22nd December 2024
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲೆಯ ರೈತರಿಗೆ ಹೇಮಾವತಿ ಯೋಜನೆಯ ಶ್ರೀ ರಂಗ ಪೈಪ್ ಲೈನ್ ಯೋಜನೆಯಿಂದ, ಮರಣ ಶಾಸನ ಬರೆಯುವ ಯೋಜನೆ ಈ ಆಯವ್ಯಯದಲ್ಲಿದೆ. ಈಗಾಗಲೇ ಸಚಿವ ಸಂಪುಟದ ಅನುಮೋದನೆಯಾಗಿದ್ದರೂ, ಜಿಲ್ಲೆಯ ಯಾವುದೇ ಪಕ್ಷದ ಯಾವೊಬ್ಬ ನಾಯಕರು ಚಕಾರವೆತ್ತಿಲ್ಲ. ಜಾಣ ಮೌನ ವಹಿಸಿದ್ದಾರೆ.

ಕುಣಿಗಲ್ ತಾಲ್ಲೋಕಿನ ಕೆಲವು ಕೆರೆಗಳಿಗೆ ಅನೂಕೂಲವಾದರೂ, ತುಮಕೂರು ಜಿಲ್ಲೆಯ ಹೇಮಾವತಿ ನೀರಿನ ಜಲದರೋಡೆ ಎಂದರೂ ತಪ್ಪಾಗಲಾರದು.

 ಅಂದಿನ ಹೇಮಾವತಿ ಲಿಂಕ್ ಕೆನಾಲ್ ಅಥವಾ ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ಯೋಜನೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಶ್ರೀ ಹೆಚ್.ಡಿ.ದೇವೇಗೌಡರಿಗೆ, ಭಾರಿ ಹೊಡೆತ ನೀಡಿತ್ತು. ಆಂದೋಲನವಾಗಿ ರೂಪು ಗೊಂಡಿತ್ತು. ಶ್ರೀ ಜಿ.ಎಸ್.ಬಸವರಾಜ್ ರವರಿಗೆ ಬಹಳ ಅನೂಕೂಲವಾಗಿತ್ತು. ಈಗ ಎಲ್ಲರೂ ಗಪ್ ಚುಪ್’.

ಉಳಿದಂತೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಅನೂಕೂಲವಾಗುವ ಯೋಜನೆಗಳು ಕೆಳಕಂಡಂತಿವೆ.

  1. 74 ನೇ ವಿಷಯ: ಮೇಕೆದಾಟು
  2. 75 ನೇ ವಿಷಯ: ಎತ್ತಿನಹೊಳೆ
  3. 77 ನೇ ವಿಷಯ: ಭಧ್ರಾಮೇಲ್ದಂಡೆ
  4. 84 ನೇ ವಿಷಯ: 166.9 ಕೀಮೀ ವರೆಗೆ ತುಮಕೂರು ಹೇಮಾವತಿ ನಾಲಾ ಆಧುನೀಕರಣ
  5. 88 ನೇ ವಿಷಯ: ಶ್ರೀ ರಂಗ ಪೈಪ್ ಲೈನ್ ಯೋಜನೆ
  6. 88 ನೇ ವಿಷಯ: ಗುಬ್ಬಿ ತಾಲ್ಲೋಕು ಮಠದಹಳ್ಳಿ ಹೇಮಾವತಿ ಕುಡಿಯುವ ನೀರಿನ ಯೋಜನೆ.
  7. 226 ನೇ ವಿಷಯ: ಜಿಲ್ಲಾಮಟ್ಟದ ಇನ್ ಕ್ಯುಬೇಷನ್ ಸೆಂಟರ್
  8. 237 ನೇ ವಿಷಯ: ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಇ-ಆಫೀಸ್
  9. 270 ನೇ ವಿಷಯ: ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ-2 ಅಡಿಯಲ್ಲಿ ತುಮಕೂರು ಮಹಾನಗರ ಪಾಲಿಕೆಗೆ ರೂ 200 ಕೋಟಿ
  10. 270 ನೇ ವಿಷಯ: ತುಮಕೂರಿನ ವಸಂತನರಸಾಪುರದಲ್ಲಿ ಇಂಟಿಗ್ರೇಟೆಡ್ ಟೌನ್‍ಶಿಪ್
  11. 270 ನೇ ವಿಷಯ: ಬೆಂಗಳೂರು ಬಿಐಇಸಿ ಯಿಂದ ತುಮಕೂರು ವರೆಗೆ ಮೆಟ್ರೋ.
  12. 272 ನೇ ವಿಷಯ: ತುಮಕೂರು ನಗರ ಹೊರತು ಪಡಿಸಿ ಜಿಲ್ಲೆಯ 10 ನಗರಗಳಿಗೆ ಅಮೃತ-2 ಯೋಜನೆಯಿಂದ ಕುಡಿಯುವ ನೀರಿನ ಯೋಜನೆ.
  13. 332 ನೇ ವಿಷಯ: ಮಿನಿ ಜವಳಿ ಪಾಕ್
  14. 337 ನೇ ವಿಷಯ: ಉದಯೋನ್ಮುಖ ತಂತ್ರಜ್ಞಾನದಲ್ಲಿ ಕೌಶಲ್ಯ ಮತ್ತು ನಾವೀನ್ಯತಾ ಕೇಂದ್ರ ಕೇಂದ್ರ 
  15. 340 ನೇ ವಿಷಯ: ತುಮಕೂರಿನಲ್ಲಿ ವಿಜ್ಞಾನ ಕೇಂದ್ರದ ಮುಂದುವರೆದ ಕಾಮಗಾರಿ.
  16. 374 ನೇ ವಿಷಯ:ಮಧುಗಿರಿ ಏಕಶಿಲಾ ಬೆಟ್ಟಕ್ಕೆ ಕೇಬಲ್ ಕಾರ್/ ರೋಪ್ ವೇ
  17. 396  ನೇ ವಿಷಯ: ಜಿಲ್ಲೆಯ ಎಲ್ಲಾ ಗ್ರಾಮಠಾಣಗಳ ಡ್ರೋನ್  ಸರ್ವೇ.
  18. 445 ನೇ ವಿಷಯ: ಮಧುಗಿರಿಯಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ
  19. 445 ನೇ ವಿಷಯ: ತುಮಕೂರಿನಲ್ಲಿ ಸೀಜಿಂಗ್ ಯಾರ್ಡ್

–      ಕುಂದರನಹಳ್ಳಿ ರಮೇಶ್