TUMAKURU:SHAKTHIPEETA FOUNDATION
ವಿಧಾನಪರಿಷತ್ ಸದಸ್ಯರಾದ ಶ್ರೀ ಡಾ.ತಳವಾರ ಸಾಬಣ್ಣನವರು ಒಳ್ಳೆಯ ವಿಚಾರದ ಬಗ್ಗೆ ಸದನದಲ್ಲಿ ಸರ್ಕಾರದ ಗಮನ ಸೆಳೆದಿದ್ದಾರೆ. ಅಭಿನಂದನೆ ಸಲ್ಲಿಸಲೇ ಬೇಕು. ಇವುಗಳ ಪುಶ್ಛೇತನಕ್ಕೆ ರೂಪುರೇಷೆ ಸಿದ್ಧಪಡಿಸಿ, ಯಶಸ್ವಿಯಾಗಿ ಕಾರ್ಯ ನಿರ್ವಹಿಸುವವರಿಗೂ ಕಡತದ ಅನುಸರಣೆ ಮಾಡುವ ಅಗತ್ಯವಿದೆ.

ಮೋದಿಯವರು ಕೇಂದ್ರ ಸರ್ಕಾರದ 2024-25 ರ ಆಯವ್ಯಯದಲ್ಲಿ ಸಂಶೋಧನೆಗೆ ಒಂದು ಲಕ್ಷಕೋಟಿ ಅನುದಾನ ಮೀಸಲಿಟ್ಟಿದ್ದಾರೆ. ಈ ಅಧ್ಯಯನ ಪೀಠಗಳಿಗೆ 224 ವಿಧಾನಸಭಾ ಕ್ಷೇತ್ರವಾರು ವ್ಯಾಪ್ತಿ ºಂಚಿಕೆ ಮಾಡಿ, ಈ ಅನುದಾನವನ್ನು ಬಳಸಿಕೊಂಡು 2047 ರ ವೇಳೆಗೆ ಹೇಗೆ ಅಭಿವೃದ್ಧಿ ಹೊಂದಿದ ಭಾರತ ಆಗಬೇಕು ಎಂಬ ಬಗ್ಗೆ ಅಧ್ಯಯನ ಆರಂಭಿಸಲು ಸಜ್ಜಾಗಬೇಕಿದೆ.
ಇವುಗಳಲ್ಲದೆ ಸರ್ಕಾರದ ಟ್ರಸ್ಟ್‍ಗಳ ಕಡೆಯು ವಿಶೇಷ ಗಮನ ಹರಿಸಬೇಕಿದೆ.

