21st December 2024
Share

TUMAKURU:SHAKTHI PEETA FOUNDATION

 ಕರ್ನಾಟಕ ರಾಜ್ಯ ಸರ್ಕಾರದ ಜಲಸಂಪನ್ಮೂಲ ಇಲಾಖೆ, ಕಾವೇರಿ ಆರತಿ’ ಕಾರ್ಯಕ್ರಮವನ್ನು ನೂತನಾವಾಗಿ ಆಯೋಜನೆ ಮಾಡುತ್ತಿರುವುದಕ್ಕೆ, ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರಿಗೆ, ಮಾನ್ಯ ಉಪಮುಖ್ಯ ಮಂತ್ರಿ ಹಾಗೂ ಜಲಸಂಪನ್ಮೂಲ ಇಲಾಖೆಯ ಸಚಿವರಾದ ಶ್ರೀ ಡಿ.ಕೆ.ಶಿವಕುಮಾರ್‍ರವರಿಗೆ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಚೆಲುವರಾಯಸ್ವಾಮಿರವರಿಗೆ ಮತ್ತು ಅವರ ತಂಡಕ್ಕೆ ಹೃದಯ ಪೂರ್ವಕ ಅಭಿನಂದನೆ ಸಲ್ಲಿಸಲು ಮತ್ತು ನಮ್ಮ ಅನಿಸಿಕೆಯ ಪರಿಕಲ್ಪನಾ ವರದಿ’ಅಂಶಗಳನ್ನು ನೀಡಲು ನಿಯೋಗ ಹೋಗಲು ನಿರ್ಧರಿಸಲಾಗಿದೆ.

  ಈ ಕಾವೇರಿ ಆರತಿ ಅಂತರಾಷ್ಟ್ರೀಯ ಮಟ್ಟದ ಗಮನ ಸೆಳೆಯಬೇಕು’. ಲಕ್ಷಾಂತರ ಜನರಿಗೆ ಉದ್ಯೋಗ ಸೃಷ್ಠಿಸಬೇಕು, ನಮ್ಮ ಕನ್ನಡ ನಾಡಿನ ಪರಂಪರೆಯನ್ನು ಪ್ರದರ್ಶನ ಮಾಡುವ ರೂಪುರೇಷೆಗಳು ಸಿದ್ಧವಾಗಬೇಕು. ನಾಡಿನ ಎಲ್ಲಾ ವರ್ಗದ ಜನರನ್ನು ತೊಡಗಿಸಿಕೊಳ್ಳಬೇಕು. ಆದ್ದರಿಂದ ನಿಯೋಗದಲ್ಲಿ ಭಾಗವಹಿಸುವವರು ಸಂಪರ್ಕಿಬಹುದು. ಆಸಕ್ತ ಜ್ಞಾನ ದಾನಿ’ ಗಳು ತಮ್ಮ ಸಲಹೆಗಳನ್ನು ನೀಡಬಹುದಾಗಿದೆ.

1.ಜಲಸಂಪನ್ಮೂಲ ಇಲಾಖೆ: ಕಾವೇರಿ ಉಗಮ ಸ್ಥಾನದಿಂದ ತಮಿಳುನಾಡಿಗೆ ಪ್ರವೇಶ ಮಾಡುವವರೆಗೂ ನದಿ ಪಾತ್ರದ ಎರಡು ಕಡೆ ಸಮಗ್ರ ಅಭಿವೃದ್ಧಿ ಮಾಡುವುದು. ವಿಶ್ವದ ಪ್ರತಿಯೊಂದು ಆರತಿಗಳಿಗಿಂತಲೂ ನಮ್ಮ ಕಾವೇರಿ ಆರತಿ ವಿಶಿಷ್ಟವಾದ ರೂಪು ರೇಷೆ ಹೊಂದಿರ ಬೇಕು. ಎಲ್ಲಾ ಆರತಿಗಳ ಮಹತ್ವದ ಕಾರಿಡಾರ್’ ಆಗಿ ನಿರ್ಮಾಣ ಮಾಡುವುದು. ರಾಜ್ಯದ ಎಲ್ಲಾ ನದಿ ಪಾತ್ರಗಳ ಕಾರಿಡಾರ್’ ನಿರ್ಮಾಣ ಮಾಡುವುದು.

2.ಸಣ್ಣ ನೀರಾವರಿ ಇಲಾಖೆ: ಕಾವೇರಿ ಉಗಮ ಸ್ಥಾನದಿಂದ ತಮಿಳುನಾಡಿಗೆ ಪ್ರವೇಶ ಮಾಡುವವರೆಗೂ ಎರಡು ಕಡೆ ಸುಮಾರು  ಒಂದು ಕೀಮೀ ದೂರದ ಎಲ್ಲಾ ಕೆರೆ-ಕಟ್ಟೆಗಳಿಗೆ ನದಿ ನೀರು ತುಂಬಿಸಿ ಸಮಗ್ರ ಅಭಿವೃದ್ಧಿ ಪಡಿಸುವುದು. ಎಲ್ಲಾ ಜಲಸಂಗ್ರಹಾಗಾರಗಳನ್ನು ಗಂಗಾಮಾತಾ ದೇವಾಲಯ’ ಎಂದು ಘೋಷಣೆ ಮಾಡುವುದು.

3.ಪ್ರವಾಸೋಧ್ಯಮ ಇಲಾಖೆ: ಕಾವೇರಿ ಉಗಮ ಸ್ಥಾನದಿಂದ ತಮಿಳುನಾಡಿಗೆ ಪ್ರವೇಶ ಮಾಡುವವರೆಗೂ ಇರುವ ಎಲ್ಲಾ ಪ್ರವಾಸಿ ಕೇಂದ್ರಗಳನ್ನು ಅಭಿವೃದ್ಧಿ ಪಡಿಸಿ ‘ಪ್ರವಾಸಿ ಕಾರಿಡಾರ್’ ಆಗಿ ಘೋಷಣೆ ಮಾಡುವುದು.

4.ಮುಜರಾಯಿ ಇಲಾಖೆ: ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಾಲಯದಿಂದ ಕಾವೇರಿ ಆರತಿ ನಡೆಯುವ ಪ್ರದೇಶದ ವರೆಗೂ ‘ವಿಶ್ವದ 108 ಶಕ್ತಿಪೀಠಗಳ ಕಾರಿಡಾರ್’ ಆಗಿ ನಿರ್ಮಾಣ ಮಾಡುವುದು.

5.ಕನ್ನಡ ಮತ್ತು ಸಂಸ್ಕøತಿ ಇಲಾಖೆ: ಕಾವೇರಿ ಉಗಮ ಸ್ಥಾನದಿಂದ ತಮಿಳುನಾಡಿಗೆ ಪ್ರವೇಶ ಮಾಡುವವರೆಗೂ ಎರಡು ಕಡೆ ಇರುವ ಗ್ರಾಮವಾರು ಕನ್ನಡ ನಾಡಿನ ಸಂಸ್ಕøತಿ ಬಿಂಬಿಸುವ ಕಾರಿಡಾರ್’ ಆಗಿ ನಿರ್ಮಾಣ ಮಾಡುವುದು.

6.ಹಜ್ ಮತ್ತು ವಕ್ಪ್ ಇಲಾಖೆ: ವಿಶ್ವದ ಎಲ್ಲಾ ಧರ್ಮದ ಸಮುದಾಯಗಳು ಶಕ್ತಿದೇವತೆ-ನೀರು (ಗಂಗಾಮಾತೆಗೆ) – ವೃಕ್ಷಗಳಿಗೆ ನೀಡಿರುವ ಧಾರ್ಮಿಕ ಪದ್ಧತಿಗಳ ಕಾರಿಡಾರ್’ ಆಗಿ ನಿರ್ಮಾಣ ಮಾಡುವುದು.

7.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ: ಕಾವೇರಿ ಉಗಮ ಸ್ಥಾನದಿಂದ ತಮಿಳುನಾಡಿಗೆ ಪ್ರವೇಶ ಮಾಡುವವರೆಗೂ ಎರಡು ಕಡೆ ಇರುವ ಗ್ರಾಮವಾರು ಇರುವ ಸರ್ಕಾರಿ ಜಮೀನು ಗುರುತಿಸಿ ‘ರೂರಲ್ ಹಾತ್ ಮತ್ತು ವಿವಿಧ ಮಾರು ಕಟ್ಟೆ’ ನಿರ್ಮಾಣ ಮಾಡುವುದು.

8.ಕಂದಾಯ ಇಲಾಖೆ: ಕಾವೇರಿ ಉಗಮ ಸ್ಥಾನದಿಂದ ತಮಿಳುನಾಡಿಗೆ ಪ್ರವೇಶ ಮಾಡುವವರೆಗೂ ಎರಡು ಕಡೆ ಇರುವ ಗ್ರಾಮವಾರು ಗೋಮಾಳ ಮತ್ತು ಅಮೃತಕಾವಲ್ ಗುರುತಿಸಿ, ಪಶುಗಳಿಗೆ ಮೇವು ಅಭಿವೃದ್ಧಿ ಕಾರಿಡಾರ್’ ಪಡಿಸುವುದು. 

9.ಪಶುಸಂಗೋಪನಾ ಇಲಾಖೆ: ಕಾವೇರಿ ಉಗಮ ಸ್ಥಾನದಿಂದ ತಮಿಳುನಾಡಿಗೆ ಪ್ರವೇಶ ಮಾಡುವವರೆಗೂ ಎರಡು ಕಡೆ ಇರುವ ಗ್ರಾಮವಾರು ಗೋಮಾಳ ಮತ್ತು ಅಮೃತಕಾವಲ್ ಗುರುತಿಸಿ, ಪಶುಗಳಿಗೆ ಮೇವು ಅಭಿವೃದ್ಧಿ ಪಡಿಸುª ಸ್ಥಳದಲ್ಲಿ ಒಂದೊಂದು ಕಡೆ, ಒಂದೊಂದು ತಳೀಯ ದೇಸಿ ಹಸುಗಳನ್ನು ಸಾಕಲು ರೈತರಿಗೆ, ನಿರುದ್ಯೋಗಿಗಳಿಗೆ ಗೋಮಾತಾ ಕಾರಿಡಾರ್’ ಆಗಿ ನಿರ್ಮಾಣ ಮಾಡಿ, ಗೋ ಉತ್ಪನ್ನಗಳನ್ನು ರಫ್ತು ಮಾಡುವ ಮೂಲಕ ಆದಾಯ ವೃದ್ಧಿ ಮಾಡಲು ಯೋಜನೆ ರೂಪಿಸುವುದು.

10.ನಗರಾಭಿವೃದ್ಧಿ ಇಲಾಖೆ: ಕಾವೇರಿ ಉಗಮ ಸ್ಥಾನದಿಂದ ತಮಿಳುನಾಡಿಗೆ ಪ್ರವೇಶ ಮಾಡುವವರೆಗೂ ಎರಡು ಕq ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅರ್ಬನ್ ಹಾತ್’ ನಿರ್ಮಾಣ ಮಾಡುವುದು.

11.ಫೌರಾಡಳಿತ ಇಲಾಖೆ: ಕಾವೇರಿ ಉಗಮ ಸ್ಥಾನದಿಂದ ತಮಿಳುನಾಡಿಗೆ ಪ್ರವೇಶ ಮಾಡುವವರೆಗೂ ಎರಡು ಕಡೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ‘ಅರ್ಬನ್ ಹಾತ್’ ನಿರ್ಮಾಣ ಮಾಡುವುದು.

12.ಅರಣ್ಯ ಇಲಾಖೆ: ಕಾವೇರಿ ಉಗಮ ಸ್ಥಾನದಿಂದ ತಮಿಳುನಾಡಿಗೆ ಪ್ರವೇಶ ಮಾಡುವವರೆಗೂ ಎರಡು ಕಡೆ ಗ್ರೀನ್ ಕಾರಿಡಾರ್’ ನಿರ್ಮಾಣ ಮಾಡಿ, ಎಲ್ಲಾ ಜಾತೀಯ ಗಿಡಗಳನ್ನು ಬೆಳೆಸುವುದು ಮತ್ತು ಸರ್ವಧರ್ಮಗಳು ಗಿಡಗಳಿಗೆ ನೀಡುವ ಧಾರ್ಮಿಕ ಮಹತ್ವದ ಕಾರಿಡಾರ್’ ಆಗಿ ನಿರ್ಮಾಣ ಮಾಡುವುದು. ಎರಡು ಕಡೆ ವಿವಿಧ ಜಾತೀಯ ಜೀವ ವೈವಿಧ್ಯಗಳ ಕಾರಿಡಾರ್’ ಆಗಿ ನಿರ್ಮಾಣ ಮಾಡುವುದು.

13.ಲೋಕೋಪಯೋಗಿ ಇಲಾಖೆ: ಕಾವೇರಿ ಉಗಮ ಸ್ಥಾನದಿಂದ ತಮಿಳುನಾಡಿಗೆ ಪ್ರವೇಶ ಮಾಡುವವರೆಗೂ ಎರಡು ಕಡೆ ಬರುವ ಎಲ್ಲಾ ವರ್ಗದ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಗಳ ಗುಣಮಟ್ಟದ ರಸ್ತೆ’ ಗಳನ್ನಾಗಿ ಮೇಲ್ದರ್ಜೆಗೆ ಉನ್ನತೀಕರಿಸಿ ಸಮಗ್ರ ಅಭಿವೃದ್ಧಿ ಪಡಿಸುವುದು.

14.ಕೃಷಿ ಇಲಾಖೆ: ಕಾವೇರಿ ಉಗಮ ಸ್ಥಾನದಿಂದ ತಮಿಳುನಾಡಿಗೆ ಪ್ರವೇಶ ಮಾಡುವವರೆಗೂ ಎರಡು ಕಡೆ, ವಿವಿಧ ಕೃಷಿ ಉತ್ಪನ್ನಗಳ ಕ್ಲಸ್ಟರ್’ ನಿರ್ಮಾಣ ಮಾಡುವುದು.

15.ತೋಟಗಾರಿಕಾ ಇಲಾಖೆ: ಕಾವೇರಿ ಉಗಮ ಸ್ಥಾನದಿಂದ ತಮಿಳುನಾಡಿಗೆ ಪ್ರವೇಶ ಮಾಡುವವರೆಗೂ ಎರಡು ಕಡೆ, ವಿವಿಧ ತೋಟಗಾರಿಕಾ ಉತ್ಪನ್ನಗಳ ಕ್ಲಸ್ಟರ್’ ನಿರ್ಮಾಣ ಮಾಡುವುದು.

16.ರೇಷ್ಮೆ ಇಲಾಖೆ: ಕಾವೇರಿ ಉಗಮ ಸ್ಥಾನದಿಂದ ತಮಿಳುನಾಡಿಗೆ ಪ್ರವೇಶ ಮಾಡುವವರೆಗೂ ಎರಡು ಕಡೆ, ವಿವಿಧ ರೇಷ್ಮೆ ಉತ್ಪನ್ನಗಳ ಕ್ಲಸ್ಟರ್’ ನಿರ್ಮಾಣ ಮಾಡುವುದು.

17.ಸಣ್ಣ ಕೈಗಾರಿಕಾ ಇಲಾಖೆ: ಕಾವೇರಿ ಉಗಮ ಸ್ಥಾನದಿಂದ ತಮಿಳುನಾಡಿಗೆ ಪ್ರವೇಶ ಮಾಡುವವರೆಗೂ ಎರಡು ಕಡೆ, ಪರಿಸರಕ್ಕೆ ಹಾನಿಯಾಗದ ‘ರೈತರ ಮತ್ತು ಕುಶಲಕರ್ಮಿಗಳ ವಿವಿಧ ಉತ್ಪನ್ನಗಳ ಕ್ಲಸ್ಟರ್’ ನಿರ್ಮಾಣ ಮಾಡುವುದು.

18.ಸಾರಿಗೆ ಇಲಾಖೆ: ಕಾವೇರಿ ಉಗಮ ಸ್ಥಾನದಿಂದ ತಮಿಳುನಾಡಿಗೆ ಪ್ರವೇಶ ಮಾಡುವವರೆಗೂ ಎರಡು ಕಡೆ, ರೈಲ್ವೇ ಸ್ಟೇಷನ್, ವಿಮಾನ ನಿಲ್ಧಾಣ, ಜಿಲ್ಲಾ ಕೇಂದ್ರಗಳ ಬಸ್ ನಿಲ್ಧಾಣದಿಂದ ನೂತನ ಬಸ್ ಮಾರ್ಗ’ ಗಗಳನ್ನು ರೂಪಿಸುವುದು.ಅಗತ್ಯವಿರುವ ಕಡೆ ಹೈಟೆಕ್ ಬಸ್ ನಿಲ್ಧಾಣಗಳನ್ನು ನಿರ್ಮಾಣ ಮಾಡುವುದು.

19.ಉನ್ನತ ಶಿಕ್ಷಣ ಇಲಾಖೆ: ವ್ಯಾಪ್ತಿಗೆ ಬರುವ ಎಲ್ಲಾ ವಿಶ್ವ ವಿದ್ಯಾನಿಲಯಗಳು, ವಿದ್ಯಾರ್ಥಿಗಳ ಮೂಲಕ ಊರಿಗೊಂದು/ಬಡಾವಣೆಗೊಂದು ಪುಸ್ತಕ/ ವಿಷನ್ ಡಾಕ್ಯುಮೆಂಟ್ @ 2047’ ಸಿದ್ಧಪಡಿಸಿ, 2047 ರವರೆಗೆ ಎಲ್ಲಾ ವರ್ಗದವರ ಬೇಡಿಕೆಗಳ ಪಟ್ಟಿಯನ್ನು 0 % ಗೆ ಇಳಿಸಲು ಯೋಜನೆ ರೂಪಿಸುವುದು.

20.ಕ್ರೀಡಾ ಇಲಾಖೆ: ಕಾವೇರಿ ಉಗಮ ಸ್ಥಾನದಿಂದ ತಮಿಳುನಾಡಿಗೆ ಪ್ರವೇಶ ಮಾಡುವವರೆಗೂ ಎರಡು ಕಡೆ ಅಗತ್ಯವಿರುವ ಸ್ಥಳಗಳಲ್ಲಿ ವಿವಿಧ ಕ್ರೀಡೆಗಳ ಕ್ಲಸ್ಟರ್’ ನಿರ್ಮಾಣ ಮಾಡಬೇಕು.

  ಈ ಮಹತ್ವದ ಯೋಜನೆಗೆ, ಕೇಂದ್ರ ಸರ್ಕಾರದ ಯಾವ, ಯಾವ ಇಲಾಖೆಯಿಂದ ಅನುದಾನ ಮಂಜೂರು ಮಾಡಿಸಬಹುದು, ವಿವಿಧ ವರ್ಗದ ಜನರ ಅಭಿಪ್ರಾಯ ಸಂಗ್ರಹಿಸಲು ಸಮಾವೇಶಗಳನ್ನು ಆಯೋಜಿಸಲು, ವಿವಿಧ ಉದ್ದೇಶಗಳಿಗೆ ಸೂಕ್ತ ಸ್ಥಳ ಆಯ್ಕೆ ಮಾಡಲು, ಪ್ರಪಂಚದಲ್ಲಿನ ‘ಬೆಸ್ಟ್ ಪ್ರಾಕ್ಟೀಸ್’  ಸಂಗ್ರಹ ಮಾಡಲು,

 ತುಮಕೂರು ವಿಶ್ವ ವಿದ್ಯಾನಿಲಯ, ಅಭಿವೃದ್ಧಿ ರೆವೂಲ್ಯೂಷನ್ ಫೋರಂ, ಶಕ್ತಿಪೀಠ ಫೌಂಡೇಷನ್ ಸಹಭಾಗಿತ್ವದ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ, ತುಮಕೂರು ರೀಸರ್ಚ್ ಫೌಂಡೇಷನ್ @ 2047 ಮತ್ತು ನಾಲೇಡ್ಜ್ ಬ್ಯಾಂಕ್ @ 2047  ಸೇವೆ ಸಲ್ಲಿಸಲು ಉತ್ಸುಕವಾಗಿದೆ ಎಂಬ ಅಂಶಗಳನ್ನು ಸರ್ಕಾರದ ಗಮನಕ್ಕೆ ತರಲು ಉದ್ದೇಶಿಸಲಾಗಿದೆ.

–              ಕುಂದರನಹಳ್ಳಿ ರಮೇಶ್.