22nd December 2024
Share

TUMAKURU:SHAKTHIPEETA FOUNDATION

  ಥೂ, ಛೀ, ರೌಡಿಸಂ ಇವೆಲ್ಲಾ ವಿಧಾನಸಭೆಯಲ್ಲಿ ಕೇಳುವ ಸಂಸ್ಕøತ, ಕೇಂದ್ರ ಸರ್ಕಾರದ ಆಯವ್ಯಯವನ್ನು ಕಾಂಗ್ರೆಸ್‍ನವರು ಟೀಕಿಸುವುದು. ರಾಜ್ಯ ಸರ್ಕಾರದ ಆಯವ್ಯಯವನ್ನು ಬಿಜೆಪಿಯವರು ಟೀಕಿಸುವುದು.

ಇದಕ್ಕಿಂತ ನಾಚಿಕೆಗೇಡು ಇನ್ನೇನಿದೆ. ಒಳ್ಳೆಯದನ್ನು ಒಳ್ಳೆಯದು ಎನ್ನಲಿ, ಕೆಟ್ಟದ್ದನ್ನು ಕೆಟ್ಟದು ಎನ್ನಲಿ. ನ್ಯಾಯಾಲಯದಲ್ಲಿ ಕೇಸು ದಾಖಲಿಸಲಿ. ಇದೂ ಅವರಿಗೆ ಬೇಕಾಗಿಲ್ಲ. ನಿಖರವಾದ ಮಾಹಿತಿ ಯಾವುದೇ ಪಕ್ಷದ ಕಚೇರಿಯಲ್ಲೂ ಬಹುತೇಕ ಇಲ್ಲ, ಯಾವೊಬ್ಬ ಪಕ್ಷದ ನಾಯಕರ ಬಳಿಯೂ ಇಲ್ಲ. ಎಲ್ಲಾ ಗಾಳಿಯಲ್ಲಿ ಗುಂಡು ಹಾರಿಸಿದ ಹಾಗಿದೆ ಇವರ ವಾದ-ವಿವಾದ.

ಯಾವುದೇ ಹಂತದ ಚುನಾಯಿತ ಜನಪ್ರತಿನಿಧಿ ಗೆದ್ದಾಗ ಅವರೆಲ್ಲ ಸರ್ವಜ್ಞ, ಸೋತಾಗ ದೇವರೇ ಬಲ್ಲ. ಯಾವುದೇ ಹಂತದ ಚುನಾವಣೆ ಬಂದಾಗ 6 ತಿಂಗಳು ದುಡ್ಡಿರುವ ಎಲ್ಲರೂ ಎಂಪಿ/ಎಂಎಲ್‍ಎ ಗಳೇ?

ನಂತರ ಎಲ್ಲಾ ಮಂಗಮಾಯ, ನೋಡಿ ಮತದಾರರು ಈಗಲೂ ಎಷ್ಟು ಅಮಾಯಕರಾಗಿದ್ದಾರೆ. ಚುನಾವಣೆಯಲ್ಲಿ ಎಲ್ಲಾ ಕೆಲಸ ಬಿಟ್ಟು ಜೈ ಎನ್ನುತ್ತಾರೆ, 5 ವರ್ಷ ನಿರಂತರವಾಗಿ ನನಗೇನು ಮಾಡಲಿಲ್ಲ ಎಂದು ಬೈದುಕೊಳ್ಳುತ್ತಾರೆ.

ಕೇಂದ್ರ ಸರ್ಕಾರದ ಅನುದಾನದಲ್ಲಿ ಮಲತಾಯಿ ಧೋರಣೆ, ಈ ಬಗ್ಗೆ ಅಧ್ಯಯನ ಮಾಡುವುದು ಅಷ್ಟು ಸುಲಭದ ಮಾತಲ್ಲ. ಯಾರಿಗೂ ನಿರ್ಧಿಷ್ಠ ಜವಾಬ್ಧಾರಿ ಇಲ್ಲ. ಆದರೂ ನೂರಾರು ಜನ ಜ್ಞಾನಿಗಳು ಇದ್ದಾರೆ, ವಿಚಾರ ತಿಳಿದು ಕೊಂಡಿದ್ದಾರೆ, ಅವರಲ್ಲಿರುವ ಮಾಹಿತಿಗಳ ಸಂಗ್ರಹ ಮಾಡುವುದು ಅಗತ್ಯವಾಗಿದೆ.

ಕುಂದರನಹಳ್ಳಿ ರಮೇಶ್ ರವರು ಶಕ್ತಿಪೀಠ ಫೌಂಡೇಷನ್ ಮೂಲಕ, ಆರಂಭಿಸುತ್ತಿರುವ ನಾಲೇಡ್ಜ್ ಬ್ಯಾಂಕ್ @ 2047 ಪ್ರಮುಖ ಉದ್ದೇಶವೇ ಇದಾಗಿದೆ.

  1. ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಅಭಿವೃದ್ಧಿ ಹೊಂದಿದ ಭಾರತ @ 2047
  2. ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರ ಕರ್ನಾಟಕ ಅಭಿವೃದ್ಧಿ ಮಾದರಿ
  3. ಉಪಮುಖ್ಯಮಂತ್ರಿ ಶ್ರೀ ಡಿ.ಕೆ.ಶಿವಕುಮಾರ್ ರವರ ‘ಬ್ರ್ಯಾಂಡ್ ಬೆಂಗಳೂರು

ಈ ಎಲ್ಲಾ ಪರಿಕಲ್ಪನೆಗಳ ಮಾಹಿತಿಗಳ ತವರು ಮನೆ ಆಗಲಿದೆ, 

ಶಕ್ತಿಭವನದ ಕಟ್ಟಡದಲ್ಲಿ ಶಕ್ತಿಪೀಠ, ಜಲಪೀಠ ಮತ್ತು ಅಭಿವೃದ್ಧಿ ಪೀಠಗಳ, ಜ್ಞಾನಿಗಳ ಮತ್ತು ಅವರ ಜ್ಞಾನಗಳ ಸಂಗ್ರಹ ಯಾವ ರೀತಿ ಮಾಡಬೇಕು. ಹೇಗೆ ಮಾಡಬೇಕು, ಎಲ್ಲಿಂದ ಆರಂಭಿಸಬೇಕು, ಎಂಬ ಚರ್ಚೆ ಈಗ  ಆರಂಭವಾಗಿದೆ.

ಶಕ್ತಿಭವನ ಕಟ್ಟಡ ಲೋಕಾರ್ಪಣೆ ಮಾಡುವ ಮುನ್ನವೇ ಸಾಕಷ್ಟು ಕಸರತ್ತು ಮಾಡಬೇಕಿದೆ. ನೂರಾರು ಜನರ ಜೊತೆ ಸಮಾಲೋಚನೆ ನಡೆಸಬೇಕಿದೆ. ನೂರಾರು ಸ್ಥಳಗಳಿಗೆ ಭೇಟಿ ನೀಡ ಬೇಕಿದೆ.

ಎಲ್ಲವೂ 108 ಶಕ್ತಿಪೀಠಗಳ ನೇತೃತ್ವದಲ್ಲಿ ಆರಂಭವಾಗಲಿದೆ.

ಶಕ್ತಿಪೀಠ: ಸುಮಾರು 7 ದೇಶಗಳಲ್ಲಿ ಇರುವ ವಿಶ್ವದ 108 ಶಕ್ತಿಪೀಠಗಳ ನಿಖರವಾದ ಮಾಹಿತಿಯನ್ನು ಸಂಗ್ರಹ ಮಾಡಬೇಕಿದೆ.

ಅಭಿವೃದ್ಧಿ ಪೀಠ : 2024-2025 ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಯವ್ಯಯ ಪತ್ರಗಳ ಯೋಜನೆಗಳಿಂದ ಆರಂಭಿಸಿ, 1947 ರವರೆಗೆ ಹಿಂದಕ್ಕೆ ಹೋಗಬೇಕಿದೆ. ಅದೇ ರೀತಿ ಮುಂದಿನ 2047 ರವರೆಗಿನ ಸರ್ಕಾರಗಳ ಆಲೋಚನೆ ಬಗ್ಗೆ ಜನ ಜಾಗೃತಿ ಮಾಡಬೇಕಿದೆ.

ರಾಜ್ಯದ ಪ್ರತಿಯೊಬ್ಬ ಮಾಜಿ ಮುಖ್ಯಮಂತ್ರಿಯವರ ಹಾಗೂ ದೇಶದ ಪ್ರತಿಯೊಬ್ಬ ಮಾಜಿ ಪ್ರಧಾನ ಮಂತ್ರಿವಾರು, ಇಲಾಖಾವಾರು ಯೋಜನೆಗಳ ವಿಶ್ಲೇಷಣೆ ಅಗತ್ಯವಾಗಿದೆ.

ಜಲಪೀಠ: ರಾಜ್ಯದ ಪ್ರತಿಯೊಂದು ಹನಿ ನೀರಿನ ಡಿಜಿಟಲ್ ಡಾಟಾ ವಿಶ್ಲೇಷಣೆ ಮಾಡಬೇಕಿದೆ. ಪ್ರತಿಯೊಬ್ಬ ನೀರಾವರಿ ತಜ್ಞರ/ ಪರಿಣಿತರ ಅಧ್ಯಯನ ವರದಿಗಳು ಇಲ್ಲಿಗೆ ಬರಲಿವೆ.

ಇವುಗಳ ಅನುಷ್ಠಾನಕ್ಕೆ ಉದ್ದೇಶಿತ 545 ಅಧ್ಯಯನ ಪೀಠಗಳು ನಿರಂತರವಾಗಿ ಶ್ರಮಿಸಬೇಕಿದೆ.

ದಿನಾಂಕ:22.02.2024 ರಿಂದ ಜ್ಞಾನಿಗಳವಾರು, ಇಲಾಖಾವಾರು ಮಾಹಿತಿ ಸಂಗ್ರಹ ಆರಂಭಿಸಲಾಗುವುದು. ಆಂದೋಲನವನ್ನು ಅತ್ಯಂತ ಸರಳವಾಗಿ ಅಗ್ನಿಹೋತ್ರ ಹೋಮ ಮಾಡಿ, ಪಂಚವಟಿ ಗಿಡಗಳಿಗೆ ಪ್ರದಕ್ಷಿಣೆ ಹಾಕಿ ಆರಂಭಿಸುವ ಆಲೋಚನೆ ಇದೆ.

ಒಂದು ಹಂತದ ಮಾಹಿತಿ ಸಂಗ್ರಹ ಮಾಡಿದ ನಂತರ, ಕಟ್ಟಡದ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡ ನಂತರ ಲೋಕಾರ್ಪಣೆ’ ಮಾಡುವ  ಚಿಂತನೆ ಕುಂದರನಹಳ್ಳಿ ರಮೇಶ್ ರವರದ್ದಾಗಿದೆ.

ಶಕ್ತಿಪೀಠ ಫ್ಯಾಮಿಲಿಗಳು ಮತ್ತು ಓದುಗರ ಸಲಹೆಗಾಗಿ ಮನವಿ.

–      ಅಗೋಚರ ಶಕ್ತಿ