ್ಯ ಸರ್ಕಾರದ್ದೋ, ಖಾಸಗಿಯವರದ್ದೋ ಎಲ್ಲಾ ಮಾಹಿತಿ ಇರಲೇಬೇಕು.

ತುಮಕೂರು ವಿಶ್ವ ವಿದ್ಯಾನಿಲಯ ಚರಿತ್ರಾರ್ಹ ಸಾಧನೆ ಮಾಡಲು ಹೊರಟಿದೆ, ತುಮಕೂರು ಜಿಲ್ಲೆಯನ್ನು ಫೈಲಟ್ ಯೋಜನೆಯಾಗಿ ಆಯ್ಕೆ ಮಾಡಿಕೊಂಡ ಶಕ್ತಿಪೀಠ ಫೌಂಡೇಷನ್ ಕನಸಿಗೆ ಸ್ಪಂಧಿಸಿದೆ,

ಸುಮಾರು 2735 ಗ್ರಾಮ/300 ಬಡಾವಣೆಗಳು ಸೇರಿದಂತೆ ಊರಿಗೊಂದು/ಬಡಾವಣೆಗೊಂದು ಪುಸ್ತಕ- ವಿಷನ್ ಡಾಕ್ಯುಮೆಂಟ್@2047 ಇಂಟರ್ನ್ óಶಿಪ್ ಅಡಿಯಲ್ಲಿ ಬರೆಯಲು, ಸುಮಾರು 5000 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಈಗಾಗಲೇ ಶ್ರಮಿಸುತ್ತಿದ್ದಾರೆ. ಅವರ ಜೊತೆಗೆ ಇನ್ನೂ ಲಕ್ಷಾಂತರ ವಿದ್ಯಾರ್ಥಿಗಳು ಕೈಜೋಡಿಸಲಿದ್ದಾರೆ. ಇದಕ್ಕೆ ಇನ್ನೂ ಸಾಕಷ್ಟು ಶ್ರಮಿಸಬೇಕಿದೆ.

ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಬಗ್ಗೆ ದೊಡ್ಡ ಹೋರಾಟ ಆರಂಭವಾಗಿದೆ, ಇದಕ್ಕೆ ಪಕ್ಕಾ ಉತ್ತರ ಕೊಡುವ ಕೆಲಸವನ್ನು ಅಧ್ಯಯನ ಪೀಠಗಳು ಮಾಡಲಿವೆ.

ವಿಶ್ವಕ್ಕೆ ಮಾದರಿಯಾಗುವ ಕನಸು ಕಂಡಿರುವ, ಫೈಲಟ್ ಅಧ್ಯಯನ ಪೀಠ, ತುಮಕೂರಿನ ಜಯನಗರ ಪೂರ್ವದಲ್ಲಿ, ಶಕ್ತಿಪೀಠ ಫೌಂಡೇಷನ್ ಮತ್ತು ಅಭಿವೃದ್ಧಿ ರೆವ್ಯೂಲ್ಯೂಷನ್ ಫೋರಂ ನೇತೃತ್ವದಲ್ಲಿ ದಿನಾಂಕ:22.02.2024 ರಂದು ನಾಲೇಡ್ಜ್ ಬ್ಯಾಂಕ್ @ 2047 ಮತ್ತು ಡಾಟಾ ಮಿತ್ರ@ 2047 ಅಡಿಯಲ್ಲಿ ಆರಂಭವಾಗಲಿದೆ.

ಕುಂದರನಹಳ್ಳಿ ರಮೇಶ್ ರವರ ಕುಟುಂಬ ಪಣತೊಟ್ಟು ನಿಂತಿದೆ. ವಿಶ್ವದ 108 ಶಕ್ತಿಪೀಠಗಳ ಪಾದಾರವಿಂದಗಳಲ್ಲಿ ಪೊಡಮೊಟ್ಟು, ಅಪೂರ್ಣವಾದ ಶಕ್ತಿಭವನ ಕಟ್ಟಡದಲ್ಲಿಯೇ ಪೂಜಿಸಿ, ಅಧ್ಯಯನ ಆರಂಭಿಸಲು ಸಜ್ಜಾಗಿದೆ. ಸುಮಾರು 36 ವರ್ಷಗಳ ಅನುಭವಗಳ ಹೋರಾಟದ ಪ್ರತಿಫಲ  ಇದಾಗಿದೆ.

ಈ ಅಧ್ಯಯನ ಪೀಠದ ಉದ್ದೇಶಗಳ ಸಂಪೂರ್ಣ ಮಾಹಿತಿ ಸಂಗ್ರಹಕ್ಕೆ, ಇನ್ನೂ ಒಂದೆರಡು ವರ್ಷ ಆಗಬಹುದು. ಈ ಕಟ್ಟಡದಲ್ಲಿ ಎಲ್ಲೆಲ್ಲಿ ಏನೇನು ಇಡಬೇಕು ಎಂಬ ಬಗ್ಗೆಯೇ, ಕನಿಷ್ಟ ಆರು ತಿಂಗಳ ಕಾಲ ಸಮಯ ಬೇಕಾಗಬಹುದು. ಅಭಿವೃದ್ಧಿ ಸನ್ಯಾಸಿಗಳ ಡಿಜಿಟಲ್ ಆಶ್ರಮ @ 2047 ಇದಾಗಬಹುದು.

                                                           ಅಗೋಚರ ಶಕ್ತಿ