16th October 2024
Share

TUMAKURU:SHAKTHIPEETA FOUNDATION

  ಅಭಾವಪೀಡೀತ ಪ್ರದೇಶಗಳ ನೀರಾವರಿ ಅಭಿವೃದ್ಧಿ ಸಲಹಾ ಸಮಿತಿ(ಅಪ್ನಾಸ್),  ಅಭಿವೃದ್ಧಿ ರೆವೂಲ್ಯೂಷನ್ ಫೋರಂ, ಶಕ್ತಿಪೀಠ ಫೌಂಡೇಷನ್, ಭಾರತ ಸ್ವಾಂತಂತ್ರ್ಯ ಸೇನೆ @ 2047, ಇನ್ನೂ ಹಲವಾರು ಸಂಸ್ಥೆ ಸ್ಥಾಪಿಸಿ, ತುಮಕೂರು ನಗರದ, ಜಿಲ್ಲೆಯ, ರಾಜ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕಾಗಿ ಕಳೆದ 36 ವರ್ಷಗಳಿಂದ ಶ್ರಮಿಸಲಾಗಿದೆ. ಬಹುತೇಕ ಸಮಯ ತುಮಕೂರು ಲೋಕಸಭಾ ಮಾಜಿ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಜೊತೆಯೆ ಕಳೆಯಲಾಗಿದೆ.

 ಕರ್ನಾಟಕ ರಾಜ್ಯದ ಇಂದಿನ ಮುಖ್ಯ ಕಾರ್ಯದರ್ಶಿಯವರಾದ ಶ್ರೀಮತಿ ಶಾಲಿನಿ ರಜನೀಶ್ ವರವರು, ಅಂದು ಯೋಜನಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಮತ್ತು ರಾಜ್ಯ ಮಟ್ಟದ ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿ, ರಾಜ್ಯ ಮಟ್ಟದ ದಿಶಾ ಸಮಿತಿಯ ಸದಸ್ಯನಾಗಿದ್ದ, ನನಗೆ ನನ್ನ ಕನಸಿನ ಯೋಜನೆಗೆ ಸಹಕರಿಸಿದರು.

  ನನ್ನ ಮಗ ಕೆ.ಆರ್.ಸೋಹನ್ ರವರಿಗೆ ಪ್ರಾಜೆಕ್ಟ್ ವರ್ಕ್‍ಗೆ  ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ ಹೆಚ್ಚಿನ ಅನುದಾನ ತರಲು ಕಾರ್ಯತಂತ್ರ ರೂಪಿಸಲು, ಅಧ್ಯಯನ ಮಾಡಲು ಅವಕಾಶ ಕಲ್ಪಿಸಿದರು.

  ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ ಮಧ್ಯಂತರ ಕರಡು ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅಂತಿಮ ವರದಿ ನೀಡುವ ಮುನ್ನ ವರದಿಯ ಸಮಗ್ರ   ಅನುಷ್ಠಾನಕ್ಕಾಗಿ ತುಮಕೂರು ಜಿಲ್ಲೆಯನ್ನು ಪೈಲಟ್ ಯೋಜನೆಯಾಗಿ ಆಯ್ಕೆ ಮಾಡಿಕೊಂಡು, ನಿರ್ಧಿಷ್ಠ ಗುರಿ ತಲುಪಲು ಮತ್ತು ಮುಂದೊಂದು ದಿನ ಇಡೀ ರಾಜ್ಯಾದ್ಯಾಂತ, ದೇಶಾದ್ಯಂತ, ಈ ಯೋಜನೆ ಜಾರಿಗೊಳಿಸಲು, ಪಕ್ಷಾತೀತವಾಗಿ ತುಮಕೂರು ಜಿಲ್ಲೆಯ ಎಲ್ಲಾ ಹಾಲಿ ಮತ್ತು ಮಾಜಿ ಚುನಾಯಿತ ಜನಪ್ರತಿನಿಧಿಗಳ ನೇತೃತ್ವದಲ್ಲಿ ಶ್ರಮಿಸಲು ಪಣ ತೊಡಲಾಗಿದೆ. ಜೊತೆ ಜೊತೆಯಾಗಿ ರಾಜ್ಯಾದ್ಯಾಂತ ವಿಸ್ತರಿಸುವ ಆಲೋಚನೆಯೂ ಇದೆ.

   ತುಮಕೂರು ವಿಶ್ವವಿದ್ಯಾನಿಲಯದ ಸಹಭಾಗಿತ್ವದಲ್ಲಿ, ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ, ತುಮಕೂರು ರೀಸರ್ಚ್  ಫೌಂಡೇಷನ್ @ 2047, ನಾಲೇಡ್ಜ್ ಬ್ಯಾಂಕ್ @ 2047 ಹಾಗೂ ವಿಶ್ವ ವಿದ್ಯಾನಿಲಯದಲ್ಲಿ ಇರುವ ಎಲ್ಲಾ ಅಧ್ಯಯನ ಪೀಠಗಳ ನೇತೃತ್ವದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಹಕಾರದೊಂದಿಗೆ, ತುಮಕೂರಿನಲ್ಲಿರುವ ‘ಶಕ್ತಿಭವನ’ ದಲ್ಲಿ ಕಾರ್ಯಚಟುವಟಿಕೆ ಆರಂಭಿಸಲಾಗಿದೆ.

  ಈಗ ಕೆ.ಆರ್.ಸೋಹನ್ ಶಕ್ತಿಪೀಠ ಫೌಂಡೇಷನ್ ಸಿ.ಇ.ಓ ಗೆ ರಾಜಿನಾಮೆ ನೀಡಿದ್ದು, ಶಕ್ತಿಪೀಠ ಫೌಂಡೇಷನ್ ಮೂಲಕವಾಗಲಿ, ನಮ್ಮ ಕುಟುಂಬದ ಆದಾಯದಲ್ಲಾಗಲಿ, ತುಮಕೂರು ವಿಶ್ವವಿದ್ಯಾನಿಲಯದಲ್ಲಾಗಲಿ ಒಂದು ರೂಪಾಯಿ ಪಡೆಯದೇ, ಆತನ ವೈಯಕ್ತಿಕ ದುಡಿಮೆಯಲ್ಲಿಯೇ, ತುಮಕೂರು ರೀಸರ್ಚ್  ಫೌಂಡೇಷನ್ @ 2047, ನಾಲೇಡ್ಜ್ ಬ್ಯಾಂಕ್ @ 2047 ಸಿ.ಇ.ಓ ಆಗಿ ಕಾರ್ಯನಿರ್ವಹಿಸಲು ಇಚ್ಚೆ ವ್ಯಕ್ತಪಡಿಸಿದ್ದಾರೆ.

   ತುಮಕೂರು ವಿಶ್ವವಿದ್ಯಾನಿಲಯ ಜವಾಬ್ಧಾರಿ ನೀಡಿದಲ್ಲಿ ಮಾತ್ರ, ಸುಮಾರು 100 ಎಕರೆ ಸರ್ಕಾರಿ ಜಮೀನಿನಲ್ಲಿ, ತುಮಕೂರು ವಿಶ್ವವಿದ್ಯಾನಿಲಯದ /ರಾಜ್ಯ/ಕೇಂದ್ರ ಸರ್ಕಾರದ ಆಸ್ತಿಯಾಗಿ, ಅಂತರರಾಷ್ಟ್ರೀಯ ಮಟ್ಟದ ತುಮಕೂರು ರೀಸರ್ಚ್  ಫೌಂಡೇಷನ್ @ 2047 ಕ್ಯಾಂಪಸ್ ಲೋಕಾರ್ಪಣೆ ಆಗುವವರೆಗೂ ಉಚಿತವಾಗಿ ಕಾರ್ಯನಿರ್ವಹಿಸುವರು.

  ದಿನಾಂಕ:03.10.2024 ರಂದು ನಡೆದ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ ಸಲಹಾ ಸಮಿತಿಯ ನಿರ್ಣಯಗಳೊಂದಿಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳೊಂದಿಗೆ ವಿವಿಧ ಯೋಜನೆಗಳ ಬಗ್ಗೆ ಶ್ರಮಿಸಲು ನನಗೆ ಹೊಣೆಗಾರಿಕೆ ನೀಡಿದ್ದಾರೆ.

     ಪೋಸ್ಟ್ ಆಫೀಸ್ ಮಾದರಿಯಲ್ಲಿ, ಕುಂದರನಹಳ್ಳಿಯಿಂದ ದೆಹಲಿವರೆಗೆ ಕಚೇರಿ ಕಮ್ ರೆಸಿಡೆನ್ಸ್ ಮೂಲಕ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಲು ದೃಢ ನಿರ್ಧಾರ ಮಾಡಲಾಗಿದೆ. ಹಣಕಾಸಿನ ಹೊಣೆಗಾರಿಕೆಯನ್ನು ತುಮಕೂರು ವಿಶ್ವ ವಿದ್ಯಾನಿಲಯ ನಿರ್ವಹಣೆ ಮಾಡಲಿದೆ.

     ವಿಶ್ವ ವಿದ್ಯಾನಿಲಯಕ್ಕೆ ಹೊರೆಯಾಗದಂತೆ ಆರ್ಥಿಕ ನೆರವು ಸೇರಿದಂತೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ ಶ್ರಮಿಸುವುದು ಶಕ್ತಿಪೀಠ ಫೌಂಡೇಷನ್  ಜವಾಬ್ದಾರಿಯಾಗಿದೆ. ದಿನಾಂಕ:02.10.2024 ರಿಂದ ಇಲ್ಲಿಯವರೆಗೂ ಬರಿ ಬಾಯಿ ಮಾತಿನಲ್ಲಿ ತುಮಕೂರು ವಿಶ್ವ ವಿದ್ಯಾನಿಲಯದ ಜೊತೆ ಮಾತನಾಡುವ ಮೂಲಕ ಕಾರ್ಯನಿರ್ವಹಿಸಲಾಗಿದೆ.

  ಶರನ್ನವರಾತ್ರಿ ಆರಂಭದ ದಿವಸ, ದಿನಾಂಕ:03.10.2024 ರಿಂದ ವ್ಯವಸ್ಥಿತವಾದ ‘ಮಾರ್ಗದರ್ಶಿ ಸೂತ್ರ ಸಿದ್ಧಪಡಿಸಿ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುಮೋದನೆ ಪಡೆಯಲು ನಿರ್ಧರಿಸಲಾಗಿದೆ. ಅಂದಿನಿಂದಲೇ ತುಮಕೂರು ವಿಶ್ವ ವಿದ್ಯಾನಿಲಯದ ನಿಯಾಮುನುಸಾರ ಕಾರ್ಯನಿರ್ವಹಿಸಲು ಆರಂಭಿಸಲಾಗಿದೆ.

  ಪ್ರತಿ ದಿನದ ದಿನಚರಿ ಮತ್ತು ಖರ್ಚುವೆಚ್ಚಗಳನ್ನು ಬರೆಯುವ ಮೂಲಕ ಎಲ್ಲಾ ಅನುಭವಗಳನ್ನು, ನಮ್ಮೊಂದಿಗೆ ಕೈಜೋಡಿಸುವ ಸಾವಿರಾರು ಜನರೊಂದಿಗೆ ಹಂಚಿಕೊಳ್ಳಲು ನಿರ್ಧರಿಸಲಾಗಿದೆ.