TUMAKURU:SHAKTHIPEETA FOUNDATION
ಮುಖ್ಯ ಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರು ಮಂಡಿಸಿದ 2024-2025 ಆಯವ್ಯಯ ‘ಕರ್ನಾಟಕ ಡಾಟಾ ರಾಜ್ಯ’ ವಾಗಿ ಘೋಷಣೆ ಮಾಡಲು ಪೂರಕವಾಗಿದೆ. ಘೋಷಣೆ ಮಾಡಿದ ರೀತಿ ಅನುಷ್ಠಾನ ಕೈಗೊಂಡರೆ ಭವಿಷ್ಯದಲ್ಲಿ ‘ಕರ್ನಾಟಕ ಮಾದರಿ ಅಭಿವೃದ್ಧಿ’ ಇತರೆ ರಾಜ್ಯಗಳಿಗೆ ಪ್ರೇರಣೆ ಆಗಲಿದೆ.
ಕೇಂದ್ರ ಸರ್ಕಾರದ ಬಹುತೇಕ ಎಲ್ಲಾ ಇಲಾಖೆಗಳ ಯೋಜನೆಗಳನ್ನೂ ರಾಜ್ಯದಲ್ಲಿ ಜಾರಿಗೊಳಿಸುವಂಥ, ಈ ಆಯವ್ಯಯ. ಕೇಂದ್ರ ಸರ್ಕಾರದಿಂದ ಹೆಚ್ಚಿಗೆ ಅನುದಾನ ಪಡೆಯಲು ಸರ್ಕಸ್ ಮಾಡಿದಂತಿದೆ. ಎಲ್ಲಾ ವರ್ಗದವರಿಗೂ ಯೋಜನೆಗಳಿವೆ,
ಚುನಾವಣಾ ಆಯವ್ಯಯವೂ ಹೌದು, ಗ್ಯಾರಂಟಿ ಆಯವ್ಯಯವೂ ಹೌದು, ಭಾಗ್ಯಗಳ ಆಯವ್ಯಯವೂ ಹೌದು ಮತ್ತು ಮಾದರಿ ರಾಜ್ಯವಾಗವ ಯೋಜನೆಗಳ ಆಯವ್ಯಯವೂ ಹೌದು.
2047 ಕ್ಕೆ ಅಭಿವೃದ್ಧಿ ಹೊಂದಿದ ಕನಸು ಕಾಣುತ್ತಿರುವ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರ ಪರಿಕಲ್ಪನೆಗೆ, ದಿಟ್ಟ ಹೆಜ್ಜೆ ಇಟ್ಟಿದ್ದಾರೆ ನಮ್ಮ ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು.
ಇದೂವರೆಗೂ ಭಾಗ್ಯಗಳ ರಾಮಯ್ಯ, ಗ್ಯಾರಂಟಿಗಳ ರಾಮಯ್ಯ ಎನ್ನುತ್ತಿದ್ದವರು, ಈಗ ‘ಡಿಜಿಟಲ್ ರಾಮಯ್ಯ’ ಎಂದರೆ ಅತಿಶಯೋಕ್ತಿ ಆಗಲಾರದು.
ಮಾಜಿ ಮುಖ್ಯಮಂತ್ರಿಯವರಾದ ಶ್ರೀ ಎಸ್.ಎಂ.ಕೃಷ್ಣರವರ ಡಿಜಿಟಲ್ ಬ್ರ್ಯಾಂಡ್, ಮತ್ತೊಮ್ಮೆ ವಿಶ್ವದ ಗಮನ ಸೆಳೆಯಲಿದೆ. ಮಾಜಿ ಪ್ರಧಾನಿಯವರಾರ ದಿ.ರಾಜೀವ್ ಗಾಂಧಿಯವರು, ಶ್ರೀ ಮನಮೋಹನ್ ಸಿಂಗ್ ರವರ ಮತ್ತು ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ‘ಡಿಜಿಟಲ್ ಕ್ರಾಂತಿ’ಗೆ ಕರ್ನಾಟಕ ಮುನ್ನುಡಿ ಬರೆಯಲಿದೆ.
ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ.ಶಿವಕುಮಾರ್ ರವರು ಬ್ರ್ಯಾಂಡ್ ಬೆಂಗಳೂರು ಕನಸಿಗೆ ಚಾಲನೆ ನೀಡಿದ್ದಾರೆ. ಬಹುತೇಕ ಎಲ್ಲಾ ಇಲಾಖಾ ಸಚಿವರು ಬಹಳ ಕಸರತ್ತು ಮಾಡಿದ್ದಾರೆ.