TUMAKURU:SHAKTHIPEETA FOUNDATION
ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವ ಎನ್.ಡಿ.ಎ ಸರ್ಕಾರ ‘2047 ಕ್ಕೆ ಅಭಿವೃದ್ಧಿ ಹೊಂದಿದ ಭಾರತದ ಕನಸು’ ಕಾಣುತ್ತಿದೆ. ಇದೊಂದು ಉತ್ತಮ ಪರಿಕಲ್ಪನೆ. ದೇಶದ ಪ್ರತಿಯೊಬ್ಬರೂ, ಈ ಕನಸು ಕಾಣಲೇ ಬೇಕು.
ಕರ್ನಾಟಕ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಮಲತಾಯಿಧೋರಣೆ ಮಾಡುತ್ತಿದೆ, ದಕ್ಷಿಣ ರಾಜ್ಯಗಳಿಗೆ ಅನುದಾನದಲ್ಲಿ ಅನ್ಯಾಯ ಮಾಡುತ್ತಿದೆ ಎಂಬ ಗಂಭೀರ ಆರೋಪ ಮಾಡುತ್ತಿದೆ. ಇದನ್ನು ಅಲ್ಲಗಳೆಯುವ ಹಾಗಿಲ್ಲ. ಈ ಬಗ್ಗೆ ಚರ್ಚೆ ಅಗತ್ಯ.
ಆದರೇ 1947 ರಿಂದ 2023 ರವರೆಗೂ ದೇಶದ ಎಲ್ಲಾ ರಾಜ್ಯಗಳ ಅನುದಾನ ಹಂಚಿಕೆ ಸಹಿತ ‘ಅನ್ಯಾಯ ಪತ್ರ’ ಬಿಡುಗಡೆ ಮಾಡುವ ಹೊಣೆಗಾರಿಕೆ ಆರೋಪ ಮಾಡುವವರ ಪಾಲಿಗೆ ಸೇರಿದೆ.
‘ಶ್ವೇತ ಪತ್ರ’ ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರ ಕೇವಲ 10 ವರ್ಷಗಳ ಯುಪಿಎ ಮತ್ತು 10 ವರ್ಷಗಳ ಎನ್.ಡಿ.ಎ ಅವಧಿಯ ಮೆಲುಕು ಹಾಕಿದೆ. ಇವರು ಸಹ 1947 ರಿಂದ 2023 ರವರೆಗೂ ದೇಶದ ಎಲ್ಲಾ ರಾಜ್ಯಗಳ ಅನುದಾನ ಹಂಚಿಕೆ ಸಹಿತ ಶ್ವೇತ ಪತ್ರ ಬಿಡುಗಡೆ ಮಾಡುವುದು ಸೂಕ್ತವಾಗಿದೆ.
ಕಾಂಗ್ರೆಸ್ ‘ಬ್ಲಾಕ್ ಪತ್ರ’ ಬಿಡುಗಡೆ ಮಾಡಿದೆ, ಇವರು ಸಹ 1947 ರಿಂದ 2023 ರವರೆಗೂ ದೇಶದ ಎಲ್ಲಾ ರಾಜ್ಯಗಳ ಅನುದಾನ ಹಂಚಿಕೆ ಸಹಿತ ಬ್ಲಾಕ್ ಪತ್ರ ಬಿಡುಗಡೆ ಮಾಡುವುದು ಸೂಕ್ತವಾಗಿದೆ. ಎಲ್ಲರೂ ಗಾಳಿಯಲ್ಲಿ ಗುಂಡು ಹಾರಿಸುವುದು ಬೇಡ.
ನಮ್ಮ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರ ಪ್ರಕಾರ ಒಬ್ಬ ಪ್ರಧಾನಿ, ದೇಶದ ಪ್ರಧಾನಸೇವಕ/ಚೌಕಿದಾರ್/ ಜನತೆಯ ಪ್ರಕಾರ ದೇಶದ ‘ದೊರೆ’ ಅಥವಾ ದೇಶದ ಆರ್ಥಿಕತೆ/ಸರ್ವಸ್ವವನ್ನು ಕಾಯುವ ‘ಧ್ವಾರಪಾಲಕ’ ಎಂದರೆ ತಪ್ಪಾಗಲಾರದು.
ಇದೇ ರೀತಿ ರಾಜ್ಯದ ಮುಖ್ಯಮಂತ್ರಿಯವರು, ರಾಜ್ಯದ ಪ್ರಧಾನಸೇವಕ/ಚೌಕಿದಾರ್/ ಜನತೆಯ ಪ್ರಕಾರ ರಾಜ್ಯದ ‘ದೊರೆ’ ಅಥವಾ ರಾಜ್ಯದ ಆರ್ಥಿಕತೆ/ಸರ್ವಸ್ವವನ್ನು ಕಾಯುವ ‘ಧ್ವಾರಪಾಲಕ’ ಎಂದರೆ ತಪ್ಪಾಗಲಾರದು.
ಹೌದು 2047 ಕ್ಕೆ ಅಭಿವೃದ್ಧಿ ಹೊಂದಿದ ಭಾರತದ ಪರಿಕಲ್ಪನೆ. ಸಾಕಾರ ಆಗಬೇಕಾದರೆ ‘ಅನ್ಯಾಯ ಪತ್ರ ಹಾಗೂ ಶ್ವೇತ ಪತ್ರ’ ಗಳ ಬಿಡುಗಡೆಯ ಅಗತ್ಯವಿದೆ. ದೇಶದ ಪ್ರತಿಯೊಬ್ಬ ವ್ಯಕ್ತಿ, ದೇಶದ ಪ್ರತಿಯೊಬ್ಬ ಕುಟುಂಬ, ದೇಶದ ಪ್ರತಿಯೊಂದು ಸರ್ವೇನಂಬರ್ ಸಮಗ್ರ ಅಭಿವೃದ್ಧಿ ಆದರೇ ಮಾತ್ರ ಅಭಿವೃದ್ಧಿ ಹೊಂದಿದ ಭಾರತ ಆಗಲೂ ಸಾದ್ಯ. ವಿಸ್ಥೀರ್ಣವಾರು ವ್ಯಾಪ್ತಿಯಲ್ಲಿ ಏನೇನು ಇರಬೇಕು. ಜನಸಂಖ್ಯೆವಾರು ಏನೇನು ಎಲ್ಲೆಲ್ಲಿ ಇರಬೇಕು ಎಂಬುದು ಮುಖ್ಯವಲ್ಲವೇ?
ಹಿಂದಿನ 76 ವರ್ಷಗಳು ಮತ್ತು ಮುಂದಿನ 24 ವರ್ಷಗಳು ಸೇರಿದಂತೆ, 100 ವರ್ಷಗಳ ಸ್ಥಿತಿಗತಿಯ ಬಗ್ಗೆ ಅವಲೋಕನ ಮಾಡಿ, ‘ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ’ ಅಡಿಯಲ್ಲಿ, ಶೇ 100 ರಷ್ಟು ಗುರಿ ತಲುಪಬೇಕಾದರೆ, ಗ್ರಾಮವಾರು, ಬಡಾವಣೆವಾರು, ಗ್ರಾಮಪಂಚಾಯಿತಿವಾರು, ನಗರ ಸ್ಥಳೀಯ ಸಂಸ್ಥೆವಾರು, ವಿಧಾನಸಭಾ ಕ್ಷೇತ್ರವಾರು, ಲೋಕಸಭಾ ಕ್ಷೇತ್ರವಾರು, ರಾಜ್ಯವಾರು, ದೇಶದ ಪ್ರಗತಿ ಪರಿಶೀಲನೆ ಮೂರು ತಿಂಗಳಿಗೊಮ್ಮೆ, ಆಯಾ ಮಟ್ಟದ ಚುನಾಯಿತ ಜನಪ್ರತಿನಿಧಿಗಳ ಅಧ್ಯಕ್ಷತೆಯಲ್ಲಿ ಪ್ರತಿಯೊಂದು ಯೋಜನೆಯ ಬಗ್ಗೆ ನಡೆಯಲೇ ಬೇಕು.ಈ ಸಭೆಗಳಿಗೆ ‘ಟೆಂಪ್ಲೇಟ್’ ಗಳ ಅಗತ್ಯವೂ ಇದೆ.
ಓದ ಪುಟ್ಟ, ಬಂದ ಪುಟ್ಟ ಎಂಬ ಕಾಟಾಚಾರಕ್ಕೆ ಸಭೆಗಳು ನಡೆಯುವ ಹಾಗಿಲ್ಲ. ಎಲ್ಲಾ ಹಂತದ ಚುನಾಯಿತ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಜನತೆ ವಸ್ತು ಸ್ಥಿತಿಯ ಬಗ್ಗೆ ಪಾರದರ್ಶಕವಾಗಿ ತಿಳಿಯಲೇ ಬೇಕಲ್ಲವೇ? ಆಗ ಮಾತ್ರ ನಿರ್ಧಿಷ್ಠ ಗುರಿ ತಲುಪಬಹುದಾಗಿದೆ.
ಒಬ್ಬ ವ್ಯಕ್ತಿಯ ವಾರ್ಷಿಕ ತಲಾ ಆದಾಯ ರೂ 100000 ಲಕ್ಷ ಆಗಬೇಕಾದರೆ, ದೇಶದ ಪ್ರತಿಯೊಬ್ಬ ವ್ಯಕ್ತಿಯ ಕನಸುಗಳಿಗೆ ಸ್ಪಂಧಿಸಬೇಕಲ್ಲವೇ? 100000 ಜನಸಂಖ್ಯೆಗೆ ಒಂದು ಆಸ್ಪತ್ರೆ ಇರಬೇಕು ಎಂದಾದರೇ ದೇಶದ ಎಲ್ಲಾ ಕಡೇ ಇರಲೇ ಬೇಕಲ್ಲವೇ? ಜಿಐಎಸ್ ಲೇಯರ್ ಸಹಿತ ಗುರುತು ಮಾಡಿ, ಕಾಲಮತಿ ನಿಗದಿಯೊಂದಿಗೆ ಗುರಿ ತಲುಪಬೇಕಲ್ಲವೇ?
‘ಗುರುತೇ ಮಾಡಿಲ್ಲ ಎಂದಾದರೆ–ಗುರಿ ಹೇಗೆ ತಲುಪುತ್ತೀರಿ’ ‘ನಾಲೇಡ್ಜ್ ಬ್ಯಾಂಕ್ @ 2047’ ರ ಪರಿಕಲ್ಪನೆ, ಈ ಮಾಹಿತಿಗಳ ಸಂಗ್ರಹಣೆ, ವಿಶ್ಲೇಷಣೆ ಮತ್ತು ಜಾಗೃತಿ ಆಗಿದೆ.